Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪೂರ್ವ ಬಾಹ್ಯ ಎಕ್ಸಪ್ರೆಸ್ ಹೆದ್ದಾರಿ ಮತ್ತು ದಿಲ್ಲಿ-ಮೀರತ್ ಎಕ್ಸಪ್ರೆಸ್ ಹೆದ್ದಾರಿಯ ಮೊದಲ ಹಂತ ಉದ್ಘಾಟಿಸಿದ ಪ್ರಧಾನ ಮಂತ್ರಿ.

ಪೂರ್ವ ಬಾಹ್ಯ ಎಕ್ಸಪ್ರೆಸ್ ಹೆದ್ದಾರಿ ಮತ್ತು ದಿಲ್ಲಿ-ಮೀರತ್ ಎಕ್ಸಪ್ರೆಸ್ ಹೆದ್ದಾರಿಯ ಮೊದಲ ಹಂತ ಉದ್ಘಾಟಿಸಿದ ಪ್ರಧಾನ ಮಂತ್ರಿ.

ಪೂರ್ವ ಬಾಹ್ಯ ಎಕ್ಸಪ್ರೆಸ್ ಹೆದ್ದಾರಿ ಮತ್ತು ದಿಲ್ಲಿ-ಮೀರತ್ ಎಕ್ಸಪ್ರೆಸ್ ಹೆದ್ದಾರಿಯ ಮೊದಲ ಹಂತ ಉದ್ಘಾಟಿಸಿದ ಪ್ರಧಾನ ಮಂತ್ರಿ.

ಪೂರ್ವ ಬಾಹ್ಯ ಎಕ್ಸಪ್ರೆಸ್ ಹೆದ್ದಾರಿ ಮತ್ತು ದಿಲ್ಲಿ-ಮೀರತ್ ಎಕ್ಸಪ್ರೆಸ್ ಹೆದ್ದಾರಿಯ ಮೊದಲ ಹಂತ ಉದ್ಘಾಟಿಸಿದ ಪ್ರಧಾನ ಮಂತ್ರಿ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾನುವಾರದಂದು ದಿಲ್ಲಿ ಎನ್.ಸಿ.ಆರ್. ವಲಯದಲ್ಲಿ ಹೊಸದಾಗಿ ನಿರ್ಮಾಣಗೊಂಡ ಎರಡು ಎಕ್ಸ್ ಪ್ರೆಸ್ ಹೆದ್ದಾರಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದರಲ್ಲಿ ಮೊದಲನೇಯದ್ದು 14 ಪಥಗಳ ದಿಲ್ಲಿ ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿಯ ಮೊದಲನೇ ಹಂತವಾದ ನಿಜಾಮುದ್ದೀನ್ ಸೇತುವೆಯಿಂದ ದಿಲ್ಲಿ, ಉತ್ತರಪ್ರದೇಶ ಗಡಿಯವರೆಗಿನ ಹೆದ್ದಾರಿ ಮತ್ತು ಎರಡನೇಯದ್ದು ರಾಷ್ಟ್ರೀಯ ಹೆದ್ದಾರಿ 1 ರ ಕುಂಡ್ಲಿಯಿಂದ ರಾಷ್ಟ್ರೀಯ ಹೆದ್ದಾರಿ 2 ರಲ್ಲಿರುವ ಪಲ್ವಾಲನ್ನು ಜೋಡಿಸುವ 135 ಕಿಲೋ ಮೀಟರ್ ಉದ್ದದ ಪೂರ್ವ ಬಾಹ್ಯ ಎಕ್ಸ ಪ್ರೆಸ್ ಹೆದ್ದಾರಿ (ಇ.ಪಿ.ಇ.)

ದಿಲ್ಲಿ ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿ ಪೂರ್ಣಗೊಂಡರೆ ರಾಷ್ಟ್ರ ರಾಜಧಾನಿಯಿಂದ ಮೀರತ್ ಗೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಮತ್ತು ಪಶ್ಚಿಮ ಉತ್ತರಪ್ರದೇಶ ಹಾಗು ಜಾರ್ಖಂಡದ ಇತರ ಹಲವು ಭಾಗಗಳಿಗೆ ಇದರ ಲಾಭ ದೊರೆಯಲಿದೆ.

ದಿಲ್ಲಿ ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಉದ್ಘಾಟಿಸಿದ ಬಳಿಕ ಕೆಲವು ಕಿಲೋ ಮೀಟರ್ ಗಳಷ್ಟು ದೂರಕ್ಕೆ ತೆರೆದ ಜೀಪಿನಲ್ಲಿ ಪ್ರಯಾಣಿಸಿ ಹೆದ್ದಾರಿಯನ್ನು ಪರೀಕ್ಷಿಸಿದ ಪ್ರಧಾನ ಮಂತ್ರಿಗಳಿಗೆ ಹೊಸದಾಗಿ ನಿರ್ಮಾಣವಾದ ಹೆದ್ದಾರಿಯ ಇಕ್ಕೆಲಗಳಲ್ಲಿ ಸೇರಿದ್ದ ಜನರು ಕೈಬೀಸಿ ಸ್ವಾಗತಿಸಿದರು.

ಪೂರ್ವ ಬಾಹ್ಯ ಎಕ್ಸ್ ಪ್ರೆಸ್ ಹೆದ್ದಾರಿ (ಇ.ಪಿ.ಇ.) ದಿಲ್ಲಿಯನ್ನು ತಲುಪಬೇಕಿಲ್ಲದ ವಾಹನಗಳ ಸಂಚಾರದ ಮಾರ್ಗ ಬದಲಾಯಿಸುವ ಮೂಲಕ ದಿಲ್ಲಿಯ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ ರಾಷ್ಟ್ರ ರಾಜಧಾನಿಯ ಮಾಲಿನ್ಯವನ್ನು ಕಡಿಮೆ ಮಾಡುವ ಅವಳಿ ಉದ್ದೇಶಗಳನ್ನು ಈಡೇರಿಸಲು ನೆರವಾಗಲಿದೆ

ಈ ಸಂಧರ್ಭದಲ್ಲಿ ಭಾಗಪತ್ ನಲ್ಲಿ ಏರ್ಪಟ್ಟ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿಗಳು ದಿಲ್ಲಿ ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿಯ ನಿರ್ಮಾಣ ಕಾರ್ಯ ಸದ್ಯವೇ ಪೂರ್ಣಗೊಳ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪೂರ್ವ ಬಾಹ್ಯ ಎಕ್ಸ್ ಪ್ರೆಸ್ ಹೆದ್ದಾರಿ ದಿಲ್ಲಿಯ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡಲಿದೆ ಎಂದರು. ಜನರ ಜೀವನ ಮಟ್ಟವನ್ನು ಎತ್ತರಿಸುವಲ್ಲಿ ಆಧುನಿಕ ಮೂಲಸೌಕರ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದೂ ಅಭಿಪ್ರಾಯಪಟ್ಟ ಅವರು ಮೂಲಸೌಕರ್ಯ ನಿರ್ಮಾಣ, ರಸ್ತೆಗಳ ನಿರ್ಮಾಣ, ರೈಲ್ವೇಗಳ , ಜಲಮಾರ್ಗಗಳ ನಿರ್ಮಾಣ ಇತ್ಯಾದಿಗಳ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ಪ್ರಸ್ತಾಪಿಸಿದರು. ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ಅವರು ಉದಾಹರಣೆಗಳನ್ನು ನೀಡಿದರು.

ಮಹಿಳಾ ಸಶಕ್ತೀಕರಣ ಕ್ಷೇತ್ರದಲ್ಲಿ ಸ್ವಚ್ಚ ಭಾರತ್ ಆಂದೋಲನದಡಿ ಶೌಚಾಲಯಗಳನ್ನು ಹೇಗೆ ಕಟ್ಟಲಾಯಿತು, ಮತ್ತು ಅಡುಗೆ ಅನಿಲ ಸಂಪರ್ಕಗಳನ್ನು ಉಜ್ವಲ ಯೋಜನಾ ಅಡಿಯಲ್ಲಿ ಹೇಗೆ ನೀಡಲಾಯಿತು, ಇದರಿಂದ ಮಹಿಳೆಯರ ಬದುಕನ್ನು ಹೇಗೆ ಸುಲಭಗೊಳಿಸಲಾಯಿತು ಎಂಬುದನ್ನು ಪ್ರಧಾನ ಮಂತ್ರಿಗಳು ವಿವರಿಸಿದರು. ಮುದ್ರಾ ಯೋಜನಾ ಅಡಿಯಲ್ಲಿ 13 ಕೋಟಿ ಸಾಲವನ್ನು ನೀಡಲಾಗಿದ್ದು ಇದರಲ್ಲಿ 75 ಶೇಖಡಾಕ್ಕಿಂತ ಹೆಚ್ಚು ಸಾಲವನ್ನು ಮಹಿಳಾ ಉದ್ಯಮಿಗಳು ಪಡೆದಿದ್ದಾರೆ ಎಂದರು.

ಇದಲ್ಲದೆ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ಜಾತಿಗಳವರಿಗಾಗಿ ಕೈಗೊಂಡ ಕ್ರಮಗಳನ್ನು ಪ್ರಧಾನ ಮಂತ್ರಿಗಳು ವಿವರಿಸಿದರು.
ಈ ವರ್ಷದ ಕೇಂದ್ರ ಬಜೆಟ್ಟಿನಲ್ಲಿ ಗ್ರಾಮೀಣ ಮೂಲಸೌಕರ್ಯ ಮತ್ತು ಕೃಷಿ ಮೂಲಸೌಕರ್ಯಗಳನ್ನು ಬಲಪಡಿಸಲು 14 ಲಕ್ಷ ಕೋ.ರೂ.ಗಳನ್ನು ಒದಗಿಸಲಾಗಿದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದರು.