Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಂಡ್ಲಾ ಬಂದರಿಗೆ ದೀನ್ ದಯಾಳ್ ಬಂದರು ಎಂದು ಪುನರ್ ನಾಮಕರಣ ಮಾಡಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಾಂಡ್ಲಾ ಬಂದರನ್ನು ದೀನ್ ದಯಾಳ್ ಬಂದರು ಎಂದು ಪುನರ್ ನಾಮಕರಣ ಮಾಡಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಸಾಮಾನ್ಯವಾಗಿ ಬಂದರುಗಳು ಯಾವ ಪಟ್ಟಣ ಅಥವಾ ನಗರದಲ್ಲಿ ಇರುತ್ತವೋ ಅದಕ್ಕೆ ಅದೇ ಹೆಸರು ಇಡಲಾಗುತ್ತದೆ. ಆದಾಗ್ಯೂ, ಸರ್ಕಾರ ಕೇಲವು ವಿಶೇಷ ಪ್ರಕರಣಗಳಲ್ಲಿ, ಸೂಕ್ತ ಪರಾಮರ್ಶೆಯ ಬಳಿಕ ಶ್ರೇಷ್ಠ ನಾಯಕರ ಹೆಸರನ್ನು ಈ ಹಿಂದೆಯೂ ಬಂದರುಗಳಿಗೆ ಇಟ್ಟಿದೆ.

ಕಾಂಡ್ಲಾ ಬಂದರಿಗೆ ‘ದೀನ್ ದಯಾಳ್ ಬಂದರು, ಕಾಂಡ್ಲಾ’ ಎಂದು ಮರು ನಾಮಕರಣ ಮಾಡುವ ಮೂಲಕ, ದೇಶವು ಈ ದೇಶದ ಶ್ರೇಷ್ಠ ಪುತ್ರ ಪಂಡಿತಾ ದೀನ್ ದಯಾಳ್ ಉಪಾಧ್ಯಾಯ ಅವರ ಅನೂಲ್ಯ ಕೊಡುಗೆಯನ್ನು ದೇಶ ಸ್ಮರಿಸುತ್ತಿದೆ. ಇದು ಗುಜರಾತ್ ನ ಅದರಲ್ಲೂ ಯುವಜನರಿಗೆ ಶ್ರೇಷ್ಠ ನಾಯಕ ನೀಡಿರುವ ಕೊಡುಗೆಯ ಬಗ್ಗೆ ಅರಿವು ಮೂಡಿಸಿ, ಸ್ಫೂರ್ತಿ ನೀಡಲಿದೆ.

ಹಿನ್ನೆಲೆ:

“ಕಾಂಡ್ಲಾ ಬಂದರು’’ ಎಂಬುದನ್ನು “ದೀನ ದಯಾಳ್ ಬಂದರು, ಕಾಂಡ್ಲಾ’’ ಎಂದು ಮರು ನಾಮಕರಣ ಮಾಡಲು ವಿವಿಧ ವಲಯಗಳಿಂದ ಅದರಲ್ಲೂ ಕಚ್ ಜಿಲ್ಲೆಯಿಂದ ಸಾರ್ವಜನಿಕ ಬೇಡಿಕೆ ಬಂದಿತ್ತು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ (25.9.1916 – 1.2.1968) ಅವರು ಪ್ರಮುಖ ನಾಯಕರಾಗಿದ್ದು, ದೇಶಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಅವರು ತಮ್ಮ ಇಡೀ ಬದುಕನ್ನೇ ದೇಶದ ಸೇವೆಗೆ ಮತ್ತು ಸಾಮೂಹಿಕವಾಗಿ ಕೆಲಸ ಮಾಡಲು ಸಮರ್ಪಿಸಿದ್ದರು ಮತ್ತು ಬಡವರ ಮತ್ತು ಶ್ರಮಿಕವರ್ಗದವರ ಏಳಿಗೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದರು. ಸಹನೆ, ಶಿಸ್ತು, ನಿಸ್ವಾರ್ಥ ಮತ್ತು ನೆಲದ ಕಾನೂನಿಗೆ ಗೌರವ ನೀಡುವುದರ ನೆಲೆಯ ಮೇಲೆ ರೂಪುಗೊಂಡ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅವರ ಎಲ್ಲ ಕ್ರಮಗಳು, ‘ಸಮಗ್ರ ಮಾನವತೆಯ’ ತತ್ವದ ಆಧಾರದ ಮೇಲಿದ್ದವು. ತಮ್ಮ ಜೀವನದುದ್ದಕ್ಕೂ ಅವರು, ಜನರ ಅಭಿಪ್ರಾಯಕ್ಕೆ ಗೌರವ ನೀಡಿ, ನಿಸ್ವಾರ್ಥವಾಗಿ ಮತ್ತು ಈ ನೆಲೆದ ಕಾನೂನಿಗೆ ಗೌರವ ನೀಡಿ ಪ್ರಜಾಪ್ರಭುತ್ವದ ಭಾರತೀಯತೆಗಾಗಿ ಅವಿರತವಾಗಿ ಶ್ರಮಿಸಿದ್ದರು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು, ತಮ್ಮ ಇಡೀ ಬದುಕನ್ನು ಸಾರ್ವಜನಿಕ ಸೇವೆಗೆ ಮುಡುಪಾಗಿಟ್ಟಿದ್ದರು ಮತ್ತು ಬಡವರ ಮತ್ತು ದುರ್ಬಲರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಅವರು ಸರಳ, ಸಜ್ಜನಿಕೆ ಮತ್ತು ಪ್ರಾಮಾಣಿಕತೆಯ ಗಣಿಯಾಗಿದ್ದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಜಯಂತಿಯನ್ನು 2017ರ ಸೆಪ್ಟೆಂಬರ್ 25ರಂದು ಆಚರಿಸಲಾಗಿತ್ತು. ಕಾಂಡ್ಲಾ ಬಂದರಿಗೆ ದೀನ್ ದಯಾಳ್ ಬಂದರು ಎಂದು ಪುನರ್ ನಾಮಕರಣ ಮಾಡುವುದು ದೇಶದ ಶ್ರೇಷ್ಠ ನಾಯಕನ ಜನ್ಮ ಜಯಂತಿ ಸಂದರ್ಭದಲ್ಲಿ ಅವರಿಗೆ ಸೂಕ್ತ ಮನ್ನಣೆ ಎಂದು ಅಭಿಪ್ರಾಯಪಡಲಾಗಿತ್ತು.