ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಫೀಫಾ 17 ವರ್ಷದೊಳಗಿನ ವಿಶ್ವಕಪ್ ಫುಟ್ಬಾಲ್ ನಲ್ಲಿ ಭಾಗಿಯಾದ ಭಾರತೀಯ ತಂಡವನ್ನು ಭೇಟಿ ಮಾಡಿದರು.
ಈ ಭೇಟಿಯ ವೇಳೆ, ಆಟಗಾರರು ಮೈದಾನದ ಒಳಗೆ ಮತ್ತು ಹೊರಗೆ ತಮಗೆ ದೊರೆತ ಅನುಭವ ಮತ್ತು ಮನ್ನಣೆಯ ಕುರಿತು ಮಾತನಾಡಿದರು.
ಪಂದ್ಯಾವಳಿಯ ಫಲಶ್ರುತಿಯ ಬಗ್ಗೆ ಅಸಮಾಧಾನಗೊಳ್ಳದಂತೆ ಆಟಗಾರರಿಗೆ ಹೇಳಿದ ಪ್ರಧಾನಿ, ಇದನ್ನು ಒಂದು ಅವಕಾಶ ಎಂದು ಪರಿಗಣಿಸುವಂತೆ ಅವರನ್ನು ಉತ್ತೇಜಿಸಿದರು. ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಸ್ಪರ್ಧಿಸುವುದು ಯಶಸ್ಸಿನ ಮೊದಲ ಹೆಜ್ಜೆ ಎಂದು ಹೇಳಿದರು.
ಭಾರತ ಫುಟ್ಬಾಲ್ ನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಹೇಳಿದರು. ಕ್ರೀಡೆಗಳು ಆತ್ಮವಿಶ್ವಾಸ ಹೆಚ್ಚಿಸಲು, ವ್ಯಕ್ತಿತ್ವದ ಬೆಳವಣಿಗೆಗೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ ಎಂದರು.
ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಶ್ರೀ ರಾಜ್ಯವರ್ಧನಸಿಂಗ್ ರಾಥೋಡ್ ಈ ಸಂದರ್ಭದಲ್ಲಿ ಹಾಜರಿದ್ದರು.
******
Had an excellent interaction with the Indian Team that participated in the FIFA U-17 World Cup held in India recently. https://t.co/aqzvNr1gCe pic.twitter.com/FxJUm7jX1w
— Narendra Modi (@narendramodi) November 10, 2017