Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿ ಯೋಜನೆಯ ಪುನರ್ ವಿನ್ಯಾಸ ಮತ್ತು ಮುಂದುವರಿಕೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮ (ಎನ್.ಆರ್.ಡಿ.ಡಬ್ಲ್ಯು.ಪಿ) ವನ್ನು ಮುಂದುವರಿಸಲು ಮತ್ತು ಫಲಶ್ರುತಿ ಆಧಾರಿತ, ಸ್ಪರ್ಧಾತ್ಮಕ ಹಾಗೂ ಸುಸ್ಥಿರತೆ (ಕಾರ್ಯನಿರ್ವಹಣೆ)ಯ ಮೇಲೆ ಹೆಚ್ಚಿನ ಗಮನದೊಂದಿಗೆ ನಿಗಾ ಇಡಲು ಮತ್ತು ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಸೇವೆ ಪೂರೈಕೆಯ ಖಾತ್ರಿಗಾಗಿ ಅದನ್ನು ಪುನರ್ ವಿನ್ಯಾಸಗೊಳಿಸಲು ತನ್ನ ಅನುಮೋದನೆ ನೀಡಿದೆ

.

ಹದಿನಾಲ್ಕನೇ ಹಣಕಾಸು ಆಯೋಗದ (ಎಫ್.ಎಫ್.ಸಿ.) ಅವಧಿಯಲ್ಲಿ 2017-18ರಿಂದ 2019-20ರವರೆಗೆ 23,050 ಕೋಟಿ ರೂಪಾಯಿಗಳನ್ನು ಅನುಮೋದಿಸಲಾಗಿದೆ. ಈ ಯೋಜನೆಯು ದೇಶದ ಎಲ್ಲ ಗ್ರಾಮೀಣ ಜನಸಂಖ್ಯೆಯನ್ನೂ ತಲುಪಲಿದೆ. ಪುನರ್ ವಿನ್ಯಾಸವು ಕಾರ್ಯಕ್ರಮವನ್ನು ಹೆಚ್ಚು ನಮ್ಯ, ಫಲಿತಾಂಶ ಆಧಾರಿತ, ಸ್ಪರ್ಧಾತ್ಮಕಗೊಳಿಸಲಿದೆ ಮತ್ತು ಕೊಳವೆಯ ಮೂಲಕ ಸುಸ್ಥಿರ ನೀರು ಪೂರೈಕೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಚಿವಾಲಯದ ಗುರಿಯನ್ನು ತಲುಪಲು ಸಹಕಾರಿಯಾಗಲಿದೆ.

ನಿರ್ಣಯದ ವಿವರಗಳು ಈ ಕೆಳಕಂಡಂತಿವೆ :

  1. ಹದಿನಾಲ್ಕನೇ ಹಣಕಾಸು ಆಯೋಗದ ಆವರ್ತನದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ (ಎನ್ಆರ್.ಡಿ.ಡಬ್ಲ್ಯೂಪಿ)ವನ್ನು ಮಾರ್ಚ್ 2020 ರವರೆಗೆ ಮುಂದುವರೆಸುವುದು.
  2. ಎನ್ಆರ್.ಡಿ.ಡಬ್ಲ್ಯೂಪಿ ಪುನರ್ ವಿನ್ಯಾಸದೊಂದಿಗೆ, ಶೇ.2ರಷ್ಟು ನಿಧಿ ಜಪಾನ್ ನ ಮೆದುಳಿನ ಉರಿಯೂತ (ಜೆಇ) / ತೀವ್ರ ಮೆದುಳು ಉರಿಯೂತ ಸಿಂಡ್ರೋಮ್ (ಎಇಎಸ್) ಬಾಧಿತ ಪ್ರದೇಶಗಳಿಗೆ ಮೀಸಲಿಡಲಾಗುತ್ತದೆ.
  3. ಎನ್ಆರ್.ಡಿ.ಡಬ್ಲ್ಯೂಪಿ ಅಡಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ 2017ರ ಫೆಬ್ರವರಿಯಲ್ಲಿ ಆರಂಭಿಸಿರುವ ಹೊಸ ಉಪ ಕಾರ್ಯಕ್ರಮವಾದ ರಾಷ್ಟ್ರೀಯ ಜಲ ಗುಣಮಟ್ಟ ಉಪ ಅಭಿಯಾನ (ಎನ್.ಡಬ್ಲ್ಯು.ಕ್ಯು.ಎಸ್.ಎಂ.) ವು ತುರ್ತು ಅಗತ್ಯ ಇರುವ 28,000 ಆರ್ಸಾನಿಕ್ ಮತ್ತು ಫ್ಲೋರೈಡ್ ಬಾಧಿತ ಜನವಸತಿ (ಈಗಾಗಲೇ ಗುರುತಿಸಿರುವ) ಗಳ ಸಮಸ್ಯೆ ನಿವಾರಿಸಲಿದೆ. ಇದಕ್ಕೆ 4 ವರ್ಷದ ಅವಧಿಗೆ ಅಂದರೆ 2021ರ ಮಾರ್ಚ್ ವರೆಗೆ ಕೇಂದ್ರ ಸರ್ಕಾರದ ಪಾಲು 12,500 ಕೋಟಿ ರೂಪಾಯಿಗಳ ಅಗತ್ಯವಿದೆ. ಇದನ್ನು ಎನ್.ಆರ್.ಡಿ.ಡಬ್ಲ್ಯು.ಪಿ. ಹಂಚಿಕೆಯಡಿಯಲ್ಲಿ ನೀಡಲಾಗುತ್ತದೆ.
  4. ಒಪ್ಪಿದ ಯೋಜನೆಗಳಿಗೆ, ಎರಡನೇ ಕಂತಿನ ಮೊತ್ತದ ಅರ್ಧದಷ್ಟನ್ನು ಮುಂಗಡವಾಗಿ, ರಾಜ್ಯ ಸರ್ಕಾರಗಳು ಪಾವತಿಸಲಿವೆ, ನಂತರ ಕೇಂದ್ರ ಸರ್ಕಾರದ ನಿಧಿಯಿಂದ ಈ ಹಣವನ್ನು ಮರುಪಾವತಿ ಮಾಡುತ್ತದೆ. ರಾಜ್ಯ(ಗಳು) ಹಣಕಾಸು ವರ್ಷದ ನವೆಂಬರ್ 30ರೊಳಗೆ ಈ ಹಣವನ್ನು ಕೇಳುವಲ್ಲಿ ವಿಫಲವಾದರೆ, ಆಗ, ಈ ಮೊತ್ತವು ಕಾಮನ್ ಪೂಲ್ ನ ಭಾಗವಾಗಿ ಹೋಗುತ್ತದೆ, ಇದನ್ನು ಉನ್ನತವಾಗಿ ಕಾರ್ಯ ಪ್ರದರ್ಶಿಸುತ್ತಿರುವ ಮತ್ತು ಈಗಾಗಲೇ ಕೇಂದ್ರ ಸರ್ಕಾರದ ಅಗತ್ಯದಂತೆ ಮುಂಗಡವಾಗಿ ತನ್ನ ಪಾಲನ್ನು ನೀಡಿದ ರಾಜ್ಯಗಳಿಗೆ ಮೊದಲ ಬಂದವರಿಗೆ ಮೊದಲ ಆದ್ಯತೆ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.
  5. ಎರಡನೇ ಕಂತಿನ ನಿಧಿಯ ಉಳಿದ ಅರ್ಧ ಭಾಗವನ್ನು ರಾಜ್ಯಗಳಿಗೆ ಅವುಗಳು ಕೊಳವೆ ಮಾರ್ಗದ ಮೂಲಕ ನೀರು ಪೂರೈಕೆ ಯೋಜನೆಗಾಗಿ ಮಾಡಿದ ಕಾರ್ಯನಿರ್ವಹಣೆಯ ಸ್ಥಿತಿ ಆಧರಿಸಿ ಬಿಡುಗಡೆ ಮಾಡಲಾಗುತ್ತದೆ, ಇದನ್ನು ಮೂರನೇ ವ್ಯಕ್ತಿಯಿಂದ ಮೌಲ್ಯ ಮಾಪನ ಮಾಡಿಸಲಾಗುತ್ತದೆ.
  6. ಸಂಪುಟವು ಎಫ್.ಎಫ್.ಸಿ. ಕಾರ್ಯಕ್ರಮಕ್ಕೆ 2017-18 ರಿಂದ 2019-20ನೇ ಸಾಲಿಗಾಗಿ 23,050 ಕೋಟಿ ರೂಪಾಯಿ ಮೊತ್ತಕ್ಕೆ ಅನುಮೋದನೆ ನೀಡಿದೆ.

ಎನ್.ಡಬ್ಲ್ಯು.ಕ್ಯು.ಎಸ್.ಎಂ. ಆರ್ಸಾನಿಕ್ / ಪ್ಲೋರೈಡ್ ಬಾಧಿತ ಜನವಸತಿಗ ಎಲ್ಲ ಗ್ರಾಮೀಣ ಜನಸಂಖ್ಯೆಗೆ 2021ರ ಮಾರ್ಚ್ ಅಂತ್ಯದೊಳಗೆ ಸುಸ್ಥಿರ ಆಧಾರದಲ್ಲಿ ಶುದ್ಧ ಕುಡಿಸುವ ನೀರು ತಲುಪಿಸುವ ಗುರಿಯನ್ನು ಹೊಂದಿದೆ. ಎನ್.ಆರ್.ಡಿ.ಡಬ್ಲ್ಯು.ಪಿ. ನಿಧಿಯನ್ನು ಬಳಕೆ ಮಾಡಿಕೊಳ್ಳಲು ಕಾರ್ಯಕ್ರಮದ ಅಡಿಯಲ್ಲಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ರಾಜ್ಯಗಳಿಗೆ ಹೆಚ್ಚಿನ ನಮ್ಯತೆಯನ್ನು ಒದಗಿಸಲಾಗಿದೆ.

 

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಮಗ್ರ ನಿರ್ವಹಣಾ ಮಾಹಿತಿ ವ್ಯವಸ್ಥೆ (ಐಎಂಐಎಸ್) ರೀತ್ಯ, ಭಾರತದ ಸುಮಾರು ಶೇ.77ರಷ್ಟು ಗ್ರಾಮೀಣ ಜನವಸತಿಗಳು ಸಂಪೂರ್ಣ ವ್ಯಾಪ್ತಿಯ (ಎಫ್.ಸಿ) ಸ್ಥಾನ (ಪ್ರತಿಯೊಬ್ಬರಿಗೂ ನಿತ್ಯ 40 ಲೀಟರ್ ನೀರು) ಗುರಿಯನ್ನು ಸಾಧಿಸಿವೆ ಮತ್ತು ಶೇ.56ರಷ್ಟು ಗ್ರಾಮೀಣ ಜನಸಂಖ್ಯೆ ಸಾರ್ವಜನಿಕ ಸ್ಟಾಂಡ್ ಪೋಸ್ಟ್ ಗಳ ಮೂಲಕ ಕೊಳಾಯಿ ನೀರು ಪಡೆಯುತ್ತಿವೆ, ಇದು ಶೇ.16.7ರಷ್ಟು ವಸತಿ ಸಂಪರ್ಕದೊಳಗೆ ಬರುತ್ತದೆ. 

####