ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಪ್ಯಾಲಿಸ್ತೀನ್ ನಡುವೆ ಯುವ ವ್ಯವಹಾರ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ದ ಬಗ್ಗೆ ವಿವರಣೆ ನೀಡಲಾಯಿತು.
ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯವಿಲ್ಲದೆ ಎಲ್ಲ ಯುವಕರ ನಡುವೆ ಕಲ್ಪನೆಗಳು, ಮೌಲ್ಯಗಳು ಮತ್ತು ಸಂಸ್ಕೃತಿಯ ವಿನಿಮಯಕ್ಕೆ ಮತ್ತು ಎರಡೂ ದೇಶಗಳಲ್ಲಿ ಕ್ರೀಡೆಯ ಅಭಿವೃದ್ಧಿಗೆ ಈ ಎಂ.ಓ.ಯು. ನೆರವಾಗಲಿದೆ. ಜೊತೆಗೆ ಎರಡೂ ದೇಶಗಳ ನಡುವೆ ಸ್ನೇಹಪರ ಬಾಂಧವ್ಯದ ಒಗ್ಗೂಡಿಸುವಿಕೆಗೂ ಇದು ಸಹಕಾರಿಯಾಗಲಿದೆ.
*****
AKT/VBA/SH