Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶದ ಅಧೀನ ನ್ಯಾಯಾಂಗಕ್ಕಾಗಿ ಎರಡನೇ ನ್ಯಾಯಾಂಗ ವೇತನ ಆಯೋಗ ನೇಮಕ ಮಾಡಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೇಶದ ಅಧೀನ ನ್ಯಾಯಾಂಗಕ್ಕಾಗಿ ಎರಡನೇ ನ್ಯಾಯಾಂಗ ವೇತನ ಆಯೋಗ (ಎಸ್.ಎನ್.ಜೆ.ಪಿ.ಸಿ.) ನೇಮಕ ಮಾಡಲು ಸಂಪುಟದ ಅನುಮೋದನೆ ನೀಡಿದೆ.

ಸುಪ್ರೀಂಕೋರ್ಟ್ ನ  ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಶ್ರೀ. ಜೆ.ಪಿ. ವೆಂಕಟರಾಮರೆಡ್ಡಿ ನೇತೃತ್ವದ ಆಯೋಗದಲ್ಲಿ ಕೇರಳ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಶ್ರೀ ಆರ್. ಬಸಂತ್ ಸದಸ್ಯರಾಗಿರುತ್ತಾರೆ.

ಈ ಆಯೋಗವು ರಾಜ್ಯ ಸರ್ಕಾರಗಳಿಗೆ 18 ತಿಂಗಳುಗಳ ಅವಧಿಯೊಳಗೆ ತನ್ನ ಶಿಫಾರಸುಗಳನ್ನು ಮಾಡಲಿದೆ.

ಆಯೋಗವು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಲ್ಲಿರುವ ನ್ಯಾಯಾಂಗ ಅಧಿಕಾರಿಗಳ ಪ್ರಸಕ್ತ ಸೇವಾ ಪರಿಸ್ಥಿತಿ ಮತ್ತು ವೇತನ ಸೌಲಭ್ಯಗಳ ಸ್ವರೂಪದ ಪರಿಶೀಲನೆ ನಡೆಸಲಿದೆ. ದೇಶದ ಅಧೀನ ನ್ಯಾಯಾಲಯಗಳಿಗೆ ಸೇರಿದ ನ್ಯಾಯಾಂಗ ಅಧಿಕಾರಿಗಳ ವೇತನ ಸ್ವರೂಪ ಮತ್ತು ಇತರ ಸೌಲಭ್ಯಗಳನ್ನು ನಿಯಂತ್ರಿಸುವ ತತ್ವಗಳನ್ನು ವಿಕಸಿಸುವ ಗುರಿಯನ್ನು ಆಯೋಗವು ಹೊಂದಿದೆ. ವೇತನದ ಜೊತೆಗೆ ನ್ಯಾಯಾಂಗ ಅಧಿಕಾರಿಗಳಿಗೆ ಲಭಿಸುತ್ತಿರುವ ವೈವಿಧ್ಯಮಯ ಭತ್ಯೆ ಮತ್ತು ಸೌಲಭ್ಯಗಳ ಸ್ವರೂಪ ಮತ್ತು ಕಾರ್ಯ ವಿಧಾನ ಮತ್ತು ಕಾರ್ಯ ಪರಿಸರದ ಪರಿಶೀಲನೆಯನ್ನೂ ನಡೆಸಲಿದೆ ಮತ್ತು ಅವುಗಳ ತರ್ಕಬದ್ಧತೆ ಮತ್ತು ಸರಳೀಕರಣಕ್ಕೆ ಸಲಹೆ ನೀಡಲಿದೆ.

ಆಯೋಗವು ತನ್ನದೇ ಆದ ಕಾರ್ಯವಿಧಾನಗಳನ್ನು ರೂಪಿಸುತ್ತದೆ ಮತ್ತು ಕಾರ್ಯವನ್ನು ಪೂರೈಸುವ ಅಗತ್ಯವಿರುವ ಪ್ರಕ್ರಿಯೆಗಳನ್ನು ಸೂತ್ರೀಕರಿಸುತ್ತದೆ. ದೇಶದಾದ್ಯಂತ ನ್ಯಾಯಾಂಗ ಅಧಿಕಾರಿಗಳಿಗೆ ಏಕರೂಪವಾದ ಸೇವಾ ಸ್ಥಿತಿಗತಿ ಮತ್ತು ವೇತನಶ್ರೇಣಿ ರೂಪಿಸುವ ಗುರಿಯನ್ನು ಆಯೋಗ ಹೊಂದಿದೆ.

ಆಯೋಗದ ಶಿಫಾರಸುಗಳು ನ್ಯಾಯಾಂಗ ಆಡಳಿತದಲ್ಲಿ ಕ್ಷಮತೆ, ನ್ಯಾಯಾಂಗದ ಗಾತ್ರವನ್ನು ಸರಳೀಕರಿಸಲು ಮತ್ತು ಉತ್ತೇಜಿಸಲು ನೆರವಾಗುತ್ತದೆ ಮತ್ತು ಹಿಂದಿನ ಶಿಫಾರಸುಗಳ ಅನುಷ್ಠಾನದಿಂದ ಸೃಷ್ಟಿಯಾಗಿರುವ ವೇತನ ತಾರತಮ್ಯವನ್ನು ನಿವಾರಿಸುತ್ತದೆ.

******