Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತವಾಂಗ್ ನಲ್ಲಿರುವ ಸಶಸ್ತ್ರ ಸೀಮಾ ಬಲದ 5.99 ಎಕರೆ ಭೂಮಿಯನ್ನು ಅರುಣಾಚಲ ಪ್ರದೇಶ ರಾಜ್ಯ ಸರಕಾರಕ್ಕೆ ವರ್ಗಾಯಿಸಲು ಸಂಪುಟದ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ತವಾಂಗ್ ನಲ್ಲಿರುವ ಸಶಸ್ತ್ರ ಸೀಮಾ ಬಲದ (ಎಸ್.ಎಸ್.ಬಿ.) 5.99 ಎಕರೆ ಭೂಮಿಯನ್ನು ಬೃಹತ್ ಉತ್ಸವ ಮತ್ತು ಬಹುಉದ್ದೇಶಿತ ಮೈದಾನವನ್ನಾಗಿ ನಿರ್ಮಿಸುವುದಕ್ಕಾಗಿ ಅರುಣಾಚಲ ಪ್ರದೇಶ ರಾಜ್ಯ ಸರಕಾರಕ್ಕೆ ವರ್ಗಾಯಿಸಲು ಅನುಮೋದನೆ ನೀಡಿತು.

ಅರುಣಾಚಲ ಪ್ರದೇಶ ಸರಕಾರವು ತವಾಂಗ್ ನಲ್ಲಿರುವ ಎಸ್.ಎಸ್.ಬಿ. ಮೈದಾನದ 5.99 ಎಕರೆಯಷ್ಟು ಸೂಕ್ತ ಭಾಗವನ್ನು ಪಾರ್ಕಿಂಗ್ ಸೌಲಭ್ಯ ಸಹಿತ ಬೃಹತ್ ಉತ್ಸವ ಮತ್ತು ಬಹು ಉದ್ದೇಶಿತ ಮೈದಾನ (4.73 ಎಕರೆ) ನಿರ್ಮಾಣಕ್ಕಾಗಿ ಮತ್ತು ವರ್ತುಲರಸ್ತೆ ( 1.26 ಎಕರೆ) ನಿರ್ಮಾಣಕ್ಕಾಗಿ ಗುರುತಿಸಿದೆ. ಅದರನ್ವಯ ಸರಕಾರ 5.99 ಎಕರೆ ಭೂವರ್ಗಾವಣೆಗೆ ಕೋರಿಕೆ ಮಂಡಿಸಿತ್ತು.

ಭಾರತ ಸರಕಾರವು (ಈಶಾನ್ಯ ವಲಯ ಅಭಿವೃದ್ದಿ ಮಂತ್ರಾಲಯ) ಈಗಾಗಲೇ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಸಂಪರ್ಕ ರಸ್ತೆ ಮತ್ತು ಪಾರ್ಕಿಂಗ್ ಸೌಲಭ್ಯವನ್ನು ಒಳಗೊಂಡ “ ಬೃಹತ್ ಉತ್ಸವ ಮತ್ತು ಬಹುಉದ್ದೇಶಿತ ಮೈದಾನ ನಿರ್ಮಾಣ ಯೋಜನೆ”ಗೆ 2016 ರ ಮಾರ್ಚ್ ತಿಂಗಳಲ್ಲಿ ತನ್ನ ಅಂಗೀಕಾರ ನೀಡಿದೆ. ಈ ಬಹು ಉದ್ದೇಶಿತ ಮೈದಾನವನ್ನು ವಿವಿಧ ಪ್ರವಾಸೋದ್ಯಮ ಉತ್ಸವಗಳ ಆಚರಣೆಗೆ ಬಳಸಿಕೊಳ್ಳಲಾಗುವುದು.