ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಚರ್ಮ ಮತ್ತು ಪಾದರಕ್ಷೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ವಿಶೇಷ ಪ್ಯಾಕೇಜ್ ಗೆ ತನ್ನ ಅನುಮೋದನೆ ನೀಡಿದೆ. ಈ ಪ್ಯಾಕೇಜ್ ಕೇಂದ್ರ ವಲಯದ ಯೋಜನೆ ‘ಭಾರತೀಯ ಪಾದರಕ್ಷೆ, ಚರ್ಮ ಮತ್ತು ಪರಿಕರಗಳ ಅಭಿವೃದ್ಧಿ ಕಾರ್ಯಕ್ರಮ’ವನ್ನು 2600 ಕೋಟಿ ರೂಪಾಯಿ ವೆಚ್ಚದಲ್ಲಿ 2017-18ರಿಂದ 2019-20ರ ಅವಧಿಯ ಮೂರು ಹಣಕಾಸು ವರ್ಷದಲ್ಲಿ ಜಾರಿಗೊಳಿಸುವುದನ್ನೂ ಒಳಗೊಂಡಿದೆ.
ಪ್ರಮುಖ ಪರಿಣಾಮ:
ಈ ಯೋಜನೆಯು ಚರ್ಮ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಇಂಬು ನೀಡುತ್ತದೆ, ಚರ್ಮ ವಲಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಪರಿಸರಾತ್ಮಕ ಕಾಳಜಿಯನ್ನೂ ನಿರ್ವಹಿಸುತ್ತದೆ, ಹೆಚ್ಚುವರಿ ಹೂಡಿಕೆಗೂ ಅವಕಾಶ ಕೊಡುತ್ತದೆ, ಉದ್ಯೋಗ ಸೃಷ್ಟಿ ಮತ್ತು ಉತ್ಪಾದನೆ ಹೆಚ್ಚಿಸುತ್ತದೆ. ಹೆಚ್ಚಿಸಲಾದ ತೆರಿಗೆ ಪ್ರೋತ್ಸಾಹಕಗಳು ಈ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ವಲಯದಲ್ಲಿ ಋತುಮಾನದ ಪ್ರಕೃತಿಯ ದೃಷ್ಟಿಯಿಂದ ಕಾರ್ಮಿಕ ಕಾನೂನಿನ ಸುಧಾರಣೆಯು ಆರ್ಥಿಕತೆಯ ಪ್ರಮಾಣವನ್ನು ಬೆಂಬಲಿಸುತ್ತದೆ.
ಈ ವಿಶೇಷ ಪ್ಯಾಕೇಜ್ 3 ವರ್ಷಗಳಲ್ಲಿ 3.24 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪಾದರಕ್ಷೆ, ಚರ್ಮ ಮತ್ತು ಪರಿಕರ ವಲಯದಲ್ಲಿ ಸಂಚಿತ ಪರಿಣಾಮದ 2 ಲಕ್ಷ ಉದ್ಯೋಗವನ್ನು ಔಪಚಾರೀಕರಿಸಲು ನೆರವಾಗುತ್ತದೆ.
ಭಾರತೀಯ ಪಾದರಕ್ಷೆ, ಚರ್ಮ ಮತ್ತು ಪರಿಕರ ಅಭಿವೃದ್ಧಿ ಕಾರ್ಯಕ್ರಮದ ವಿವರಗಳು
1. ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್.ಆರ್.ಡಿ.) ಉಪ ಯೋಜನೆ: ಎಚ್ಆರ್.ಡಿ. ಉಪ ಯೋಜನೆಯು ನಿರುದ್ಯೋಗಿ ಜನರಿಗೆ ಉದ್ಯೋಗಾವಕಾಶ ಸಂಪರ್ಕಿತ ಕೌಶಲ ಅಭಿವೃದ್ಧಿ ತರಬೇತಿಗಾಗಿ ಪ್ರತಿಯೊಬ್ಬರಿಗೆ 15,000 ರೂ. ನಂತೆ, ಉದ್ಯೋಗದಲ್ಲಿರುವ ಕಾರ್ಮಿಕರಿಗೆ ಕೌಶಲ ವರ್ಧನೆ ತರಬೇತಿಗಾಗಿ ತಲಾ 5,000 ರೂ. ಮತ್ತು ತರಬೇತುದಾರರ ತರಬೇತಿಗಾಗಿ ಪ್ರತಿ ವ್ಯಕ್ತಿಗೆ 2 ಲಕ್ಷ ರೂಪಾಯಿ ಒದಗಿಸುವ ಉದ್ದೇಶ ಹೊಂದಿದೆ. ಕೌಶಲ ಅಭಿವೃದ್ಧಿ ತರಬೇತಿ ವರ್ಗದಲ್ಲಿ ನೆರವು ಪಡೆಯಲು ತರಬೇತಿ ಪಡೆದವರಲ್ಲಿ ಶೇ.75ರಷ್ಟು ಉದ್ಯೋಗ ಕೊಡಿಸುವುದು ಕಡ್ಡಾಯವಾಗಿರುತ್ತದೆ. ಈ ಉಪ ಯೋಜನೆ ಪ್ರಸ್ತಾಪದ ಅಡಿಯಲ್ಲಿ 3 ವರ್ಷಗಳ ಅವಧಿಯಲ್ಲಿ 4.32 ಲಕ್ಷ ನಿರುದ್ಯೋಗಿ ಜನರಿಗೆ ತರಬೇತಿ/ಕೌಶಲ, 75000 ಹಾಲಿ ಉದ್ಯೋಗಿಗಳಿಗೆ ಕೌಶಲ ವರ್ಧನೆ ಮತ್ತು 150 ತರಬೇತುದಾರರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 696 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
2. ಚರ್ಮ ವಲಯದ ಸಮಗ್ರ ಅಭಿವೃದ್ಧಿ (ಐಡಿಎಲ್.ಎಸ್.) ಉಪ ಯೋಜನೆ: ಐ.ಡಿ.ಎಲ್.ಎಸ್. ಉಪ ಯೋಜನೆಯು ಉದ್ಯೋಗ ಸೃಷ್ಟಿ ಸೇರಿದಂತೆ ಹೂಡಿಕೆ ಮತ್ತು ಉತ್ಪಾದನೆ ಪ್ರೋತ್ಸಾಹಿಸಲು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಮ್ಎಸ್ಎಮ್ಇ)ಗಳಿಗೆ ಹೊಸ ಘಟಕ ಮತ್ತು ಯಂತ್ರೋಪಕರಣಗಳ ಶೇ.30ರಷ್ಟು ವೆಚ್ಚ ಮತ್ತು ಅಸ್ತಿತ್ವದಲ್ಲಿರುವ ಇತರ ಘಟಕಗಳಲ್ಲಿ ಆಧುನೀಕರಣ / ತಂತ್ರಜ್ಞಾನ ಅಭಿವೃದ್ಧಿಗಾಗಿ ಮತ್ತು ಹೊಸ ಘಟಕ ಸ್ಥಾಪನೆಗೆ ಘಟಕ ಮತ್ತು ಯಂತ್ರೋಪಕರಣಗಳ ಶೇ.20ರಷ್ಟು ವೆಚ್ಚವನ್ನು ಬ್ಯಾಕ್ ಎಂಡ್ ಹೂಡಿಕೆ ಅನುದಾನ/ಸಬ್ಸಿಡಿಯನ್ನು ಒದಗಿಸಲು ಉದ್ದೇಶಿಸಿದೆ. ಈ ಉಪ ಯೋಜನೆಯಡಿಯಲ್ಲಿನ ಪ್ರಸ್ತಾವನೆಯು ಚರ್ಮ, ಪಾದರಕ್ಷೆ ಮತ್ತು ಪೂರಕ ಉಪಕರಣ ಮತ್ತು ಸಲಕರಣೆಗಳ ವಲಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 1000 ಘಟಕಗಳನ್ನು 425 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರೋತ್ಸಾಹಿಸಲುದ್ದೇಶಿದೆ.
3. ಸಾಂಸ್ಥಿಕ ಸೌಲಭ್ಯ ಸ್ಥಾಪನೆಯ ಉಪ ಯೋಜನೆ:ಈ ಉಪ ಯೋಜನೆಯು ಪಾದರಕ್ಷೆ ವಿನ್ಯಾಸ ಮತ್ತು ಅಭಿವೃದ್ಧಿ ಸಂಸ್ಥೆ (ಎಫ್.ಡಿಡಿಐ)ಗೆ ಎಫ್.ಡಿಡಿಐನ ಹಾಲಿ ಇರುವ ಕೆಲವು ಕ್ಯಾಂಪಸ್ ಗಳನ್ನು “ಉತ್ಕೃಷ್ಟತೆಯ ಕೇಂದ್ರ”ಗಳಾಗಿ ಮೇಲ್ದರ್ಜೆಗೇರಿಸಲು ಮತ್ತು 3 ಹೊಸ ಸಂಪೂರ್ಣ ಸುಸಜ್ಜಿತ ಕೌಶಲ ಕೇಂದ್ರಗಳ ಜೊತೆಗೆ ಮುಂಬರುವ ಬೃಹತ್ ಚರ್ಮ ಘಟಕಕ್ಕಾಗಿ ಯೋಜನಾ ಪ್ರಸ್ತಾವನೆಗನುಗುಣವಾಗಿ 3 ವರ್ಷಗಳಲ್ಲಿ 147 ಕೋಟಿ ರೂಪಾಯಿ ಹಂಚಿಕೆ ಪ್ರಸ್ತಾಪ ಹೊಂದಿದೆ.
4. ಬೃಹತ್ ಚರ್ಮ, ಪಾದರಕ್ಷೆ ಮತ್ತು ಪೂರಕ ಪರಿಕರಗಳ ಕ್ಲಸ್ಟರ್ (ಎಂ.ಎಲ್.ಎಫ್.ಎ.ಸಿ.) ಉಪ ಯೋಜನೆ:ಎಂ.ಎಲ್.ಎಫ್.ಎ.ಸಿ. ಉಪ ಯೋಜನೆಯು ಬೃಹತ್ ಚರ್ಮ, ಪಾದರಕ್ಷೆ ಮತ್ತು ಅದಕ್ಕೆಪೂರಕ ಪರಿಕರ ಕ್ಲಸ್ಟರ್ ಸ್ಥಾಪಿಸುವ ಮೂಲಕ ಪಾದರಕ್ಷೆ ಮತ್ತು ಅದಕ್ಕೆಪೂರಕ ಪರಿಕರ ವಲಯಕ್ಕೆ ಮೂಲಸೌಕರ್ಯ ಬೆಂಬಲ ನೀಡಲು ಉದ್ದೇಶಿಸಿದೆ. 125 ಕೋಟಿ ರೂಪಾಯಿಗಳ ಸರ್ಕಾರದ ಗರಿಷ್ಠ ನೆರವಿನ ಮಿತಿಯೊಳಗೆ ಭೂಮಿಯ ವೆಚ್ಚ ಹೊರತುಪಡಿಸಿ ಅರ್ಹ ಯೋಜನೆಯ ಶೇ.50ರವರೆಗೆ ಶ್ರೇಯಾಂಕಿತ ನೆರವು ಒದಗಿಸಲು ಉದ್ದೇಶಿಸಲಾಗಿದೆ. ಮೂರು ವರ್ಷಗಳಲ್ಲಿ 3-4 ಹೊಸ ಎಂ.ಎಲ್.ಎಫ್.ಎ.ಸಿ.ಗಳನ್ನು ಬೆಂಬಲಿಸಲು 360 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
5. ಚರ್ಮ ತಂತ್ರಜ್ಞಾನ, ನಾವಿನ್ಯ ಮತ್ತು ಪರಿಸರ ವಿಷಯಗಳ ಉಪ ಯೋಜನೆ: ಈ ಉಪ ಯೋಜನೆ ಅಡಿಯಲ್ಲಿ, ಸಾಮಾನ್ಯವಾಗಿ ಹೊರ ಹಾಕಲಾಗುವ ನೀರಿನ ಸಂಸ್ಕರಣೆ ಘಟಕಗಳ (ಸಿಇಟಿಪಿ) ಸ್ಥಾಪನೆ/ಮೇಲ್ದರ್ಜೆಗೇರಿಸಲು ಯೋಜನಾ ವೆಚ್ಚದ ಶೇ.70ರಂತೆ ನೆರವು ನೀಡಲಾಗುತ್ತದೆ. ಈ ಉಪ ಯೋಜನೆಯು ರಾಷ್ಟ್ರೀಯ ಮಟ್ಟದ ವಲಯವಾರು ಕೈಗಾರಿಕೆ ಮಂಡಳಿ/ಸಂಸ್ಥೆಗಳಿಗೆ ಬೆಂಬಲ ನೀಡಲಿದೆ ಮತ್ತು ಚರ್ಮದ ಪಾದರಕ್ಷೆ ಮತ್ತು ಪೂರಕ ಪರಿಕರ ವಲಯದ ಮುನ್ನೋಟದ ದಸ್ತಾವೇಜು ತಯಾರಿಕೆಗೆ ಬೆಂಬಲ ನೀಡುತ್ತದೆ. ಈ ಉಪ ಯೋಜನೆಗೆ ಪ್ರಸ್ತಾಪಿತ ಹಣ ಹಂಚಿಕೆ 3 ವರ್ಷಗಳಿಗೆ 782 ಕೋಟಿ ರೂಪಾಯಿಯಾಗಿದೆ.
6. ಚರ್ಮ, ಪಾದರಕ್ಷೆ ಮತ್ತು ಪೂರಕ ಪರಿಕರ ವಲಯದಲ್ಲಿ ಭಾರತೀಯ ಬ್ರ್ಯಾಂಡ್ ಉತ್ತೇಜನಕ್ಕೆ ಉಪ ಯೋಜನೆ: ಈ ಯೋಜನೆಯಡಿಯಲ್ಲಿ ಬ್ರ್ಯಾಂಡ್ ಉತ್ತೇಜನಕ್ಕಾಗಿ ಅನುಮೋದನೆಗೊಂಡ ಅರ್ಹ ಘಟಕಗಳಿಗೆ ನೆರವು ನೀಡಲುದ್ದೇಶಿಸಲಾಗಿದೆ. ಸರ್ಕಾರದ ನೆರವು ಒಟ್ಟು ಯೋಜನಾ ವೆಚ್ಚದ ಶೇ.50ರಷ್ಟಾಗಿದ್ದು, ಪ್ರತಿ ಬ್ರ್ಯಾಂಡ್ ಗೆ 3 ವರ್ಷಗಳಿಗೆ ಪ್ರತಿ ವರ್ಷಕ್ಕೆ 3 ಕೋಟಿ ರೂಪಾಯಿಯಾಗಿರುತ್ತದೆ. ಈ ಉಪ ಯೋಜನೆಯಡಿ 10 ಭಾರತೀಯ ಬ್ರ್ಯಾಂಡ್ ಗಳನ್ನು 90 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತೇಜಿಸಲು ಪ್ರಸ್ತಾಪಿಸಲಾಗಿದೆ.
7. ಚರ್ಮ, ಪಾದರಕ್ಷೆ ಮತ್ತು ಪೂರಕ ಉಪಕರಣ ವಲಯದಲ್ಲಿ ಹೆಚ್ಚುವರಿ ಉದ್ಯೋಗ ಉಪಕ್ರಮದ ಉಪ ಯೋಜನೆ: ಈ ಯೋಜನೆಯಡಿ ಇಪಿಎಫ್ಓನಲ್ಲಿ ನೋಂದಣಿಯಾಗುವ ಚರ್ಮ, ಪಾದರಕ್ಷೆ ಮತ್ತು ಪೂರಕ ಪರಿಕರ ವಲಯದಲ್ಲಿನ ಎಲ್ಲ ಹೊಸ ಉದ್ಯೋಗಳಿಗೆ ಅವರ ಮೊದಲ ಮೂರು ವರ್ಷಗಳ ಉದ್ಯೋಗದಲ್ಲಿ ಕಾರ್ಮಿಕರಿಗೆ ಮಾಲೀಕರು ನೀಡುವ ಭವಿಷ್ಯನಿಧಿಯ ಶೇ.3.67 ದೇಣಿಗೆಯನ್ನು ಒದಗಿಸಲು ಉದ್ದೇಶಿಸಲಾಗಿದೆ.ಈ ಉಪ ಯೋಜನೆಯು 15 ಸಾವಿರ ರೂಪಾಯಿವರೆಗಿನ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮಾತ್ರವೇ ಅನ್ವಯಿಸುತ್ತದೆ. ವಲಯದಲ್ಲಿ ಅಂದಾಜು 2 ಲಕ್ಷ ಉದ್ಯೋಗ ರೂಪಿಸಲು ನೆರವಾಗಲು 100 ಕೋಟಿ ರೂಪಾಯಿ ಹಂಚಿಕೆ ಮಾಡಲುದ್ದೇಶಿಸಲಾಗಿದೆ.
ಈ ವಿಶೇಷ ಪ್ಯಾಕೇಜ್ ಕಾರ್ಮಿಕ ಕಾಯಿದೆಗಳ ಸರಳೀಕರಣ ಕ್ರಮ ಮತ್ತು ಉದ್ಯೋಗ ಸೃಷ್ಟಿಯ ಉಪಕ್ರಮಗಳನ್ನೂ ಒಳಗೊಂಡಿದ್ದು, ಈ ಕೆಳಗಿನಂತಿದೆ:
1. ಆದಾಯ ತೆರಿಗೆ ಕಾಯಿದೆ 80 ಜೆಜೆಎಎ ಸೆಕ್ಷನ್ ನ ಹೆಚ್ಚಿನ ವ್ಯಾಪ್ತಿ:ಕಾರ್ಖಾನೆಗಳಲ್ಲಿ ಸರಕುಗಳನ್ನು ತಯಾರಿಕೆಯಲ್ಲಿ ತೊಡಗಿಕೊಂಡಿರುವ ಭಾರತೀಯ ಕಂಪನಿಗಳ ಹೊಸ ಕಾರ್ಮಿಕನಿಗೆ ಮೂರು ವರ್ಷಗಳವರೆಗೆ ನೀಡಲಾಗುವ ಹೆಚ್ಚುವರಿ ವೇತನದ ಮೇಲೆ ಕಡಿತವನ್ನು, ಆದಾಯ ತೆರಿಗೆ ಕಾಯಿದೆಯ ವಿಭಾಗ 80ಜೆಜೆಎಎ ಅಡಿಯಲ್ಲಿ ವರ್ಷದಲ್ಲಿ ಕನಿಷ್ಠ 240 ದಿನಗಳ ಉದ್ಯೋಗದ ನಿಬಂಧನೆಗಳನ್ನು ಮತ್ತಷ್ಟು ಸಡಿಲಿಸಿ ಪಾದರಕ್ಷೆ, ಚರ್ಮ ಮತ್ತು ಪೂರಕ ಪರಿಕರಗಳ ವಲಯಕ್ಕೆ ಈ ದಿನಗಳ ಋತುಮಾನದ ಸ್ವರೂಪವಾಗಿ ಪರಿಗಣಿಸಿ 150 ದಿನಗಳಿಗೆ ನಿಗದಿ ಮಾಡಲಾಗಿದೆ.
2. ನಿರ್ದಿಷ್ಠ ಅವಧಿಯ ಉದ್ಯೋಗದ ಪರಿಚಯ:ಜಾಗತಿಕ ಮಟ್ಟದಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಆಕರ್ಷಿಸಲು, ಕಾರ್ಮಿಕರಿಗೆ ಸಂಬಂಧಿಸಿದ ನಿಯಂತ್ರಣ ಚೌಕಟ್ಟಿನ ವಿಷಯಗಳನ್ನು ಚರ್ಮ, ಪಾದರಕ್ಷೆ ಮತ್ತು ಪೂರಕ ಪರಿಕರಣ ಕೈಗಾರಿಕೆಯ ಋತುಮಾನದ ಸ್ವರೂಪ ಪರಿಗಣಿಸಿ ಕೈಗಾರಿಕಾ ನೇಮಕಾತಿ (ಸ್ಥಾಯಿ ಆದೇಶ) ಕಾಯಿದೆ 1946ರ ಸೆಕ್ಷನ್ 15 ಸಬ್ ಸೆಕ್ಷನ್ (1)ರಡಿ ನಿರ್ದಿಷ್ಟ ಅವಧಿಯ ಉದ್ಯೋಗದ ಮೂಲಕ ನಿಭಾಯಿಸಲು ಪ್ರಸ್ತಾಪಿಸಲಾಗಿದೆ.
****