Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಮದನ್ ಲಾಲ್ ಖುರಾನಾ ನಿಧನಕ್ಕೆ ಪ್ರಧಾನಮಂತ್ರಿ ಕಂಬನಿ


ದೆಹಲಿಯ ಮಾಜಿ ಮುಖ್ಯಮಂತ್ರಿ ಶ್ರೀ ಮದನ್ ಲಾಲ್ ಖುರಾನಾ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

ಶ್ರೀ ಮದನ್ ಲಾಲ್ ಖುರಾನಾ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ದೆಹಲಿಯ ಪ್ರಗತಿಗಾಗಿ ಅದರಲ್ಲೂ ಉತ್ತಮ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅವಿಶ್ರಾಂತವಾಗಿ ದುಡಿದಿದ್ದರು. ಕಠಿಣ ಪರಿಶ್ರಮ ಮತ್ತು ಜನ-ಸ್ನೇಹಿ ಆಡಳಿತದಿಂದಾಗಿ ಅವರು ದೆಹಲಿ ಸರಕಾರ ಮತ್ತು ಕೇಂದ್ರ ಸರ್ಕಾರಗಳೆರಡರಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು.

ಶ್ರೀ ಮದನ್ ಲಾಲ್ ಖುರಾನಾ ಅವರು ದೆಹಲಿಯಲ್ಲಿ ಬಿಜೆಪಿಯನ್ನು ಬಲಪಡಿಸಿದ ರೀತಿ ಸದಾ ಸ್ಮರಣೆಯಲ್ಲಿರುತ್ತದೆ. ದೆಹಲಿಯಲ್ಲಿ ವಿಭಜನಾನಂತರ ನಿರಾಶ್ರಿತರ ಸೇವೆಗೆ ಅವರು ಅಚಲ ಪ್ರಯತ್ನ ಮಾಡಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಬೆಂಬಲಿಗರೊಂದಿಗೆ ನನ್ನ ಸಂವೇದನೆಯಿದೆ” ಎಂದು ಪ್ರಧಾನಿ ಹೇಳಿದ್ದಾರೆ..

***