ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ತಿರುಪತಿ (ಆಂಧ್ರಪ್ರದೇಶ) ಮತ್ತು ಬೆಹರಾಂಪುರ (ಒಡಿಶಾ)ಗಳಲ್ಲಿ ಎರಡು ಹೊಸ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್.ಇ.ಆರ್.ಗಳ) ಶಾಶ್ವತ ಕ್ಯಾಂಪಸ್ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ತನ್ನ ಅನುಮೋದನೆ ನೀಡಿದೆ. ಇದಕ್ಕೆ ತಗಲುವ ಒಟ್ಟು ವೆಚ್ಚ ಅಂದಾಜು 3074.12 ಕೋಟಿ ರೂಪಾಯಿಗಳಾಗಿವೆ ( ಅಸಂಚಿತ (ನಾನ್ – ರೆಕರಿಂಗ್): ರೂ.2366.48 ಕೋಟಿ ಮತ್ತು ಸಂಚಿತ (ರೆಕರಿಂಗ್): 707.64 ಕೋಟಿ ರೂ.).
ಪ್ರತಿಯೊಂದು ಐಐಎಸ್.ಇ.ಆರ್.ಗಳಲ್ಲಿ ತಲಾ ಒಂದು 7ನೇ ಸಿಪಿಸಿಯ 14ನೇ ಹಂತದ ಎರಡು ಕುಲಸಚಿವರ ಹುದ್ದೆಗಳನ್ನು ರಚಿಸಲೂ ಸಂಪುಟ ತನ್ನ ಒಪ್ಪಿಗೆ ನೀಡಿದೆ.
ವಿವರಗಳು:
ಐಐಎಸ್.ಇ.ಆರ್ ತಿರುಪತಿ |
1137.16
|
354.18
|
1491.34
|
ಐಐಎಸ್.ಇ.ಆರ್ ಬೆಹರಾಂಪುರ್
|
1229.32
|
353.46
|
1582.78
|
ಒಟ್ಟು
|
2366.48
|
707.64
|
3074.12
|
ಸಂಸ್ಥೆ
|
ಬಂಡವಾಳ
|
ಸಂಚಿತ
|
ಒಟ್ಟು
|
---|
ಪ್ರಯೋಜನಗಳು:
ಐಐಎಸ್.ಇ.ಆರ್.ಗಳು ಸ್ನಾತಕ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ, ಪಿಎಚ್ ಡಿ ಮತ್ತು ಸಮಗ್ರ –ಪಿಎಚ್ ಡಿ ಮಟ್ಟದಲ್ಲಿ ಉನ್ನತ ಗುಣಮಟ್ಟದ ವಿಜ್ಞಾನ ಶಿಕ್ಷಣವನ್ನು ಒದಗಿಸುತ್ತದೆ. ಅವು ವಿಜ್ಞಾನದ ಮುಂಚೂಣಿಯ ಕ್ಷೇತ್ರದಲ್ಲಿ ಸಂಶೋಧನೆಗಳನ್ನೂ ಕೈಗೊಳ್ಳುತ್ತವೆ. ಉತ್ತಮ ವೈಜ್ಞಾನಿಕ ಪ್ರತಿಭೆಗಳನ್ನು ಬೋಧಕರಾಗಿ ಆಕರ್ಷಿಸುವ ಮೂಲಕ ಭಾರತ ಜ್ಞಾನ ಆರ್ಥಿಕತೆಯತ್ತ ಸಾಗಲು ದಾರಿ ಮಾಡಿಕೊಡುತ್ತದೆ ಮತ್ತು ಭಾರತದಲ್ಲಿ ಬಲಿಷ್ಠ ವೈಜ್ಞಾನಿಕ ಮಾನವಶಕ್ತಿಯ ನೆಲೆಯನ್ನು ಸಜ್ಜುಗೊಳಿಸುತ್ತದೆ.
ಹಿನ್ನೆಲೆ:
ಆಂಧ್ರಪ್ರದೇಶ ಪುನರ್ ಸಂಘಟನೆ ಕಾಯಿದೆ 2014ರ ಅನುಸರಣೆಗಾಗಿ 2015ರಲ್ಲಿ ತಿರುಪತಿಯ ಐಐಎಸ್.ಇ.ಆರ್ ಅನ್ನು ಸ್ಥಾಪಿಸಲಾಗಿತ್ತು, ಇನ್ನು ಕೇಂದ್ರ ಹಣಕಾಸು ಸಚಿವರು 2015ರ ಬಜೆಟ್ ಭಾಷಣದಲ್ಲಿ ಘೋಷಣೆಯಂತೆ ಬೆಹರಾಂಪುರದಲ್ಲಿ ಐಐಎಸ್.ಇ.ಆರ್.ಅನ್ನು 2016ರಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಗಳು ಪ್ರಸ್ತುತ ತಾತ್ಕಾಲಿಕ ಕ್ಯಾಂಪಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿವೆ.
*****