Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಡಿಯೋ ಬ್ರಿಜ್ ಮೂಲಕ ದೇಶಾದ್ಯಂತದ ಆಶಾ, ಎ.ಎನ್.ಎಂ. ಮತ್ತು ಅಂಗನವಾಡಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ದೇಶದಾದ್ಯಂತದ ಮೂರು“ಎ’ ತಂಡಗಳ ಅಂದರೆ – ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಎ.ಎನ್.ಎಂ. (ಆಕ್ಸಿಲರಿ ನರ್ಸ್ ಮಿಡ್ ವೈಫ್) ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ದೇಶದಲ್ಲಿ ಅಪೌಷ್ಟಿಕತೆ ತಗ್ಗಿಸಲು – ಪೊಷಣಾ ಅಭಿಯಾನದ ಗುರಿಯನ್ನು ಸಾಧಿಸಲು ಆರೋಗ್ಯ ಮತ್ತು ಪೌಷ್ಟಿಕ ಸೇವೆಗಳ ವಿತರಣೆಯನ್ನು ಸುಧಾರಿಸಲು ನವೀನ ವಿಧಾನಗಳನ್ನು ಮತ್ತು ತಂತ್ರಜ್ಞಾನವನ್ನು ಬಳಸಲು, ಒಗ್ಗೂಡಿ ಶ್ರಮಿಸುವ ಪ್ರಯತ್ನಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೇರುಮಟ್ಟದ ಆರೋಗ್ಯ ಕಾರ್ಯಕರ್ತರ ಕೊಡುಗೆಯನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಆರೋಗ್ಯಪೂರ್ಣ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣದ ಅವರ ಪ್ರಯತ್ನಕ್ಕೆ ಧನ್ಯವಾದ ಅರ್ಪಿಸಿದರು. ತಿಂಗಳು ಪೂರ್ತಿ ನಡೆಯಲಿರುವ “ಪೋಷಣಾ ಮಾಸ’’ದ ಅಂಗವಾಗಿ ಸಂವಾದ ಆಯೋಜಿಸಲಾಗಿತ್ತು. ಪ್ರತಿಯೊಂದು ಮನೆಗೂ ಪೌಷ್ಟಿಕತೆಯ ಸಂದೇಶವನ್ನು ತಲುಪಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.

ರಾಷ್ಟ್ರೀಯ ಪೌಷ್ಟಿಕ ಅಭಿಯಾನದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ರಾಜಸ್ಥಾನದ ಜುನ್ ಜುನುವಿನಲ್ಲಿ ಚಾಲನೆ ನೀಡಲಾದ “ ಪೊಷಣಾ ಅಭಿಯಾನ ”ರಕ್ತಹೀನತೆ, ಅಪೌಷ್ಟಿಕತೆ ಮತ್ತು ಕಡಿಮೆ ತೂಕದ ಶಿಶು ಜನನ ಪ್ರಕರಣಗಳನ್ನು ತಗ್ಗಿಸುವ ಗುರಿ ಹೊಂದಿದೆ ಎಂದರು. ಈ ಆಂದೋಲನದಲ್ಲಿ ಗರಿಷ್ಠ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳನ್ನು ತೊಡಗಿಸಿಕೊಳ್ಳುವುದು ಅಗತ್ಯ ಎಂದೂ ಅವರು ಹೇಳಿದರು.

ಕೇಂದ್ರ ಸರ್ಕಾರ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಗಮನ ಹರಿಸಿದೆ ಎಂದೂ ಪ್ರಧಾನಮಂತ್ರಿಗಳು ಹೇಳಿದರು. ಲಸಿಕೆ ನೀಡಿಕೆ ಕಾರ್ಯಕ್ರಮಗಳು ವೇಗವಾಗಿ ಸಾಗಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ನೆರವಾಗುತ್ತಿದೆ ಎಂದರು.

ದೇಶಾದ್ಯಂತದ ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳು ಪ್ರಧಾನಮಂತ್ರಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇಂದ್ರಧನುಷ್ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಮತ್ತು 3 ಲಕ್ಷ ಗರ್ಭಿಣಿಯರು ಮತ್ತು 85 ಕೋಟಿ ಮಕ್ಕಳಿಗೆ ಲಸಿಕೆ ನೀಡಿಕೆಯಲ್ಲಿ ಮೂರು“ಎ’ ತಂಡಗಳಾದ– ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಎ.ಎನ್.ಎಂ. (ಆಕ್ಸಿಲರಿ ನರ್ಸ್ ಮಿಡ್ ವೈಫ್) ಗಳ ಪ್ರಯತ್ನ ಮತ್ತು ಸಮರ್ಪಣಾ ಭಾವವನ್ನು ಪ್ರಧಾನಮಂತ್ರಿಯವರು ಪ್ರಶಂಸಿಸಿದರು. ಸುರಕ್ಷಿತ ಮಾತೃತ್ವ ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿ ಪಸರಿಸುವಂತೆ ಪ್ರಧಾನಮಂತ್ರಿಯವರು ಸಂವಾದದ ವೇಳೆ ಮನವಿ ಮಾಡಿದರು. ನವಜಾತ ಶಿಶುಗಳ ಆರೈಕೆ ಯಶಸ್ಸಿನ ಬಗ್ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿಗಳು, ಇದು ಪ್ರತಿ ವರ್ಷ ದೇಶದ 1.25 ದಶಲಕ್ಷ ಮಕ್ಕಳಿಗೆ ಪ್ರಯೋಜಕಾರಿ ಎಂದರು. ಮನೆಯಲ್ಲೇ ಮಕ್ಕಳ ಆರೈಕೆ ಎಂದು ಇದಕ್ಕೆ ಮರು ನಾಮಕರಣ ಮಾಡಿದ್ದು, ಇದರಡಿ ಆಶಾ ಕಾರ್ಯಕರ್ತೆಯರು ಹಿಂದಿನಂತೆ ಜನನವಾದ ಮೊದಲ 42 ದಿನಗಳಲ್ಲಿ 6 ಬಾರಿ ಭೇಟಿಗೆ ಬದಲಾಗಿ ಮೊದಲ 15 ತಿಂಗಳುಗಳಲ್ಲಿ 11 ಬಾರಿ ಭೇಟಿ ನೀಡಲಿದ್ದಾರೆ.

ಪ್ರಧಾನಮಂತ್ರಿಯವರು ದೇಶದ ಪ್ರಗತಿ ಮತ್ತು ಆರೋಗ್ಯದ ನಡುವಿನ ನಂಟನ್ನು ಒತ್ತಿ ಹೇಳಿದರು; ದೇಶದ ಮಕ್ಕಳು ಕೃಶವಾಗಿದ್ದರೆ, ದೇಶದ ಪ್ರಗತಿಯೂ ಕುಂಠಿತವಾಗುತ್ತದೆ ಎಂದರು. ಯಾವುದೇ ಮಕ್ಕಳಿಗೆ ಮೊದಲ 1000 ದಿನಗಳ ಜೀವನ ಅತ್ಯಂತ ಮಹತ್ವದ್ದು ಎಂದು ಹೇಳಿದರು. ಪೌಷ್ಟಿದಾಯಕಆಹಾರ, ಆ ಸಮಯದಲ್ಲಿನ ಆಹಾರ ಸೇವನೆ, ಮಗು ಹೇಗೆ ಇರಬೇಕು, ಅದು ಓದಿನಲ್ಲಿ ಮತ್ತು ಬರಹದಲ್ಲಿ ಹೇಗಿರುತ್ತದೆ ಮತ್ತು ಮಾನಸಿಕವಾಗಿ ಎಷ್ಟು ಸದೃಢವಾಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ದೇಶದ ಪ್ರಜೆ ಆರೋಗ್ಯವಾಗಿದ್ದರೆ, ದೇಶದ ಪ್ರಗತಿಯನ್ನು ಯಾರೊಬ್ಬರೂ ತಡೆಯಲು ಸಾಧ್ಯವಿಲ್ಲ ಎಂದರು. ಹೀಗಾಗಿ ಆರಂಭಿಕ ಸಾವಿರ ದಿನಗಳಲ್ಲಿ, ದೇಶದ ಭವಿಷ್ಯವನ್ನು ಸುರಕ್ಷಿತಗೊಳಿಸಲು ಬಲಿಷ್ಠವಾದ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಸಾಗಿದೆ ಎಂದರು.

ಡಬ್ಲ್ಯು.ಎಚ್.ಓ. ವರದಿಗಳ ರೀತ್ಯ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಶೌಚಾಲಯಗಳ ಬಳಕೆ 3 ಲಕ್ಷ ಮುಗ್ಧ ಜೀವಗಳನ್ನು ಉಳಿಸುವ ಸಾಮರ್ಥ್ಯ ಹೊಂದಿದೆ ಎಂಬುದು ಉಲ್ಲೇಖಾರ್ಹ ಎಂದರು. ನೈರ್ಮಲ್ಯದೆಡೆಗಿನ ಬದ್ಧತೆಗಾಗಿ ದೇಶವಾಸಿಗಳನ್ನು ಪ್ರಧಾನಿ ಮತ್ತೊಮ್ಮೆ ಅಭಿನಂದಿಸಿದರು.

ಆಯುಷ್ಮಾನ್ ಭಾರತದ ಪ್ರಥಮ ಫಲಾನುಭವಿ ಮಗು ಕರಿಷ್ಮಾ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಈಕೆ ಆಯುಷ್ಮಾನ್ ಶಿಶು ಎಂದೇ ಖ್ಯಾತಿ ಪಡೆದಿದೆ ಎಂದರು. ಈ ತಿಂಗಳ 23ರಂದು ರಾಂಚಿಯಿಂದ ಆರಂಭಗೊಳ್ಳುತ್ತಿರುವ ಆಯುಷ್ಮಾನ್ ಭಾರತದ ಲಾಭ ಪಡೆಯಲಿರುವ 10 ಕೋಟಿ ಕುಟುಂಬಗಳಿಗೆ ಈಕೆ ಭರವಸೆಯ ಸಂಕೇತವಾಗಿದ್ದಾಳೆ ಎಂದರು. ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತರಿಗೆ ನೀಡುತ್ತಿರುವ ವಾಡಿಕೆಯ ಪ್ರೋತ್ಸಾಹಕಗಳನ್ನು ದುಪ್ಪಟ್ಟು ಮಾಡುವ ಘೋಷಣೆಯನ್ನೂ ಪ್ರಧಾನಮಂತ್ರಿ ಮಾಡಿದರು. ಇದರ ಜೊತೆಗೆ ಎಲ್ಲ ಆಶಾ ಕಾರ್ಯಕರ್ತರು ಮತ್ತು ಅವರ ಸಹಾಯಕರುಗಳಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಉಚಿತ ವಿಮೆ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಗೌರವಧನವನ್ನು ಗಣನೀಯವಾಗಿ ಹೆಚ್ಚಳ ಮಾಡುವುದಾಗಿಯೂ ಪ್ರಧಾನಮಂತ್ರಿ ಪ್ರಕಟಿಸಿದರು. ಈವರೆಗೆ 3 ಸಾವಿರ ರೂಪಾಯಿ ಪಡೆಯುತ್ತಿರುವವರು, ಇನ್ನು ಮುಂದೆ 4 ಸಾವಿರದ 500 ರೂಪಾಯಿ ಪಡೆಯಲಿದ್ದಾರೆ. ಅದೇ ರೀತಿ, 2200 ರೂಪಾಯಿ ಪಡೆಯುತ್ತಿರುವವರು 3500 ರೂಪಾಯಿ ಪಡೆಯಲಿದ್ದಾರೆ. ಅಂಗನವಾಡಿ ಸಹಾಯಕರ ಗೌರವಧನವನ್ನು ಸಹ 1500 ರೂಪಾಯಿಗಳಿಂದ 2250 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ ಎಂದರು.

*****