ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಓಬಿಸಿ ಮೀಸಲು ಸೌಲಭ್ಯ ಕೋರಲು ಅನುವಾಗುವಂತೆ ಪಿ.ಎಸ್.ಯು., ಪಿ.ಎಸ್.ಬಿ. ಇತ್ಯಾದಿಗಳಲ್ಲಿನ ಹುದ್ದೆಗಳನ್ನು ಸರ್ಕಾರದ ಹುದ್ದೆಗಳೊಂದಿಗೆ ಸಮಾನಗೊಳಿಸಲು ನಿಯಮಗಳಿಗೆ ತನ್ನ ಅನುಮೋದನೆ ನೀಡಿದೆ. ಇದರಿಂದಾಗಿ ಸುಮಾರು 24 ವರ್ಷಗಳಷ್ಟು ದೀರ್ಘ ಕಾಲದಿಂದ ಬಾಕಿ ಇದ್ದ ಬೇಡಿಕೆ ಈಡೇರಲಿದೆ. ಇದು ಪಿ.ಎಸ್.ಯು. ಮತ್ತು ಇತರ ಸಂಸ್ಥೆಗಳಲ್ಲಿ ಕೆಳ ಹಂತದಲ್ಲಿ ಉದ್ಯೋಗ ಮಾಡುವವರು ಸರ್ಕಾರದ ಕೆಳ ಹಂತದ ಹುದ್ದೆಗಳಲ್ಲಿ ಸೇವೆ ಸಲ್ಲಿಸುವವರು ಪಡೆಯುತ್ತಿರುವ ಮೀಸಲಿಗೆ ಸಮಾನವಾಗಿ ತಮ್ಮ ಮಕ್ಕಳಿಗೂ ಓಬಿಸಿ ಮೀಸಲು ಸೌಲಭ್ಯ ಪಡೆಯುವುದನ್ನು ಖಾತ್ರಿ ಪಡಿಸುತ್ತದೆ. ಆದಾಯದ ಮಟ್ಟದ ಆಧಾರದ ಮೇಲಿನ ತಪ್ಪು ವ್ಯಾಖ್ಯಾನದಿಂದಾಗಿ, ಹುದ್ದೆಗಳ ಸಮಾನತೆಯಿಲ್ಲದ ಹಿನ್ನೆಲೆಯಲ್ಲಿ ಅಂಥ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಮಕ್ಕಳು ಓಬಿಸಿ ವರ್ಗದಲ್ಲಿನ ಮೀಸಲು ಹುದ್ದೆಗಳನ್ನು ಪಡೆಯುವುದನ್ನು ಮತ್ತು ನಿಜವಾದ ಕೆನೆಪದರರಹಿತ ಅಭ್ಯರ್ಥಿಗಳು ದುರ್ಲಾಭ ಪಡೆಯುವುದನ್ನು ತಡೆಯುತ್ತದೆ.
ಕೇಂದ್ರ ಸಂಪುಟವು, ಇತರ ಹಿಂದುಳಿದ ವರ್ಗಗಳ (ಓಬಿಸಿ) ಮೀಸಲು ವ್ಯಾಪ್ತಿಯಿಂದ ಮುಂದುವರಿದ ಜನರು/ ವರ್ಗವನ್ನು (ಕೆನೆಪದರ) ಹೊರಗಿಡಲು, ಕೆನೆಪದರಕ್ಕೆ ಅರ್ಜಿ ಹಾಕಲು ಇ ದೇಶಾದ್ಯಂತ ಹಾಲಿ ಇರುವ ವಾರ್ಷಿಕ 6 ಲಕ್ಷ ಆದಾಯ ಮಾನದಂಡದ ನಿರ್ಬಂಧವನ್ನು ಹೆಚ್ಚಳ ಮಾಡಲು ತನ್ನ ಅನುಮೋದನೆ ನೀಡಿದೆ. ಈ ಹೊಸ ಆದಾಯ ಮಾನದಂಡವು ವಾರ್ಷಿಕ 8 ಲಕ್ಷ ಆಗಿರುತ್ತದೆ. ಕೆನೆಪದರವನ್ನು ಹೊರಗಿಡುವ ಆದಾಯ ಮಿತಿಯ ಹೆಚ್ಚಳವನ್ನು, ಗ್ರಾಹಕರ ಬೆಲೆ ಸೂಚ್ಯಂಕದಲ್ಲಿ ಹೆಚ್ಚಳವಾಗುತ್ತಿರುವುದು ಮತ್ತುಸರ್ಕಾರಿ ಸೇವೆಗಳಲ್ಲಿ ಮತ್ತು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶಕ್ಕೆ ಒಬಿಸಿಗಳಿಗೆ ಒದಗಿಸಲಾಗಿರುವ ಮೀಸಲಾತಿ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ.
ಈ ಕ್ರಮಗಳು ಹೆಚ್ಚಿನ ಸಾಮಾಜಿಕ ನ್ಯಾಯ ಖಾತ್ರಿ ಪಡಿಸುವ ಮತ್ತು ಇತರ ಹಿಂದುಳಿದ ವರ್ಗಗಳ ಸದಸ್ಯರನ್ನು ಸೇರ್ಪಡೆಗೊಳಿಸುವ ಸರ್ಕಾರದ ಪ್ರಯತ್ನದ ಭಾಗವಾಗಿದೆ. ಸರ್ಕಾರವು ಈಗಾಗಲೇ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದೆ. ಓಬಿಸಿಯ ಉಪ ವರ್ಗೀಕರಣಕ್ಕಾಗಿ ಸಂವಿಧಾನದ 340ನೇ ಸೆಕ್ಷನ್ ಅಡಿಯಲ್ಲಿ ಆಯೋಗ ರಚಿಸಲೂ ನಿರ್ಧರಿಸಲಾಗಿದೆ, ಇದರಿಂದ ಓಬಿಸಿ ಸಮುದಾಯದಲ್ಲೇ ಹೆಚ್ಚು ಹಿಂದುಳಿದವರು ಕೂಡ ಸರ್ಕಾರಿ ಹುದ್ದೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲು ಸೌಲಭ್ಯ ಪಡೆಯಲಿದ್ದಾರೆ. ಈ ಎಲ್ಲ ನಿರ್ಧಾರಗಳನ್ನೂ ಒಟ್ಟಿಗೆತೆಗೆದುಕೊಳ್ಳಲಾಗಿದ್ದು, ಇವು ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಓಬಿಸಿ ಮೀಸಲಿಗೆ ಹೆಚ್ಚಿನ ಖಾತ್ರಿ ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ, ಜೊತೆಗೆ, ಅದೇ ವರ್ಗದಲ್ಲಿಯೇ ಹೆಚ್ಚು ಸವಲತ್ತು ವಂಚಿತರು, ಸಾಮಾಜಿಕ ಚಲನಶೀಲತೆಯಿಂದ ವಂಚಿತರಾಗದಂತೆ ಖಾತ್ರಿಪಡಿಸುತ್ತದೆ.
ಹಿನ್ನೆಲೆ:
ಸರ್ವೋನ್ನತ ನ್ಯಾಯಾಲವು ಡಬ್ಲುಪಿ (ಸಿ) 930/1990 (ಇಂದ್ರ ಸಹಾನಿ ಪ್ರಕರಣ)ರಲ್ಲಿ ದಿನಾಂಕ 16.11.1992ರಂದು ನೀಡಿದ ತನ್ನ ತೀರ್ಪಿನಲ್ಲಿ, ಇತರ ಹಿಂದುಳಿದ ವರ್ಗಗಳಲ್ಲಿ ಸೂಕ್ತ ಮತ್ತು ಅಗತ್ಯ ಸಾಮಾಜಿಕ ಆರ್ಥಿಕ ಮಾನದಂಡದಲ್ಲಿ ಅರ್ಜಿಹಾಕುವ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದ ವ್ಯಕ್ತಿಗಳನ್ನು ಕೈಬಿಡುವ ಕುರಿತಂತೆ ಆಧಾರಗಳನ್ನು ನಿರ್ದಿಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಇದಕ್ಕಾಗಿ 1993ರ ಫೆಬ್ರವರಿಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು, ಅದು ತನ್ನ ವರದಿಯನ್ನು 10.3.1993ರಲ್ಲಿ ನೀಡಿತ್ತು. ಅದರಲ್ಲಿ ಓಬಿಸಿಯಲ್ಲಿ ಅಂದರೆ ಕೆನೆ ಪದರದಲ್ಲಿ ಸಾಮಾಜಿಕವಾಗಿ ಮುಂದುವರಿದವರನ್ನು ಗುರುತಿಸುವ ಮಾನದಂಡ ನಿರ್ದಿಷ್ಟಪಡಿಸಲಾಗಿತ್ತು. ಈ ವರದಿಯನ್ನು ಕಲ್ಯಾಣ ಸಚಿವಾಲಯ ಅಂಗೀಕರಿಸಿತ್ತು ಮತ್ತು ಡಿಓಪಿಟಿಗೆ ಕಳುಹಿಸಿತ್ತು, ಇದು ಕೆನೆಪದರ ಕೈಬಿಡಲು ದಿನಾಂಕ 08.09.1993ರಂದು ಓ.ಎಂ.
ಹೊರಡಿಸಿತ್ತು.
08.09.1993ರ ಓ.ಎಂ. ಕೆನೆಪದರವನ್ನು ಗುರುತಿಸಲು ಆರು ವರ್ಗಗಳನ್ನು ನಿರ್ದಿಷ್ಟಪಡಿಸಿತ್ತು (ಎ) ಸಾಂವಿಧಾನಿಕ/ಶಾಸನಾತ್ಮಕ ಹುದ್ದೆ (ಬಿ) ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗ್ರೂಪ್ ಎ ಮತ್ತು ಗ್ರೂಪ್ ಬಿ ಅಧಿಕಾರಿಗಳು, ಪಿ.ಎಸ್.ಯು ಮತ್ತು ಶಾಸನಾತ್ಮಕ ಕಾಯಗಳು, ವಿಶ್ವವಿದ್ಯಾಲಯಗಳ ಉದ್ಯೋಗಿಗಳು, (ಸಿ) ಸಶಸ್ತ್ರ ಪಡೆಗಳ ಕರ್ನಲ್ ಮತ್ತು ಅದಕ್ಕಿಂತ ಮೇಲಿನ ಹುದ್ದೆಗಳು ಮತ್ತು ಅರೆ ಮಿಲಿಟರಿ ಪಡೆಯಲ್ಲಿಅದಕ್ಕೆ ಸಮನಾದ ಹುದ್ದೆಗಳು (ಡಿ) ವೃತ್ತಿನಿರತರು ಅಂದರೆ ವೈದ್ಯರು, ವಕೀಲರು, ವ್ಯವಸ್ಥಾಪಕ ಸಲಹೆಗಾರರು, ಎಂಜಿನಿಯರುಗಳು ಇತ್ಯಾದಿ (ಇ) ಕೃಷಿ ಭೂಮಿಯೊಂದಿಗೆ ಆಸ್ತಿಯ ಒಡೆಯಲು ಅಥವಾ ಖಾಲಿ ನಿವೇಶನ ಮತ್ತು/ಅಥವಾ ಕಟ್ಟಡ ಹೊಂದಿರುವವರು ಹಾಗೂ (ಎಫ್) ಆದಾಯ/ಆಸ್ತಿ ತೆರಿಗೆದಾರರು.
ಈ ಓ.ಎಂ. ಪಿಎಸ್.ಯು.ಗಳು, ಬ್ಯಾಂಕುಗಳು, ವಿಮಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಇತ್ಯಾದಿಗಳಲ್ಲಿ ಸಮಾನ ಅಥವಾ ಹೋಲಿಕೆ ಮಾಡಬಹುದಾದ ಹುದ್ದೆಗಳನ್ನು ಹೊಂದಿರುವ ಅಧಿಕಾರಿಗಳಿಗೆ ಈ ನಿಯತಾಂಕಗಳು ರೂಪಾಂತರವನ್ನು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿತ್ತು ಮತ್ತು ಸರ್ಕಾರವು, ಸರ್ಕಾರ ಮತ್ತು ಈ ಸಂಸ್ಥೆಗಳ ಹುದ್ದೆಗಳನ್ನು ಸಮಾನಗೊಳಿಸುವ ಅಗತ್ಯವನ್ನು ಸ್ಪಷ್ಟಪಡಿಸಿತ್ತು.
ಈ ಸಂಸ್ಥೆಗಳಲ್ಲಿ ಬಾಕಿ ಉಳಿದಿರುವ ಸಮಾನತೆಯ ಆದಾಯದ ಮಾನದಂಡಗಳು ಈ ಸಂಸ್ಥೆಗಳಲ್ಲಿನ ಅಧಿಕಾರಿಗಳಿಗೆ ಅನ್ವಯಿಸುತ್ತವೆ.
ಆದಾಗ್ಯೂ, ಸರ್ಕಾರದಲ್ಲಿ ಮತ್ತು ಪಿಎಸ್.ಯು, ಪಿಎಸ್.ಬಿ. ಇತ್ಯಾದಿಗಳಲ್ಲಿನ ಹುದ್ದೆಗಳ ಸಮಾನತೆಯನ್ನು ನಿರ್ಧರಿಸುವ ಕಾರ್ಯವನ್ನು ಪ್ರಾರಂಭಿಸಲಾಗಿರಲಿಲ್ಲ. ಹುದ್ದೆಗಳ ಸಮಾನತೆಯ ನಿರ್ಣಯವು ಸುಮಾರು 24 ವರ್ಷಗಳಿಂದ ಬಾಕಿ ಉಳಿದಿತ್ತು.
ನಂತರದಲ್ಲಿಸಮಾನಗೊಳಿಸುವ ವಿಷಯದ ಬಗ್ಗೆ ವಿವರವಾಗಿ ಪರಿಶೀಲಿಸಲಾಗಿದೆ.
ಪಿಎಸ್.ಯು.ಗಳು, ಎಲ್ಲ ಎಕ್ಸಿಕ್ಯೂಟ್ಯೂ ಹುದ್ದೆಗಳು ಅಂದರೆ ಬೋರ್ಡ್ ಮಟ್ಟದ ಎಕ್ಸಿಕ್ಯೂಟೀವ್ ಗಳು ಮತ್ತು ಆಡಳಿತ ಮಟ್ಟದ ಹುದ್ದೆಗಳನ್ನು ಸರ್ಕಾರದ ಗ್ರೂಪ್ ಎ ಹುದ್ದೆಗೆ ಸಮಾನವಾದವುಗಳೆಂದು ಮತ್ತು ಅವುಗಳನ್ನು ಕೆನೆಪದರವೆಂದು ಪರಿಗಣಿಸಲಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳ, ಹಣಕಾಸುಸಂಸ್ಥೆಗಳ ಮತ್ತು ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳ ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ 1 ಮತ್ತು ಮೇಲ್ಪಟ್ಟ ಹುದ್ದೆಗಳನ್ನು ಸಹ ಭಾರತ ಸರ್ಕಾರದ ಎ ಗುಂಪಿಗೆ ಸಮಾನ ಹುದ್ದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಕೆನೆಪದರ ಎಂದೂ ಪರಿಗಣಿಸಲಾಗುತ್ತದೆ. ಪಿಎಸ್.ಬಿ.ಗಳ, ಎಫ್.ಐ.ಗಳ ಮತ್ತು ಪಿಎಸ್.ಐ.ಸಿ.ಗಳಲ್ಲಿನ ಗುಮಾಸ್ತರು ಮತ್ತು ಜವಾನರುಗಳಿಗೆ ಕಾಲ ಕಾಲಕ್ಕೆ ಪರಿಷ್ಕರಣೆಯಾಗುವ ಇನ್ಕಮ್ ಟೆಸ್ಟ್ ಅನ್ವಯವಾಗುತ್ತದೆ. ಇವು ವಿಸ್ತೃತ ಮಾರ್ಗಸೂಚಿಗಳಾಗಿವೆ ಮತ್ತು ಪ್ರತಿಯೊಂದು ಬ್ಯಾಂಕ್, ಪಿ.ಎಸ್.ಯು., ವಿಮಾ ಸಂಸ್ಥೆಗಳು ವೈಯಕ್ತಿಕ ಹುದ್ದೆಗಳನ್ನು ಗುರುತಿಸಲು ಈ ವಿಷಯವನ್ನು ತಮ್ಮ ಸಂಬಂಧಿತ ಮಂಡಳಿಗಳ ಮುಂದೆ ಮಂಡಿಸಬೇಕು.
******