ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸರ್ಕಾರಿ ನೌಕರರಿಗೆ 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಕೇಂದ್ರದ ಆರ್ಥಿಕ ನೆರವಿನ ತಾಂತ್ರಿಕ ಸಂಸ್ಥೆಗಳ ವ್ಯಾಪ್ತಿಗೆ ಒಳಪಟ್ಟವಿಶ್ವವಿದ್ಯಾಲಯಗಳು/ ಕಾಲೇಜುಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸುಮಾರು 8 ಲಕ್ಷ ಬೋಧಕರು ಮತ್ತು ಇತರ ಸಮನಾದ ಶೈಕ್ಷಣಿಕ ಸಿಬ್ಬಂದಿಯ ಪರಿಷ್ಕೃತ ವೇತನಶ್ರೇಣಿಗೆ ತನ್ನ ಅನುಮೋದನೆ ನೀಡಿದೆ.
ಈ ನಿರ್ಧಾರದಿಂದ ಯುಜಿಸಿ/ಎಂಎಚ್ಆರ್.ಡಿಯ ಆರ್ಥಿಕ ನೇರವಿನ 106 ವಿಶ್ವವಿದ್ಯಾಲಯಗಳು/ಕಾಲೇಜುಗಳು ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನ 329 ವಿಶ್ವವಿದ್ಯಾಲಯಗಳು ಮತ್ತು 12,912 ಸರ್ಕಾರಿ ಮತ್ತು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆದ ಖಾಸಗಿ ಅನುದಾನಿತ ಕಾಲೇಜುಗಳ 7.58 ಲಕ್ಷ ಬೋಧಕರು ಮತ್ತು ಸಮನಾದ ಶೈಕ್ಷಣಿಕ ಸಿಬ್ಬಂದಿಗೆ ಲಾಭವಾಗಲಿದೆ.
ಜೊತೆಗೆ ಈ ಪರಿಷ್ಕೃತ ವೇತನ ಪ್ಯಾಕೇಜ್ 119 ಕೇಂದ್ರದ ನೆರವಿನ ತಾಂತ್ರಿಕ ಸಂಸ್ಥೆಗಳು ಅಂದರೆ ಐಐಟಿಗಳು, ಐಐಸ್ಸಿಗಳು, ಐಐಎಂಗಳು, ಐಐಎಸ್ಇಆರ್.ಗಳು, ಎನ್ಐಟಿಐಇಗಳು ಇತ್ಯಾದಿಗೂ ಅನ್ವಯಿಸುತ್ತದೆ.
ಅನುಮೋದಿತ ವೇತನ ಶ್ರೇಣಿಯು 1.1.2016ರಿಂದ ಅನ್ವಯವಾಗಲಿದೆ. ಈ ಕ್ರಮದಿಂದಾಗಿ ವಾರ್ಷಿಕ ಕೇಂದ್ರೀಯ ಹಣಕಾಸು ಹೊಣೆಯು 9,800ಕೋಟಿ ರೂಪಾಯಿ ಆಗಲಿದೆ.
ಈ ಪರಿಷ್ಕೃತ ವೇತನ ಶ್ರೇಣಿಯ ಅನುಷ್ಠಾನವು ಶಿಕ್ಷಕರ ವೇತನಕ್ಕಾಗಿ 6 ನೇ ಕೇಂದ್ರೀಯ ವೇತನ ಆಯೋಗದ ಅನುಷ್ಠಾನದಿಂದಾಗಿ ಆರಂಭಿಕ ವೇತನಕ್ಕೆ ವಿರುದ್ಧವಾಗಿ ಬೋಧಕರ ವೇತನವನ್ನು 10,400 ರೂಪಾಯಿ ಮತ್ತು 49,800 ರೂಪಾಯಿ ಶ್ರೇಣಿಯಲ್ಲಿ ಹೆಚ್ಚಿಸಲಿದೆ. ಈ ಪರಿಷ್ಕರಣೆಯು ಶೇ.22ರಿಂದ ಶೇ.28ರಷ್ಟು ಆರಂಭಿಕ ವೇತನ ವೃದ್ಧಿಯನ್ನು ದಾಖಲಿಸುತ್ತದೆ.
ರಾಜ್ಯ ಸರ್ಕಾರದ ಆರ್ಥಿಕ ನೆರವಿನ ಸಂಸ್ಥೆಗಳಿಗೆ ಈ ಪರಿಷ್ಕೃತ ವೇತನ ಶ್ರೇಣಿ ಲಭಿಸಲು ಆಯಾ ರಾಜ್ಯಗಳು ಅದನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ವೇತನ ಪರಿಷ್ಕರಣೆಯಿಂದ ರಾಜ್ಯಗಳಿಗೆ ಆಗುವ ಹೆಚ್ಚುವರಿ ಹೊರೆಯನ್ನು ಕೇಂದ್ರ ಸರ್ಕಾರ ಭರಿಸಲಿದೆ. ಪರಿಷ್ಕೃತ ವೇತನ ಶ್ರೇಣಿಯಲ್ಲಿ ಪ್ರಸ್ತಾಪಿಸಿರುವ ಕ್ರಮಗಳು ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಣೆ ಮಾಡಲಿದೆ ಮತ್ತು ಪ್ರತಿಭೆಗಳನ್ನು ಆಕರ್ಷಿಸಿ ಮತ್ತು ಉಳಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
******