ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ರವೀಯ, ಹೊಂದಿಕೊಳ್ಳುವ ಮತ್ತು ಜಾಗತಿಕ ಎಲ್.ಎನ್.ಜಿ. ಮಾರುಕಟ್ಟೆ ಸ್ಥಾಪಿಸಲು ಭಾರತ ಮತ್ತು ಜಪಾನ್ ನಡುವಿನ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ಸಹಕಾರ ಒಪ್ಪಂದವು ಭಾರತ ಮತ್ತು ಜಪಾನ್ ನಡುವೆ ಇಂಧನ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ಉತ್ತೇಜಿಸಲಿದೆ. ಇದು ಭಾರತದ ಅನಿಲ ಪೂರೈಕೆಯ ವೈವೀಧ್ಯೀಕರಣಕ್ಕೆ ಕೊಡುಗೆ ನೀಡಲಿದೆ. ಇದು ನಮ್ಮ ಇಂಧನ ಭದ್ರತೆಯನ್ನು ಬಲಪಡಿಸಲಿದೆ ಮತ್ತು ಗ್ರಾಹಕರಿಗೆ ಹೆಚ್ಚು ಸ್ಪರ್ಧಾತ್ಮಕ ದರ ನೀಡಲು ಕಾರಣವಾಗುತ್ತದೆ.
ಈ ಸಹಕಾರ ಒಪ್ಪಂದವು ಗಮ್ಯಸ್ಥಾನ ನಿರ್ಬಂಧದ ನಿಬಂಧನೆಯ ನಿರ್ಮೂಲನೆ, ಎಲ್.ಎನ್.ಜಿ. ಒಪ್ಪಂದದಲ್ಲಿ ಹೊಂದಾಣಿಕೆಗೆ ಅವಕಾಶ ನೀಡಲು ಸಹಕಾರಿಯಾದ ಚೌಕಟ್ಟನ್ನು ಒದಗಿಸುತ್ತದೆ ಮತ್ತು ಎಲ್.ಎನ್.ಜಿಯ ನೈಜವಾದ ಬೇಡಿಕೆ ಮತ್ತು ಪೂರೈಕೆಯನ್ನು ಪ್ರತಿಫಲಿಸುವಂಥ ವಿಶ್ವಾಸಾರ್ಹ ಎಲ್ಎನ್ಜಿ ಸ್ಥಳ ದರ ಸೂಚ್ಯಂಕಗಳನ್ನು ಸ್ಥಾಪಿಸುವಲ್ಲಿ ಸಹಕಾರ ಸಾಧ್ಯತೆಗಳನ್ನು ಅನ್ವೇಷಿಸುತ್ತದೆ.
ಹಿನ್ನೆಲೆ:
ಭಾರತ ಮತ್ತು ಜಪಾನ್ ವಿಶ್ವದ ಪ್ರಮುಖ ಇಂಧನ ಬಳಕೆದಾರ ರಾಷ್ಟ್ರಗಳಾಗಿವೆ. ಎಲ್.ಎನ್.ಜಿ. ವಲಯದಲ್ಲಿ ಜಪಾನ್ ವಿಶ್ವದ ಅತಿ ದೊಡ್ಡ ಆಮದುದಾರನಾಗಿದ್ದರೆ, ಭಾರತ 4ನೇ ಅತಿ ದೊಡ್ಡ ಆಮದು ರಾಷ್ಟ್ರವಾಗಿದೆ. 2016ರ ಜನವರಿಯಲ್ಲಿ ಅಂಕಿತ ಹಾಕಲಾದ ಭಾರತ- ಜಪಾನ್ ಇಂಧನ ಪಾಲುದಾರಿಕೆ ಉಪಕ್ರಮದ ಅಡಿಯಲ್ಲಿ ಎರಡೂ ಕಡೆಯವರು ಒಟ್ಟಾರೆಯಾಗಿ ಶಕ್ತಿಯ ಮಾರುಕಟ್ಟೆಗಳನ್ನು ಉತ್ತೇಜಿಸಲು ಒಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡರು ಮತ್ತು ಗಮ್ಯಸ್ಥಾನ ನಿರ್ಬಂಧ ನಿಬಂಧನೆ ವಿನಾಯಿತಿ ಮೂಲಕ ಪಾರದರ್ಶಕ ಮತ್ತು ವೈವಿಧ್ಯಮಯ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಮಾರುಕಟ್ಟೆಯನ್ನು ಉತ್ತೇಜಿಸಲು ಸಮ್ಮತಿಸಿವೆ.
***