ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಲುಥುವೇನಿಯಾ ನಡುವೆ ಕೈದಿಗಳ ಹಸ್ತಾಂತರ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
ಈ ಒಪ್ಪಂದವು ಭಯೋತ್ಪಾದಕರು, ಆರ್ಥಿಕ ಅಪರಾಧಿಗಳು ಮತ್ತು ಇತರ ಅಪರಾಧಿಗಳನ್ನು ಲುಥುವೇನಿಯಾದಿಂದ ಮತ್ತು ಲುಥುವೇನಿಯಾಕ್ಕೆ ಹಸ್ತಾಂತರಿಸುವಂತೆ ಕೋರಲು ಕಾನೂನಾತ್ಮಕವಾದ ಚೌಕಟ್ಟು ಒದಗಿಸುತ್ತದೆ.
ಈ ಒಪ್ಪಂದವು ಭಾರತದ ವಿರುದ್ಧ ಅಪರಾಧ ಎಸಗಿ ಲುಥುವೇನಿಯಾದಲ್ಲಿ ವಿಚಾರಣೆಗೆ ಒಳಗಾದ ಭಯೋತ್ಪಾದಕರು ಸೇರಿದಂತೆ, ದೇಶಭ್ರಷ್ಟ ಅಪರಾಧಿಗಳನ್ನು ಹಸ್ತಾಂತರಿಸಲು ನೆರವಾಗುತ್ತದೆ. ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿ ಒದಗಿಸುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇದು ಅಪರಾಧಿಗಳನ್ನು ಕಾನೂನಿನ ವ್ಯಾಪ್ತಿಗೆ ತರುತ್ತದೆ.