Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕುಲ್ ದೀಪ್ ನಯ್ಯರ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಖ್ಯಾತ ಪತ್ರಕರ್ತ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಕುಲ್ ದೀಪ್ ನಯ್ಯರ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

“ಕುಲ್ ದೀಪ್ ನಮ್ಮ ಕಾಲದ ಮೇಧಾವಿಯಾಗಿದ್ದರು. ಅನೇಕ ದಶಕಗಳವರೆಗೆ ಕಾರ್ಯೋನ್ಮುಖರಾಗಿದ್ದ ಅವರು ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಮುಕ್ತ ಮತ್ತು ನಿರ್ಭೀತ ವ್ಯಕ್ತಿಯಾಗಿದ್ದರು. ಉತ್ತಮ ಭಾರತದೆಡೆಗಿನ ಅವರ ಬದ್ಧತೆ, ಸಾರ್ವಜನಿಕ ಸೇವೆ ಮತ್ತು ತುರ್ತು ಪರಿಸ್ಥಿತಿ ವಿರುದ್ಧದ ಅವರ ಬಲವಾದ ನಿಲುವು ಸದಾ ಸ್ಮರಣಿಯ. ಅವರ ಸಾವು ದುಃಖವನ್ನುಂಟುಮಾಡಿದೆ. ನನ್ನ ಸಂತಾಪಗಳು”, ಎಂದು ಪ್ರಧಾನ ಮಂತ್ರಿ ಹೇಳಿದರು.