Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆಗಿರುವ ಪ್ರಗತಿ ಮತ್ತು ಸಬಲೀಕರಣ ಕಾರ್ಯಕ್ರಮ ಸಮಿತಿ ಮತ್ತು ಎನ್ಎಚ್ಎಂನ ಅಭಿಯಾನದ ಚುಕ್ಕಾಣಿ ಗುಂಪಿನ ನಿರ್ಧಾರಗಳ ಕುರಿತು ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.)ದ ಪ್ರಗತಿಯ ಕುರಿತು ವಿವರಣೆ ನೀಡಲಾಯಿತು. ಸಂಪುಟಕ್ಕೆಸಬಲೀಕರಣ ಕಾರ್ಯಕ್ರಮ ಸಮಿತಿ (ಇಪಿಸಿ) ಮತ್ತು ಎನ್ಎಚ್ಎಂನ ಅಭಿಯಾನದ ಚುಕ್ಕಾಣಿ ಗುಂಪಿನ (ಎಂ.ಎಸ್.ಜಿ.) ನಿರ್ಧಾರಗಳ ಬಗ್ಗೆಯೂ ತಿಳಿಸಲಾಯಿತು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್.ಆರ್.ಎಚ್.ಎಂ.) ಅನ್ನು 2005ರ ಏಪ್ರಿಲ್ ನಲ್ಲಿ ಆರಂಭಿಸಲಾಗಿತ್ತು ಮತ್ತು ಅದನ್ನು 2013ರಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (ಎನ್.ಯು.ಎಚ್.ಎಂ.) ಆರಂಭದೊಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.) ವಾಗಿ ಪರಿವರ್ತಿಸಲಾಗಿತ್ತು. ಆ ಬಳಿಕ ಎನ್.ಆರ್.ಎಚ್.ಎಂ. ಮತ್ತು ಎನ್.ಯು.ಎಚ್.ಎಂ. ಎರಡೂ ಎನ್.ಎಚ್.ಎಂ. ಅಡಿಯಲ್ಲಿ ಎರಡು ಉಪ ಅಭಿಯಾನಗಳಾಗಿ ಬದಲಾದವು.

ಎಂ.ಎಂ.ಆರ್, ಐ.ಎಂ.ಆರ್, ಯು5ಎಂ.ಆರ್. ಮತ್ತು ಟಿಎಫ್.ಆರ್.ನ ತ್ವರಿತ ಇಳಿಮುಖ ಸೇರಿದಂತೆ ಎನ್.ಎಚ್.ಎಂ. ಅಡಿಯಲ್ಲಿ ಆಗಿರುವ ಪ್ರಗತಿಯನ್ನು ಸಂಪುಟ ಗುರುತಿಸಿತು. ಟಿ.ಬಿ., ಮಲೇರಿಯಾ, ಕುಷ್ಠ ಇತ್ಯಾದಿ ಸೇರಿದಂತೆ ವಿವಿಧ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಗಿರುವ ಪ್ರಗತಿಯನ್ನೂ ಗುರುತಿಸಿತು.

ಸಂಪುಟವು ಈ ಕೆಳಕಂಡ ಅಂಶಗಳನ್ನೂ ಗುರುತಿಸಿತು:

· ಎನ್.ಎಚ್.ಎಂ. ಅವಧಿಯಲ್ಲಿ ಯು5ಎಂ.ಆರ್. ದರ ಇಳಿಕೆ ಹತ್ತಿರ ಹತ್ತಿರ ದುಪ್ಪಟ್ಟು ಆಗಿದೆ.

· ಎಂ.ಎಂ.ಆರ್. ಇಳಿಕೆ ದರ ಸಾಧನೆಯೊಂದಿಗೆ, ಎಂ.ಡಿ.ಜಿ. 5 ಗುರಿಯನ್ನೂ ಭಾರತ ಸಾಧಿಸಿದೆ.

· ಮಲೇರಿಯಾ, ಟಿ.ಬಿ. ಮತ್ತು ಎಚ್.ಐ.ವಿ/ಏಡ್ಸ್ ಪ್ರಕರಣಗಳನ್ನು ತಡೆಯುವ ಮತ್ತು ಹಿಂತಿರುಗಿಸುವ ಸಹಸ್ರಮಾನದ ಅಭಿವೃದ್ಧಿ ಗುರಿ 6ನ್ನು ಸಾಧಿಸಲಾಗಿದೆ.

· ಕಾಲಾ ಅಜರ್ ನ 1 ಕ್ಕಿಂತಲೂ ಹೆಚ್ಚಿನ ಪ್ರಕರಣ ಇರುವ ಪ್ರಾದೇಶಿಕ ಕಾಯಿಲೆಗಳ ವಿಭಾಗಗಳ ಸಂಖ್ಯೆ 2010ರಲ್ಲಿ ಪ್ರತಿ 10000 ಜನಸಂಖ್ಯೆಗೆ230 ರಷ್ಟಿತ್ತು. ಇದನ್ನು 2016 ರಲ್ಲಿ 94 ವಿಭಾಗಕ್ಕೆ ಇಳಿಸಲಾಗಿದೆ.

· ಪೋಸ್ಟ್ –ಪಾರ್ಟಮ್ ಇಂಟ್ರಾ – ಯುಟ್ರೈನ್ ಕಾಂಟ್ರಾಸೆಪ್ಟೀವ್ ಡಿವೈಸ್ (ಪಿಪಿಐಯುಸಿಡಿ) ಸೇವೆ ಒದಗಿಸುವವರಿಗೆ 150 ರೂ.ನಂತೆ ಪ್ರೋತ್ಸಾಹಕ ಒದಗಿಸಲಾಗುತ್ತಿದೆ ಮತ್ತು ಪಿಪಿಐಯುಸಿಡಿ ಅಳವಡಿಕೆಗೆ ಪ್ರೇರೇಪಿಸುವ / ಕರೆತರುವ ಆಶಾಗಳಿಗೆ 150 ರೂ. ನೀಡಲಾಗುತ್ತಿದೆ. ಪಿಪಿಐಯುಸಿಡಿ ಮತ್ತು ಗರ್ಭಪಾತದ ನಂತರ ಗರ್ಭಾಶಯದೊಳಗೆ ಅಳವಡಿಸುವ ಗರ್ಭನಿರೋಧಕ ಸಾಧನ (ಪಿಎಐಯುಸಿಡಿ) ಸೇವೆಗಳ ಬಳಕೆಗೆ ಪ್ರೇರಣೆ ನೀಡಲು, ಪಿಪಿಐಯುಸಿಡಿ ಸೇವೆ ಒಪ್ಪಿಕೊಳ್ಳುವವರಿಗೆ ಪ್ರೋತ್ಸಾಹಕದ ಅವಕಾಶ ಮತ್ತು ಅದೇ ರೀತಿ ಪಿಎಐಯುಸಿಡಿಗೂ ಪ್ರೋತ್ಸಾಹಕ ನೀಡುವ ಪ್ರಸ್ತಾಪವನ್ನು ಎಂ.ಎಸ್.ಜಿ. ಮುಂದೆ ಇಡಲಾಗಿದೆ. ಪಿಪಿಐಯುಸಿಡಿ ಒಪ್ಪಿಕೊಳ್ಳುವವರಿಗೆ ಪ್ರೋತ್ಸಾಹಕ ನೀಡುವ ಕುರಿತಂತೆ ಎಂ.ಎಸ್.ಜಿ. ಅನುಮೋದಿತ ಪ್ರಸ್ತಾಪಗಳು, ಪ್ರಾಸಂಗಿಕ ವೆಚ್ಚ ಮತ್ತು ನಂತರದ ಪರೀಕ್ಷೆಗೆ ಆಗಮಿಸುವ ಪ್ರಯಾಣದ ವೆಚ್ಚ ಮತ್ತು ಪಿಎಐಯುಸಿಡಿ ಅಳವಡಿಕೆಗೆ ಒಪ್ಪಿಕೊಂಡವರಿಗೆ, ಸೇವಾ ಪೂರೈಕೆದಾರರಿಗೆ ಮತ್ತು ಆಶಾಗಳಿಗೆ ಪಿಪಿಐಯುಸಿಡಿಗೆ ನೀಡಲಾಗುವ ಅದೇ ದರದಲ್ಲಿ ಪ್ರೋತ್ಸಾಹಕ ನೀಡುವ ಅವಕಾಶವನ್ನು ಒದಗಿಸುತ್ತದೆ.

· ಪ್ರಸ್ತುತ ಎಂಎಂಯುಗಳ ಮೂಲಕ ರೋಗಿಗಳಿಗೆ ಸೇವೆ ಒದಗಿಸುತ್ತಿರುವ10 ಲಕ್ಷ ಜನಸಂಖ್ಯೆಗೆ ಒಂದು ಎಮ್ಎಂಯು ಇರುವೆಡೆ, ಸಮತಟ್ಟಾದ ಪ್ರದೇಶಗಳಲ್ಲಿ ದಿನವೊಂದಕ್ಕೆ 60 ರೋಗಿಗಳಿಗಿಂತ ಹೆಚ್ಚಾಗುವ ಎಂ.ಎಂ.ಯು.ಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ದಿನವೊಂದಕ್ಕೆ 30 ರೋಗಿಗಳು ಮೀರಿದರೆ ಪ್ರಕರಣದಿಂದ ಪ್ರಕರಣದ ಆಧಾರದ ಮೇಲೆ ನಿಯಮಾವಳಿಗಳನ್ನು ಸಡಿಲಿಸಲಾಗುವುದು. ಎಂ.ಎಂ.ಯು.ಗಳ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನೂ ಎಂ.ಎಸ್.ಜಿ. ಉಲ್ಲೇಖಿಸಿದೆ.

· ಹದಿಹರೆಯದ ಬಾಲಕಿಯರಿಗೆ ಋತು ಸಮಯದಲ್ಲಿನ ನೈರ್ಮಲ್ಯ ಯೋಜನೆ ಅಡಿಯಲ್ಲಿನ ಪ್ರಸ್ತಾವನೆಗಳು – (i) ಇನ್ನೂ ಯೋಜನೆ ಕಾರ್ಯಗತಗೊಳಿಸದ 19 ರಾಜ್ಯಗಳಿಗೆ ಮೊದಲ ವರ್ಷದಲ್ಲಿ 6 ಸ್ಯಾನಿಟರಿ ನ್ಯಾಪ್ಕಿನ್ ಗಳ ಪ್ಯಾಕ್ ಗೆ ರೂ .8 ರಿಂದ ರೂ .12 ಗೆ ಹೆಚ್ಚಳ ಮಾಡಲು ಬಜೆಟ್ ಬೆಂಬಲವನ್ನು ಹೆಚ್ಚಿಸಲು, ನಂತರ ಈ ಯೋಜನೆಯನ್ನು 6 ಸ್ಯಾನಿಟರಿ ಪ್ಯಾಕ್ ಗೆ ಪ್ರಸ್ತುತ ದರವಾದ 8 ರೂ. ಮುಂದುವರಿಸಲು ಮತ್ತು (ii) ಯಾವುದೇ ಹೆಚ್ಚಿನ ವೆಚ್ಚದ ಏರಿಕೆಗಳನ್ನು ಅನುಮೋದಿಸಲು ಸಚಿವಾಲಯಕ್ಕೆ ಅಧಿಕಾರ ನೀಡುವುದು.

( ಇದು ಮೊದಲ ಭಾಗ. ಇದರ ಕೊನೆಯ ಭಾಗ ಬಾಕಿಯಿದೆ. ಭಾಷಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಧ್ಯದಲ್ಲೇ ಪ್ರಕಟಿಸಲಿದ್ದೇವೆ.)