Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಸಿಎಂಆರ್ ಮತ್ತು ಐಎನ್.ಎಸ್.ಇ.ಆರ್.ಎಂ. ಪ್ರಾನ್ಸ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ವೈದ್ಯಕೀಯ ಸಂಶೋಧನೆಗಳ ಭಾರತೀಯ ಮಂಡಳಿ (ಐ.ಸಿ.ಎಂ.ಆರ್.) ಮತ್ತು ಫ್ರಾನ್ಸ್ ನಇನ್ಸ್ಟಿಟ್ಯೂಟ್ ನ್ಯಾಷನಲ್ ಡೆ ಲಾ ಸ್ಯಾಂಟಿಟ್ ಡೆ ಲಾ ರಿಸರ್ಚ್ ಮೆಡಿಕ್ಲೇ (ಐಎನ್.ಎಸ್.ಇ.ಆರ್.ಎಂ.) ನಡುವೆ 2018ರ ಮಾರ್ಚ್ ನಲ್ಲಿ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು.

ಪ್ರಮುಖಾಂಶಗಳು:

ಈ ತಿಳಿವಳಿಕೆ ಒಪ್ಪಂದವು ವೈದ್ಯಕೀಯ, ಜೀವ ವಿಜ್ಞಾನ ಮತ್ತು ಆರೋಗ್ಯ ಸಂಶೋಧನೆಯಂಥ ಸಮಾನ ಹಿತದ ಕ್ಷೇತ್ರಗಳಲ್ಲಿನ ಸಹಕಾರದ ಗುರಿ ಹೊಂದಿದೆ. ಎರಡೂ ಕಡೆಯವರು ವೈಜ್ಞಾನಿಕ ಔನ್ನತ್ಯದ ಆಧಾರದ ಮೇಲೆ ನಿರ್ದಿಷ್ಟವಾಗಿ ಈ ಕೆಳಗಿನವುಗಳ ಮೇಲೆ ಗಮನ ಹರಿಸುತ್ತವೆ:

  1.             ಮಧುಮೇಹ ಮತ್ತು ಮೆಟಾಬಾಲಿಕ್ ಅಸ್ವಸ್ಥತೆಗಳು;
  2.             ಜೀನ್ ಎಡಿಟಿಂಗ್ ತಂತ್ರಗಳ ನಿಯಂತ್ರಕ ವಿಷಯಗಳ ಬಗ್ಗೆ ಗಮನಹರಿಸಿದ ಜೈವಿಕ ನೈತಿಕತೆ;

  iii.            ಅಪರೂಪದ ಕಾಯಿಲೆಗಳು; ಮತ್ತು

  1.             ಎರಡೂ ಕಡೆಯವರ ನಡುವೆ ಚರ್ಚೆಯ ಬಳಿಕ ಪರಿಗಣಿಸಲಾಗುವ ಪರಸ್ಪರ ಹಿತದ ಇತರ ಯಾವುದೇ ಕ್ಷೇತ್ರ

ಈ ತಿಳಿವಳಿಕೆ ಒಪ್ಪಂದವು ಪರಸ್ಪರ ಹಿತದ ಅಂತಾರಾಷ್ಟ್ರೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರದ ಕ್ಷೇತ್ರಗಳಲ್ಲಿ ಐಸಿಎಂಆರ್ ಮತ್ತು ಐ.ಎನ್.ಎಸ್.ಇ.ಆರ್.ಎಂ. ನಡುವೆ ಬಾಂಧವ್ಯ ವರ್ಧನೆ ಮಾಡಲಿದೆ. ಎರಡೂ ಕಡೆಯ ವೈಜ್ಞಾನಿಕ ಔನ್ನತ್ಯ ನಿರ್ದಿಷ್ಟ ಕ್ಷೇತ್ರಗಳಲ್ಲಿ ವೈದ್ಯಕೀಯ ಸಂಶೋಧನೆಯ ಮೇಲೆ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

*****

AKT/VBA