ಗುಜರಾತ್ ನ 50 ಮಹಿಳಾ ಮೋಟಾರು ಬೈಕ್ ಚಾಲಕರ ತಂಡ – ಬೈಕಿಂಗ್ ಕ್ವೀನ್ಸ್ – ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.
ತಾವು 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 10,000 ಕಿ.ಮೀಗೂ ಹೆಚ್ಚು ದೂರ ಕ್ರಮಿಸಿ, ಹೆಣ್ಣುಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ, ಸ್ವಚ್ಛಭಾರತದಂಥ ಸಾಮಾಜಿಕ ಧ್ಯೇಯಗಳ ಬಗ್ಗೆ ಜನರೊಂದಿಗೆ ಸಂವಾದ ನಡೆಸಿದ್ದಾಗಿ ಈ ತಂಡ ಹೇಳಿದೆ. 2017ರ ಆಗಸ್ಟ್ 15ರಂದು ಅವರು ಲಡಾಕ್ ನ ಖರ್ದುಲಗಲದಲ್ಲಿ ತ್ರಿವಣ ಧ್ವಜವನ್ನು ಹಾರಿಸಿದ್ದರು.
ಪ್ರಧಾನಮಂತ್ರಿಯವರು ಅವರ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಅವರ ಮುಂದಿನ ಪ್ರಯತ್ನಕ್ಕೆ ಶುಭ ಕೋರಿದರು.
Met a group of women bikers, who spoke about their biking expedition across parts of India. https://t.co/B5ELXtuSfD
— Narendra Modi (@narendramodi) August 28, 2017