ನನ್ನ ನಲ್ಮೆಯ ಪ್ರಜೆಗಳೆ,
ಈ ದೀಪಾವಳಿ ಹಬ್ಬದ ಋತುಮಾನವನ್ನು ಸಂತೋಷ ಹಾಗೂ ಹೊಸ ಭರವಸೆಯೊಂದಿಗೆ ಮುಗಿಸಿದ್ದೀರ ಎಂದು ನಾನು ಭಾವಿಸಿದ್ದೇನೆ. ಇಂದು ನಾನು ಕೆಲವು ಕಠಿಣ ವಿಷಯಗಳು ಮತ್ತು ಪ್ರಮುಖ ನಿರ್ಧಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ನಾನು ನಿಮ್ಮೆಲ್ಲರಿಗೂ ಇಂದು ಒಂದು ವಿಶೇಷ ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ. ನೀವು ನಮಗೆ ಅತಿದೊಡ್ಡ ಜವಾಬ್ದಾರಿಯನ್ನು ಹೊರಿಸಿದ 2014ರ ಮೇ ತಿಂಗಳಲ್ಲಿ ಇದ್ದ ಆರ್ಥಿಕ ಪರಿಸ್ಥಿತಿಯನ್ನು ಸ್ವಲ್ಪ ನೆನಪು ಮಾಡಿಕೊಳ್ಳಿ. ಬ್ರಿಕ್ಸ್ ರಾಷ್ಟ್ರಗಳ ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ ಬ್ರಿಕ್ಸ್ನಲ್ಲಿದ್ದ ’ಐ’ ಇಂಡಿಯಾ ಅಲುಗಾಡುತ್ತಿತ್ತು. ಅಲ್ಲಿಂದೀಚೆಗೆ ನಾವು ಎರಡು ವರ್ಷ ಭೀಕರ ಬರಗಾಲವನ್ನು ಕಂಡಿದ್ದೇವೆ. ಆದರೂ ಕಳೆದ ಎರಡೂವರೆ ವರ್ಷಗಳಲ್ಲಿ ಭಾರತದ ಎಲ್ಲ 125 ಕೋಟಿ ಜನರ ಬೆಂಬಲದೊಂದಿಗೆ ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ, ಭಾರತ ಅತ್ಯುತ್ತಮ ಸ್ಥಾನವನ್ನು ಕಾಯ್ದುಕೊಂಡಿದೆ. ಇದನ್ನು ಕೇವಲ ನಾವು ಮಾತ್ರ ಹೇಳುತ್ತಿಲ್ಲ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ಗಳೇ ಈ ಅಂಶವನ್ನು ಹೇಳುತ್ತಿವೆ.
ಅಭಿವೃದ್ಧಿಯ ಈ ನಮ್ಮ ಪ್ರಯತ್ನದಲ್ಲಿ ನಮ್ಮ ಗುರಿ – ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಆಗಿದೆ. ನಾವು ಎಲ್ಲ ಪ್ರಜೆಗಳಿಗಾಗಿ ಮತ್ತು ಆ ಪ್ರಜೆಗಳ ಅಭಿವೃದ್ಧಿಗಾಗಿ ಇದ್ದೇವೆ. ಈ ಸರ್ಕಾರ ಬಡವರಿಗಾಗಿ ಮೀಸಲು. ಇದು ಅವರ ಅಭಿವೃದ್ಧಿಗೆ ಬದ್ಧವಾಗಿದೆ. ಬಡತನ ನಿರ್ಮೂಲನೆಯ ನಮ್ಮ ಹೋರಾಟದಲ್ಲಿ ನಮ್ಮ ಪ್ರಮುಖ ಧ್ಯೇಯ ಬಡವರನ್ನು ಸಬಲೀಕರಣಗೊಳಿಸುವುದು ಮತ್ತು ಆರ್ಥಿಕ ಪ್ರಗತಿಯ ಲಾಭದಲ್ಲಿ ಅವರನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದಾಗಿದೆ.
ಪ್ರಧಾನಮಂತ್ರಿ ಜನ್ ಧನ್ ಯೋಜನೆ
ಜನ ಸುರಕ್ಷಾ ಯೋಜನೆ
ಸಣ್ಣ ಉದ್ದಿಮೆದಾರರಿಗಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆ
ದಲಿತ ಆದಿವಾಸಿ ಮತ್ತು ಮಹಿಳೆಯರಿಗಾಗಿ ಸ್ಟಾಂಡ್ ಅಪ್ ಇಂಡಿಯಾ ಕಾರ್ಯಕ್ರಮ
ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ಒದಗಿಸುವ ಪ್ರಧಾನಮಂತ್ರಿ ಉಜ್ವಲ ಯೋಜನೆ
ರೈತರ ಆದಾಯ ರಕ್ಷಣೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ
ರೈತರ ಬೆಳೆಗಳ ಇಳುವರಿ ಹೆಚ್ಚಿಸುವ ಭರವಸೆ ನೀಡುವ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ
ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಒದಗಿಸಿಕೊಡಲು
ಇ-ನ್ಯಾಮ್ ರಾಷ್ಟ್ರೀಯ ಮಾರುಕಟ್ಟೆ ಸ್ಥಳ ಯೋಜನೆ
——ಇವೆಲ್ಲ ಯೋಜನೆಗಳು ಆ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಾಗಿವೆ.
ಕಳೆದ ದಶಕಗಳಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ಭೀತಿ ಹೆಚ್ಚಾಗಿದೆ. ಇದು ಬಡತನವನ್ನು ನಿರ್ಮೂಲನೆ ಮಾಡುವ ನಮ್ಮ ಪ್ರಯತ್ನಗಳನ್ನು ದುರ್ಬಲಗೊಳಿಸಿದೆ. ಒಂದೆಡೆ ನಾವು ಆರ್ಥಿಕ ಪ್ರಗತಿ ದರದಲ್ಲಿ ಒಂದನೇ ಸ್ಥಾನದಲ್ಲಿದ್ದೇವೆ. ಮತ್ತೊಂದೆಡೆ ಎರಡು ವರ್ಷಗಳ ಹಿಂದಿನ ಜಾಗತಿಕ ಭ್ರಷ್ಟಾಚಾರ ರಾಂಕಿಂಗ್ ಪಟ್ಟಿಯಲ್ಲಿ ಭಾರತ ನೂರನೇ ಸ್ಥಾನದ ಹತ್ತಿರದಲ್ಲಿತ್ತು. ಹಲವು ಕ್ರಮಗಳನ್ನು ಕೈಗೊಂಡರೂ ಸಹ ನಾವು ಸದ್ಯಕ್ಕೆ 76ನೇ ಸ್ಥಾನವನ್ನು ತಲುಪಿದ್ದೇವೆ. ಇದು ನಿಜಕ್ಕೂ ಸುಧಾರಣೆಯೇ. ಇದು ಭ್ರಷ್ಟಾಚಾರ ಮತ್ತು ಕಪ್ಪುಹಣ ಎಷ್ಟರ ಮಟ್ಟಿಗೆ ಆಳವಾಗಿ ತನ್ನ ಬೇರುಗಳನ್ನು ಚಾಚಿಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಭ್ರಷ್ಟಾಚಾರದ ಪಿಡುಗು ಸಮಾಜದ ಕೆಲವು ವರ್ಗಗಳಲ್ಲಿ ಹರಡಿದ್ದು, ಅವರು ತಮ್ಮ ಸ್ವಂತ ಹಿತಾಸಕ್ತಿಗಾಗಿ ಅದರಲ್ಲಿ ತೊಡಗುತ್ತಿದ್ದಾರೆ. ಅವರು ಬಡವರು ಮತ್ತು ಶೋಷಿತ ಜನರ ಅನುಕೂಲಗಳನ್ನು ನಿರ್ಲಕ್ಷಿಸಿದ್ದಾರೆ. ಕೆಲವು ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಕಚೇರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಪ್ರಾಮಾಣಿಕ ಜನರು ಈ ಪಿಡುಗಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕೋಟ್ಯಾಂತರ ಸಾಮಾನ್ಯ ಪುರುಷರು ಮತ್ತು ಮಹಿಳೆಯರು ಅತ್ಯಂತ ಸ್ವಾಭಿಮಾನದಿಂದ ಬಾಳ್ವೆ ನಡೆಸುತ್ತಿದ್ದಾರೆ. ಬಡ ಆಟೋರಿಕ್ಷಾ ಚಾಲಕನೊಬ್ಬ ತನ್ನ ವಾಹನದಲ್ಲಿ ಬಿಟ್ಟುಹೋದ ಬೆಲೆ ಬಾಳುವ ಆಭರಣಗಳನ್ನು ಅದರ ನ್ಯಾಯಯುತ ಮಾಲಿಕನಿಗೆ ಮತ್ತೆ ನೀಡಿದ ಪ್ರಕರಣಗಳ ಬಗ್ಗೆ ನಾವು ಕೇಳಿದ್ದೇವೆ, ಅಲ್ಲದೆ ಟ್ಯಾಕ್ಸಿ ಚಾಲಕರು ತಮ್ಮ ಕಾರುಗಳಲ್ಲಿ ಬಿಟ್ಟುಹೋಗಿದ್ದ ಮೊಬೈಲ್ ಫೋನ್ಗಳನ್ನು ಅದರ ಮಾಲಿಕರನ್ನು ಹುಡುಕಿ ಅವರಿಗೆ ತಲುಪಿಸುವುದು ಮತ್ತು ಹೆಚ್ಚುವರಿ ಹಣ ನೀಡಿದ ಗ್ರಾಹಕನಿಗೆ ತರಕಾರಿ ಮಾರುವವ ಆ ಹೆಚ್ಚುವರಿ ಹಣವನ್ನು ವಾಪಸ್ ನೀಡಿರುವ ಪ್ರಕರಣಗಳ ಬಗ್ಗೆಯೂ ನಾವು ಕೇಳಿದ್ದೇವೆ.
ದೇಶದ ಅಭಿವೃದ್ಧಿಯ ಇತಿಹಾಸವನ್ನು ಗಮನಿಸಿದರೆ ಇದೀಗ ಕಠಿಣ ಹಾಗೂ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುವ ಅಗತ್ಯವಿದೆ ಎನಿಸುತ್ತಿದೆ. ದೇಶವನ್ನು ಹಲವು ವರ್ಷಗಳಿಂದ ಭ್ರಷ್ಟಾಚಾರ, ಕಪ್ಪುಹಣ ಮತ್ತು ಭಯೋತ್ಪಾದನೆಯಿಂದ ಗಬ್ಬೆದು ನಾರುತ್ತಿದೆ ಮತ್ತು ಇವುಗಳಿಂದಾಗಿ ಅಭಿವೃದ್ಧಿಯ ಓಟದಲ್ಲಿ ನಾವು ಹಿನ್ನಡೆ ಅನುಭವಿಸಬೇಕಾಗಿದೆ.
ಭಯೋತ್ಪಾದನೆ ಅತ್ಯಂತ ಅಪಾಯಕಾರಿ. ಹಲವರು ಅದರಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉಗ್ರಗಾಮಿಗಳಿಗೆ ಹೇಗೆ ಹಣ ಸಿಗುತ್ತದೆ ಎಂಬ ಬಗ್ಗೆ ನೀವು ಎಂದಾದರು ಕೇಳಿ ತಿಳಿದಿದ್ದೀರಾ? ಗಡಿಯಾಚೆಗಿನ ವಿರೋಧಿಗಳು ತಮ್ಮ ಕಾರ್ಯಾಚರಣೆ ಮೂಲಕ ನಕಲಿ ನೋಟುಗಳನ್ನು ಬಳಕೆ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಇದು ದಿನೇ ದಿನೇ ಹೆಚ್ಚಾಗುತ್ತಿದೆ. ಹಲವು ಸಂದರ್ಭಗಳಲ್ಲಿ ಈ ರೀತಿ ನಕಲಿ 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳ ಬಳಕೆ ಮಾಡುವವರನ್ನು ಬಂಧಿಸಲಾಗಿದೆ ಮತ್ತು ಅವರಿಂದ ಹಲವು ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಹೋದರ ಸಹೋದರಿಯರೇ,
ಒಂದೆಡೆ ನಾವು ಭಯೋತ್ಪಾದನೆ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ, ಇನ್ನೊಂದೆಡೆ ನಾವು ಭ್ರಷ್ಟಾಚಾರ ಮತ್ತು ಕಪ್ಪುಹಣ ಸವಾಲನ್ನು ಎದುರಿಸುತ್ತಿದ್ದೇವೆ. ನಾವು ಅಧಿಕಾರ ವಹಿಸಿಕೊಂಡ ಕೂಡಲೇ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸುವ ಮೂಲಕ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದ್ದೇವೆ. ಅಲ್ಲಿಂದೀಚೆಗೆ
*ವಿದೇಶದಲ್ಲಿರುವ ಕಪ್ಪುಹಣ ಘೋಷಣೆಗೆ 2015ರಲ್ಲಿ ಕಾನೂನಿಗೆ ಅಂಗೀಕಾರ ನೀಡಲಾಯಿತು.
*ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡು, ಆ ದೇಶಗಳ ಬ್ಯಾಂಕ್ಗಳ ಮಾಹಿತಿಯನ್ನು ಪಡೆಯುವ ಅಂಶವನ್ನು ಒಪ್ಪಂದದಲ್ಲಿ ಸೇರಿಸಲಾಗಿದೆ.
*ಬೇನಾಮಿ ವಹಿವಾಟುಗಳನ್ನು ನಿಯಂತ್ರಿಸಲು 2016ರ ಆಗಸ್ಟ್ನಿಂದ ಕಠಿಣ ಕಾನೂನನ್ನು ಜಾರಿಗೊಳಿಸಲಾಗಿದೆ. ಹಲವರು ತಾವು ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ವಿದೇಶದಲ್ಲಿ ಕಪ್ಪುಹಣದ ರೂಪದಲ್ಲಿ ತೊಡಗಿಸುತ್ತಿದ್ದರು.
*ಭಾರೀ ದಂಡ ಪಾವತಿಸಿದ ನಂತರ ಕಪ್ಪುಹಣ ಘೋಷಣೆಗೆ ಯೋಜನೆಯನ್ನು ಜಾರಿಗೊಳಿಸಲಾಯಿತು.
ನನ್ನ ನಲ್ಮೆಯ ದೇಶವಾಸಿಗಳೆ,
ಈ ಎಲ್ಲ ಕ್ರಮಗಳಿಂದಾಗಿ, ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಭ್ರಷ್ಟಾಚಾರಿಗಳಿಗೆ ಸೇರಿದ 1 ಲಕ್ಷದ 25 ಸಾವಿರ ಕೋಟಿ ಕಪ್ಪು ಹಣವನ್ನು ಬಹಿರಂಗಗೊಳಿಸಿದ್ದೇವೆ. ಪ್ರಾಮಾಣಿಕ ಜನರು ಭ್ರಷ್ಟಾಚಾರ, ಕಪ್ಪು ಹಣ, ಬೇನಾಮಿ ಆಸ್ತಿ, ಭಯೋತ್ಪಾದನೆ ಮತ್ತು ನಕಲಿ ನೋಟಿನ ವಿರುದ್ಧದ ಈ ಹೋರಾಟವನ್ನು ಮುಂದುವರಿಸಲು ಬಯಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ಹಾಸಿಗೆ ಕೆಳಗೆ ಕೋಟ್ಯಾಂತರ ರೂಪಾಯಿ ಕರೆನ್ಸಿ ನೋಟುಗಳಿದ್ದರೆ ಅಥವಾ ಗೋಣಿಚೀಲಗಳಲ್ಲಿ ನಗದು ಸಿಕ್ಕಿದಾಗ ಯಾವ ಪ್ರಾಮಾಣಿಕ ಜನರಿಗೆ ನೋವಾಗುವುದಿಲ್ಲ ಹೇಳಿ?
ಚಲಾವಣೆಯಲ್ಲಿರುವ ನಗದು ನೋಟುಗಳ ಪ್ರಮಾಣ ನೇರವಾಗಿ ಭ್ರಷ್ಟಾಚಾರದ ಪ್ರಮಾಣಕ್ಕೆ ಸಂಬಂಧ ಹೊಂದಿದೆ. ಭ್ರಷ್ಟ ಮಾರ್ಗಗಳ ಮೂಲಕ ಗಳಿಸಿರುವ ನಗದನ್ನು ಮಾರುಕಟ್ಟೆಗೆ ಬಿಟ್ಟಿರುವುದರಿಂದ ಹಣದುಬ್ಬರ ಸ್ಥಿತಿ ಮೊದಲಿಗಿಂತ ಕೆಟ್ಟ ಸ್ಥಿತಿಯಲ್ಲಿದೆ. ಅದು ಬಡ ಹಾಗೂ ಮಧ್ಯಮ ವರ್ಗದ ಜನರ ಖರೀದಿ ಶಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಭೂಮಿಯನ್ನು ಖರೀದಿಸುವಾಗ ಅಥವಾ ಮನೆಯನ್ನು ಖರೀದಿಸುವಾಗ ಚೆಕ್ನ ರೂಪದಲ್ಲಿ ನೀಡಿದ ಹಣವಲ್ಲದೆ, ಹೆಚ್ಚಿನ ಹಣವನ್ನು ನಗದು ರೂಪದಲ್ಲೇ ನೀಡಿ ಎಂಬ ಬೇಡಿಕೆ ಒಡ್ಡುತ್ತಿರುವುದು ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಇದರಿಂದಾಗಿ ಪ್ರಾಮಾಣಿಕ ಜನರು ಆಸ್ತಿ ಖರೀದಿಸುವಾಗ ನಿಜಕ್ಕೂ ಸಮಸ್ಯೆಯನ್ನೂ ಎದುರಿಸುತ್ತಾರೆ. ನಗದು ದುರ್ಬಳಕೆಯಿಂದಾಗಿ ಸರಕು ಮತ್ತು ಸೇವೆಗಳ ವೆಚ್ಚ, ಮನೆ, ಭೂಮಿ, ಉನ್ನತ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಮತ್ತಿತರ ವೆಚ್ಚಗಳ ದರ ಕೃತಕವಾಗಿ ಏರಿಕೆಯಾಗಲಿದೆ.
ಹೆಚ್ಚಿನ ಪ್ರಮಾಣದಲ್ಲಿ ನಗದು ಚಲಾವಣೆಯಲ್ಲಿರುವುದರಿಂದ ಹವಾಲಾ ವ್ಯಾಪಾರ ಹೆಚ್ಚಾಗಲಿದ್ದು, ಅದು ಕಪ್ಪು ಹಣ ಮತ್ತು ಶಸ್ತ್ರಾಸ್ತ್ರಗಳ ಅಕ್ರಮ ವ್ಯಾಪಾರಕ್ಕೆ ನೇರ ಸಂಬಂಧ ಹೊಂದಿದೆ. ಹಲವು ವರ್ಷಗಳಿಂದ ಚುನಾವಣೆಗಳಲ್ಲಿ ಕಪ್ಪು ಹಣದ ಪಾತ್ರದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಸಹೋದರ ಮತ್ತು ಸಹೋದರಿಯರೇ,
ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ನಿಯಂತ್ರಿಸುವ ಸಲುವಾಗಿ ನಾವು ಪ್ರಸ್ತುತ ಚಲಾವಣೆಯಲ್ಲಿರುವ ಐದು ನೂರು ರೂಪಾಯಿ ಹಾಗೂ ಒಂದು ಸಾವಿರ ರೂಪಾಯಿ ನೋಟುಗಳನ್ನು ಇಂದು ಮಧ್ಯರಾತ್ರಿಯಿಂದ ಅಂದರೆ, 2016ರ ನವೆಂಬರ್ 8ರಿಂದ ರದ್ದುಗೊಳಿಸಲು ನಿರ್ಧರಿಸಿದ್ದೇವೆ, ಆ ನೋಟುಗಳಿಗೆ ಅಧಿಕೃತ ಮಾನ್ಯತೆ ಇರುವುದಿಲ್ಲ. ಅದರರ್ಥ ಮಧ್ಯರಾತ್ರಿಯ ನಂತರ ಆ ನೋಟುಗಳು ಯಾವುದೇ ರೀತಿಯ ವಹಿವಾಟುಗಳಲ್ಲೂ ಬಳಕೆ ಮಾಡುವಂತಿಲ್ಲ. ಐದು ನೂರು ರೂಪಾಯಿ ಮತ್ತು ಸಾವಿರ ರೂಪಾಯಿ ನೋಟುಗಳನ್ನು ಹೊಂದಿರುವ ರಾಷ್ಟ್ರ ವಿರೋಧಿ ಮತ್ತು ಸಮಾಜ ಘಾತುಕ ಶಕ್ತಿಗಳಿಗೆ ಆ ನೋಟುಗಳು ಇನ್ನು ವ್ಯರ್ಥ ಕಾಗದವಾಗಲಿದೆ. ಎಲ್ಲ ಪ್ರಾಮಾಣಿಕ ಮತ್ತು ಕಷ್ಟಪಟ್ಟು ದುಡಿಯುವ ಜನರ ಹಿತವನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು. ಒಂದು ನೂರು ರೂಪಾಯಿ, ಐವತ್ತು, ಇಪ್ಪತ್ತು, ಹತ್ತು, ಐದು, ಎರಡು ಮತ್ತು ಒಂದು ರೂಪಾಯಿ ನೋಟುಗಳು ಮತ್ತು ನಾಣ್ಯಗಳಿಗೆ ಅಧಿಕೃತ ಮಾನ್ಯತೆ ಇರುತ್ತದೆ ಮತ್ತು ಅವುಗಳ ಚಲಾವಣೆಗೆ ಯಾವುದೇ ತೊಂದರೆ ಇಲ್ಲ ಎಂದು ನಾನು ಭರವಸೆ ನೀಡುತ್ತಿದ್ದೇನೆ.
ಈ ಕ್ರಮ ನಕಲಿ ನೋಟು, ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಸಾಮಾನ್ಯ ಜನರು ನಡೆಸುತ್ತಿರುವ ಹೋರಾಟಕ್ಕೆ ಬಲ ನೀಡುವುದಾಗಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಆಗಬಹುದಾದ ಕಷ್ಟಗಳನ್ನು ಕಡಿಮೆಗೊಳಿಸಲು, ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
1. ಐದು ನೂರು ಅಥವಾ ಸಾವಿರ ರೂಪಾಯಿಗಳನ್ನು ನೋಟುಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ಬ್ಯಾಂಕುಗಳಲ್ಲಿ ಅಥವಾ ಅಂಚೆ ಕಚೇರಿಗಳಲ್ಲಿ ಯಾವುದೇ ಮಿತಿ ಇಲ್ಲದೆ ನವೆಂಬರ್ 10ರಿಂದ 2016ರ ಡಿಸೆಂಬರ್ 30ರೊಳಗೆ ಠೇವಣಿ ಮಾಡಬಹುದು.
2. ಹಾಗಾಗಿ 50 ದಿನಗಳು ನಿಮಗೆ ನೋಟುಗಳನ್ನು ಠೇವಣಿ ಮಾಡಲು ಅವಕಾಶ ಸಿಗುತ್ತದೆ ಮತ್ತು ನೀವು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
3. ನಿಮ್ಮ ಹಣ ನಿಮ್ಮದೇ ಆಗಿರುತ್ತದೆ. ಈ ಅಂಶದ ಬಗ್ಗೆ ನೀವು ಚಿಂತೆಗೊಳಗಾಗಬೇಕಿಲ್ಲ.
4. ನೀವು ನಿಮ್ಮ ಹಣವನ್ನು ಖಾತೆಯಲ್ಲಿ ಠೇವಣಿ ಮಾಡಿದ ಮೇಲೆ, ನಿಮಗೆ ಅಗತ್ಯಬಿದ್ದಾಗ ಅದನ್ನು ಪುನಃ ಪಡೆಯಬಹುದು.
5. ಹೊಸ ನೋಟುಗಳ ಪೂರೈಕೆಯನ್ನು ಗಮನದಲ್ಲಿರಿಸಿಕೊಂಡು, ಮೊದಲ ಕೆಲವು ದಿನಗಳಲ್ಲಿ ದಿನಕ್ಕೆ 10 ಸಾವಿರ ರೂಪಾಯಿಗಳನ್ನು ಮತ್ತು ವಾರಕ್ಕೆ 20 ಸಾವಿರ ರೂಪಾಯಿಗಳ ಮಿತಿ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮಿತಿಯನ್ನು ಹೆಚ್ಚಿಸಲಾಗುವುದು.
6. ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಿದ ನಂತರ, ನಿಮಗೆ ಮತ್ತೊಂದು ಸೌಕರ್ಯವೂ ಇದೆ.
7. ನಿಮ್ಮ ತುರ್ತು ಅಗತ್ಯತೆಗಳಿಗೆ ನೀವು ಸಮೀಪದ ಯಾವುದೇ ಬ್ಯಾಂಕ್ ಅಥವಾ ಯಾವುದೇ ಅಂಚೆ ಕಚೇರಿ ಅಥವಾ ಉಪ ಅಂಚೆ ಕಚೇರಿಗೆ ಹೋಗಿ ನಿಮ್ಮ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಪ್ಯಾನ್ಕಾರ್ಡ್ ಅಥವಾ ಇತರೆ ಯಾವುದೇ ಅಧಿಕೃತ ದಾಖಲೆಗಳನ್ನು ನೀಡಿ ನೀವು ಐದು ನೂರು ರೂಪಾಯಿ ಅಥವಾ ಒಂದು ಸಾವಿರ ರೂಪಾಯಿಯ ಹಳೆಯ ನೋಟುಗಳನ್ನು ನೀಡಿ ಹೊಸ ನೋಟುಗಳನ್ನು ಪಡೆದುಕೊಳ್ಳಬಹುದು.
8. ನವೆಂಬರ್ 10ರಿಂದ 24ರವರೆಗೆ ಆ ರೀತಿ ಹಳೆಯ ನೋಟುಗಳ ಬದಲಿಗೆ ಹೊಸ ನೋಟುಗಳನ್ನು ಪಡೆಯಲು ನಾಲ್ಕು ಸಾವಿರ ರೂಪಾಯಿಗಳವರೆಗೆ ಮಿತಿ ಇರುತ್ತದೆ. ನವೆಂಬರ್ 25ರಿಂದ ಡಿಸೆಂಬರ್ 30ರವರೆಗೆ ಆ ಮಿತಿಯನ್ನು ಹೆಚ್ಚಿಸಲಾಗುವುದು.
9. ಯಾವುದಾದರೂ ಕಾರಣಕ್ಕೆ 2016ರ ಡಿಸೆಂಬರ್ 30ರೊಳಗೆ ಹಳೆಯ ಐದು ನೂರು ಅಥವಾ ಒಂದು ಸಾವಿರ ರೂಪಾಯಿ ನೋಟುಗಳನ್ನು ಠೇವಣಿ ಮಾಡಲಾಗದಿದ್ದರೆ.
10. ಅಂತಹವರು 2017ರ ಮಾರ್ಚ್ 31ರೊಳಗೆ ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಹಳೆಯ ನೋಟುಗಳನ್ನು ಠೇವಣಿ ಮಾಡಬಹುದು. ಆದರೆ ನೋಟುಗಳ ಜತೆ ಪ್ರಮಾಣಪತ್ರ ಸಲ್ಲಿಸಬೇಕು.
11. ನವೆಂಬರ್ 9 ಹಾಗೂ ನವೆಂಬರ್ 10ರಂದು ಕೆಲವು ಸ್ಥಳಗಳಲ್ಲಿ ಎಟಿಎಂಗಳು ಕೆಲಸ ಮಾಡದೇ ಇರಬಹುದು. ಆರಂಭದ ಕೆಲವು ದಿನಗಳಲ್ಲಿ, ದಿನವೊಂದಕ್ಕೆ ಒಂದು ಕಾರ್ಡ್ನಿಂದ ಎರಡು ಸಾವಿರ ರೂಪಾಯಿ ಮಾತ್ರ ಡ್ರಾ ಮಾಡಬಹುದು.
12. ಕೆಲವು ದಿನಗಳ ಬಳಿಕ ಈ ಮಿತಿಯನ್ನು ನಾಲ್ಕು ಸಾವಿರಕ್ಕೆ ಹೆಚ್ಚಿಸಲಾಗುವುದು.
13. ಮಧ್ಯರಾತ್ರಿಯ ನಂತರ ಐದು ನೂರು ಮತ್ತು ಒಂದು ಸಾವಿರ ರೂಪಾಯಿಗಳ ನೋಟುಗಳಿಗೆ ಅಧಿಕೃತ ಚಲಾವಣೆ ಇರುವುದಿಲ್ಲ. ಆದರೆ, ಮಾನವೀಯತೆ ದೃಷ್ಟಿಯಿಂದ ಮತ್ತು ನಾಗರಿಕರಿಗೆ ಆಗಬಹುದಾದ ಕಷ್ಟಗಳನ್ನು ನಿವಾರಿಸಲು ನವೆಂಬರ್ 11 ರ ಮಧ್ಯರಾತ್ರಿವರೆಗೆ, ಮೊದಲ 72 ಗಂಟೆಗಳ ಕಾಲ ಕೆಲವು ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
14. ಈ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಲ್ ಪಾವತಿಗೆ ಹಳೆಯ ಐದು ನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳನ್ನು ಸ್ವೀಕರಿಸಲಾಗುವುದು.
15. ಇದು ಯಾವ ಕುಟುಂಬಗಳಲ್ಲಿನ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗಿದ್ದಾರೋ ಅಂತಹವರಿಗೆ ನೆರವಾಗಲು.
16. ವೈದ್ಯರು ನೀಡಿರುವ ಚೀಟಿ ಆಧರಿಸಿ ಸರ್ಕಾರಿ ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಔಷಧ ಖರೀದಿಗೆ ಹಳೆಯ ನೋಟುಗಳನ್ನು ಸ್ವೀಕರಿಸಲಾಗುವುದು.
17. 72 ಗಂಟೆಗಳವರೆಗೆ ಅಂದರೆ ನವೆಂಬರ್ 11ರ ಮಧ್ಯರಾತ್ರಿವರೆಗೆ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ, ಸರ್ಕಾರಿ ಬಸ್ಗಳಲ್ಲಿ ಟಿಕೆಟ್ ಕಾಯ್ದಿರಿಸಲು ಮತ್ತು ವಿಮಾನ ನಿಲ್ದಾಣಗಳಲ್ಲಿ ವಿಮಾನ ಟಿಕೆಟ್ ಕಾಯ್ದಿರಿಸಲು ಹಳೆಯ ನೋಟುಗಳನ್ನು ಬಳಕೆ ಮಾಡಬಹುದು. ಈ ಸಂದರ್ಭದಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
18. 72 ಗಂಟೆಗಳ ಕಾಲ ಹಳೆಯ ಐದು ನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳನ್ನು ಈ ಕೆಳಗಿನ ಸ್ಥಳಗಳಲ್ಲಿಯೂ ಸ್ವೀಕರಿಸಲಾಗುವುದು.
*ಸಾರ್ವಜನಿಕ ವಲಯದ ತೈಲ ಕಂಪನಿಗಳ ಅಧಿಕೃತ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ಅನಿಲ ಬಂಕ್ಗಳಲ್ಲಿ.
*ರಾಜ್ಯ ಮತ್ತು ಕೇಂದ್ರ ಸರ್ಕಾರಿ ಒಡೆತನದ ಗ್ರಾಹಕ ಸಹಕಾರಿ ಮಳಿಗೆಗಳಲ್ಲಿ.
*ರಾಜ್ಯ ಸರ್ಕಾರದ ಅಧಿಕೃತ ಹಾಲಿನ ಬೂತ್ಗಳಲ್ಲಿ.
*ಚಿತಾಗಾರ ಮತ್ತು ರುದ್ರಭೂಮಿಗಳಲ್ಲಿ.
ಈ ಎಲ್ಲ ಕಡೆ ಹಳೆಯ ನೋಟುಗಳ ಸಂಗ್ರಹ ಮತ್ತು ದಾಸ್ತಾನಿನ ಬಗಗೆ ದಾಖಲೆಗಳನ್ನು ನಿರ್ವಹಿಸಬೇಕು.
19. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರಿಗೆ ಐದು ನೂರು ಮತ್ತು ಒಂದು ಸಾವಿರ ರೂಪಾಯಿಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಆದರೆ ಅದಕ್ಕೆ ಐದು ಸಾವಿರ ರೂಪಾಯಿಗಳ ಮಿತಿ ಇದೆ. ಹಳೆಯ ನೋಟುಗಳನ್ನು ನೀಡಿ ಹೊಸ ನೋಟುಗಳನ್ನು ಪಡೆದುಕೊಳ್ಳಬಹುದು.
20. ವಿದೇಶಿ ಪ್ರವಾಸಿಗರು ಗರಿಷ್ಠ 5,000 ಮೀರದಂತೆ ಹಳೆಯ ನೋಟುಗಳನ್ನು ನೀಡಿ, ಹೊಸ ನೋಟುಗಳನ್ನು ಪಡೆದುಕೊಳ್ಳಲು ಅವಕಾಶವಿದೆ.
21. ಇಲ್ಲಿ ನಾನು ಒಂದು ಅಂಶವನ್ನು ಉಲ್ಲೇಖಿಸಲು ಬಯಸುತ್ತೇನೆ, ಈ ಇಡೀ ಪ್ರಕ್ರಿಯೆಯಲ್ಲಿ ಈ ಅಂಶಕ್ಕೆ ಹೆಚ್ಚಿನ ಒತ್ತು ನೀಡಲು ಇಚ್ಚಿಸುತ್ತೇನೆ, ಅಂದೆಂದರೆ, ಚೆಕ್, ಡಿಮ್ಯಾಂಡ್ ಡ್ರಾಫ್ಟ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ಗಳ ಮೂಲಕ ಮತ್ತು ವಿದ್ಯುನ್ಮಾನ ಪಾವತಿ ವರ್ಗಾವಣೆಗಳನ್ನು , ವಹಿವಾಟುಗಳನ್ನು ನಡೆಸಲು ಯಾವುದೇ ನಿರ್ಬಂಧಗಳಿಲ್ಲ.
ಸಹೋದರ ಮತ್ತು ಸಹೋದರಿಯರೇ,
ಈ ಎಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಪ್ರಾಮಾಣಿಕ ಜನರು ಕೆಲವು ತಾತ್ಕಾಲಿಕ ಕಷ್ಟಗಳು ಎದುರಿಸಬೇಕಾಗುತ್ತದೆ. ಹಿಂದಿನ ಅನುಭವಗಳಿಂದ ವೇದ್ಯವಾಗಿರುವ ಸಂಗತಿ ಎಂದರೆ, ರಾಷ್ಟ್ರದ ಹಿತಕ್ಕಾಗಿ ಸಾಮಾನ್ಯ ಜನರು ಸದಾ ತ್ಯಾಗವನ್ನು ಮಾಡಲು ಮತ್ತು ಕಷ್ಟಗಳನ್ನು ಎದುರಿಸಲು ಸಿದ್ದರಿರುತ್ತಾರೆ ಎಂದು. ಬಡ ವಿಧವೆ ಎಲ್ಪಿಜಿ ಸಬ್ಸಿಡಿ ತ್ಯಜಿಸಿದಾಗ, ನಿವೃತ್ತ ಶಾಲಾ ಶಿಕ್ಷಕ ತನ್ನ ಪಿಂಚಣಿ ಹಣದಲ್ಲಿ ಸ್ವಚ್ಛ ಭಾರತ್ ಯೋಜನೆಗೆ ದೇಣಿಗೆ ನೀಡಿದಾಗ, ಬಡ ಆದಿವಾಸಿ ಮಹಿಳೆ ಶೌಚಾಲಯ ನಿರ್ಮಾಣಕ್ಕಾಗಿ ಮೇಕೆಗಳನ್ನು ಮಾರಿದ್ದು, ಒಬ್ಬ ಯೋಧ ತನ್ನ ಇಡೀ ಗ್ರಾಮವನ್ನು ಶುಚಿಗೊಳಿಸಲು 57 ಸಾವಿರ ರೂಪಾಯಿ ದೇಣಿಗೆ ನೀಡಿದ್ದು ನೋಡಿದ್ದೇವೆ. ದೇಶದ ಅಭಿವೃದ್ಧಿಗೆ ಉಪಯುಕ್ತವಾಗುವಂತಹ ಯಾವುದೇ ಕೆಲಸಗಳನ್ನು ಮಾಡಲೂ ಸಹ ನಮ್ಮ ಸಾಮಾನ್ಯ ಜನರು ಬದ್ದರಾಗಿದ್ದಾರೆ.
ಭ್ರಷ್ಟಾಚಾರ, ನಕಲಿ ನೋಟು, ಕಪ್ಪು ಹಣ ಮತ್ತು ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ, ದೇಶವನ್ನು ಶುದ್ಧೀಕರಣಗೊಳಿಸುವ ಈ ಚಳವಳಿಯಲ್ಲಿ ನಮ್ಮ ಜನರು ಕೆಲವು ದಿನಗಳ ಕಾಲ ಕಷ್ಟಗಳನ್ನು ಸಹಿಸಿಕೊಳ್ಳುವುದಿಲ್ಲವೇ? ದೇಶದ ಪ್ರತಿಯೊಬ್ಬರೂ ಸಹ ಎದ್ದು ನಿಂತು ಈ ಮಹಾಯಜ್ಞ’ದಲ್ಲಿ ಭಾಗವಹಿಸುತ್ತಾರೆ ಎಂಬ ನಂಬಿಕೆ ನನಗಿದೆ. ನನ್ನ ನಲ್ಮೆಯ ದೇಶವಾಸಿಗಳೇ, ದೀಪಾವಳಿ ಹಬ್ಬದ ನಂತರ ಇದೀಗ ದೇಶದಲ್ಲಿ ನಡೆಯುತ್ತಿರುವ ಇನಾಮ್ದಾರಿ ಕ ಉತ್ಸವದಲ್ಲಿ ಭಾಗವಹಿಸಿ, ಪ್ರಾಮಾಣಿಕತೆಯ ಈ ಪರ್ವ, ಏಕ್ಯತೆಯ ಸಂಭ್ರಮ ಮತ್ತು ಇದು ವಿಶ್ವಾಸಾರ್ಹತೆಯ ಸಂಕೇತ.
ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ಸರ್ಕಾರಗಳು, ಸಮಾಜ ಸೇವಾ ಸಂಘಟನೆಗಳು, ಮಾಧ್ಯಮ ಮತ್ತು ಸಮಾಜದ ಎಲ್ಲ ವರ್ಗಗಳು ಇದರಲ್ಲಿ ಭಾರಿ ಉತ್ಸಾಹದಿಂದ ಭಾಗವಹಿಸುತ್ತವೆ ಮತ್ತು ಇದನ್ನು ಯಶಸ್ವಿಗೊಳಿಸುತ್ತವೆ ಎಂದು ನಾನು ಭರವಸೆ ಹೊಂದಿದ್ದೇನೆ.
ನಮ್ಮ ಪ್ರೀತಿಯ ದೇಶವಾಸಿಗಳೇ,
ಈ ಪ್ರಕ್ರಿಯೆಯಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದು ಅತಿ ಮುಖ್ಯ. ನಾನು ಈಗಷ್ಟೇ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ಎಲ್ಲ ಬ್ಯಾಂಕುಗಳು, ಅಂಚೆ ಕಚೇರಿಗಳು, ರೈಲ್ವೆ, ಆಸ್ಪತ್ರೆ ಮತ್ತು ಇತರೆ ಸಂಸ್ಥೆಗಳಿಗೆ ಮಾಹಿತಿ ನೀಡುತ್ತಿದ್ದೇನೆ. ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ ಮತ್ತು ಅಂಚೆ ಕಚೇರಿಗಳು ಅತ್ಯಲ್ಪ ಅವಧಿಯಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸಹಜವಾಗಿಯೇ ಅದಕ್ಕೆ ಸಮಯದ ಅಗತ್ಯತೆ ಇದೆ. ಆದ್ದರಿಂದ ನವೆಂಬರ್ 9ರಂದು ಎಲ್ಲ ಬ್ಯಾಂಕುಗಳಲ್ಲಿ ಸಾರ್ವಜನಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ಇದರಿಂದ ನಿಮಗೆ ಸ್ವಲ್ಪ ಕಷ್ಟವಾಗಬಹುದು, ರಾಷ್ಟ್ರೀಯ ಪ್ರಾಮುಖ್ಯತೆಯ ಈ ಬಹುದೊಡ್ಡ ಕಾರ್ಯವನ್ನು ಬ್ಯಾಂಕುಗಳು ಹಾಗೂ ಅಂಚೆ ಕಚೇರಿಗಳು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಿವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಆದರೂ, ನಾನು ನಿಮ್ಮಲ್ಲಿ ಮನವಿ ಮಾಡುವುದೇನೆಂದರೆ – ಬ್ಯಾಂಕ್ಗಳು ಮತ್ತು ಅಂಚೆ ಕಚೇರಿಯ ಸಿಬ್ಬಂದಿಗಳಿಗೆ ಈ ಸವಾಲನ್ನು ಅತ್ಯಂತ ಧೈರ್ಯ ಮತ್ತು ಬದ್ಧತೆಯಿಂದ ಎದುರಿಸಲು ಸಹಕರಿಸಿ ಎಂದು.
ನನ್ನ ನಲ್ಮೆಯ ಪ್ರಜೆಗಳೇ,
ಕಾಲಕಾಲಕ್ಕೆ ಕರೆನ್ಸಿ ನೋಟುಗಳ ಅಗತ್ಯತೆಯನ್ನು ಆಧರಿಸಿ, ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರದ ಅನುಮತಿ ಪಡೆದು, ಅಧಿಕ ಮೌಲ್ಯದ ಹೊಸ ನೋಟುಗಳನ್ನು ಪರಿಚಯಿಸುತ್ತಿದೆ. 2014ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 5 ಸಾವಿರ ರೂಪಾಯಿ ಮತ್ತು 10 ಸಾವಿರ ರೂಪಾಯಿ ನೋಟುಗಳನ್ನು ಮುದ್ರಿಸಲು ಶಿಫಾರಸು ಮಾಡಿತ್ತು. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಆ ಪ್ರಸ್ತಾವವನ್ನು ಒಪ್ಪಲಿಲ್ಲ. ಇದೀಗ ಆ ಪ್ರಕ್ರಿಯೆಯ ಭಾಗವಾಗಿ ಆರ್ಬಿಐ ಶಿಫಾರಸು ಮಾಡಿದ್ದ 2 ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಹೊಸ 500 ರೂಪಾಯಿ ಮತ್ತು 2000 ರೂಪಾಯಿ ಮೌಲ್ಯದ ನೋಟುಗಳು ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಒಳಗೊಂಡಿರುತ್ತವೆ. ಅವುಗಳನ್ನು ಪರಿಚಯಿಸಲಾಗುವುದು. ಹಿಂದಿನ ಅನುಭವಗಳನ್ನು ಆಧರಿಸಿ ಭಾರತೀಯ ರಿಸರ್ವ್ ಬ್ಯಾಂಕ್, ಒಟ್ಟಾರೆ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳಲ್ಲೇ ಅಧಿಕ ಮೌಲ್ಯದ ನೋಟುಗಳ ಪ್ರಮಾಣವನ್ನು ಮಿತಿಗೊಳಿಸುವ ವ್ಯವಸ್ಥೆ ಮಾಡಲಿದೆ.
ದೇಶದ ಇತಿಹಾಸದಲ್ಲಿ ಕೆಲವು ಸಂದರ್ಭಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಿಗೆ ನಾವು ಭಾಗಿಯಾಗಬೇಕು ಎಂದು ಪ್ರತಿಯೊಬ್ಬ ಪ್ರಜೆಯೂ ಆಶಿಸುತ್ತಾರೆ. ಆ ಮೂಲಕ ಅವರು ದೇಶದ ಪ್ರಗತಿಗೆ ಕೊಡುಗೆಯನ್ನು ನೀಡಲು ಬಯಸುತ್ತಾರೆ, ಅಂತಹ ಸಂದರ್ಭಗಳು ಅತಿ ವಿರಳ. ಇದೀಗ ದೇಶದ ಪ್ರತಿಯೊಬ್ಬ ಪ್ರಜೆಗೂ ಭ್ರಷ್ಟಾಚಾರ, ಕಪ್ಪುಹಣ ಮತ್ತು ನಕಲಿ ನೋಟಿನ ಪಿಡುಗಿನ ವಿರುದ್ಧದ ’ಮಹಾಯಜ್ಞ’ದಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದೇವೆ. ನೀವು ಈ ಆಂದೋಲನಕ್ಕೆ ಎಷ್ಟು ಸಹಕರಿಸುತ್ತೀರೋ ಅಷ್ಟು ಒಳ್ಳೆಯ ಯಶಸ್ಸು ಸಿಗಲಿದೆ.
ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಜೀವನದ ಅಂಗವನ್ನಾಗಿ ಸ್ವೀಕರಿಸಿರುವವರಿಗೆ ಇದು ಆತಂಕ ತರುವ ಸಂಗತಿ. ಆ ರೀತಿಯ ಯೋಚನೆಗಳು ನಮ್ಮ ರಾಜಕೀಯ ಆಡಳಿತ ಮತ್ತು ಸಮಾಜಕ್ಕೆ ಗೆದ್ದಲಿನಂತೆ ಅಂಟಿಕೊಂಡಿವೆ. ನಮ್ಮ ಯಾವುದೇ ಸಾರ್ವಜನಿಕ ಸಂಸ್ಥೆಗಳು ಇದರಿಂದ ಮುಕ್ತವಾಗಿಲ್ಲ. ಆಗಿಂದ್ದಾಗ್ಗೆ ಸಾಮಾನ್ಯ ಜನರು ಅಪ್ರಮಾಣಿಕತೆಯನ್ನು ಒಪ್ಪಿಕೊಳ್ಳುವುದು ಮತ್ತು ತೊಂದರೆಗಳನ್ನು ಅನುಭವಿಸುವುದರ ನಡುವೆ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಅಂತಹ ಸಂದರ್ಭಗಳಲ್ಲಿ ಅವರು ಸದಾ ತೊಂದರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜನರು ಎಂದಿಗೂ ಅಪ್ರಮಾಣಿಕತೆಯನ್ನು ಬೆಂಬಲಿಸುವುದಿಲ್ಲ. ನೀವು ದೀಪಾವಳಿಯ ನಂತರ ಹೇಗೆ ನಿಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿದ್ದೀರೋ ಅದೇ ರೀತಿ ನಮ್ಮ ದೇಶವನ್ನು ಶುದ್ಧೀಕರಣಗೊಳಿಸುವ ಈ ಶ್ರೇಷ್ಠ ತ್ಯಾಗಕ್ಕೆ ನೀವು ಕೊಡುಗೆ ನೀಡಬೇಕು ಎಂದು ಮತ್ತೊಮ್ಮೆ ಆಹ್ವಾನಿಸುತ್ತೇನೆ.
ತಾತ್ಕಾಲಿಕ ತೊಂದರೆಗಳನ್ನು ನಿರ್ಲಕ್ಷಿಸೋಣ.
ಐಕ್ಯತೆ ಮತ್ತು ವಿಶ್ವಾಸಾರ್ಹತೆಯ ಈ ಹಬ್ಬದಲ್ಲಿ ಎಲ್ಲರೂ ಭಾಗಿಯಾಗೋಣ.
ಮುಂದಿನ ತಲೆಮಾರಿನ ಜನರು ಸ್ವಾಭಿಮಾನದಿಂದ ಬದುಕುವಂತೆ ಮಾಡೋಣ.
ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಹೋರಾಡೋಣ.
ರಾಷ್ಟ್ರದ ಸಂಪತ್ತಿನ ಪ್ರಯೋಜನ ಬಡವರಿಗೆ ತಲುಪುವಂತೆ ಮಾಡೋಣ.
ಕಾನೂನು ಪರಿಪಾಲಿಸುವ ನಾಗರಿಕರಿಗೆ ತಮ್ಮ ಪಾಲನ್ನು ದೊರಕಿಸಿಕೊಡೋಣ.
ಈ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂದು ನನಗೆ ಭರವಸೆ ಇದೆ ಮತ್ತು ದೇಶದ 125 ಕೋಟಿ ಜನರಲ್ಲಿ ನನಗೆ ನಂಬಿಕೆ ಇದೆ.
ತುಂಬಾ ತುಂಬಾ ಧನ್ಯವಾದಗಳು
ನಮಸ್ಕಾರ
ಭಾರತ್ ಮಾತಾ ಕಿ ಜೈ
पिछले ढाई वर्षों में सवा सौ करोड़ देशवासियों के सहयोग से आज भारत ने ग्लोबल इकॉनमी में एक “ब्राइट स्पॉट” के रूप में उपस्तिथि दर्ज कराई है: PM
— PMO India (@PMOIndia) November 8, 2016
यह सरकार गरीबों को समर्पित है और समर्पित रहेगी : PM @narendramodi
— PMO India (@PMOIndia) November 8, 2016
देश में भ्रष्टाचार और कला धन जैसी बीमारियों ने अपना जड़ जमा लिया है और देश से गरीबी हटाने में ये सबसे बड़ी बाधा है: PM @narendramodi
— PMO India (@PMOIndia) November 8, 2016
हर देश के विकास के इतिहास में ऐसे क्षण आये हैं जब एक शक्तिशाली और निर्णायक कदम की आवश्यकता महसूस की गई : PM @narendramodi
— PMO India (@PMOIndia) November 8, 2016
सीमा पार के हमारे शत्रु जाली नोटों के जरिये अपना धंधा भारत में चलाते हैं और यह सालों से चल रहा है : PM #IndiaFightsCorruption
— PMO India (@PMOIndia) November 8, 2016
आज मध्य रात्रि से वर्तमान में जारी 500 रुपये और 1,000 रुपये के करेंसी नोट लीगल टेंडर नहीं रहेंगे यानि ये मुद्राएँ कानूनन अमान्य होंगी : PM
— PMO India (@PMOIndia) November 8, 2016
500 और 1,000 रुपये के पुराने नोटों के जरिये लेन देन की व्यवस्था आज मध्य रात्रि से उपलब्ध नहीं होगी : PM @narendramodi
— PMO India (@PMOIndia) November 8, 2016
100 रुपये, 50 रुपये, 20 रुपये, 10 रुपये, 5 रुपये, 2 रुपये और 1 रूपया का नोट और सभी सिक्के नियमित हैं और लेन देन के लिए उपयोग हो सकते हैं: PM
— PMO India (@PMOIndia) November 8, 2016
देशवाशियों को कम से कम तकलीफ का सामना करना पड़े, इसके लिए हमने कुछ इंतज़ाम किये हैं: PM @narendramodi
— PMO India (@PMOIndia) November 8, 2016
500 और 1,000 रुपये के पुराने नोट, 10 नवम्बर से लेकर 30 दिसम्बर तक अपने बैंक या डाक घर के खाते में बिना किसी सीमा के जमा करवा सकते हैं: PM
— PMO India (@PMOIndia) November 8, 2016
आपकी धनराशि आपकी ही रहेगी, आपको कोई चिंता करने की जरूरत नहीं है : PM @narendramodi
— PMO India (@PMOIndia) November 8, 2016
9 नवम्बर और कुछ स्थानों में 10 नवम्बर को भी ATM काम नहीं करेंगे : PM @narendramodi
— PMO India (@PMOIndia) November 8, 2016
समय समय पर मुद्रव्यवस्था को ध्यान में रख कर रिज़र्व बैंक, केंद्र सरकार की सहमति से नए अधिक मूल्य के नोट को सर्कुलेशन में लाता रहा है: PM
— PMO India (@PMOIndia) November 8, 2016
अब इस पूरी प्रक्रिया में रिज़र्व बैंक द्वारा 2,000 रुपये के नए नोट के प्रस्ताव को स्वीकार किया गया है: PM @narendramodi
— PMO India (@PMOIndia) November 8, 2016
Efforts by the NDA Government under PM @narendramodi to curb corruption and fight black money. #IndiaFightsCorruption pic.twitter.com/0Tt8FlvbQ2
— PMO India (@PMOIndia) November 8, 2016
Rs. 500 and Rs. 1000 notes cease to be legal tender. #IndiaFightsCorruption pic.twitter.com/mk5HV0N0Ro
— PMO India (@PMOIndia) November 8, 2016
Here is what you can do. #IndiaFightsCorruption pic.twitter.com/jtoCuXFohF
— PMO India (@PMOIndia) November 8, 2016
People friendly measures to minimise inconvenience. #IndiaFightsCorruption pic.twitter.com/bVlsN2sQhG
— PMO India (@PMOIndia) November 8, 2016
Towards an India that is free from corruption and black money. #IndiaFightsCorruption pic.twitter.com/1igzxhtRPG
— PMO India (@PMOIndia) November 8, 2016
'Now is the time to change this'.... #IndiaFightsCorruption pic.twitter.com/xoKnL6elH7
— PMO India (@PMOIndia) November 8, 2016
A historic step that benefits the poor, the middle class and the neo-middle class. #IndiaFightsCorruption pic.twitter.com/l9hRwYeywI
— PMO India (@PMOIndia) November 8, 2016
Let us all participate in this Mahayagna. #IndiaFightsCorruption pic.twitter.com/RipWqwqxXM
— PMO India (@PMOIndia) November 8, 2016
Honest citizens want this fight against corruption, black money, benami property, terrorism & counterfeit currency to continue. pic.twitter.com/u7KMzMlLrC
— PMO India (@PMOIndia) November 9, 2016
An honest citizen should never have to face problems in buying property. pic.twitter.com/FBn2ooyPuf
— PMO India (@PMOIndia) November 9, 2016
NDA Government is dedicated to the poor. It will always remain dedicated to them. pic.twitter.com/FYQJ2kEEnr
— PMO India (@PMOIndia) November 9, 2016
देश का प्रत्येक नागरिक भ्रष्टाचार के खिलाफ इस महायज्ञ में एक साथ मिलकर खड़ा होगा। pic.twitter.com/vmwv6fDmTu
— Narendra Modi (@narendramodi) 9 November 2016
भ्रष्टाचार से अर्जित कैश का कारोबार महँगाई को बढाता है। दुर्भाग्य से इसकी मार गरीबों और मध्यम वर्गीय परिवारों को झेलनी पड़ती है। pic.twitter.com/AO74Z606jG
— Narendra Modi (@narendramodi) 9 November 2016
A historic step to fight corruption, black money and terrorism. https://t.co/eQrEH6F0qW
— PMO India (@PMOIndia) November 10, 2016