ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ವಿತೆರಿಗೆ ತಪ್ಪಿಸಲು ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ಚೈನಾ ವಿಶೇಷ ಆಡಳಿತಾತ್ಮಕ ವಲಯ ಹಾಂಗ್ ಕಾಂಗ್ (ಎಚ್.ಕೆ.ಎಸ್.ಎ.ಆರ್.)ನಡುವೆ ಒಪ್ಪಂದ ಮಾಡಿಕೊಳ್ಳಲು ತನ್ನ ಅನುಮೋದನೆ ನೀಡಿದೆ.
ಈ ಒಪ್ಪಂದವು ಎಚ್.ಕೆ.ಎಸ್.ಎ.ಆರ್ ಮತ್ತು ಭಾರತದ ನಡುವೆ ಹೂಡಿಕೆ, ತಂತ್ರಜ್ಞಾನ ಮತ್ತು ಸಿಬ್ಬಂದಿಯ ಹರಿವಿಗೆ, ದ್ವಿತೆರಿಗೆ ತಪ್ಪಿಸಲು ಮತ್ತು ಎರಡೂ ಒಪ್ಪಂದವಾದ ರಾಷ್ಟ್ರಗಳ ನಡುವೆ ಮಾಹಿತಿಯ ವಿನಿಮಯಕ್ಕೆ ಅವಕಾಶ ನೀಡುತ್ತದೆ. ಇದು ತೆರಿಗೆ ವಿಚಾರಗಳಲ್ಲಿ ಪಾರದರ್ಶಕತೆಯನ್ನು ಸುಧಾರಿಸುತ್ತದೆ ಮತ್ತು ತೆರಿಗೆ ವಂಚನೆ ಮತ್ತು ತೆರಿಗೆ ತಪ್ಪಿಸುವುದನ್ನು ನಿಗ್ರಹಿಸಲು ನೆರವಾಗುತ್ತದೆ.
ಹಿನ್ನೆಲೆ:
ಭಾರತಕ್ಕೆ ಸಂಬಂಧಿಸಿದಂತೆ, ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 90ರ ಅಡಿಯಲ್ಲಿ ಕೇಂದ್ರ ಸರ್ಕಾರವು ಆದಾಯ ಕುರಿತ ದ್ವಿತೆರಿಗೆ ತಪ್ಪಿಸಲು ಮತ್ತು ಆದಾಯ ತೆರಿಗೆ ಕಾಯಿದೆ 1961ರಡಿ ವಿಧಿಸಬಹುದಾದ ಆದಾಯ ತೆರಿಗೆಯನ್ನು ತಪ್ಪಿಸುವುದು ಅಥವಾ ವಂಚಿಸುವುದನ್ನು ನಿಯಂತ್ರಿಸಲು ಮಾಹಿತಿ ವಿನಿಮಯಕ್ಕೆ ವಿದೇಶದ ರಾಷ್ಟ್ರದೊಂದಿಗೆ ಅಥವಾ ನಿರ್ದಿಷ್ಟ ಪ್ರದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಪ್ಪಂದವು ಕೂಡ ಆದೇ ರೀತಿಯಲ್ಲಿ ಭಾರತ ಮತ್ತು ಇತರ ರಾಷ್ಟ್ರಗಳೊಂದಿಗೆ ಮಾಡಿಕೊಂಡ ಒಪ್ಪಂದವಾಗಿದೆ