Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನಲ್ಲಿ ಗ್ಯಾಚ್ಯುಯಿಟಿ ಪಾವತಿ (ತಿದ್ದುಪಡಿ) ಮಸೂದೆ 2017ನ್ನು ಮಂಡಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಗ್ರಾಚ್ಯುಯಿಟಿ ಪಾವತಿ (ತಿದ್ದುಪಡಿ) ವಿಧೇಯಕ 2017ನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.

ಈ ತಿದ್ದುಪಡಿಯು, ಕೇಂದ್ರ ಸರ್ಕಾರದ ನೌಕರರಿಗೆ ಸಮಾನವಾಗಿ ಸಿಸಿಎಸ್ (ಪಿಂಚಣಿ) ನಿಯಮದ ವ್ಯಾಪ್ತಿಗೆ ಬಾರದ ಖಾಸಗಿ ವಲಯದ ಮತ್ತು ಸರ್ಕಾರದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳು/ ಸಾರ್ವಜನಿಕ ವಲಯದ ಉದ್ದಿಮೆಗಳ ನೌಕರರ ಗ್ರಾಚ್ಯುಯಿಟಿಯ ಗರಿಷ್ಠ ಮಿತಿಯನ್ನು ಹೆಚ್ಚಿಸಲಿದೆ.

ಹಿನ್ನೆಲೆ:

ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ನೇಮಕ ಮಾಡಿಕೊಂಡಿರುವ ಸಂಸ್ಥೆಗಳಿಗೆ ಗ್ರಾಚ್ಯುಯಿಟಿ ಪಾವತಿ ಕಾಯಿದೆ 1972 ಅನ್ವಯಿಸುತ್ತದೆ. ನಿಯಮಾನುಸಾರ ನಿವೃತ್ತಿಯ ವಯಸ್ಸು ಪೂರ್ಣವಾದ ಬಳಿಕ ಆಗುವ ನಿವೃತ್ತಿ ಅಥವಾ ದೈಹಿಕ ಅಸಾಮರ್ಥ್ಯ ಅಥವಾ ದೇಹದ ಪ್ರಮುಖ ಭಾಗದ ಅಂಗವೈಕಲ್ಯದಿಂದ ಆಗುವ ನಿವೃತ್ತಿಯ ಬಳಿಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ಕಾಯಿದೆಯ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಗ್ರಾಚ್ಯುಯಿಟಿ ಪಾವತಿ ಕಾಯಿದೆ 1972, ಕೈಗಾರಿಕೆ, ಕಾರ್ಖಾನೆ ಮತ್ತು ಸ್ಥಾಪನೆಗಳಲ್ಲಿ ವೇತನಕ್ಕೆ ದುಡಿಯುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಮಹತ್ವದ ಶಾಸನವಾಗಿದೆ.

ಪ್ರಸ್ತುತ ಕಾಯಿದೆಯಡಿ ಗ್ಯಾಚುಯಿಟಿ ಮೊತ್ತದ ಗರಿಷ್ಠ ಮಿತಿ 10 ಲಕ್ಷ ರೂಪಾಯಿಯಾಗಿದೆ. ಕೇಂದ್ರ ಸರ್ಕಾರದ ನೌಕರರಿಗೆ ಕೇಂದ್ರೀಯ ನಾಗರಿಕ ಸೇವೆಗಳ (ಪಿಂಚಣಿ) ಕಾನೂನು 1972ರಡಿಯಲ್ಲಿರುವ ನಿಯಮಾವಳಿಯೂ ಇದೇ ಪ್ರಕಾರವಾಗಿದೆ. 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳ ಜಾರಿಗೂ ಮುನ್ನ, ಸಿಸಿಎಸ್ (ಪಿಂಚಣಿ) ಕಾನೂನು 1972ರಡಿ ಗರಿಷ್ಠ ಮಿತಿ 10 ಲಕ್ಷವಾಗಿತ್ತು. ಆದಾಗ್ಯೂ, 7ನೇ ಕೇಂದ್ರೀಯ ವೇತನ ಆಯೋಗದ ಜಾರಿಯೊಂದಿಗೆ, ಸರ್ಕಾರಿ ನೌಕರರ ವಿಚಾರದಲ್ಲಿ ಈ ಮಿತಿಯನ್ನು1.1.2016ರಿಂದ ಅನ್ವಯಿಸುವಂತೆ 20 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

ಹೀಗಾಗಿ, ಖಾಸಗಿ ವಲಯದ ಉದ್ಯೋಗಿಗಳಾಗಿದ್ದರೂ ಸಹ ಹಣದುಬ್ಬರ ಮತ್ತು ವೇತನ ಹೆಚ್ಚಳವನ್ನು ಪರಿಗಣಿಸಿ, ಗ್ರಾಚ್ಯುಯಿಟಿ ಪಾವತಿ ಕಾಯಿದೆ1972 ರ ಅಡಿಯಲ್ಲಿ ಬರುವ ಉದ್ಯೋಗಿಗಳಿಗೆ ಗ್ರಾಚ್ಯುಯಿಟಿಯ ಅರ್ಹತೆಯನ್ನು ಪರಿಷ್ಕರಿಸಬೇಕು ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ. ಆ ಪ್ರಕಾರವಾಗಿ ಸರ್ಕಾ ಗ್ರಾಚ್ಯುಯಿಟಿ ಪಾವತಿ ಕಾಯಿದೆ 1972ಕ್ಕೆ ತಿದ್ದುಪಡಿಯನ್ನು ತರಲು ಮುಂದಾಗಿದೆ.