Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ವರಿಗೂ 24X7 ಕಾಲ ಸುಲಭವಾಗಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ಶಕ್ತಿಯನ್ನು ಒದಗಿಸುವ ಸಲುವಾಗಿ ವಿದ್ಯುತ್ ಸುಂಕ(ತಾರೀಫ್) ನೀತಿಯಲ್ಲಿ ಅಳವಡಿಸಲಾಗಿರುವ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಂಪುಟ ಸಭೆ ಅನುಮೋದನೆ ನೀಡಿರುವ ವಿಷಯ.


ಮಾನ್ಯ ಪ್ರಧಾನಮಂತ್ರಿ ಶ್ರೀಯುತ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಇಂಧನ ಇಲಾಖೆಯು ಮಂಡಿಸಿದ್ದ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ. ಇಂಧನ ಇಲಾಖೆಯ ವಿದ್ಯುತ್ ಸುಂಕ ನೀತಿಯಲ್ಲಿ ಮಾರ್ಪಾಡು ಮಾಡಲಾಗಿರುವ ಪ್ರಸ್ತಾವಿತ ತಿದ್ದುಪಡಿಗೆ ಸಂಬಂಧಿಸಿದಂತೆ ಈ ಅನುಮೋದನೆಯನ್ನು ಕೇಂದ್ರ ಸಂಪುಟ ಸಭೆ ನೀಡಿದೆ. ಇದೆ, ಮೊದಲ ಬಾರಿಗೆ, ವಿದ್ಯುತ್ ಕ್ಷೇತ್ರದ ಸಮಗ್ರ ನೋಟವನ್ನು ಗಮನದಲ್ಲಿಟ್ಟುಕೊಂಡು 2006 ರ ವಿದ್ಯುತ್ ಸುಂಕ ನೀತಿಗೆ ಸಂಬಂಧಿಸಿದಂತೆ ಸಮಗ್ರ ತುಲನಾತ್ಮಕ ತಿದ್ದುಪಡಿಗಳನ್ನು ಕೈಗೊಳ್ಳಲಾಗಿದೆ. ಉಜ್ವಲ್ ಡಿಐಎಸ್ ಸಿಒಎಂ ಅಶ್ಯುರೆನ್ಸ್ ಯೋಜನಾ (ಉದಯ್) ದ ದ್ಯೇಯೋದ್ದೇಶಗಳನ್ನು ಸಾಧಿಸುವ ಉದ್ದೇಶಿತ ಗುರಿಯನ್ನು ಈ ಮೇಲ್ಕಂಡ ಅನುಮೋದನೆ ಹೊಂದಿದೆ ಹಾಗೂ ಇದು ಆಂಗ್ಲ ವರ್ಣಮಾಲೆಯ ನಾಲ್ಕು ಇ ಅಕ್ಷರಗಳ ಮೇಲೆ ಬೆಳಕು ಚೆಲ್ಲುತ್ತದೆ.  

ಸರ್ವರಿಗೂ ಸಿಗಲಿದೆ ವಿದ್ಯುತ್ ( Electricity for all)
ಕೈಗೆಟಕುವ ದರನೀತಿಯನ್ನು ಖಾತರಿ ಪಡಿಸುವಂತಹ ಧಕ್ಷತೆ ( Efficiency to ensure affordable tariffs- )
ಸುಸ್ಥಿರ ಭವಿಷ್ಯಕ್ಕಾಗಿ ಪರಿಸರ( Environment for a sustainable future )
ಬಂಡವಾಳವನ್ನು ಆಕರ್ಷಿಸುವ ವ್ಯವಹಾರಗಳನ್ನು ಅನಿರ್ಬಂಧಗೊಳಿಸುವುದು ( Ease of doing business to attract investments and ensure financial viability- )
ಅಥವಾ ಸರಾಗಗೊಳಿಸುವುದು ಆರ್ಥಿಕ ಕಾರ್ಯಸಾಧ್ಯತೆಯ ಭರವಸೆಯನ್ನು ಹೆಚ್ಚಿಸುವುದು.
 
ತಿದ್ದುಪಡಿಯ ಮುಖ್ಯಾಂಶಗಳು: 
ವಿದ್ಯುತ್ ಶಕ್ತಿ: 
– 24X7 ಕಾಲ ಗ್ರಾಹಕರಿಗೆ ವಿದ್ಯುತ್ ಶಕ್ತಿ ಪೂರೈಕೆಯ ಭರವಸೆಯನ್ನು ಒದಗಿಸುವುದು ಮತ್ತು ಈ ಸಂಬಂಧ ರಾಜ್ಯಸರ್ಕಾರ ಹಾಗೂ ವಿದ್ಯುತ್ ಶಕ್ತಿ ಪೂರೈಕೆಯ ನಿಯಂತ್ರಕರು ಈ ಉದ್ದೇಶಿತ ಗುರಿಸಾಧನೆಯನ್ನು ಸಾಧಿಸುವ ನಿಟ್ಟಿನಲ್ಲಿ ವಿದ್ಯುತ್ ಪೂರೈಕೆಯ ಪಥವನ್ನು ರೂಪಿಸುವ ಉಪಾಯಮಾರ್ಗವನ್ನು ಕಂಡುಕೊಳ್ಳುತ್ತಾರೆ. 

– ವಿದ್ಯತ್ ಗ್ರಿಡ್ ಗಳು ತಲುಪಿದ ಕ್ಷಣದಿಂದಲೆ ಆಯಾ ವಿದ್ಯುತ್ ಗ್ರಿಡ್ ಗಳಿಗೆ ವಿದ್ಯುತ್ ಖರೀದಿಸುವ ಸೌಲಭ್ಯವನ್ನ ಒದಗಿಸುವುದರ ಜೊತೆಯಲ್ಲಿ ಮೈಕ್ರೋ ಗ್ರಿಡ್ ಮೂಲಕ ವಿದ್ಯುತ್ ಸಂಪರ್ಕವಿಲ್ಲದ ಕುಗ್ರಾಮಗಳಿಗೆ ವಿದ್ಯುತ್ ಶಕ್ತಿಯನ್ನು ಪೂರೈಸುವುದು .
-ಕಲ್ಲಿದ್ದಲು ವಾಶೆರಿ ರಿಜಕ್ಟ್ ಆಧಾರಿತ ಘಟಕಗಳ ಮೂಲಕ ವಿದ್ಯುತ್ ಶಕ್ತಿಯ ಸಂಗ್ರಹಣೆ ಸಾಮರ್ಥ್ಯವನ್ನು ಸಾಧಿಸುವುದರೊಂದಿಗೆ ಕಲ್ಲಿದ್ದಲು ಗಣಿಗಳಿಗೆ ಸಮೀಪದಲ್ಲಿರುವ ನಾಗರಿಕರಿಗೆ ಸುಲಭ ಸರಾಗವಾಗಿ ವಿದ್ಯುತ್ ಪೂರೈಸುವುದು

ಧಕ್ಷತೆ…

-ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿದ್ಯತ್ ಉತ್ಪಾದನಾ ಘಟಕಗಳ ವಿಸ್ತರಣೆ ಮೂಲಕ ಗ್ರಾಹಕರ ಮೇಲೆ ಹೊರೆಯಾಗುತ್ತಿರುವ ವಿದ್ಯುತ್ ವೆಚ್ಚವನ್ನು ಕಡಿತಗೊಳಿಸುವುದು
-ಬೇಡಿಕೆ ಇಲ್ಲದ ವಿದ್ಯುತ್ ಶಕ್ತಿಯ ಮಾರಾಟದ ಲಾಭವನ್ನು ಹಂಚಿಕೆ ಮಾಡುವುದರ ಮೂಲಕ ಸಮಗ್ರ ವಿದ್ಯುತ್ ವೆಚ್ಚದಲ್ಲಿ ಕಡಿತಗೊಳಿಸುವುದು
 -ಕಡಿಮೆ ಖರ್ಚುವೆಚ್ಚದಲ್ಲಿ ಶೀಘ್ರ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ವಿದ್ಯುತ್ ಪ್ರಸರಣ ಯೋಜನೆಗಳನ್ನು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯಗಳ ಮೂಲಕ ಅಭಿವೃದ್ಧಿ ಪಡಿಸುವುದು 
-ನೆಟ್ ಮೀಟರಿಂಗ್ ಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಹಾಗೂ ವಿದ್ಯುತ್ ಗಣಕೀರಣ ಸಂದರ್ಭದ ದಿನ ಹಾಗೂ ದಿನಾಂಕವನ್ನು ನಮೂದಿಸುವುದ ಸಾಧ್ಯವಾಗಿಸುವ ಸಲುವಾಗಿ ಮತ್ತು ವಿದ್ಯುತ್ ಕಳ್ಳತನವನ್ನು ತಪ್ಪಿಸುವ ಉದ್ದೇಶದಿಂದ ಸ್ಮಾರ್ಟ್ ಮೀಟರ್ ಅಳವಡಿಕೆ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ಸಾಧಿಸುವುದು.

-ದೇಶದ ಮೂಲೆಮೂಲೆಗಳಿಂದಲೂ ವಿದ್ಯುತ್ ಶಕ್ತಿಯನ್ನು ಪಡೆಯುವ ಸಲುವಾಗಿ ವಿದ್ಯುತ್ ಪ್ರಸರಣದ ಸಾಮರ್ಥ್ಯವನ್ನು ಸೃಷ್ಟಿಸುವ ಮೂಲಕ ಕನಿಷ್ಠ ವಿದ್ಯುತ್ ವೆಚ್ಚವನ್ನು ಸಾಧಿಸುವುದು
 
ಪರಿಸರ : 
– ನವೀಕರಿಸಬಹುದಾದ ಇಂಧನ ನಿಬಂಧನೆ(Renewable Power Obligation (RPO): ನವೀಕೃತ ಇಂಧನ ಹಾಗೂ ಇಂಧನ ಭದ್ರತೆಯನ್ನು ಕ್ರಮವಾಗಿ ಉತ್ತೇಜನಗೊಳಿಸುವ ಸಲುವಾಗಿ ಹೈಡ್ರೋ ವಿದ್ಯುತ್ ನ ಮೂಲಕ ಬಳಕೆಯಾಗುತ್ತಿರುವ ಶೇಕಡಾ 8 ರಷ್ಟು ವಿದ್ಯುತ್ ನ್ನು ಪ್ರತ್ಯೇಕಿಸಿ 2022 ರ ಮಾರ್ಚ್ ಮಾಹೆಯ ಒಳಗಾಗಿ ಸೌರಶಕ್ತಿಯ ಮೂಲಕ ಬಳಸುವಿಕೆಯನ್ನು ಸಾಧ್ಯವಾಗಿಸುವ ಪ್ರಯತ್ನವನ್ನು ಕೈಗೊಳ್ಳುವುದು
-ನವೀಕರಿಸಬಹುದಾದ ಉತ್ಪಾದನಾ ನಿಬಂಧನೆ (Renewable Generation Obligation (RGO) : ಹಾಗೂ ನವೀಕರಿಸಬಹುದಾದ ಸಾಮರ್ಥ್ಯವನ್ನು ಗಳಿಸಿರುವ ಹಾಗೂ ಸಂಪಾದಿಸಬಲ್ಲ ಕಲ್ಲಿದ್ದಲು/ ಕಂದು ಬಣ್ಣದ ಕಲ್ಲಿದ್ದಲು(lignite) ಆಧರಿತ ನೂತನ ಥರ್ಮಲ್ ವಿದ್ಯುತ್ ಘಟಕಗಳನ್ನು ಸ್ಥಾಪಿಸುವುದು.
 -ಅವಧಿ ಮುಗಿದ ಪಿಪಿಎ ಅಥವಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ವ್ಯಯಿಸಿರುವ ಘಟಕಗಳ ಸಾಮರ್ಥ್ಯದ ನೆರವಿನಿಂದ ನವೀಕರಿಸಬಹುದಾದ ವಿದ್ಯುತ್ ನ್ನು ಒಟ್ಟುಗೂಡಿಸುವ ಮೂಲಕ ಅವುಗಳ ನವೀಕರಿಸಬಹುದಾದ ವಿದ್ಯುತ್ ಶಕ್ತಿಯನ್ನು ಸುಲಭ ಸರಾಗವಾಗಿ ಸಿಗುವಂತೆ ನಿರ್ವಹಿಸುವುದು.
– ಅಂತರಾಜ್ಯ ಪ್ರಸರಣ ವೆಚ್ಚವನ್ನು ಅಳವಡಿಸಲಾಗುವುದಿಲ್ಲ ಹಾಗೂ ಸೌರಶಕ್ತಿ ಹಾಗೂ ಪವನ್ ವಿದ್ಯುತ್ ನಲ್ಲಿನ ನಷ್ಟದ ಹೊರೆಯನ್ನು ತಪ್ಪಿಸಲಾಗಿದೆ.
-ತ್ಯಾಜ್ಯದಿಂದ ಇಂಧನ ಉತ್ಪಾದನಾ ಘಟಕಗಳಿಂದ ಶೇಕಡಾ ನೂರರಷ್ಟು ವಿದ್ಯುತ್ ಉತ್ಪಾದನೆ ಸಾಧಿಸುವ ಮೂಲಕ ಸ್ವಚ್ಚ ಭಾರತ್ ಮಿಷನ್ ಗೆ ಮತ್ತಷ್ಟು ಉತ್ತೇಜನ ನೀಡಲಾಗುವುದು
-ನಗರಗಳಿಗೆ ಶುದ್ಧ ಕುಡಿಯವ ನೀರನ್ನು ಪೂರೈಸುವ ಸಲುವಾಗಿ ಹಾಗೂ ಗಂಗೆಯಂತಹ ನದಿಗಳಲ್ಲಿನ ಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಲುಶಿತ ನೀರು ತಾಜ್ಯ ನಿರ್ವಹಣಾ ಘಟಕಗಳಿಗೆ ಹೊಂದಿಕೊಂಡಂತೆ 50 ಕಿಲೊಮೀಟರ್ ವ್ಯಾಪ್ತಿಯಲ್ಲಿ ಥರ್ಮಲ್ ವಿದ್ಯುತ್ ಘಟಕಗಳನ್ನು ಸ್ಥಾಪಿಸುವುದು.
-ದೀರ್ಘಾವಧಿಯ ಪಿಪಿಎಗಳ ಮೂಲಕ ಹೈಡ್ರೋ ಯೋಜನೆಗಳನ್ನು ಉತ್ತೇಜಿಸುವುದು ಹಾಗೂ 2022 ರವರೆಗೂ ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಗೆ ನೀಡಿರುವ ವಿನಾಯಿತಿ ವಿಸ್ತರಿಸಿರುವುದು.
-ನವೀಕರಿಸಬಹುದಾದ ಇಂಧನ ಶಕ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಗ್ರಿಡ್ ಕಾರ್ಯಾಚರಣೆ ನಡೆಸುವ ಸಲುವಾಗಿ ಪೂರಕ ಸೇವೆಗಳನ್ನು ಒದಗಿಸುವುದು
ಕಾರ್ಯಸಾಧನೆಯ ಸರಳೀಕರಣ: 
– ಹೂಡಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್ ಗಢ ಹಾಗೂ ಇತರೇ ಕಲ್ಲಿದ್ದಲು ಭರಿತ ಈಶಾನ್ಯ ರಾಜ್ಯಗಳಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸುವುದು. ಡಿಸ್ಕೋಮ್ ಗಳ ಮೂಲಕ ಶೇಕಡಾ 35 ರಷ್ಟು ವಿದ್ಯುತ್ ನ್ನು ನಿಗದಿತ ದರನೀತಿಯ ಆಧಾರವಾಗಿ ಖರೀದಿಸುವ ಜೊತೆಗೆ ರಾಜ್ಯಗಳು ವಿದ್ಯುತ್ ಘಟಕಗಳನ್ನು ನಿರ್ಮಿಸಲು ಅವಕಾಶ ಒದಗಿಸುವುದು
-ಡೊಮೆಸ್ಟಿಕ್ ಡ್ಯೂಟಿಸ್, ಲೇವಿ, ಸೆಸ್ ಹಾಗೂ ಟ್ಯಾಕ್ಸ್ ಗಳಲ್ಲಿ ಆಗುವಂತಹ ಬದಲಾವಣೆಯ ಪರಿಣಾಮಗಳು ಸ್ಪರ್ಧಾತ್ಮಕ ಹರಾಜಗಳಲ್ಲಿ ಆಗದಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಾರುಕಟ್ಟೆಯ ಅಸ್ಥಿರತೆಯನ್ನು ಹೋಗಲಾಡಿಸುವುದು.
-ಬಹು ರಾಜ್ಯಗಳ ನಡುವಿನ ಮಾರಾಟಕ್ಕೆ ಸಂಬಂಧಿಸಿದಂತೆ ಧರನೀತಿ ನಿಗದಿ ಸಂಬಂಧ ಸ್ಪಷ್ಟತೆ ತರುವ ನಿಟ್ಟಿನಲ್ಲಿ ಪ್ರಾಧಿಕಾರವನ್ನು ಸ್ಥಾಪಿಸುವುದು. ಶೇಕಡಾ 10 ಕ್ಕಿಂತ ಹೆಚ್ಚು ವಿದ್ಯುತ್ ನ್ನು ರಾಜ್ಯಗಳ ಹೊರಗಡೆಗೆ ಮಾರಾಟ ಮಾಡುವಂತಃ ಸಂದರ್ಭದಲ್ಲಿ ಸಂಯೋಜಿತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಧರನೀತಿಯನ್ನು ನಿರ್ಧರಿಸುತ್ತದೆ.

ಈ ಎಲ್ಲಾ ತಿದ್ದುಪಡಿಗಳು ವಿದ್ಯುತ್ ಗ್ರಾಹಕರಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಲಿವೆ. ಹಾಗೂ ಧಕ್ಷತೆಯನ್ನು ಸಾಧಿಸುವ ಮೂಲಕ, ವಿದ್ಯುತ್ ಉತ್ಪಾದನೆಯ ವೆಚ್ಚವನ್ನು ತಗ್ಗಿಸುವುದರಿಂದ, ಸ್ವಚ್ಛ ಪರಿಸರ ನಿರ್ಮಾಣದ ನಿಟ್ಟಿನಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯನ್ನು ಉತ್ತೇಜನಗೊಳ್ಳುತ್ತದೆ. ಹಾಗೂ, ಭಾರತದ ಇಂಧನ ಭದ್ರತೆಯನ್ನು ಸಂರಕ್ಷಿಸುತ್ತದೆ. ಮೇಲಾಗಿ ತ್ಯಾಜ್ಯ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳುಸುವಂತಹ ಕ್ರಮಗಳು ಹಾಗೂ ತ್ಯಾಜ್ಯದಿಂದ ವಿದ್ಯುತ್ ವಿದ್ಯುತ್ ಉತ್ಪಾದನೆಯನ್ನು ಸಾಧಿಸುವಂತಹ ಕ್ರಮಗಳಿಂದಾಗಿ ನಮಾಮಿ ಗಂಗೆ, ಸ್ವಚ್ಛ ಭಾರತ್ ಮಿಷನ್ ನಂತಹ ಯೋಜನೆಯ ಉದ್ದೇಶಗಳು ಈಡೇರಿಸುವಲ್ಲಿ ಈ ತಿದ್ದುಪಡಿ ಸಹಕಾರಿಯಾಗಿದೆ. ಮತ್ತೊಂದಡೆ ಇದು ಸ್ವಚ್ಚ ನೀರನ್ನು ಕುಡಿಯುವ ಹಾಗೂ ವ್ಯವಸಾಯಕ್ಕೆ ಬಳಸಿಕೊಳ್ಳಲು ಕಾರ್ಯಸಾಧುವಾಗಿದೆ.

ಇವೆಲ್ಲದರ ಜೊತೆಯಲ್ಲಿ ಈ ತಿದ್ದುಪಡಿಗಳು ವಿದ್ಯುತ್ ನ ಸೌಲಭ್ಯತೆ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ವಿದ್ಯುತ್ ಶಕ್ತಿಯ ಲಭ್ಯತೆಯನ್ನು ಖಾತರಿಪಡಿಸುತ್ತದೆ. ಕಾರ್ಯಸಾಧನೆಯ ಸರಳೀಕರಣದ ಕ್ರಮಗಳು, ಈ ಕ್ಷೇತ್ರದಲ್ಲಿ ಆರ್ಥಿಕ ಕಾರ್ಯಸಾಧ್ಯತೆಯ ಭರವಸೆ ಮೂಡಸಲಿದೆ ಹಾಗೂ ಬಂಡವಾಳವನ್ನು ಆಕರ್ಷಿಸಲಿವೆ. ಪಾರದರ್ಶಕತೆಯನ್ನು ಪ್ರೋತ್ಸಾಹಿಸಲಿವೆ. ಆಯಾ ಕ್ಷೇತ್ರಗಳ ನಿಯಂತ್ರಕ ವಿಧಾನಗಳಲ್ಲಿ ಸ್ಥಿರತೆಯನ್ನು ಕಾಪಾಡತ್ತವೆ. ಹಾಗೂ ಮತ್ತಷ್ಟು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಬಲ್ಲವು. ಕಾರ್ಯಾಚರಣೆಯಲ್ಲಿ ಧಕ್ಷತೆ ಮತ್ತು ವಿದ್ಯುತ್ ಶಕ್ತಿ ಪೂರೈಕೆಯ ಗುಣಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ನೆರವಾಗುತ್ತವೆ. ವಿದ್ಯುತ್ ಸುಂಕ ನೀತಿಯಲ್ಲಿನ ಈ ಐತಿಹಾಸಿಕ ತಿದ್ದುಪಡಿಗಳು ಹಾಗೂ ಉದಯ್ ನಂತಹ ಪೂರಕ ಯೋಜನೆಗಳು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯಾದ  ಐತಿಹಾಸಿಕ 24X7 ಕಾಲ ಸರ್ವರಿಗೂ ವಿದ್ಯುತ್ ಒದಗಿಸುವ ಕನಸನ್ನು ಸಾಕಾರಗೊಳಿಸುವ ಭರವಸೆಯನ್ನು ನೀಡುತ್ತವೆ.