Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ವಿಪತ್ತು  ಪ್ರತಿಕ್ರಿಯಾ ಪಡೆಯ ನಾಲ್ಕು ಹೆಚ್ಚುವರಿ ತುಕಡಿಗಳ ರಚನೆಗೆ ಸಂಪುಟ ಅಂಗೀಕಾರ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯ (ಎನ್.ಡಿ.ಆರ್.ಎಫ್.) ನಾಲ್ಕು  ಹೆಚ್ಚುವರಿ ತುಕಡಿಗಳನ್ನು  ರೂಪಿಸಲು ಅನುಮೋದನೆ ನೀಡಲಾಯಿತು. ಭಾರತದ ವಿಪತ್ತು ಪ್ರತಿಕ್ರಿಯಾ ವ್ಯವಸ್ಥೆಯನ್ನು ಅಂದಾಜು 637  ಕೋ.ರೂ.ಗಳ ವೆಚ್ಚದಲ್ಲಿ ಬಲಪಡಿಸುವ ಅಂಗವಾಗಿ ಈ ಕ್ರಮ ಅನುಸರಿಸಲಾಗಿದೆ.
 
ವಿವರಗಳು:
 
·        ದೇಶದ ವಿಸ್ತಾರವಾದ ಭೌಗೋಳಿಕ ವ್ಯಾಪ್ತಿಯನ್ನು ಅನುಲಕ್ಷಿಸಿ ವಿಪತ್ತುಗಳ ಸಂಧರ್ಭದಲ್ಲಿ ಪ್ರತಿಕ್ರಿಯಾ ಅವಧಿಯನ್ನು ಕಡಿತಗೊಳಿಸುವುದಕ್ಕಾಗಿ  ನಾಲ್ಕು ಹೆಚ್ಚುವರಿ ತುಕಡಿಗಳನ್ನು ರೂ ಪಿಸುವುದು ಇದರ ಉದ್ದೇಶ .
 
·        ಈ ನಾಲ್ಕು ತುಕಡಿಗಳಲ್ಲಿ ಆರಂಭದಲ್ಲಿ ಇಂಡೋ-ಟಿಬೇಟನ್ ಗಡಿ ಪೊಲೀಸ್ (ಐ.ಟಿ.ಬಿ.ಪಿ.) ಪಡೆಯಲ್ಲಿ ಎರಡು ತುಕಡಿಗಳನ್ನು ಹಾಗು ಗಡಿ ಭದ್ರತಾ ಪಡೆಯಲ್ಲಿ  (ಐ.ಟಿ.ಬಿ.ಪಿ.) ಮತ್ತು ಅಸ್ಸಾಂ ರೈಫಲ್ಸ್ (ಎ.ಆರ್.ಎಸ್.)ನಲ್ಲಿ  ತಲಾ ಒಂದೊಂದು ತುಕಡಿಗಳನ್ನು ರೂಪಿಸಲಾಗುವುದು.
 
ಬಳಿಕ ಈ ನಾಲ್ಕೂ ತುಕಡಿಗಳನ್ನು ಎನ್.ಡಿ.ಆರ್.ಎಫ್. ತುಕಡಿಗಳಾಗಿ  ಪರಿವರ್ತಿಸಲಾಗುವುದು. ಅಪಾಯ ಸಾಧ್ಯತೆ ಇರುವ ಸ್ಥಳಗಳ ಆಧಾರದಲ್ಲಿ ಈ ನಾಲ್ಕು ತುಕಡಿಗಳನ್ನು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾ ಖಂಡ ಮತ್ತು ದಿಲ್ಲಿ ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ನಿಯೋಜಿಸಲಾಗುವುದು.
ಹಿನ್ನೆಲೆ:
 
ಎನ್.ಡಿ.ಆರ್.ಎಫ್ . ಒಂದು ವಿಶೇಷ ದಳವಾಗಿದ್ದು , 2006 ರಲ್ಲಿ ಇದನ್ನು ಪ್ರಾಕೃತಿಕ ವಿಕೋಪ ಮತ್ತು ಮಾನವ ನಿರ್ಮಿತ ದುರಂತಗಳ ಸಂಧರ್ಭದಲ್ಲಿ  ಅಥವಾ ಆತಂಕಕಾರಿ ಪರಿಸ್ಥಿತಿಯಲ್ಲಿ  ವಿಶೇಷ ಪ್ರತಿಕ್ರಿಯೆಗಾಗಿ ಸ್ಥಾಪಿಸಲಾಯಿತು. ಪ್ರಸ್ತುತ ಎನ್.ಡಿ.ಅರ್.ಎಫ್. ನ 12 ತುಕಡಿಗಳಿದ್ದು ತಕ್ಷಣ  ಪ್ರತಿಕ್ರಿಯೆಗೆ ಲಭ್ಯ ಇರುವಂತೆ ದೇಶಾದ್ಯಂತ ವ್ಯೂಹಾತ್ಮಕ ರೀತಿಯಲ್ಲಿ ನಿಯೋಜಿಸಲಾಗಿದೆ.
 
…………….