ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,‘ಆಂಧ್ರಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯ’ದ ಹೆಸರಿನಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಜಂತಲೂರು ಗ್ರಾಮದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ತನ್ನ ತಾತ್ವಿಕ ಒಪ್ಪಿಗೆ ನೀಡಿದೆ. ಸದರಿ ವಿಶ್ವವಿದ್ಯಾಲಯದ ಸ್ಥಾಪನೆಗಾಗಿ ಪ್ರಥಮ ಚರಣದ ವೆಚ್ಚವನ್ನು ಭರಿಸಲು 450 ಕೋಟಿ ರೂಪಾಯಿಗಳ ನಿಧಿಗೂ ಅನುಮೋದನೆ ನೀಡಲಾಗಿದೆ.
2009ರ ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆಗೆ ತಿದ್ದುಪಡಿ ತರುವವರೆಗೆ ಅದಕ್ಕೆ ಕಾನೂನಾತ್ಮಕ ಸ್ಥಾನ ನೀಡಲು ಮತ್ತು 2018-19ನೇ ಶೈಕ್ಷಣಿಕ ವರ್ಷದಿಂದ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಸೊಸೈಟಿಗಳ ನೋಂದಣಿ ಕಾಯಿದೆ 1860ರ ಅಡಿಯಲ್ಲಿ ಆರಂಭದಲ್ಲಿ ಸೊಸೈಟಿ ರಚಿಸಿಕೊಂಡುಟ್ರಾನ್ಸಿಟ್ ಕ್ಯಾಂಪಸ್ ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಕಾರ್ಯಾಚರಣೆಯ ಪ್ರಸ್ತಾಪಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದರ ಆಡಳಿತ ಸ್ವರೂಪ ಆಗುವವರೆಗೆ ಹಾಲಿ ಕೇಂದ್ರೀಯ ವಿಶ್ವವಿದ್ಯಾಲಯವೇ ಕೇಂದ್ರೀಯ ವಿಶ್ವವಿದ್ಯಾಲಯದ ನಿಗಾ ನೋಡಿಕೊಳ್ಳಲಿದೆ.
ಈ ಅನುಮೋದನೆಯು ಗುಣಮಟ್ಟದ ಉನ್ನತ ಶಿಕ್ಷಣದ ಅವಕಾಶವನ್ನು ಹೆಚ್ಚಿಸುತ್ತದೆ ಮತ್ತು ಶೈಕ್ಷಣಿಕ ಸೌಲಭ್ಯದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡುತ್ತದೆ ಹಾಗೂ ಆಂಧ್ರಪ್ರದೇಶ ಪುನರ್ ಸಂಘಟನೆ ಕಾಯಿದೆ 2014ಕ್ಕೆ ಪರಿಣಾಮ ಬೀರುತ್ತದೆ. .
Cabinet has given its in-principle approval for establishing a Central University by the name of “Central University of Andhra Pradesh” in Janthaluru Village of Anantapur District.
— PMO India (@PMOIndia) May 16, 2018