Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾಜಿ ಸಂಸದ ಹಾಗೂ ಲೋಕಸಭಾಧ್ಯಕ್ಷ ಶ್ರೀ ಸೋಮನಾಥ ಚಟರ್ಜಿ ನಿಧನಕ್ಕೆ ಪ್ರಧಾನಿ ಸಂತಾಪ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಸಂಸದ ಮತ್ತು ಲೋಕಸಭಾಧ್ಯಕ್ಷರಾಗಿದ್ದ ಶ್ರೀ ಸೋಮನಾಥ ಚಟರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 

ಮಾಜಿ ಸಂಸದ ಹಾಗೂ ಲೋಕಸಭಾಧ್ಯಕ್ಷರಾಗಿದ್ದ ಶ್ರೀ ಸೋಮನಾಥ ಚಟರ್ಜಿ ಅವರು ಭಾರತೀಯ ರಾಜಕಾರಣದ ಮುತ್ಸದ್ಧಿ. ಅವರು ನಮ್ಮ ಸಂಸದೀಯ ಪ್ರಜಾಪ್ರಭುತ್ವವನ್ನು ಶ್ರೀಮಂತಗೊಳಿಸಿದ್ದರು ಮತ್ತು ಬಡವರ ಮತ್ತು ದುರ್ಬಲರ ಕ್ಷೇಮಕ್ಕಾಗಿ ಗಟ್ಟಿ ಧ್ವನಿಯಾಗಿದ್ದರು. ಅವರ ಅಗಲಿಕೆಯಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬದವರು ಮತ್ತು ಬೆಂಬಲಿಗರೊಂದಿಗೆ ನನ್ನ ಸಂವೇದನೆ ಇದೆ. ಎಂದು ಪ್ರಧಾನಿ ತಿಳಿಸಿದ್ದಾರೆ.