Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವ ದೆಹಲಿಯ ವಿಜ್ಞಾನ ಭವನದಲ್ಲಿ ದೆಹಲಿ ಹೈಕೋರ್ಟಿನ 50ನೇ ವಾರ್ಷಿಕ ಸ್ಥಾಪನಾ ದಿನದಂದು ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯ – 31 – 10 -2016

ನವ ದೆಹಲಿಯ  ವಿಜ್ಞಾನ ಭವನದಲ್ಲಿ ದೆಹಲಿ ಹೈಕೋರ್ಟಿನ 50ನೇ ವಾರ್ಷಿಕ ಸ್ಥಾಪನಾ ದಿನದಂದು 
 ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯ –  31 – 10 -2016


ಭಾರತದ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್  ಟಿ.ಎಸ್‌ ಠಾಕುರ್‌ರವರೇ, ಕೇಂದ್ರ ಸಚಿವ ಸಂಪುಟದ  ನನ್ನ ಸಂಗಡಿಗರಾದ ಶ್ರೀಮಾನ್ ರವಿಶಂಕರ ಪ್ರಸಾದ್‌‌ರವರೇ,  ದಿಲ್ಲಿ ಉಪರಾಜ್ಯಪಾಲರಾದ ಶ್ರೀಮಾನ್‌ ನಜೀಬ್‌ಜಂಗ್‌ರವರೇ,  ದಿಲ್ಲಿ ಮುಖ್ಯಮಂತ್ರಿಗಳಾದ ಶ್ರೀಮಾನ್ ಅರವಿಂದರವರೇ, ದಿಲ್ಲಿ ಶ್ರೇಷ್ಠ   ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ರೋಹಿಣಿ ಅವರೇ,  ದಿಲ್ಲಿ ಶ್ರೇಷ್ಠ  ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟಿಸ್  ದರ್‌ ದುರ್ರೇಜ್  ಅಹಮದ್‌ರವರೇ, ಉಪಸ್ಥಿತ ಸರ್ವೋಚ್ಛ ನ್ಯಾಯಾಲಯದ  ಎಲ್ಲ ವರಿಷ್ಠ ಮಹನೀಯರೇ, ದಿಲ್ಲಿ  ಶ್ರೇಷ್ಠ  ನ್ಯಾಯಾಲಯದ   ಎಲ್ಲ ವರಿಷ್ಠ ಮಹನೀಯರೇ, ಹಿರಿಯರೆ, 
 
ನನಗೆಂದೂ ಕೋರ್ಟಿಗೆ ಹೋಗುವ ಸೌಭಾಗ್ಯ ದೊರೆತಿಲ್ಲ. ಆದರೆ ಅಲ್ಲಿ ಬಹಳ ಗಂಭೀರ ವಾತಾವರಣವಿರುತ್ತದೆಂದು ಕೇಳಿದ್ದೇನೆ. ಬಹುಶಃ ಅದರ ಪ್ರಭಾವ ಇಲ್ಲಿಯೂ ಕಂಡುಬರುತ್ತಿದೆ. ಐವತ್ತು ವರ್ಷಗಳು ತುಂಬಿದ ಉತ್ಸವವನ್ನು ಆಚರಿಸುತ್ತಿದ್ದೇವೆ. 
 
ಸ್ವಲ್ಪವಾದರೂ ಹಸನ್ಮುಖರಾಗಿ. ತಪ್ಪು     ದೃಷ್ಟಿಕೋನ  ಆಗಬಾರದೆಂಬ ಡಯಾಸ್‌‌ ಮೇಲಿನ ಗಂಭೀರತೆಯನ್ನಂತೂ  ನಾನು ತಿಳಿದುಕೊಳ್ಳಬಲ್ಲೆ. ಆದರೆ  ಇಲ್ಲಿ ಯಾವುದೋ ಸಮಸ್ಯೆ ಇದೆ  ಎಂದು ನನಗೆ ಅನಿಸುವುದಿಲ್ಲ . 
ಎಲ್ಲರ ಸಹಕಾರದಿಂದ ಐವತ್ತು ವರ್ಷಗಳ ಪ್ರಯಾಣದಲ್ಲಿ ಈ ಕಾರ್ಯಕ್ಕೆ ಸಫಲತೆಯು ದೊರೆಕಿದೆ. ಹೊರಗಿನ ಮಿತ್ರನೇ ಇರಬಹುದು, ಹೊರಗೆ ಮರದ ಕೆಳಗೆ ಕುಳಿತುಕೊಂಡು ಕಂಪ್ಯೂಟರ್‌ ಇಲ್ಲದ ಕಾಲದಲ್ಲಿ ಟೈಪಿಂಗ್‌ ಮಾಡುವವನಿರಬಹುದು, ಡಯಾಸ್‌ ಮೇಲೆ ಕುಳಿತುಕೊಂಡು ನ್ಯಾಯವನ್ನು ಕೊಡುತ್ತಿರುವವರಿರಬಹುದು, ಅಥವಾ ಯಾವುದೋ ವಾತಾವರಣದಲ್ಲಿ ಜನರಿಗೆ ಚಹಾ ತಲುಪಿಸುವ ವ್ಯಕ್ತಿ ಇರಬಹುದು, ಇದರಲ್ಲಿ ಪ್ರತಿಯೊಬ್ಬರ ಸಹಕಾರ,  ಕೊಡುಗೆಯಿದೆ. 
 
ತಮ್ಮದೇ ಆದ ರೀತಿಯಲ್ಲಿ ಕೊಡುಗೆ  ಇದೆ. ಐವತ್ತು ವರ್ಷಗಳ ಈ ಆಚರಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರ ಕೊಡುಗೆಯನ್ನು   ನಾವು ಸಂತೋಷದಿಂದ ಸ್ವೀಕರಿಸಬೇಕು.  ಅವರೆಲ್ಲರ ಬಗ್ಗೆ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು. ಈ ವ್ಯವಸ್ಥೆಗೆ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ-ತಮ್ಮ ರೀತಿಯಿಂದ ಏನಾದರೊಂದು ಮೌಲ್ಯವರ್ಧನೆ    ಮಾಡಿಕೊಟ್ಟಿರಬಹುದು. ಪ್ರತಿಯೊಬ್ಬರ ಯಾವುದಾದರೊಂದು ಸಕಾರಾತ್ಮಕ ಕೊಡುಗೆಯಿರಬಹುದು  ಮತ್ತು ಇದೇ ಸಕಾರಾತ್ಮಕ ಕೊಡುಗೆಯ   ಹೆಜ್ಜೆ  ಸಂಸ್ಥೆಯ  ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಸಂಸ್ಥೆಯ   ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ.   ದಿನದಿಂದ ದಿನಕ್ಕೆ  ಸಂಸ್ಥೆಯ ಆವಶ್ಯಕತೆಯು ಹೆಚ್ಚಿದ ಅನುಭವವಾಗುತ್ತದೆ. ನನಗಿರುವ ವಿಶ್ವಾಸವೆಂದರೆ – ಭಾರತದ  ಸಂವಿಧಾನದ ಬೆಳಕಿನಲ್ಲಿ ದೇಶದ ಸಾಮಾನ್ಯ ನಾಗರಿಕರ ಆಸೆ,  ಆಕಾಂಕ್ಷೆಗಳು, ಮತ್ತು ಅವುಗಳನ್ನು ಪೂರ್ಣಗೊಳಿಸಲಿರುವ ಜವಾಬ್ದಾರಿ ಯಾರ ಬಳಿ ಇದೆಯೋ ಅವರು  ಅವುಗಳನ್ನು ಅನಿವಾರ್ಯವಾಗಿ ಪೂರ್ಣಗೊಳಿಸುವ  ಪ್ರಯತ್ನವನ್ನು ಮಾಡಬೇಕಿದೆ.   ಪ್ರತಿಯೊಬ್ಬರೂ ಇದನ್ನು ನೆರವೇರಿಸಬೇಕಿದೆ.
 
ಇಂದು 31 ನೇ ಅಕ್ಟೋಬರ್‌ ದಿಲ್ಲಿ ಹೈಕೋರ್ಟಿಗೆ ಐವತ್ತು ವರ್ಷ, ಇಂದು 31 ನೇ ಅಕ್ಟೋಬರ್‌  ಭಾರತದ ಏಕತೆಗೆ ತನ್ನ ಜೀವನವನ್ನೇ ಕೊಟ್ಟ ಸರ್ದಾರ್  ವಲ್ಲಭ ಭಾಯಿ ಪಟೇಲ್‌ ಅವರ ಜನ್ಮ ಜಯಂತಿಯೂ ಆಗಿದೆ. ಮಹಾತ್ಮಾ ಗಾಂಧಿರವರ ಅನನ್ಯ ಸಂಗಡಿಗರಾದ ಕಾರಣ, ಜನಸಾಮಾನ್ಯರ ಅಧಿಕಾರಕ್ಕಾಗಿ ಆಂದೋಲನವನ್ನು ಮಾಡಿಸುವುದನ್ನು ಬಿಟ್ಟು, ಒಬ್ಬ ಬ್ಯಾರಿಸ್ಟರ್‌ ಆಗಿ ತಮ್ಮ ವೃತ್ತಿಯನ್ನು ರೂಪಿಸಿಕೊಳ್ಳಬಹುದಿತ್ತು. 
 
 
ಆದರೆ  ಅವರು ಬ್ಯಾರಿಸ್ಟರ್‌ ಹುದ್ದೆಯಲ್ಲಿ ಜೀವನವನ್ನು ನೆಡೆಸದೇ, ತನ್ನೆಲ್ಲದನ್ನು ದೇಶಕ್ಕೋಸ್ಕರ  ಬಲಿಕೊಡುವುದಕ್ಕಾಗಿ ಹೊರಟು ನಿಂತರು.  ಸರ್ದಾರ್  ವಲ್ಲಭ ಭಾಯಿ ಪಟೇಲ್‌ರ  ಬಹುದೊಡ್ಡ ಸೇವೆಯನ್ನು ಜನರು ಇಂದಿಗೂ ನೆನೆಸಿಕೊಳ್ಳುತ್ತಾರೆ.   ಸ್ವತಂತ್ರ ಹಿಂದುಸ್ತಾನದ ಶಾಸಕೀಯ ವ್ಯವಸ್ಥೆಗೆ ಭಾರತೀಯತೆಯ ರೂಪವನ್ನು ಕೊಡುವುದು. ಆಲ್‌ ಇಂಡಿಯಾ ಸಿವಿಲ್‌ ಸರ್ವೀಸ್‌ಗಳಂತಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು. ಇವುಗಳನ್ನು ಅವರ ಅತಿ ದೊಡ್ಡ ಕೊಡುಗೆ ಎಂದು ಒಪ್ಪಬೇಕಾಗುತ್ತದೆ.
 
ಇದು ದೇಶದ ಏಕತೆಯ ಅಜೆಂಡಾ  ಆಗಿತ್ತು ಮತ್ತು ಭಾರತದಂತಹ ವಿವಿಧತೆಗಳಿಂದ ಕೂಡಿದ ದೇಶದಲ್ಲಿ ಆಲ್‌ ಇಂಡಿಯಾ ಸಿವಿಲ್‌ ಸರ್ವಿಸ್‌ನ ಈ ವ್ಯವಸ್ಥೆಯ ಕಾರಣದಿಂದಾಗಿ ಯಾವುದಾದರೂ ಪ್ರಮಾಣದಲ್ಲಿ ಒಂದು ಕೊಂಡಿ ಸೇರಿಕೊಂಡಿರುತ್ತದೆ. ಒಂದು ಸೇತುವೆ ನಿರ್ಮಿತವಾಗಿರುತ್ತದೆ. 
 
ಅಲ್ಲಿ ಸಿಗುವ  ಟ್ರೈನಿಂಗ್‌ನಿಂದಾಗಿ ಜಿಲ್ಲೆಯಲ್ಲಿ ಕುಳಿತಿರುವ ಅಧಿಕಾರಿಯೂ ಕೂಡ ರಾಷ್ಟ್ರಮಟ್ಟದಲ್ಲಿ ವಿಷಯಗಳನ್ನು ಹೋಲಿಕೆ ಮಾಡುತ್ತಾನೆ, ಯೋಚಿಸುತ್ತಾನೆ, ನಿರ್ಣಯದ ಪ್ರಕ್ರಿಯೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಾನೆ. ಆಲ್‌ ಇಂಡಿಯಾ ಸಿವಿಲ್‌ ಸರ್ವಿಸ್‌ನ ಕನಸುಗಳನ್ನು ಬೇರೆ-ಬೇರೆಯಾಗಿ ಅನೇಕ ರೂಪಗಳಲ್ಲಿ ನೋಡಲಾಯಿತು, ನಿಧಾನವಾಗಿ ಅನೇಕ ವರ್ಗಗಳಾಗುತ್ತ ವ್ಯವಸ್ಥೆಗಳು ರೂಪಗೊಂಡವು. ಇದೊಂದು ಚರ್ಚೆಯ ವಿಷಯವಾಯಿತು. ಇದು ಆಲ್‌ ಇಂಡಿಯಾ ನ್ಯಾಯಾಂಗ   ಸೇವೆಯ   ಚರ್ಚೆಗಳಲ್ಲಿದೆ.  ಆದರೆ ಇವು ಲೋಕತಂತ್ರದ ಮೂಲಭೂತ ವಿಷಯಗಳಾಗಿವೆ. ವಾದ, ವಿವಾದ ಮತ್ತು ಸಂವಾದಗಳು. ಚರ್ಚೆಯಾಗಬೇಕು, ಸಂಭಾಷಣೆಗಳಾಗಬೇಕು. ಸರ್ದಾರ್  ಪಟೇಲರು    ರೂಪಿಸಿದ ವ್ಯವಸ್ಥೆಯನ್ನು ಅನೇಕರು ಮುಂದುವರೆಸಿಕೊಂಡು ಹೋಗಿದ್ದರು.  ಇಲ್ಲಿ ಕುಳಿತಿರುವ ಮಹನೀಯರ ನಡುವೆಯೂ ಇಂತಹ ಮಂಥನಗಳು ನೆಡಯಬೇಕು.
 
ಆದರೆ ನಾವು ಇದರಲ್ಲಿ ಹೆಚ್ಚೇನೂ ಕೊಡುಗೆ ನೀಡಲು  ಸಾಧ್ಯವಿಲ್ಲ, ನಾವು ಮಾಡಿದರೂ ಅದರಿಂದ ಲಾಭವಿಲ್ಲ. ಆದರೆ ಇಲ್ಲಿ ಕುಳಿತಿರುವ ಜನರು ಬಹಳಷ್ಟು ಕೊಡುಗೆ ನೀಡಬಲ್ಲರು . ಈ ದೇಶದ ದಲಿತ, ಪೀಡಿತ, ಶೋಷಿತ, ವಂಚಿತ, ಬಡವ, ಉಪೇಕ್ಷಿತ ಸಮಾಜದ ಬಹು ಕೆಳಮಟ್ಟದಿಂದ ಬಂದಂತಹ ವ್ಯಕ್ತಿಗೂ ಈ ವ್ಯವಸ್ಥೆಯೊಳಗೆ ಬರುವ ಅವಕಾಶ ಸಿಗಬಹುದೇ? ಇಂತಹ ಒಂದು ಹೊಸ ವ್ಯವಸ್ಥೆ ರೂಪಗೊಳ್ಳುವುದೇ?  ಏಕೆಂದರೆ ಆ ಕಾಲದಲ್ಲಿ ನ್ಯಾಯ ಕ್ಷೇತ್ರದ ವ್ಯಾಪ್ತಿ ಇಷ್ಟು ವಿಶಾಲವಾಗುತ್ತದೆಂದು, ಇಷ್ಟು ಗ್ಲೋಬಲ್‌ ಆಗುತ್ತದೆಂದು ಮೂವತ್ತು ವರ್ಷಗಳ ಮುಂಚೆ ಯಾರೂ ಕೂಡ ಯೋಚಿಸಿರಲಿಲ್ಲ.   ಇಂದು ಅದರ ವ್ಯಾಪ್ತಿ ಬಹಳ ದೊಡ್ಡದಾಗಿದೆ. ಎಂತಹ ಸಮಸ್ಯೆಗಳು ನ್ಯಾಯಾಲಯದ ಎದುರು ಬರುತ್ತವೆ ಎಂದರೆ, ಅರೇ, ಇದೆಂತಹ ವಿಷಯ?  ಇದರ ಹಿನ್ನೆಲೆ  ಏನು? ಇದರ ಮಜಲುಗಳೇನೆಂಬ  ಪ್ರಶ್ನೆಗಳು ಸ್ವತಃ ನ್ಯಾಯಾಲಯಕ್ಕೆ ಸವಾಲನ್ನು ಹಾಕುತ್ತವೆ. ಜಗತ್ತಿನಲ್ಲಿ ತಾಂತ್ರಿಕತೆಯು  ತನ್ನ ಸ್ಥಾನವನ್ನು ಕಂಡುಕೊಂಡಂತೆ ಸವಾಲುಗಳೂ ಕೂಡ ಹೆಚ್ಚಿವೆ.   ಆದರೆ ಸವಾಲುಗಳಿಂದ ಓಡಿಹೋಗುವುದು ಮಾನವನ ಸ್ವಭಾವವಲ್ಲ. ಸವಾಲುಗಳಲ್ಲಿಯೇ ದಾರಿಯನ್ನು ಹುಡುಕುವುದು, ಸಾಮರ್ಥ್ಯವನ್ನು  ಹೆಚ್ಚಿಸುವುದು, ಒಂದುವೇಳೆ ತಾಂತ್ರಿಕತೆಯ  ಅವಶ್ಯಕತೆ ಇರುವಲ್ಲಿ ಅದನ್ನು ಅಳವಡಿಸಿಕೊಳ್ಳುವುದು. ಐವತ್ತು ವರ್ಷಗಳ ಈ ವ್ಯವಸ್ಥೆಯನ್ನು ಇಂದು ನಾವು ಆಚರಿಸುತ್ತಿದ್ದೇವೆ ಎಂದರೆ  ಐವತ್ತು ವರ್ಷಗಳ ಅನುಭವವನ್ನು ಆಧರಿಸಿ ನಾವು ಮುಂದಿನವರಿಗೆ ಮಾರ್ಗ ಸೂಚಿ  ರೂಪಿಸಬಹುದಲ್ಲವೇ? ನಾವೆಲ್ಲರೂ ಸೇರಿ ಇದನ್ನು ಮಾಡಬೇಕು.  ಯಾವುದಾದರೂ ಒಂದು ಪ್ರದೇಶದಿಂದ ಈ ಕೆಲಸಗಳು ಆಗುವುದಿಲ್ಲ.   ಆದರೆ ಈ ದೇಶಕ್ಕೆತನ್ನನ್ನು ತಾನು ರೂಪಿಸಿಕೊಳ್ಳುವ ಸಾಮರ್ಥ್ಯವಿದೆ.  ಏನೂ ಆಗುವುದಿಲ್ಲವೆಂದೇನಿಲ್ಲ.   ದಾರಿಗಳನ್ನು ಹುಡುಕಬಹುದಾಗಿದೆ. ದಾರಿಗಳನ್ನು ಹುಡುಕುವ ಅವಿರತ ಪ್ರಯತ್ನಗಳು 
ನಡೆಯುತ್ತಿರಬೇಕು.  ಯಾವುದೇ ವಿಚಾರಗಳಿಗೆ ಬಾಗಿಲುಗಳನ್ನು ಮುಚ್ಚಬಾರದು. ಹಾಗಾದಲ್ಲಿ ಮಾತ್ರ ಬದಲಾವಣೆಯು ಸಾಧ್ಯವಾಗುತ್ತದೆ.
 
ನ್ಯಾಯಾಲಯಗಳಲ್ಲಿ ಕುಳಿತಿರುವವರ ಪ್ರಯತ್ನಗಳಿಂದಲೇ ಅವರ ಕೊಡುಗೆಯಿಂದಲೇ   ಪರ್ಯಾಯ ಮಾರ್ಗಗಳಿಗೆ  ಬಲ ಸಿಕ್ಕಿರುವುದು ನಿಜವಾದ   ಸಂಗತಿ.   ಅಲ್ಲಿಗೆ ಬಡವರು ಹೋಗುತ್ತಾರೆ.  ನಮಗೆ ನ್ಯಾಯ ಸಿಕ್ಕಿತು ಬಿಡಪ್ಪಾ!  ಎಂದು ಅವರಿಗೆ ಸಂತೋಷವಾಗುತ್ತದೆ.  ನಾನು ದೆಹಲಿ   ಹೈಕೋರ್ಟಿನ ರಿಪೋರ್ಟ್ ನೋಡಿದ್ದೇನೆ.   ಪಾಪ !, ಹಿಂದೂಸ್ತಾನದ  ಎಲ್ಲ ಕಡೆಗಳಲ್ಲಿಯೂ ನಾನು ನೋಡಿದ್ದೇನೆ.  ಅದರಲ್ಲಿ ಹೊರಗಡೆಯ  ಕೊಡುಗೆ  ಕೂಡ ಇದೆ. ನ್ಯಾಯಾಂಗದಲ್ಲಿ  ಕುಳಿತವರ ಕೊಡುಗೆ  ಕೂಡ ಇದೆ. ಅವರು ತಮ್ಮ ಕೆಲಸದ ಸಮಯವನ್ನ  ಹೊರತುಪಡಿಸಿ ತಮ್ಮ ವ್ಯಕ್ತಿಗತ  ಸಮಯದಲ್ಲಿಯೂ ಕೆಲಸ ಮಾಡುತ್ತಿದ್ದಾರೆ.  ಇದರಿಂದ ಬಡವರಿಗೆ ಬಹಳ ಲಾಭವಾಗುತ್ತಿದೆ. ಒಂದು ರೀತಿಯ    ಜಾಗೃತಿ     ಕೂಡ ಬರುತ್ತದೆ. ಆದರೆ ನಾವು ಈ ಎಚ್ಚರಿಕೆಯನ್ನು  ಇನ್ನೂ ಹೆಚ್ಚಿಸಬೇಕು. 
 
ಸಾಮಾನ್ಯ ಮನುಷ್ಯನಿಗೆ ಶಿಕ್ಷಣವನ್ನು ಕೊಡಬೇಕು. ಎಷ್ಟು ಹೆಚ್ಚು ಶಿಕ್ಷಣವನ್ನು ಕೊಡುತ್ತೇವೆಯೋ ಅಷ್ಟು ಲಾಭವಾಗುತ್ತದೆ. ಹೆಚ್ಚಾಗಿ ನ್ಯಾಯಾಂಗದ   ಹೆಚ್ಚು ಸಮಯ ನಮ್ಮ ಮಧ್ಯೆಯೇ ಕಳೆದು ಹೋಗುತ್ತದೆ. ಎಲ್ಲಕ್ಕಿಂತ ದೊಡ್ಡ ಅರ್ಜಿದಾರ  ಸರ್ಕಾರವಾಗಿರುತ್ತದೆ, ಅಂದರೆ ಮೋದಿಯಲ್ಲ.   ಪ್ರತಿಯೊಂದು ಸಂದರ್ಭದಲ್ಲಿಯೂ ಸರ್ಕಾರ ಜಗಳವಾಡುತ್ತಿರುತ್ತದೆ.  ನಾನು ಯಾವಾಗಲೂ ಸರ್ಕಾರದ ಅಧಿಕಾರಿಗಳಿಗೆ ಹೇಳುತ್ತಿರುತ್ತೇನೆ.  ಒಬ್ಬ ಶಿಕ್ಷಕ ತನ್ನ ಹಕ್ಕಿಗಾಗಿ ಕೋರ್ಟಿಗೆ ಹೋಗಿ ನ್ಯಾಯ ಸಿಕ್ಕು ವಿಜಯಿಯಾದರೆ, ಅದೇ ರೀತಿಯ ಹತ್ತು ಸಾವಿರ ಶಿಕ್ಷಕರ ವ್ಯಾಜ್ಯಗಳನ್ನು ನಡೆಯುತ್ತಿರುತ್ತವೆ. ಅದನ್ನೇ ಆಧಾರವನ್ನಿಟ್ಟುಕೊಂಡು ಹತ್ತು ಸಾವಿರ  ಶಿಕ್ಷಕರವ್ಯಾಜ್ಯಗಳನ್ನು ಪರಿಹರಿಸಿ. 
 
ನೀವು ನ್ಯಾಯಾಂಗದ  ಭಾರವನ್ನು ಏಕೆ ಹೆಚ್ಚಿಸುತ್ತಿರುವಿರಿ.  ಅವರಿಗೆ ತಲೆಗೆ ಹೋಗುತ್ತಿ ದೆ ಇಲ್ಲವೋ ನನಗೆ ಗೊತ್ತಿಲ್ಲ. ಸಾಹೇಬ್ರೆ ಇದು ವೈಯಕ್ತಿಕ    ಸಮಸ್ಯೆಯಾಗಿತ್ತು  ಮತ್ತು ಕಾನೂನಿನ ವ್ಯಾಪ್ತಿಯಲ್ಲಿ  ವೈಯಕ್ತಿಕ  ಸಮಸ್ಯೆಗಾಗಿ ಬೇರೆ ಯಾರನ್ನೂ ಪರಿಗಣಿಸುವ ಹಾಗಿಲ್ಲ.  ನನಗಂತೂ ಗೊತ್ತಿಲ್ಲ, ಅದೇಕೋ ಇಂತಹ ಸೂಕ್ಷ್ಮಗಳು ನನಗೆ ಅರ್ಥವಾಗುವುದಿಲ್ಲ.  ಆದರೆ ನಾವು ಈ ಭಾರವನ್ನು ಹೇಗೆ ಕಡಿಮೆ ಮಾಡಬೇಕೆಂದು ನಾನು ತಿಳಿದುಕೊಳ್ಳುತ್ತಿದ್ದೇನೆ. ನಾನು ತಿಳಿದುಕೊಂಡಿರುವ ಇನ್ನೊಂದು ವಿಚಾರವೆಂದರೆ, ಬಹುಶಃ ಇಪ್ಪತ್ತೈದು ವರ್ಷಗಳ ಹಿಂದೆ ರಾಜಕೀಯವು ಇಷ್ಟು ಮಾಧ್ಯಮ   ನಿರ್ದೇಶಿತ ವಾಗಿರಲಿಲ್ಲ.  ಅಲ್ಲದೇ ಇದಕ್ಕಾಗಿ ಸಂಸತ್ತಿನಲ್ಲಿ ವಿಶೇಷವಾಗಿ ಸಂವಿಧಾನ ವಿಧಿ ನಿರ್ಮಾಣದ ಚರ್ಚೆಯಾಗುತ್ತಿತ್ತು, ಅವೆಲ್ಲವೂ ಹೆಚ್ಚಾಗಿ ಸಂವಿಧಾನದ ಬೆಳಕಿನಲ್ಲಿ ಭವಿಷ್ಯತ್ತಿನ ಉಪಕಾರಕ್ಕಾಗಿ ಮತ್ತು ಜನಸಾಮಾನ್ಯರ  ಅನುಕೂಲಕ್ಕಾಗಿ ಕೆಲವು ವ್ಯವಸ್ಥೆಗಳನ್ನು ರೂಪಿಸುವ ದಿಶೆಯಲ್ಲಿ ಕಾನೂನಿನ ಚರ್ಚೆಯ ವ್ಯಾಪ್ತಿಯು ಇರುತ್ತಿತ್ತು.  ಇಂದು ನಾವು ಸದನದಲ್ಲಿ ಚರ್ಚಿಸಿದರೆ ಅದರ ರೂಪವೇ ಬೇರೆಯಾಗಿರುತ್ತದೆ. ಯಾವ ಸರ್ಕಾರ ಅದನ್ನು ತಂದಿದೆ ಎನ್ನುವ ಆಧಾರದ ಮೇಲೆಯೇ ವಿರೋಧಪಕ್ಷದವರು  ಏನು ಹೇಳುತ್ತಾರೆಂಬುದು ತೀರ್ಮಾನವಾಗುತ್ತದೆ. ಒಂದು ವೇಳೆ ನಾವು ಅಲ್ಲಿ ಕುಳಿತರೆ ನಾವೂ ಅದನ್ನೇ ಹೇಳುತ್ತೇವೆ. ನಾವು ಇಲ್ಲಿ ಕುಳಿತರೆ ಅವರು ಇನ್ನೊಂದನ್ನು ಹೇಳುತ್ತಾರೆ. 
 
ಇದು ನಮ್ಮ ಪರಿಸ್ಥಿತಿಯಾಗಿದೆ. ಸ್ಥಾಯೀ  ಸಮಿತಿಗೆ  ವಿಷಯವು ಹೋದಲ್ಲಿ ಮೀಡಿಯಾದಲ್ಲಿ ಅದರ ವರದಿ ಬರುವುದಿಲ್ಲ.  ಅಲ್ಲಿ ಎಲ್ಲರೂ ಸೇರಿ ಹೀಗೆ ಮಾಡೋಣವೆಂದು ನಿರ್ಣಯಿಸುತ್ತಾರೆ. ವಿಧಿ ನಿಯಮಗಳನ್ನು ನಿರ್ಮಿಸುವ ಕಾನೂನುಗಳನ್ನು ರೂಪಿಸುವ ಈ ಸೂಕ್ಷ್ಮಗಳಲ್ಲಿ ಪ್ರತಿಭೆಯ ಹೂಡಿಕೆ  ಇರಬೇಕೆಂಬುದು ಈ ಸಮಯದ ಅನಿವಾರ್ಯ ಬೇಡಿಕೆಯಾಗಿದೆ.  ನಾವು ಎಷ್ಟು ಒಳ್ಳೆಯ ಕಾನೂನುಗಳನ್ನು ರೂಪಿಸುತ್ತೇವೆಯೋ, ನಾವು ನ್ಯಾಯ  ಕ್ಷೇತ್ರದಲ್ಲಿ ಬಹುಶಃ ಅಷ್ಟೇ ದೊಡ್ಡ ಸೇವೆ ಮಾಡಿದಂತಾಗುತ್ತದೆ. ಇದರ ಸಂಪೂರ್ಣ ಜವಾಬ್ದಾರಿ ಚುನಾಯಿತ ಸರ್ಕಾರದ್ದಾಗಿರುತ್ತದೆ. ನಮ್ಮದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ  ರಾಷ್ಟ್ರೀಯ  ಕಾನೂನು  ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಾವಂತ ಮಕ್ಕಳು ಓದಲು ಬರುತ್ತಿದ್ದಾರೆ.   ಈ ಮೊದಲು ಅವರು ಸಾಮಾನ್ಯ ಕಾಲೇಜುಗಳಲ್ಲಿ ಓದಿಕೊಂಡು ಅನಂತರ ಕಾನೂನು ಓದಲು ಬರುತ್ತಿದ್ದರು. ಇತ್ತೀಚಿಗೆ ಇದನ್ನು ಒಂದು ವೃತ್ತಿಯ  ರೂಪದಲ್ಲಿ ಸ್ವೀಕರಿಸಲಾಗುತ್ತಿದೆ. ಈ ವಿಶ್ವವಿದ್ಯಾಲಯ ಗಳಿಂದ ಅತ್ಯಂತ ಪ್ರತಿಭಾವಂತ ಯುವಕರು ಹೊರಬರುತ್ತಿರುವುದನ್ನು ನೋಡುತ್ತಿದ್ದೇವೆ. ಅವರಲ್ಲಿರುವಷ್ಟು ರಚನಾ  ಕೌಶಲ್ಯ   
 ಸಾಮರ್ಥ್ಯದ ವ್ಯಾಪ್ತಿಯನ್ನು ನಾವು ನೋಡುತ್ತಿದ್ದೇವೆ. 
 
ಈ  ರಚನಾ ಕೌಶಲ್ಯದ  ಮಟ್ಟದಲ್ಲಿಯೇ  ನಮಗೆ ಒಳ್ಳೆಯ ಸಾಮರ್ಥ್ಯ  ದೊರೆತರೆ ನಾವು ಒಳ್ಳೆಯ ಕಾನೂನುಗಳನ್ನು ರೂಪಿಸಬಹುದಾಗಿದೆ.  ಕಾನೂನಿನಲ್ಲಿ ಬದಲಾವಣೆ ಮಾಡುವುದಿದ್ದರೂ ಸಹ ಆ ವ್ಯಾಪ್ತಿಯಲ್ಲಿ ಅದು ಬರುತ್ತದೆ. ಹಾಗಾದಾಗ ತಾರತಮ್ಯ   ಅಥವಾ   ವ್ಯಾಖ್ಯೆಯ  ಅವಕಾಶ   ಕಡಿಮೆಯಾಗುತ್ತ ಹೋಗುತ್ತದೆ.  ಯಾವಾಗ ವ್ಯಾಖ್ಯೆ ಮತ್ತು  ತಾರತಮ್ಯ ದ    ವ್ಯಾಪ್ತಿ  ಕಡಿಮೆಯಾಗುವುದೋ ಆಗ ತನ್ನಿಂದ ತಾನೇ     ಕಪ್ಪು ಬಿಳುಪಾಗಿ  , ಇದು ನನ್ನ ಪಾಲಿನದ್ದು, ಇದು ನನಗೆ ಸಿಕ್ಕೇಸಿಗುತ್ತದೆ ಎಂದು ಅಧ್ಯಯನ ಮಾಡಿ ನಿರ್ಣಯಿಸಿಕೊಳ್ಳುತ್ತಾರೆ  . ಸಂದಿಗ್ಧತೆ ಇರುವುದಿಲ್ಲ.  ಆದರೆ ಇಂದೂ ಕೂಡ ಈ ಕೊರತೆ ಅನುಭವಕ್ಕೆ ಬರುತ್ತಿದೆ . ಇದನ್ನು ಪೂರ್ಣಗೊಳಿಸಬೇಕು.  ನಾವೆಲ್ಲರೂ ಸೇರಿ ಇದನ್ನು ಮಾಡಬೇಕು.  ಒಂದು ವೇಳೆ ನಾವಿದನ್ನು ಮಾಡಿದಲ್ಲಿ ಇನ್ನೂ ಚೆನ್ನಾಗಿ ಹೆಚ್ಚಿನ ದೇಶ ಸೇವೆ ಮಾಡಿದಂತಾಗುತ್ತದೆ.  ಈ ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೊಡುಗೆ ನೀಡಿದ  ದಿಲ್ಲಿ ಬಾರ್‌ಕೌನ್ಸಿಲ್‌ನ ಎಲ್ಲ ಮಹನೀಯರನ್ನು ನಾನಿಂದು ಸುವರ್ಣ ಮಹೋತ್ಸವದ    ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.  ಈ ಕೋರ್ಟಿಗೆ ಸೇವೆ ಸಲ್ಲಿಸಿದ ಅನೇಕ ನ್ಯಾಯಾಧೀಶರನ್ನು   ನಾನು ಅಭಿನಂದಿಸುತ್ತೇನೆ.  ಅನೇಕ ಶತಮಾನಗಳಿಂದ ಭಾರತದ ನ್ಯಾಯವ್ಯವಸ್ಥೆಯು ಶ್ರದ್ಧೆಯ ಸ್ಥಾನದಲ್ಲಿದೆ. 
 
ಸಾವಿರಾರು ವರ್ಷಗಳಿಂದ ನಾವಿದನ್ನು ಕೇಳುತ್ತಾ ಬಂದಿದ್ದೇವೆ ಮತ್ತು ಶಾಸ್ತ್ರಗಳಲ್ಲಿ ಓದುತ್ತಾ ಬಂದಿದ್ದೇವೆ. ಶ್ರದ್ಧೆಗೆ ತನ್ನದೇ ಆದ ಒಂದು ಸ್ಥಾನವಿದೆ. ಆ ಶ್ರದ್ಧೆಯ ಸ್ಥಾನಕ್ಕೆ ಧಕ್ಕೆ  ಬರಬಾರದು.  ಅದರ ಗೌರವ ಹೆಚ್ಚುತ್ತಾ ಹೋಗಬೇಕು. ಅದರ ಸಾಮರ್ಥ್ಯ ಹೆಚ್ಚುತ್ತಾ ಇರಬೇಕು. ಅದಕ್ಕಾಗಿ ಎಲ್ಲರೂ ಅನೇಕ ಕ್ಷೇತ್ರಗಳಲ್ಲಿದ್ದುಕೊಂಡು  ತಮ್ಮ-ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಸರ್ಕಾರದಲ್ಲಿರುವಂತಹ ಅಧಿಕಾರಿಗಳೂ ಸಹ ವಿಶೇಷವಾಗಿ ಕಾರ್ಯ ನಿರ್ವಹಿಸಬೇಕು. ಈ ಕಾರ್ಯಗಳನ್ನು ನಾವು ಮಾಡುತ್ತಿರುತ್ತೇವೆ, ಫಲಿತಾಂಶಗಳನ್ನು ಕೊಡುತ್ತಿರುತ್ತೇವೆ.
ತುಂಬಾ-ತುಂಬಾ ಧನ್ಯವಾದಗಳು.