Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಲ್ಬಿಎನ್ಎಸ್ಎಎ, ಮಸ್ಸೂರಿಗೆ 2 ದಿನಗಳ ಭೇಟಿ; 92 ನೇ ತರಭೇತಿನಿರತ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಉತ್ತರಾಖಂಡದ ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಕಾಡಮಿ (ಎಲ್.ಬಿ.ಎಸ್.ಎನ್.ಎ.ಎ.)ಯಲ್ಲಿ 92ನೇ ಫೌಂಡೇಷನ್ ಕೋರ್ಸ್ ನಲ್ಲಿರುವ 360 ತರಬೇತಿ ನಿರತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಅವರು ಎಲ್.ಬಿ.ಎಸ್.ಎನ್.ಎ.ಎ.ದಲ್ಲಿ ಎರಡು ದಿನಗಳ ಭೇಟಿಯಲ್ಲಿದ್ದಾರೆ.

ಅವರು ನಾಲ್ಕು ತಂಡಗಳಲ್ಲಿ ತರಬೇತಿ ನಿರತ ಅಧಿಕಾರಿಗಳೊಂದಿಗೆ ಅನೌಪಚಾರಿಕವಾಗಿ ಸಂವಾದ ನಡೆಸಿದರು. ನಾಲ್ಕು ಗಂಟೆಗಳ ಕಾಲ ನಡೆದ ವಿಸ್ತೃತ ಶ್ರೇಣಿಯ ಸಂವಾದದ ವೇಳೆ ಪ್ರಧಾನಮಂತ್ರಿಯವರು, ಯಾವುದೇ ಭೀತಿ ಇಲ್ಲದೆ ತಮ್ಮ ಕಲ್ಪನೆಗಳು ಮತ್ತು ಚಿಂತನೆಗಳನ್ನು ತಮ್ಮೊಂದಿಗೆ ನಿಸ್ಸಂಕೋಚವಾಗಿ ಹಂಚಿಕೊಳ್ಳುವಂತೆ ತರಬೇತಿ ನಿರತ ಅಧಿಕಾರಿಗಳಿಗೆ ತಿಳಿಸಿದರು. ಆಡಳಿತಾತ್ಮಕ, ಆಡಳಿತ, ತಂತ್ರಜ್ಞಾನ ಮತ್ತು ನೀತಿ ನಿರೂಪಣೆಯಂಥ ವಿಷಯಗಳು ಈ ಚರ್ಚೆಯಲ್ಲಿ ಬಂದವು. ಆಡಳಿತದ ವಿಚಾರಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಸಂಶೋಧನೆ ನಡೆಸುವಂತೆ ತರಬೇತಿ ನಿರತ ಅಧಿಕಾರಿಗಳಿಗೆ ಪ್ರಧಾನಿ ಉತ್ತೇಜಿಸಿದರು,ಇದರಿಂದ ಅವರು ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದರು. ರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಅಗತ್ಯವನ್ನೂ ಅವರು ಪ್ರತಿಪಾದಿಸಿದರು. ಈ ಚರ್ಚೆಯು ದೊಡ್ಡ ಪ್ರಮಾಣದ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಸಾಕ್ಷಿಯಾಯಿತು.

ಪ್ರಧಾನಿಯವರು ಅಕಾಡಮಿಯ ಬೋಧಕ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು, ಅವರು ಅಲ್ಲಿ ಭಾರತೀಯ ನಾಗರಿಕ ಸೇವಾ ಅಧಿಕಾರಿಗಳಿಗೆ ನೀಡಲಾಗುತ್ತಿರುವ ತರಬೇತಿಯ ಸ್ಥೂಲ ಪರಿಚಯ ನೀಡಿದರು.

ಪ್ರಧಾನಮಂತ್ರಿಯವರು ಎಲ್.ಬಿ.ಎಸ್.ಎನ್.ಎ.ಎ.ಯಲ್ಲಿ ಅತ್ಯಾಧುನಿಕ ಗಾಂಧಿ ಸ್ಮೃತಿ ಗ್ರಂಥಾಲಯಕ್ಕೂ ಭೇಟಿ ನೀಡಿದರು. ತರಬೇತಿ ನಿರತ ಅಧಿಕಾರಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಕೆಲ ಕಾಲ ಪಾಲ್ಗೊಂಡರು.

ಇದಕ್ಕೂ ಮುನ್ನ ಅಕಾಡಮಿಗೆ ಆಗಮಿಸಿದ ಪ್ರಧಾನಮಂತ್ರಿಯವರು ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಪುತ್ಥಳಿಗಳಿಗೆ ಪುಷ್ಪ ನಮನ ಸಲ್ಲಿಸಿದರು.

ಸಂಪುಟ ಕಾರ್ಯದರ್ಶಿ ಶ್ರೀ ಪಿ.ಕೆ. ಸಿನ್ಹಾ ಮತ್ತು ಎಲ್.ಬಿ.ಎಸ್.ಎನ್.ಎ.ಎ. ನಿರ್ದೇಶಕಿ ಶ್ರೀಮತಿ ಉಪಮಾ ಚೌಧರಿ ಅವರು ಸಂವಾದದ ವೇಳೆ ಹಾಜರಿದ್ದರು.