Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ ಕೋಟ್ ನಲ್ಲಿ ಮಹಾತ್ಮಾ ಗಾಂಧಿ ವಸ್ತುಸಂಗ್ರಹಾಲಯ ಪ್ರಧಾನಮಂತ್ರಿ ಉದ್ಘಾಟಿಸಿದರು.


ರಾಜ ಕೋಟ್ ನಲ್ಲಿ ಮಹಾತ್ಮಾ ಗಾಂಧಿ ವಸ್ತುಸಂಗ್ರಹಾಲಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಉದ್ಘಾಟಿಸಿದರು. ಅಲ್ಫ್ರೆಡ್ ಪ್ರೌಢಶಾಲೆಯಲ್ಲಿ ವಸ್ತುಸಂಗ್ರಹಾಲಯ ನಿರ್ಮಿಸಲಾಗಿದೆ . ಮಹಾತ್ಮಾ ಗಾಂಧಿ ಅವರ ವ್ಯಕ್ತಿತ್ವ ರೂಪುಗೊಳ್ಳುವ ಅವಧಿಯಲ್ಲಿ ಈ ಶಾಲೆ ನಿರ್ಣಾಯಕ ಪಾತ್ರವಹಿಸಿದೆ.

ಗಾಂಧಿವಾದದ ಸಂಸ್ಕೃತಿ, ಮೌಲ್ಯಗಳು ಮತ್ತು ತತ್ವಶಾಸ್ತ್ರಗಳನ್ನು ಪ್ರಚಾರಮಾಡಲು ಇದು ಸಹಾಯಕವಾಗಲಿದೆ.

ಸಾರ್ವಜನಿಕ ವಸತಿ ಯೋಜನೆಯ 624 ವಸತಿಗಳ ಉದ್ಘಾಟನಾ ಫಲಕವನ್ನು ಪ್ರಧಾನಮಂತ್ರಿ ಅವರು ಅನಾವರಣ ಮಾಡಿದರು. ಅವರು 240 ಫಲಾನುಭವಿಗಳ ಇ–ಗೃಹಪ್ರವೇಶಕ್ಕೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಮಹಾತ್ಮಾ ಗಾಂಧಿ ಅವರಿಂದ ಕಲಿಯಲು ಬಹಳಷ್ಟಿದೆ ಎಂದರು. ಬಾಪೂ ಅವರೊಂದಿಗೆ ಬಹಳ ಸನಿಹದ ಒಡನಾಟವಿದ್ದ ಭೂಮಿಯಾಗಿ, ಗುಜರಾತ್ ನಿಜಕ್ಕೂ ಬಹಳ ಆಶೀರ್ವಾದ ಪಡೆದ ರಾಜ್ಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಬಾಪೂ ಅವರು ಪರಿಸರಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಕುರಿತು ಕಾಳಜಿ ಹೊಂದಿದ್ದರು ಎಂದ ಪ್ರಧಾನಮಂತ್ರಿ ಅವರು, ಗಾಂಧೀಜಿ ಅವರಿಂದ ಪ್ರೇರಿತರಾಗಿ ನಿರ್ಮಲ ಮತ್ತು ಹಸಿರಿನ (clean and green) ನಾಳೆಗಳಿಗಾಗಿ ನಾವೆಲ್ಲಾ ಜೊತೆಯಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಸರತಿ ಸಾಲಿನ ಕೊನೆಯ ವ್ಯಕ್ತಿ, ಅತಿ ಬಡವವ್ಯಕ್ತಿ ಹಾಗೂ ಅವಕಾಶ ವಂಚಿತ ದೀನರ ಸೇವೆಗೈಯ್ಯಲು ಬಾಪು ನಮಗೆ ಯಾವಾಗಲೂ ಕಲಿಸಿದ್ದಾರೆ ಮತ್ತು ಅವರ ಆದರ್ಶಗಳಿಂದ ಪ್ರೇರಿತರಾಗಿ ನಾವು ಬಡವರ ಸೇವೆ ಮಾಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ತಿಳಿಸಿದರು, ಬಡವರಿಗಾಗಿ ನಾವು ವಸತಿ ನಿರ್ಮಾಣ ಮಾಡ ಬಯಸಿದ್ದೇವೆ, ನಮ್ಮ ಯೋಜನೆಗಳಿಂದ ಅವರ ಜೀವನದಲ್ಲಿ ಸುಧಾರಣೆಗಳನ್ನು ತುರುತ್ತಿದ್ದೇವೆ, ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳಾದವು, ಆದರೂ ಸ್ವಚ್ಛ ಬಾರತದ ಬಾಪು ಅವರ ಕನಸು ಇನ್ನೂ ನನಸಾಗಿಲ್ಲ ಎಂದು ಪ್ರಧಾನಮಂತ್ರಿ ತಿಳಿಸಿದರು. ನಾವೆಲ್ಲ ಒಟ್ಟಾಗಿ ಅವರ ಆಶಯವನ್ನು ಪೂರ್ತಿಗೊಳಿಸೋಣ ಎಂದು ಪ್ರಧಾನಮಂತ್ರಿ ಅವರು ಜನತೆಯನ್ನು ಪ್ರೇರೇಪಿಸಿದರು.

ಸ್ವಚ್ಛ ಭಾರತ ಮಿಷನ್ ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಾವು ತಳಮಟ್ಟದಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿದ್ದೇವೆ, ಆದರೆ ನಾವು ಪ್ರಯತ್ನ ಮಾಡುತ್ತಲೇ ಇರಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು ಅನಂತರ ಮಹಾತ್ಮಾ ಗಾಂಧಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು