Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಸಂವಾದ ನಡೆಸಿದ ಪ್ರಧಾನಿ

ಭಾರತೀಯ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಸಂವಾದ ನಡೆಸಿದ ಪ್ರಧಾನಿ

ಭಾರತೀಯ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಸಂವಾದ ನಡೆಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಇತ್ತೀಚೆಗೆ ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರರು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಪ್ರಧಾನಮಂತ್ರಿಯೊಬ್ಬರು ಮಹಿಳಾ ಕ್ರಿಕೆಟ್ ತಂಡಕ್ಕಾಗಿ ಟ್ವೀಟ್ ಮಾಡಿದ್ದನ್ನು ತಾವು ಇದೇ ಮೊದಲ ಬಾರಿಗೆ ನೋಡಿದ್ದಾಗಿ ತಂಡದ ಸದಸ್ಯರು ತಿಳಿಸಿದರು. ಪ್ರಧಾನಮಂತ್ರಿಯವರು ತಮ್ಮ ಪ್ರಗತಿಯನ್ನು ಗಮನಿಸುತ್ತಿದ್ದಾರೆ ಎಂದು ತಿಳಿದು ತಮಗೆ ಅತೀವ ಆನಂದವಾಯಿತು, ಸ್ಫೂರ್ತಿ ದೊರೆಯಿತು, ಹೆಮ್ಮೆ ಎನಿಸಿತು ಎಂದು ಅವರು ತಿಳಿಸಿದರು.

ಒತ್ತಡ ನಿಭಾಯಿಸುವ ಕುರಿತಂತೆ ಆಟಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಪ್ರಧಾನಮಂತ್ರಿಯವರು, ಯೋಗ ದೇಶ ಮತ್ತು ಮನಸ್ಸು ಹಾಗೂ ನಮ್ಮ ಕ್ರಿಯೆಯ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದರು. ಒತ್ತಡದಿಂದ ಹೊರಬರಲು ಯೋಗ ನೆರವಾಗುತ್ತದೆ ಎಂದೂ ಅವರು ಹೇಳಿದರು.

ನೀವು ‘ಸೋತಿಲ್ಲ’ ಎಂದು ಆಟಗಾರರಿಗೆ ತಿಳಿಸಿದ ಪ್ರಧಾನಮಂತ್ರಿಯವರು, 125 ಕೋಟಿ ಭಾರತೀಯರು ಫೈನಲ್ ಪಂದ್ಯದ ನಿಮ್ಮ ಸೋಲನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ, ಹೀಗಾಗಿ ಇದು ಅವರ ಶ್ರೇಷ್ಠ ಗೆಲುವು ಎಂದರು.

ಭಾರತದ ಹೆಣ್ಣುಮಕ್ಕಳು ಹಲವು ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದ ಪ್ರಧಾನಮಂತ್ರಿಯವರು, ಮಹಿಳೆಯರು ವಿವಿಧ ರಂಗಗಳಲ್ಲಿ ತೋರುತ್ತಿರುವ ಪ್ರಗತಿಯಿಂದ ಸಮಾಜಕ್ಕೆ ಒಳಿತಾಗುತ್ತಿದೆ ಎಂದರು. ಕ್ರೀಡೆಯ ಜೊತೆಗೆ 10 ಮತ್ತು 12ನೇ ತರಗತಿ ಪರೀಕ್ಷೆಯ ಫಲಿತಾಂಶ; ಪ್ರತಿಷ್ಠಿತ ಇಸ್ರೋ ಕಾರ್ಯಕ್ರಮಗಳಲ್ಲಿ ಮಹಿಳಾ ಬಾಹ್ಯಾಕಾಶ ವಿಜ್ಞಾನಿಗಳ ಪ್ರಮುಖ ಪಾತ್ರವನ್ನೂ ಪ್ರಧಾನಿ ಪ್ರಸ್ತಾಪಿಸಿದರು.

ತಂಡದ ಆಟಗಾರರು ಸಹಿ ಹಾಕಲಾದ ಕ್ರಿಕೆಟ್ ಬ್ಯಾಟ್ ಅನ್ನು ಪ್ರಧಾನಮಂತ್ರಿಯವರಿಗೆ ಅರ್ಪಿಸಿದರು.

****

AKT/SH