Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಲೆಕ್ಕಪರಿಶೋಧಕರ ಸಂಘ ಮತ್ತು ಸೌದಿಯ ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಾಧಿಕಾರಿಗಳ ಸಂಸ್ಥೆಯ ನಡುವಿನ ಒಪ್ಪಂದ ನವೀಕರಣಕ್ಕೆ ಕೇಂದ್ರ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತೀಯ ಲೆಕ್ಕಪರಿಶೋಧಕರ ಸಂಘ(ಐಸಿಎಐ) ಮತ್ತು ಸೌದಿಯ ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಾಧಿಕಾರಿಗಳ ಸಂಸ್ಥೆ(ಎಸ್ಒಸಿಪಿಎ) ನಡುವೆ 2014ರಲ್ಲಿ ಸಹಿಹಾಕಿದ ಒಡಂಬಡಿಕೆಗೆ ಘಟನೋತ್ತರ ಅನುಮೋದನೆ ಮತ್ತು ಆ ಒಪ್ಪಂದ ನವೀಕರಣಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದಾಗಿ ಸೌದಿ ಅರೆಬಿಯಾದಲ್ಲಿ ಕಾರ್ಪೊರೇಟ್ ಆಡಳಿತ, ತಾಂತ್ರಿಕ ಸಂಶೋಧನೆ ಮತ್ತು ಸಲಹೆ, ಗುಣಮಟ್ಟ ಖಾತ್ರಿ, ವಿಧಿವಿಜ್ಞಾನ ಲೆಕ್ಕ, ಸಣ್ಣ ಮತ್ತು ಮಧ್ಯಮ ವರ್ಗದ ಪದ್ಧತಿಗಳು(ಎಸ್ ಎನ್ ಪಿ), ಇಸ್ಲಾಮಿಕ್ ಹಣಕಾಸು, ಮುಂದುವರಿದ ವೃತ್ತಿಪರ ಅಭಿವೃದ್ಧಿ(ಸಿಪಿಡಿ) ಸೇರಿದಂತೆ ಅಕೌಂಟೆನ್ಸಿ ವೃತ್ತಿಯಲ್ಲಿ ಪರಸ್ಪರ ಹಿತಾಸಕ್ತಿಯ ಹಲವು ವಿಷಯಗಳಲ್ಲಿ ಸಹಕಾರ ಉತ್ತೇಜಿಸುವ ಗುರಿ ಹೊಂದಲಾಗಿದೆ.

ಪ್ರಮುಖ ಪರಿಣಾಮ :-

ಐಸಿಎಐ ಸದಸ್ಯರು, ವಿದ್ಯಾರ್ಥಿಗಳು ಮತ್ತು ಆ ಸಂಸ್ಥೆಯ ಉತ್ತಮ ಹಿತಾಸಕ್ತಿ ಕಾಯಲು ಹಾಗೂ ಉಭಯ ದೇಶಗಳಿಗೂ ಅನುಕೂಲಕಾರಿಯಾದ ಸಂಬಂಧಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಒಗ್ಗೂಡಿ ಕೆಲಸ ಮಾಡುವುದು ಇದರ ಗುರಿಯಾಗಿದೆ.

ಈ ಒಪ್ಪಂದದನ್ವಯ ಐಸಿಎಐ ಸದಸ್ಯರು ತಮ್ಮ ವೃತ್ತಿ ಆಯಾಮಗಳನ್ನು ವಿಸ್ತರಿಸಿಕೊಳ್ಳಲು ಅವಕಾಶ ದೊರಕುವುದಲ್ಲದೆ, ಐಸಿಎಐ ಒಂದು ಸ್ವತಂತ್ರ ಸಂಸ್ಥೆಯಾಗಿ ಸ್ಥಳೀಯ ಪ್ರಜೆಗಳ ಸಾಮರ್ಥ್ಯವನ್ನು ವೃದ್ಧಿಸಲು ನೆರವಾಗುತ್ತದೆ.

ಈ ಒಪ್ಪಂದದಿಂದಾಗಿ ಐಸಿಎಐ ಕೌಂಟಿಂಗ್ ಮತ್ತು ಆಡಳಿತ ವೃತ್ತಿಯನ್ನು ಉತ್ತೇಜಿಸುವ ಜತೆಗೆ ಆ ವೃತ್ತಿಯ ಅಭಿವೃದ್ಧಿ ಮತ್ತು ಅದರ ಸ್ಥಾನಮಾನ ಹೆಚ್ಚಿಸುವ ಎಲ್ಲ ವಿಷಯಗಳಲ್ಲಿ ಕೆಲಸ ಮಾಡಲಿದೆ.

ಪ್ರಯೋಜನಗಳು:-

ಐಸಿಎಐ ಸೌದಿ ಅರೆಬಿಯಾ, ರಿಯಾದ್ ಮತ್ತು ಜಡ್ಡಾ ಒಳಗೊಂಡಂತೆ ಪೂರ್ವ ಪ್ರಾಂತ್ಯದಲ್ಲಿ ಮೂರು ಶಾಖೆಗಳನ್ನು ಹೊಂದಿದ್ದು, ನಾನಾ ವೃತ್ತಿಗಳಲ್ಲಿ ತೊಡಗಿರುವ ಸುಮಾರು 200ಕ್ಕೂ ಅಧಿಕ ಸದಸ್ಯರಿದ್ದಾರೆ. ಈ ಒಪ್ಪಂದ ಐಸಿಎಐ ಮತ್ತು ಎಸ್ಒಸಿಪಿಎ ನಡುವಿನ ಸಂಬಂಧಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ಜತೆಗೆ ಭಾರತದಲ್ಲಿರುವ ಲೆಕ್ಕಪರಿಶೋಧಕರಿಗೆ ಹೆಚ್ಚಿನ ವೃತ್ತಿಪರ ಅವಕಾಶಗಳನ್ನು ದೊರಕಿಸಿ ಕೊಡುತ್ತದೆ ಮತ್ತು ಪೂರ್ವ ರಾಷ್ಟ್ರಗಳಲ್ಲಿನ ಸಂಸ್ಥೆಗಳಿಗೆ ಹೆಚ್ಚಿನ ವಿಶ್ವಾಸ ತುಂಬಲಿದೆ. ಆ ಮೂಲಕ ಭಾರತೀಯ ಲೆಕ್ಕಪರಿಶೋಧಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಹಿನ್ನೆಲೆ:

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ(ಐಸಿಎಐ) ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಇದು ಭಾರತೀಯ ಸಂವಿಧಾನದ ಕಾಯ್ದೆಯನುಸಾರ ರಚನೆಯಾಗಿದೆ. ಲೆಕ್ಕಪರಿಶೋಧಕರ ಕಾಯ್ದೆ 1949ರ ಅನ್ವಯ ಭಾರತದಲ್ಲಿ ಚಾರ್ಟೆಡ್ ಅಕೌಂಟೆಂಟ್ – ಲೆಕ್ಕಪರಿಶೋಧಕರ ವೃತ್ತಿಯನ್ನು ನಿಯಂತ್ರಿಸಲಾಗುತ್ತಿದೆ. ಸೌದಿ ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಾಧಿಕಾರಿಗಳ ನಿಯಮದನ್ವಯ ದೊರೆಯ ಆದೇಶದಂತೆ ಸೌದಿ ಸರ್ಟಿಫೈಡ್ ಪಬ್ಲಿಕ್ ಅಕೌಂಟೆನ್ಸ್ ಸಂಸ್ಥೆ(ಎಸ್ಒಸಿಪಿಎ) ರಚಿಸಲಾಗಿದ್ದು, ಆ ರಾಷ್ಟ್ರದಲ್ಲಿ ಅಕೌಂಟೆನ್ಸಿ ಮತ್ತು ಆಡಿಟಿಂಗ್ ವೃತ್ತಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

**************