Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ- ಜರ್ಮನಿಸುಸ್ಥಿರತೆ ಕೇಂದ್ರ ಕುರಿತಂತೆ ಭಾರತ ಮತ್ತು ಜರ್ಮನಿ ನಡುವಿನ ಉದ್ದೇಶಿತ ಜಂಟಿ ಘೋಷಣೆಯ ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ- ಜರ್ಮನಿಸುಸ್ಥಿರತೆ ಕೇಂದ್ರ (ಐಜಿಸಿಎಸ್) ಕುರಿತಂತೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ (ಡಿಎಸ್ಟಿ), ಮತ್ತು ಜರ್ಮನಿಯ ಶಿಕ್ಷಣ ಮತ್ತು ಸಂಶೋಧನೆಯ ಒಕ್ಕೂಟ ಸಚಿವಾಲಯ (ಬಿಎಂಬಿಎಫ್) ನಡುವಿನ ಉದ್ದೇಶಿತ ಜಂಟಿ ಘೋಷಣೆ(ಜೆಡಿಐ)ಯ ಬಗ್ಗೆ ವಿವರಣೆ ನೀಡಲಾಯಿತು.

ಬರ್ಲಿನ್ ನಲ್ಲಿ 2017ರ ಮೇ 30ರಂದು ಭಾರತದ ಪ್ರಧಾನಮಂತ್ರಿ ಹಾಗೂ ಜರ್ಮನಿ ಒಕ್ಕೂಟದ ಛಾನ್ಸಲರ್ ನಡುವಿನ ನಾಲ್ಕನೇ ಅಂತರ ಸರ್ಕಾರೀಯ ಸಮಾಲೋಚನೆ (ಐಜಿಸಿ) ಸಂದರ್ಭದಲ್ಲಿ ಜೆಡಿಐ ಪೂರ್ಣಗೊಂಡಿತ್ತು. ಈ ಜೆಡಿಐಗೆ ಭಾರತದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವ ಡಾ. ಹರ್ಷ ವರ್ಧನ್ ಮತ್ತು ಜರ್ಮನಿಯ ಶಿಕ್ಷಣ ಮತ್ತು ಸಂಶೋಧನೆಯ ಸಚಿವ ಪ್ರೊ. ಡಾ. ಜೋಹನ್ನಾ ವ್ಯಾಂಕಾ ಅವರು ಸಹಿ ಹಾಕಿದ್ದರು.

ಜರ್ಮನಿ ಮತ್ತು ಭಾರತೀಯ ವಿಜ್ಞಾನಿಗಳ ನಡುವೆ ಮೂಲಭೂತ ಮತ್ತು ಅನ್ವಯಿಕ ವೈಜ್ಞಾನಿಕ ಸಂಶೋಧನೆ ಸಹಕಾರವನ್ನು ಉತ್ತೇಜಿಸುವುದು ಐಜಿಸಿಎಸ್ ಕುರಿತ ಜೆಡಿಐನ ಉದ್ದೇಶವಾಗಿದೆ. ಅಂತರ-ಶಿಸ್ತಿನ / ಪರಿವರ್ತನಾತ್ಮಕ-ಶಿಸ್ತಿನ ಸಂಶೋಧನೆಯ ಮೂಲಕ ಸುಸ್ಥಿರ ಅಭಿವೃದ್ಧಿಯ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರದಲ್ಲಿ ನೀತಿ ಬೆಂಬಲ, ಬೋಧನೆ, ತರಬೇತಿ ಮತ್ತು ಮಾಹಿತಿ ಪ್ರಸರಣದಂಥ ಕ್ಷೇತ್ರಗಳನ್ನು ಇದು ಒಳಗೊಂಡಿರುತ್ತದೆ. ಭಾರತ ಮತ್ತು ಜರ್ಮನಿಗಳೆರಡರ ಕೈಗಾರಿಕೆಗಳು ಮತ್ತು ಸಂಸ್ಥೆಗಳು ಹಾಗೂ ಇತರ ವಿಶ್ವವಿದ್ಯಾಲಯಗಳ ನಡುವೆ ಜಾಲವನ್ನು ವಿಸ್ತರಿಸುವ ಮೂಲಕ ಐಜಿಸಿಎಸ್ ಭವಿಷ್ಯದ ಸಹಯೋಗವನ್ನು ಮತ್ತಷ್ಟು ಹೆಚ್ಚಿಸುವುದನ್ನು ಪೋಷಿಸುತ್ತದೆ. ಭಾರತದ ಕಡೆಯಿಂದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಮದ್ರಾಸ್ ಐಜಿಸಿಎಸ್ ಗೆ ಆತಿಥೇಯ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ.

ಈ ಜೆಡಿಐ ಅಡಿ, ಮದ್ರಾಸ್ ಐಐಟಿಯಲ್ಲಿನ ಐಜಿಸಿಎಸ್ ಗೆ ಡಿಎಸ್.ಟಿ ಮತ್ತು ಬಿಎಂಬಿಎಫ್ ಮೂಲಕ ಅಗತ್ಯ ಹಣಕಾಸು ಬೆಂಬಲ ಒದಗಿಸಲು ಅಗತ್ಯವಾದ ಸಾಂಸ್ಥಿಕ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸುಸ್ಥಿರ ಅಭಿವೃದ್ಧಿಗಾಗಿ ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಐಜಿಸಿಎಸ್ ಗೆ ಅನುದಾನ (ಗ್ರಾಂಟ್ ಇನ್ ಏಡ್) ಬೆಂಬಲವನ್ನು ಡಿಎಸ್ಟಿ ಒದಗಿಸುತ್ತದೆ. 2018ರ ಜನವರಿಯಿಂದ ಆರಂಭವಾಗಿ ಐದು ವರ್ಷಗಳ ಕಾಲ ಐಜಿಸಿಎಸ್ ಗೆ ಡಿಎಸ್ಟಿ ಮತ್ತು ಬಿಎಂಬಿಎಫ್ ಜಂಟಿಯಾಗಿ ಬೆಂಬಲ ನೀಡುತ್ತವೆ.

*****

AKT/VBA/SH