Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಮೇಶ್ವರಂನಲ್ಲಿ ಪ್ರಧಾನಮಂತ್ರಿ

ರಾಮೇಶ್ವರಂನಲ್ಲಿ ಪ್ರಧಾನಮಂತ್ರಿ

ರಾಮೇಶ್ವರಂನಲ್ಲಿ ಪ್ರಧಾನಮಂತ್ರಿ

ರಾಮೇಶ್ವರಂನಲ್ಲಿ ಪ್ರಧಾನಮಂತ್ರಿ


  • ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮಾರಕದ ಉದ್ಘಾಟನೆ
  • ಕಲಾಂ ಸಂದೇಶ ವಾಹಿನಿಗೆ ಹಸಿರು ನಿಶಾನೆ
  • ರಾಮೇಶ್ವರಂ ನಿಂದ ಅಯೋಧ್ಯೆವರೆಗಿನ ರೈಲು ಹಾಗೂ ಇತರ ಅಭಿವೃದ್ಧಿ  ಯೋಜನೆಗಳಿಗೆ ಚಾಲನೆ
  • ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಮೇಶ್ವರಂನಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮಾರಕವನ್ನು ಉದ್ಘಾಟಿಸಿದರು. ಅವರು ಡಾ. ಕಲಾಂ ಅವರ ಪುತ್ಥಳಿಯನ್ನೂ ಅನಾವರಣ ಮಾಡಿದರು ಮತ್ತು ಕಲಾಂ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿದರು. ಡಾ. ಕಲಾಂ ಅವರ ಕುಟುಂಬದ ಸದಸ್ಯರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು.

 

ದೇಶಾದ್ಯಂತ ಸಂಚರಿಸಿ, ಮಾಜಿ ರಾಷ್ಟ್ರಪತಿಯವರ ಜಯಂತಿಯ ದಿನದ ಅಂಗವಾಗಿ ಅಕ್ಟೋಬರ್ 15ರಂದು ರಾಷ್ಟ್ರಪತಿ ಭವನ ತಲುಪಲಿರುವ ವಸ್ತು ಪ್ರದರ್ಶನದ ಬಸ್ ‘ಕಲಾಂ ಸಂದೇಶ ವಾಹಿನಿ’ಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಿಸಿದರು.

 

ಬೃಹತ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿಯವರು ಆಯ್ದ ಫಲಾನುಭವಿಗಳಿಗೆ ನೀಲಿ ಕ್ರಾಂತಿ ಯೋಜನೆ ಅಂಗವಾಗಿ ಲಾಂಗ್ ಲೈನ್ ಟ್ರಾವಲರ್ಸ್  ಹಂಚಿಕೆ ಪತ್ರಗಳನ್ನು ವಿತರಿಸಿದರು.

 

ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮೇಶ್ವರಂನಿಂದ ಅಯೋಧ್ಯವರೆಗಿನ ಶ್ರದ್ಧಾ ಸೇತು ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ರಾಮೇಶ್ವರಂ ಹಸಿರು ಯೋಜನೆಯ ರೂಪುರೇಖೆಯನ್ನೂ ಬಿಡುಗಡೆ ಮಾಡಿದರು. ಎನ್.ಎಚ್. 87ರಲ್ಲಿ  ಮುಕುಂದರಯಾರ್ ಛತಿರಂ ಮತ್ತು ಅರಿಚಲ್ಮುನೈ ನಡುವಿನ 9.5 ಕಿ.ಮೀ. ಸಂಪರ್ಕ ರಸ್ತೆಯನ್ನೂ ಪ್ರಧಾನಿ ಫಲಕ ಅನಾವರಣ ಮಾಡುವ ಮೂಲಕ ದೇಶಕ್ಕೆ ಸಮರ್ಪಿಸಿದರು.

 

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಮೇಶ್ವರಂ ಇಡೀ ದೇಶದ ಆಧ್ಯಾತ್ಮಿಕತೆಯ ಸಂಕೇತವಾಗಿದೆ, ಮತ್ತು ಈಗ ಡಾ. ಕಲಾಂ ಅವರೊಂದಿಗೆ ಆಪ್ತವಾದ ಸ್ಥಳವಾಗಿದೆ ಎಂದರು. ಡಾ. ಕಲಾಂ ಅವರು ರಾಮೇಶ್ವರಂನ ಶಾಂತಿ, ಆಳ ಮತ್ತು ಸರಳತೆಯನ್ನು ಬಿಂಬಿಸಿದ್ದರು ಎಂದರು.

 

ಡಾ. ಕಲಾಂ ಅವರ ಸ್ಮಾರಕವು ಅವರ ಬದುಕು ಮತ್ತು ಸಮಯವನ್ನು ಗಮನಾರ್ಹವಾಗಿ ಬಿಂಬಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

 

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಜೆ. ಜಯಲಲಿತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ, ನಾವೆಲ್ಲರೂ ಸ್ಮರಿಸುವಂಥ ನಾಯಕಿ ಅವರೆಂದರು. ಸ್ಮಾರಕ ನೋಡಿದ್ದರೆ ಅವರು ಬಹಳ ಸಂತೋಷ ಪಡುತ್ತಿದ್ದರು ಮತ್ತು ತಮ್ಮ ಶುಭಾಶಯ ತಿಳಿಸುತ್ತಿದ್ದರು ಎಂದರು.

 

ಬಂದರು ಮತ್ತು ಸರಕು ಸಾಗಣೆ ವಲಯದಲ್ಲಿನ ಪರಿವರ್ತನೆಯು ಭಾರತದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ತಿಳಿಸಿದರು. ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಹೇಳಿದರು.  

 

ಡಾ. ಕಲಾಂ ಅವರು ಭಾರತಯ ಯುವಕರಿಗೆ ಸ್ಫೂರ್ತಿ ನೀಡಿದರು ಎಂದು ಪ್ರಧಾನಿ ಹೇಳಿದರು. ಇಂದು ಯುವಕರು ಪ್ರಗತಿಯಲ್ಲಿ ಹೊಸ ಎತ್ತರಕ್ಕೆ ಏರಲು ಇಚ್ಛಿಸುತ್ತಾರೆ ಮತ್ತು ಉದ್ಯೋಗಧಾತರಾಗಲು ಬಯಸುತ್ತಾರೆ ಎಂದು ಹೇಳಿದರು.

****

AKT/NT