Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಅವರಿಂದ ನಾನಾ ಸಾಮಾಜಿಕ ಸುರಕ್ಷೆ ಯೋಜನೆಗಳ ಫಲಾನುಭವಿಗಳ ಜತೆ ವಿಡಿಯೋ ಮೂಲಕ ಸಂವಹನ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶಾದ್ಯಂತ ಇರುವ ನಾನಾ ಸಾಮಾಜಿಕ ಸುರಕ್ಷೆ ಯೋಜನೆಯ ಫಲಾನುಭವಿಗಳ ಜೊತೆಗೆ ವಿಡಿಯೋ ಸೇತು ಮೂಲಕ ಸಂವಹನ ನಡೆಸಿದರು. ಈ ಮುಖಾಮುಖಿಯು ನಾಲ್ಕು ಪ್ರಮುಖ ಸಾಮಾಜಿಕ ಸುರಕ್ಷಾ ಯೋಜನೆಗಳಾದ ಅಟಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ವಯವಂದನ ಯೋಜನೆಗಳ ಫಲಾನುಭವಿಗಳ ಜೊತೆಗೆ ನಡೆಯಿತು. ಸರ್ಕಾರದ ನಾನಾ ಯೋಜನೆಗಳ ಫಲಾನುಭವಿಗಳ ಜೊತೆ ಪ್ರಧಾನಿ ಅವರು ನಡೆಸುತ್ತಿರುವ ಸಂವಾದದ ಸರಣಿಯಲ್ಲಿ ಇದು ಎಂಟನೆಯ ವಿಡಿಯೋ ಸಂವಾದವಾಗಿದೆ.

ಹಲವು ಅಡೆತಡೆಗಳನ್ನು ಎದುರಿಸಿ, ಬಲಿಷ್ಟರಾಗಿ ಹೊರಹೊಮ್ಮಿದ ಜನರ ಜೊತೆಗೆ ಸಂವಾದ ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಾಮಾಜಿಕ ಸುರಕ್ಷಾ ಯೋಜನೆಗಳು ಜನರನ್ನು ಸಬಲಗೊಳಿಸುತ್ತವೆ. ಪ್ರಸಕ್ತ ಸರ್ಕಾರದ ಇಂಥ ಸಾಮಾಜಿಕ ಸುರಕ್ಷಾ ಯೋಜನೆಗಳು ಜೀವನದ ಅನಿಶ್ಚಿತತೆಯನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಜನರಿಗೆ ನೆರವಾಗಿರುವುದಲ್ಲದೆ, ಆರ್ಥಿಕವಾಗಿ ಕಷ್ಟದ ಸನ್ನಿವೇಶಗಳನ್ನು ಎದುರಿಸಿ ಮುನ್ನುಗ್ಗಲು ಕುಟುಂಬಗಳನ್ನು ಸಶಕ್ತಗೊಳಿಸುತ್ತವೆ ಎಂದರು.

ಬಡಜನರು ಹಾಗೂ ದುರ್ಬಲರಿಗೆ ಆರ್ಥಿಕ ಸುರಕ್ಷೆಯನ್ನು ಖಾತ್ರಿಗೊಳಿಸಲು ಸರ್ಕಾರವು ತೆಗೆದುಕೊಂಡ ನಾನಾ ಕ್ರಮಗಳ ಕುರಿತು ಪ್ರಧಾನಿ ವಿವರಿಸಿದರು. ಅವುಗಳೆಂದರೆ, ಬಡವರಿಗೆ ಬ್ಯಾಂಕ್‍ಗಳಿಗೆ ಪ್ರವೇಶ ಕಲ್ಪಿಸಿರುವುದು-ಬ್ಯಾಂಕ್ ಸಂಪರ್ಕ ಇಲ್ಲದಿರುವವರಿಗೆ ಅವಕಾಶ: ಸಣ್ಣ ಉದ್ಯಮಿಗಳು ಹಾಗೂ ಕಿರಿಯ ಉದ್ಯಮಿಗಳಿಗೆ ಬಂಡವಾಳವನ್ನು ಒದಗಿಸುವುದು- ಹಣದ ಕೊರತೆ ಇರುವವರಿಗೆ ಬಂಡವಾಳ ನೀಡಿಕೆ ಮತ್ತು ಬಡವರು ಹಾಗೂ ದುರ್ಬಲರಿಗೆ ಸಾಮಾಜಿಕ ಸುರಕ್ಷೆ ಒದಗಿಸುವುದು- ಅಭದ್ರತೆಯಲ್ಲಿ ಬಳಲುವವರಿಗೆ ಭದ್ರತೆ ಕಲ್ಪಿಸುವುದು.

ಫಲಾನುಭವಿಗಳೊಡನೆ ಸಂವಾದ ನಡೆಸಿದ ಪ್ರಧಾನಿ ಅವರು, ಪ್ರಧಾನ ಮಂತ್ರಿ ಜನಧನ ಯೋಜನೆಯಡಿ 2014-17ರಲ್ಲಿ 28 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದು ಜಗತ್ತಿನಲ್ಲಿ ತೆರೆಯಲ್ಪಟ್ಟ ಒಟ್ಟು ಬ್ಯಾಂಕ್ ಖಾತೆಗಳಲ್ಲಿ ಶೇ 55ರಷ್ಟು ಎಂದರು. ಭಾರತದಲ್ಲಿ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ದೇಶದಲ್ಲಿ ಬ್ಯಾಂಕ್ ಖಾತೆಗಳ ಸಂಖ್ಯೆ 2014 ರಲ್ಲಿದ್ದ ಶೇ. 53ರಿಂದ ಶೇ 80ನ್ನು ತಲುಪಿದೆ ಎಂದರು.

ಜನರ ಸಂಕಷ್ಟಗಳನ್ನು ಆಲಿಸಿದ ಪ್ರಧಾನಿ ಅವರು, ವ್ಯಕ್ತಿಯೊಬ್ಬನ ಸಾವಿನಿಂದ ಆಗುವ ನಷ್ಟವನ್ನು ಭರಿಸಲು ಸಾಧ್ಯವಿಲ್ಲವಾದರೂ, ಸರ್ಕಾರವು ತೊಂದರೆಗೊಳಗಾದ ಕುಟುಂಬಕ್ಕೆ ಆರ್ಥಿಕ ಸುರಕ್ಷೆಯನ್ನು ಖಾತ್ರಿಪಡಿಸಲು ಪ್ರಯತ್ನಿಸಿದೆ. ಪ್ರಧಾನ ಮಂತ್ರಿ ಜೀವನ್‍ಜ್ಯೋತಿ ಯೋಜನೆಯಿಂದ 300 ರೂ. ನಷ್ಟು ಅತಿ ಕಡಿಮೆ ಕಂತು ಕಟ್ಟಿರುವ ಐದು ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ ಎಂದರು.

ಅಪಘಾತ ವಿಮೆ ಯೋಜನೆ ಕುರಿತು ಮಾತನ್ನಾಡಿದ ಅವರು, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಿಂದ 13 ಕೋಟಿ ಜನರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯಡಿ ವಾರ್ಷಿಕ 12 ರೂ. ಕಂತು ಕಟ್ಟುವ ಮೂಲಕ 2 ಲಕ್ಷ ರೂ. ಅಪಘಾತ ವಿಮೆ ಮೊತ್ತ ಪಡೆಯಬಹುದು ಎಂದರು.

ಸಂವಾದದ ವೇಳೆ ಹಿರಿಯರು ಹಾಗೂ ವೃದ್ಧರ ಸಂರಕ್ಷಣೆಗೆ ಸರ್ಕಾರ ಆರಂಭಿಸಿದ ನಾನಾ ಉಪಕ್ರಮಗಳನ್ನು ಕುರಿತು ವಿವರಿಸಿದರು. ಕಳೆದ ವರ್ಷ ಆರಂಭಿಸಿದ ವಯವಂದನ ಯೋಜನೆಯಿಂದ ಮೂರು ಲಕ್ಷ ಹಿರಿಯ ನಾಗರಿಕರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯಡಿ 60 ವರ್ಷ ಮೀರಿದ ನಾಗರಿಕರು 10 ವರ್ಷ ಕಾಲ ಶೇ. 8 ರಷ್ಟು ನಿಗದಿತ ವಾಪಸಾತಿ ಪಡೆಯಲಿದ್ದಾರೆ. ಇಷ್ಟಲ್ಲದೆ ಸರ್ಕಾರವು ಹಿರಿಯ ನಾಗರಿಕರ ಆದಾಯ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷ ರೂ.ಗೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಹಿತ ಕಾಯಲು ಸರ್ಕಾರವು ಬದ್ಧವಾಗಿದೆ ಎಂದರು.

ಎಲ್ಲ ನಾಗರಿಕರಿಗೂ ಸಾಮಾಜಿಕ ಸುರಕ್ಷೆಯನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದ ಅವರು, ಮೂರು ಪ್ರಮುಖ ಯೋಜನೆಗಳಡಿ (ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ವಯವಂದನ) ಕಳೆದ ಮೂರು ವರ್ಷದಲ್ಲಿ 20 ಕೋಟಿ ಜನರು ಪ್ರಯೋಜನ ಪಡೆದಿದ್ದಾರೆ. ಬಡವರು ಹಾಗೂ ದುರ್ಬಲರು ಸೇರಿದಂತೆ ಎಲ್ಲ ನಾಗರಿಕರ ಕಲ್ಯಾಣಕ್ಕಾಗಿ ಸರ್ಕಾರದ ಪ್ರಯತ್ನಗಳು ಮುಂದುವರಿಯಲಿವೆ ಹಾಗೂ ಅತ್ಯುತ್ತಮ ಎನ್ನಬಹುದಾದ ರೀತಿ ಅವರನ್ನು ಸಬಲಗೊಳಿಸಲಾಗುವುದು ಎಂದರು.

ಪ್ರಧಾನಿ ಅವರ ಜೊತೆ ಮಾತುಕತೆ ನಡೆಸಿದ ಫಲಾನುಭವಿಗಳು, ಈ ಯೋಜನೆಗಳು ಹೇಗೆ ತಮ್ಮ ಕಷ್ಟ ಕಾಲದಲ್ಲಿ ನೆರವಾದವು ಎಂಬುದನ್ನು ವಿವರಿಸಿದರು. ಇಂಥ ಯೋಜನೆಗಳನ್ನು ಆರಂಭಿಸಿದ ಪ್ರಧಾನಿ ಅವರಿಗೆ ತಮ್ಮ ಧನ್ಯವಾದ ತಿಳಿಸಿದ್ದಲ್ಲದೆ, ಈ ಯೋಜನೆಗಳು ಹೇಗೆ ಅನೇಕರ ಬದುಕನ್ನೇ ಬದಲಿಸಿದವು ಎಂದು ವಿವರಿಸಿದರು.