Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿಲಿಪ್ಪೀನ್ಸ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ

ಪಿಲಿಪ್ಪೀನ್ಸ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ

ಪಿಲಿಪ್ಪೀನ್ಸ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ

ಪಿಲಿಪ್ಪೀನ್ಸ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಿಲಿಪ್ಪೀನ್ಸ್ ನ ಮನಿಲಾದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು.

ಆಸಿಯಾನ್ ವಲಯ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಿ ಹೇಳಿದರು. ಆಸಿಯಾನ್ ವಲಯದೊಂದಿಗೆ ಭಾರತ ಹೊಂದಿರುವ ಭಾವನಾತ್ಮಕ ಬಾಂಧವ್ಯ ಮತ್ತು ಹಂಚಿಕೆಯ ಪರಂಪರೆಯ ಬಗ್ಗೆ ಮಾತನಾಡಿದರು. ಅದರಲ್ಲೂ ಬುದ್ಧ ಮತ್ತು ರಾಮಾಯಣದ ಪ್ರಸ್ತಾಪ ಮಾಡಿದರು. ಈ ವಲಯದಲ್ಲಿರುವ ಭಾರತೀಯ ಸಮುದಾಯ ಈ ಪರಂಪರೆಯನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಭಾರತವು ಯಾವತ್ತೂ ಇನ್ನೊಂದು ರಾಷ್ಟ್ರಕ್ಕೆ ತೊಂದರೆ ನೀಡಿಲ್ಲ ಎಂದು ಪ್ರಧಾನಿ ಹೇಳಿದರು. ವಿಶ್ವಯುದ್ಧ 1 ಮತ್ತು 2ರಲ್ಲಿ ದೂರದ ದೇಶದಲ್ಲಿ ಬಲಿದಾನಗೈದ ಭಾರತದ ಒಂದೂವರೆ ಲಕ್ಷ ಯೋಧರ ತ್ಯಾಗದ ಬಗ್ಗೆ ಅವರು ಮಾತನಾಡಿದರು.

ಭಾರತದ ವರ್ತಮಾನ ಕೂಡ, ಪ್ರಜ್ವಲವಾಗಿದೆ ಮತ್ತು ಪ್ರಕಾಶಮಾನವಾಗಿದೆ ಎಂದರು. ಏಷ್ಯಾದ ಶತಮಾನ ಎಂದು ಕರೆಯಲಾಗುವ 21ನೇ ಶತಮಾನವನ್ನು ಭಾರತದ ಶತಮಾನವಾಗಿ ಪರಿವರ್ತಿಸಲು ನಾವು ಎಲ್ಲ ಸಾಧ್ಯ ಕಾರ್ಯವನ್ನೂ ಮಾಡಬೇಕು ಎಂದರು.

ಬಡವರ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಜನ್ ಧನ್ ಯೋಜನೆ ಮತ್ತು ಉಜ್ವಲ ಯೋಜನೆಯ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಆಧಾರ್ ಸಂಪರ್ಕಿತ ಸಬ್ಸಿಡಿಯ ಮೂಲಕ ಆಗಿರುವ ಲಾಭಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

***