ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಧಾನಮಂತ್ರಿ ವಸತಿ ಯೋಜನೆ (ನಗರ) ಅಡಿಯಲ್ಲಿ ಮಧ್ಯಮ ಆದಾಯದ ಗುಂಪು (ಎಂ.ಐ.ಜಿ.)ಗಳಿಗೆ ಸಬ್ಸಿಡಿ ಸಂಪರ್ಕಿತ ಸಾಲ ಯೋಜನೆ (ಸಿ.ಎಲ್.ಎಸ್.ಎಸ್.)ಯಡಿಯಲ್ಲಿ ಬಡ್ಡಿ ಸಬ್ಸಿಡಿಗೆ ಅರ್ಹವಾದ ಮನೆಗಳ ಕಾರ್ಪೆಟ್ ಪ್ರದೇಶವನ್ನು ಹೆಚ್ಚಿಸಲು ತನ್ನ ಅನುಮೋದನೆ ನೀಡಿದೆ.
ಯೋಜನೆಯ ಉದ್ದೇಶ, ವ್ಯಾಪ್ತಿ ಮತ್ತು ಅದರ ತಲುಪಿಸುವಿಕೆಯನ್ನು ಹೆಚ್ಚಿಸಲು ಸಂಪುಟವು ಈ ಕೆಳಗಿನ ಅಂಶಗಳಿಗೆ ಅನುಮೋದನೆ ನೀಡಿದೆ:
i.ಎಂ.ಐ.ಜಿ. I ವರ್ಗದಲ್ಲಿ ಸಿಎಲ್.ಎಸ್.ಎಸ್.ನ ಕಾರ್ಪೆಟ್ ಪ್ರದೇಶವನ್ನು ಹಾಲಿ ಇರುವ 90 ಚದರ ಮೀಟರ್ಗಳಿಂದ “120 ಚದರ ಮೀಟರ್ ವರೆಗೆ’’ ಮತ್ತು ಎಂ.ಐ.ಜಿ. I I ವರ್ಗದಲ್ಲಿ ಸಿಎಲ್.ಎಸ್.ಎಸ್. ಅನ್ನು ಹಾಲಿ ಇರುವ 110 ಚದರ ಮೀಟರ್ ಗಳಿಂದ ‘150 ಚದರ ಮೀಟರ್’ವರೆಗೆ ಹೆಚ್ಚಿಸಲಾಗಿದೆ; ಮತ್ತು
ಎಂ.ಐ.ಜಿ.ಗಾಗಿ ಸಿ.ಎಲ್.ಎಸ್.ಎಸ್. ನಗರ ಪ್ರದೇಶದ ವಸತಿ ಕೊರತೆಯನ್ನು ನಿವಾರಿಸುವಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ. ಜೊತೆಗೆ ಮಧ್ಯಮ ಆದಾಯ ವರ್ಗದವರಿಗೆ ಬಡ್ಡಿ ಸಬ್ಸಿಡಿ ಯೋಜನೆಯ ಲಾಭ ದೊರಕುವಂತೆ ಮಾಡಲು ಕೈಗೊಂಡ ಅಗ್ರ ಹೆಜ್ಜೆಯಾಗಿದೆ.
ಎಂ.ಐ.ಜಿ.ಗಾಗಿ ಸಿಎಲ್.ಎಸ್.ಎಸ್. ಎಂ.ಐ.ಜಿ.ಯಲ್ಲಿ ಎರಡು ಆದಾಯದವರಿಗೆ ಅನ್ವಯಿಸುತ್ತದೆ. ವಾರ್ಷಿಕ ರೂ. 6,00,001 ರಿಂದ Rs.12,00,000 (ಎಂ.ಐ.ಜಿ.-I) ಮತ್ತುರೂ.12,00,001 ರಿಂದ ರೂ.18,00,000 (ಎಂ.ಐ.ಜಿ-II)
ಎಂ.ಐ.ಜಿ.-1ರಲ್ಲಿ, 9 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ಶೇ.4ರಷ್ಟು ಬಡ್ಡಿ ಸಬ್ಸಿಡಿಯನ್ನು ಒದಗಿಸಿದರೆ, ಎಂಐಜಿ -2ರಲ್ಲಿ 12 ಲಕ್ಷ ರೂಪಾಯಿಗಳ ಸಾಲಕ್ಕೆ ಶೇ.3ರಷ್ಟು ಬಡ್ಡಿ ದರ ಸಬ್ಸಿಡಿ ನೀಡಲಾಗುತ್ತದೆ. ಬಡ್ಡಿ ಸಬ್ಸಿಡಿಯನ್ನು ಸಾಲದ ಗರಿಷ್ಠ ಅವಧಿಯಾದ 20 ವರ್ಷಗಳು ಅಥವಾ ವಾಸ್ತವ ಅವಧಿ ಈ ಎರಡರಲ್ಲಿ ಯಾವುದು ಕಡಿಮೆಯೋ ಅದಕ್ಕೆ ಲೆಕ್ಕ ಹಾಕಲಾಗುತ್ತದೆ. 9 ಲಕ್ಷ ಮತ್ತು 12 ಲಕ್ಷ ಮೇಲ್ಪಟ್ಟ ಗೃಹ ಸಾಲಗಳು ಸಬ್ಸಿಡಿಯೇತರ ದರದಲ್ಲಿರುತ್ತವೆ.
ಎಂ.ಐ.ಜಿ.ಗಾರಿ ಸಿಎಲ್.ಎಸ್.ಎಸ್. ಪ್ರಸ್ತುತ 31.03.2019ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ.
ಪರಿಣಾಮ
ಹಿನ್ನೆಲೆ :
ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು 31.12.2016ರಂದು ಮಾನ್ಯ ಪ್ರಧಾನಮಂತ್ರಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಬಡವರಿಗೆ ಗೃಹ ಸಾಲ ಪಡೆಯಲು ಉಪಯುಕ್ತವಾಗುವಂತೆ ಪ್ರಕಟಿಸಿದ ರೀತ್ಯ, ಸಬ್ಸಿಡಿ ಸಂಪರ್ಕಿತ ಸಾಲ ಯೋಜನೆಯನ್ನು ಮಧ್ಯಮ ಆದಾಯ ಗುಂಪುಗಳಿಗೆ (ಎಂ.ಐ.ಜಿಗೆ ಸಿ.ಎಲ್.ಎಸ್.ಎಸ್.) ಅನ್ನು ಪ್ರಧಾನಮಂತ್ರಿಯವರ ವಸತಿ ಯೋಜನೆ (ನಗರ) ಅಡಿಯಲ್ಲಿ 01.01.2017ರಿಂದ ಜಾರಿಗೊಳಿಸಿದೆ.
****
Hike in carpet area to help middle income buyers: Realtorshttps://t.co/Lm3TvRoD7A
— PMO India (@PMOIndia) November 17, 2017
via NMApp pic.twitter.com/t6i92X10td