Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

4ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನ ಮಂತ್ರಿಯವರ ಭಾಷಣ

4ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನ ಮಂತ್ರಿಯವರ ಭಾಷಣ

4ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನ ಮಂತ್ರಿಯವರ ಭಾಷಣ

4ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನ ಮಂತ್ರಿಯವರ ಭಾಷಣ


ಯೋಗವು ಇಂದು ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ “ಏಕೀಕರಣದ ಶಕ್ತಿ” ಯಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್ ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಏರ್ಪಟ್ಟ ಕಾರ್ಯಕ್ರಮದಲ್ಲಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಅರಣ್ಯ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಅವರು ಸುಮಾರು 50,000 ಯೋಗ ಉತ್ಸಾಹಿಗಳು ಮತ್ತು ಸ್ವಯಂಸೇವಕರ ಜೊತೆ ಯೋಗಾಸನ, ಪ್ರಾಣಾಯಾಮ, ಮತ್ತು ಧ್ಯಾನ ನಡೆಸಿದರು.

ಇಂದು ವಿಶ್ವದಾದ್ಯಂತ ಎಲ್ಲರೂ ಸೂರ್ಯನ ಬೆಳಕು ಮತ್ತು ಅದರ ಸುಖೋಷ್ಣವನ್ನು ಯೋಗದೊಂದಿಗೆ ಸ್ವಾಗತಿಸುತ್ತಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಡೆಹ್ರಾಡೂನಿನಿಂದ ಡಬ್ಲಿನ್ ವರೆಗೆ , ಶಾಂಘೈಯಿಂದ ಚಿಕಾಗೋವರೆಗೆ ಮತ್ತು ಜಕಾರ್ತಾದಿಂದ ಜೋಹಾನ್ಸ್ ಬರ್ಗ್ ವರೆಗೆ ಯೋಗ ಈಗ ಎಲ್ಲಾ ಕಡೆಯೂ ಹರಡಿದೆ ಎಂದವರು ನುಡಿದರು.

ವಿಶ್ವದಾದ್ಯಂತ ಯೋಗಾಸಕ್ತರಿಗೆ ಸಂದೇಶ ನೀಡಿದ ಪ್ರಧಾನ ಮಂತ್ರಿ ಅವರು ಇಡಿ ವಿಶ್ವ ಯೋಗವನ್ನು ಅಪ್ಪಿಕೊಂಡಿದೆ ಮತ್ತು ಅದರ ಪ್ರತಿಫಲನ ಪ್ರತೀ ವರ್ಷ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ಕಾಣಬಹುದಾಗಿದೆ ಎಂದರಲ್ಲದೆ ಉತ್ತಮ ಆರೋಗ್ಯ ಮತ್ತು ಕ್ಷೇಮದ ಆಶಯದಿಂದಾಗಿ ಯೋಗ ದಿನವು

ಒಂದು ಬೃಹತ್ ಪ್ರಮಾಣದ ಸಾಮೂಹಿಕ ಚಳವಳಿಯಾಗಿದೆ ಎಂದೂ ಹೇಳಿದರು.

ವಿಶ್ವವು ನಮ್ಮನ್ನು ಗೌರವಿಸಬೇಕೆಂದರೆ ನಾವು ನಮ್ಮ ಪರಂಪರೆ ಮತ್ತು ಇತಿಹಾಸವನ್ನು ಗೌರವಿಸಲು ಹಿಂಜರಿಯಬಾರದು ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. ಯೋಗವು ಪ್ರಾಚೀನವಾಗಿರುವುದರ ಜೊತೆಗೆ ಅದು ಆಧುನಿಕವೂ ಆಗಿದೆ, ಅದು ಸ್ಥಿರವಾಗಿದೆ ಮತ್ತು ಇನ್ನೂ ವೃದ್ಧಿಸುತ್ತಿದೆ: ಅದು ಭವಿತವ್ಯದ ಆಶಾಕಿರಣ ಮೂಡಿಸುವ ನಮ್ಮ ಭೂತಕಾಲದ ಮತ್ತು ವರ್ತಮಾನ ಸಂಧರ್ಭದ ಅತ್ಯುತ್ತಮ ಸಂಗತಿಯನ್ನು ಒಳಗೊಂಡಿದೆ ಎಂದರು.

ಯೋಗದ ಸಾಮರ್ಥ್ಯದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಯವರು ಜನರು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ, ವೈಯಕ್ತಿಕವಾಗಿ ಮತ್ತು ಸಮಾಜಕ್ಕೆ ಇದರಿಂದ ಪ್ರಯೋಜನವಿದೆ ಎಂದರು. ಯೋಗದಿಂದ ಶಾಂತ, ಸೃಜನಶೀಲ, ಮತ್ತು ಸಮೃದ್ಧ ಜೀವನ ಸಾಧ್ಯವಿದೆ, ಅದು ಉದ್ವಿಗ್ನತೆಯನ್ನು, ಅನಾವಶ್ಯಕ ಆತಂಕವನ್ನು ತೆಗೆದುಹಾಕುತ್ತದೆ. “ಯೋಗವು ವಿಭಜನೆಗೆ ಬದಲು ಒಂದುಗೂಡಿಸುತ್ತದೆ, ದ್ವೇಷಕ್ಕೆ ಬದಲು ಅದು ಜೋಡಿಸುತ್ತದೆ. ಯಾತನೆಗಳನ್ನು

ಹೆಚ್ಚಿಸುವ ಬದಲು ಯೋಗವು ಅವುಗಳನ್ನು ಗುಣಪಡಿಸುತ್ತದೆ “ ಎಂದೂ ಪ್ರಧಾನಿಯವರು ಹೇಳಿದರು.