Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತಿನ ಗಾಂಧಿನಗರದಲ್ಲಿ ನಡೆದ ಭೂಮಿಪೂಜಾ ಕಾರ್ಯಕ್ರಮದ ಪ್ರಧಾನಿಯವರ ಭಾಷಣ

ಗುಜರಾತಿನ ಗಾಂಧಿನಗರದಲ್ಲಿ ನಡೆದ ಭೂಮಿಪೂಜಾ ಕಾರ್ಯಕ್ರಮದ ಪ್ರಧಾನಿಯವರ ಭಾಷಣ

ಗುಜರಾತಿನ ಗಾಂಧಿನಗರದಲ್ಲಿ ನಡೆದ ಭೂಮಿಪೂಜಾ ಕಾರ್ಯಕ್ರಮದ ಪ್ರಧಾನಿಯವರ ಭಾಷಣ

ಗುಜರಾತಿನ ಗಾಂಧಿನಗರದಲ್ಲಿ ನಡೆದ ಭೂಮಿಪೂಜಾ ಕಾರ್ಯಕ್ರಮದ ಪ್ರಧಾನಿಯವರ ಭಾಷಣ


ನನ್ನ ಪ್ರೀತಿಯ ಸಹೋದರ..ಸಹೋದರಿಯರೆ,

ನಮ್ಮ ದೇಶದಲ್ಲಿ ರೈಲ್ವೆ ಸಾಮಾನ್ಯ ಜನರೊಂದಿಗೆ ಬೆಸೆದುಕೊಂಡಿರುವ ಒಂದು ವ್ಯವಸ್ಥೆ. ಬಡವ ಬಲ್ಲಿದರ ಕುಟುಂಬಕ್ಕೆ ಆಧಾರವಾಗಿರಬಹುದಾದ ಇಲಾಖೆ ರೈಲ್ವೆ. ಆದರೆ ದುರ್ಬಾಗ್ಯವಶಾತ್ ರೈಲ್ವೆ ಇಲಾಖೆಯನ್ನು ಅದರ ಹಣೆಬರಹವಿದ್ದಂತೆ ಆಗಲಿ ಎಂದು ಬಿಟ್ಟಂತಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಅದರಲ್ಲೂ ದೆಹಲಿಯಲ್ಲಿ ಸಂಮಿಶ್ರ ಸರ್ಕಾರ ಇದ್ದಾಗ, ಸಹಯೋಗಿ ಪಕ್ಷ ಸರ್ಕಾರದಲ್ಲಿ ಭಾಗಿಯಾಗಿದ್ದು ಸರ್ಕಾರಕ್ಕೆ ಸಮರ್ಥನೆ ನೀಡಲೋಸುಗ ಬಳಕೆಯಾಗುತ್ತಿದ್ದ ಇಲಾಖೆ ರೈಲ್ವೆ. ಇದು ಇಂದಿನ ಕಟು ಸತ್ಯ. ಅಂದರೆ ಇದೊಂದು ರೀತಿಯಲ್ಲಿ ಸರ್ಕಾರ ತನ್ನ ಮಿತ್ರ ಪಕ್ಷಕ್ಕೆ ಸಿಹಿ ಪದಾರ್ಥವನ್ನು ಹಂಚಲು ಇಟ್ಟು ಕೊಂಡಂತ ಒಂದು ಇಲಾಖೆ – ರೈಲ್ವೆ ಮಂತ್ರಿಮಂಡಲ. ಹೀಗಾಗಿ ರೈಲ್ವೆ ಇಲಾಖೆಯ ಹಿತಾಸಕ್ತಿಗಿಂತ ವ್ಯಕ್ತಿ ಆಥವಾ ಅವರು ಬೆಳೆದು ಬಂದ ರಾಜಕೀಯ ಪಕ್ಷದ ಹಿತಾಸಕ್ತಿಯೆ ಇಲ್ಲಿಪ್ರಮುಖ್ಯತೆ ಪಡೆಯಿತು. ಇದ್ದಕ್ಕಿಂತ ಹೆಚ್ಚಿಗೆ ಹೇಳುವ ಆಗತ್ಯವಿಲ್ಲ. ಮಿಕ್ಕಿದೆಲ್ಲ ನಿಮಗೆ ತಿಳಿದಿದೆ.

ಈ ಸರ್ಕಾರ, ರೈಲ್ವೆ ಇಲಾಖೆಗೆ ಮಹತ್ವವನ್ನು ನೀಡಿದೆ. ರೈಲ್ವೆಯ ಸರ್ವಾಂಗೀಣ ಬೆಳವಣಿಗೆಗೆ ಮತ್ತು ಅದರ ಆಧುನಿಕರಣಕ್ಕೆ ಪ್ರಾಮುಖ್ಯತೆಯನ್ನು ನೀಡಿದೆ ಹಾಗೆಯೇ ರೈಲ್ವೆ ಸಾಮಾನ್ಯರ ಬದುಕಿನಲ್ಲಿ ಒಂದು ಗುಣಾತ್ಮಕ ಬದಲಾವಣೆಯನ್ನು ತರುವುದರೊಂದಿಗೆ ಅವರ ಆಗು-ಹೋಗುಗಳಿಗೆ ಹೇಗೆ ಸಹಾಯ ಮಾಡಬಹುದು ಎಂಬುದಾಗಿಯೂ ಆಲೋಚಿಸುತ್ತಿದೆ. ತಾವುಗಳು ಇಗ್ಗೆ ಎರಡುವರೆ ವರ್ಷಗಳಿಂದ ರೈಲ್ವೆ ಇಲಾಖೆಯ ಕಾರ್ಯವೈಖರಿಯನ್ನು ಗಮನಿಸಿರಬಹುದು. ಹಿಂದಿನ ಬಜೆಟ್ ನಲ್ಲಿ ಕಾದಿರುಸುತ್ತಿದ್ದ ಮೊತ್ತವನ್ನು ನೋಡಿದಾಗ ಇಂದು ರೈಲ್ವೆ ತನ್ನ ಬಜೆಟ್ ನಲ್ಲಿ ಎರಡುಪಟ್ಟು ಮೊತ್ತವನ್ನು   ಕಾದಿರಿಸಿರುವ  ಆಂಶ ತಮ್ಮ ಗಮನಕ್ಕೆ ತರುತ್ತಿದ್ದೇನೆ. ಇದು ಸಣ್ಣ ವಿಚಾರವೇನಲ್ಲ. ಬಡವರ ಅಗತ್ಯವನ್ನು ಗಮನದಲ್ಲಿರಿಸಿ ಈ ಹಣಕಾಸಿನ ವರ್ಷದಲ್ಲಿ ಹೆಚ್ಚಿನ ಮೊತ್ತವನ್ನು ಖರ್ಚುಮಾಡಲು ತೀರ್ಮಾನಿಸಿದ್ದೇವೆ. ಈ ಹಿಂದೆ ರೈಲ್ವೆ ಹಳಿಗಳ ದ್ವಿಮುಖೀಕರಣ ಎಲ್ಲೋ ಅಲ್ಲೋಂದು – ಇಲ್ಲೋಂದು ಕೆಲವೇ ಕಿ.ಮಿ.ಗಳ ಕಾರ್ಯ ಆಗುತ್ತಿದ್ದ ಜಾಗದಲ್ಲಿ ಇಂದು ಎರಡು ಪಟ್ಟು ಮೂರು ಪಟ್ಟು ಹೆಚ್ಚಿರುವ ಅಂಶ ತಾವು ಕಾಣಬಹುದು.

ಈ ಹಿಂದೆ ರೈಲ್ವೆಯಲ್ಲಿ ಗೇಜ್ ಪರಿವರ್ತನೆಯ ಕಾರ್ಯ, ಮಿಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಮತ್ತು ನ್ಯಾರೋ ಗೇಜ್ ನಿಂದ ಬ್ರಾಡ್ ಗೇಜ್ ಗೂ ಕೊನೆಯ ಹಂತದ ಕಾರ್ಯಕ್ರಮವಾಗಿರುತಿತ್ತು, ಆದರೆ ನಾವೀಗ ಅದಕ್ಕೆ ಚಾಲನೆಯನ್ನು ನೀಡಿ ವೇಗವನ್ನು ಹೆಚ್ಚಿಸಿದ್ದೇವೆ.  ಈ ಹಿಂದಿನದಕ್ಕೆ ಹೋಲಿಸಿದಾಗ  ಆನೇಕ ಪಟ್ಟು ಯಶಸ್ಸನ್ನು ಕಂಡಿದ್ದೇವೆ. ರೈಲ್ವೆಯಲ್ಲಿ ಇಂಜನ್ ಕಾರ್ಯ ಡೀಸೆಲ್ ನಿಂದ ನಡೆಯುತ್ತಿತ್ತು, ಕಲ್ಲಿದ್ದಲಿನಿಂದ ನಡೆಯುತ್ತಿತ್ತು. ಇದರಿಂದಾಗಿ ಪರಿಸರ ಮಾಲಿನ್ಯದ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಡೀಸೆಲ್ ಅನ್ನು ವಿದೇಶಗಳಿಂದ ಅಮದುಮಾಡಿಕೊಳ್ಳ ಬೇಕಾಗುತ್ತಿತ್ತು. ಇದಕ್ಕಾಗಿ ಹೆಚ್ಚಿನ ವಿದೇಶಿ ವಿನಿಮಯ ವ್ಯಯವಾಗುತ್ತಿತ್ತು. ಪರಿಸರ ಸಂರಕ್ಷಣೆ ಮಾಡಲೋಸುಗ ಕಲ್ಲಿದ್ದಲ ಬಳಕೆ ಕಡಿಮೆ ಮಾಡಿದ್ದೇವೆ. ವಿದ್ಯುತ್ತೀಕರಣದ ಕಡೆಗೆ ಗಮನ ಹರಿಸಿದ್ದೇವೆ. ಇಂದು ಅತ್ಯಂತ ವೇಗವಾಗಿ ಹೆಚ್ಚಿನ ಮಹತ್ವವನ್ನು ನೀಡಿ ರೈಲ್ವೆ ಹಳಿಗಳ ವಿದ್ಯುತ್ತೀಕರಣದ  ಕಾರ್ಯ ಕೈಗೊತ್ತಿಕೊಂಡಿದ್ದೇವೆ. ರೈಲ್ವೆ ಇಂಜಿನ್ ಅನ್ನು ವಿದ್ಯುತ್ ಇಂಜನ್ ಆಗಿ ಪರಿವರ್ತಿಸುವ ಕಾರ್ಯ ವೇಗ ಪಡೆದು ಕೊಳ್ಳುತ್ತಿದೆ. ಸ್ವತಂತ್ರ ಭಾರತದಲ್ಲಿ ಅತ್ಯಂತ ದೊಡ್ಡ ಗಾತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ರೈಲ್ವೆಯಲ್ಲಿ ನಡೆದಿದೆ ಮತ್ತು ಎರಡು ದೊಡ್ಡ ಲೋಕೋ ಇಂಜನೀಯರಿಂಗ್ ತಯಾರಿಕಾ ಘಟಕಗಳಿಗೆ ಇದು ಬಳಕೆಯಾಗಲಿದೆ. ಭವಿಷ್ಯದಲ್ಲಿ ಸಂಪೂರ್ಣ ರೈಲ್ವೆಯ ದಿಕ್ಕನೇ ಬದಲಾಯಿಸುವ ವಿದ್ಯುತ್ ಇಂಜಿನ್ ನಿರ್ಮಾಣದ ಕಾರ್ಯ ಪ್ರಗತಿಯ ಪಥದಲ್ಲಿ ಸಾಗಿದೆ.

ಈ ಎಲ್ಲದರ ಜೊತೆ ಜೊತೆಗೆ ರೈಲುಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರ ಬಗ್ಗೆಯೂ ಗಮನ ಹರಿಸಿದ್ದೇವೆ, ಇದರ ಪ್ರತಿಫಲವೆ ಬಯೋ – ಶೌಚಾಲಯ. ರೈಲು ನಿಲ್ದಾಣಗಳಲ್ಲಿ ರೈಲು ಹಳಿಗಳ ಮೇಲೆ ಗೊಬ್ಬು ದುರ್ಗಂಧ ತುಂಬಿ ತುಳುಕುತ್ತಿತ್ತು. ಹೀಗಾಗಿ ಈ ಕೆಲಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದೇವೆ. ಇದರ ಖರ್ಚು ಹೆಚ್ಚು, ಇದರ ಪರಿಣಾಮ ತಕ್ಷಣಕ್ಕೆ ಕಂಡುಬರದಿದ್ದರು ದೀರ್ಘವಧಿಯಲ್ಲಿ ಲಾಭದಾಯಕವಾಗಲಿದೆ.ಆರೋಗ್ಯದ ದೃಷ್ಟಿಯಿಂದ ಒಂದು ಬದಲಾವಣೆ ತರುವ ಪ್ರಯತ್ನ ಮಾಡಿದ್ದೇವೆ. ಇದಕ್ಕೇಂದೆ ಹೆಚ್ಚಿನ ಗಮನಹರಿಸಿದ್ದೇವೆ.

ರೈಲಿನ ವೇಗ ಹೆಚ್ಚಿಸುವುದು ಹೇಗೆ ? ಈ ಹಿಂದೆ ರೈಲಿನಲ್ಲಿ ಕುಳಿತು ಕೊಂಡವರು ಇಳಿದು ಹೋಗಬಹುದಾಗಿತ್ತು. ಓಡಿ ಬಂದು ಹತ್ತಲು ಬಹುದಾಗಿತ್ತು. ಈ ವ್ಯವಸ್ಧೆಯಲ್ಲಿ ಮಾರ್ಪಡು ತರುವ ಯತ್ನ ಸಾಗಿದೆ. ಇದ್ದಕ್ಕೆಂದೇ ವಿಶೇಷ ಕಾರ್ಯಯೋಜನೆಯೊಂದನ್ನು ಹಾಕಿಕೊಳ್ಳಲಾಗಿದೆ. ಚಲ್ತಿಯಲ್ಲಿರುವ ವ್ಯವಸ್ಧೆಯಲ್ಲಿ ಯಾವ ರೀತಿ ಸುಧಾರಣೆಯನ್ನು ತರಬಹುದು ಮತ್ತು ರೈಲಿನ ವೇಗವನ್ನು ಹೇಗೆ ಹೆಚ್ಚಿಸ ಬಹುದು ಎಂಬುದರ ಬಗ್ಗೆ ಅದ್ಯಯನ ನಡೆದಿದೆ. ತಾಂತ್ರಿಕತೆಯಲ್ಲಿ ಬದಲಾವಣೆ ತರುತ್ತಿದ್ದೇವೆ. ಹೊಸ ತಾಂತ್ರಿಕತೆಗೆ ಜನರನ್ನು ತೊಡಗಿಸ ಕೊಳ್ಳುವ ಬಗೆಗೆ ಚಿಂತನೆ ನಡೆದಿದೆ. ಸುರಕ್ಷತೆ ಗಂಭೀರ ಸಮಸ್ಯೆ ಹಾಗೂ ಅದು ಒಂದು ಸವಾಲು ಹೌದು.

ವಿಶ್ವದಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ರೈಲ್ವೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಬಹುದಾಗಿದೆ. ಸುರಕ್ಷತೆಗೆ ಪ್ರಮುಖ್ಯತೆಯನ್ನು ನೀಡಬಹುದಾಗಿದೆ. ಬಜೆಟ್ ನಲ್ಲಿನ ಹೆಚ್ಚು ಹಣವನ್ನು ಬೋಗಿಗಳಿಗೆ ಖರ್ಚು ಮಾಡುವ ಮೂಲಕ ಸುರಕ್ಷತೆಯನ್ನು ಕೊಡಬಹುದಾಗಿದೆ. ಈ ದಿಕ್ಕಿನಲ್ಲಿ ಕಾರ್ಯಯೋಜನೆಯನ್ನು ಸಿದ್ದಗೊಳಿಸುತ್ತಿದ್ದೇವೆ. ಸರಕು ಸಾಗಣೆ ಮತ್ತೊಂದು ಮಹತ್ವದ ಘಟ್ಟ. ವಿಶ್ವದಲ್ಲಿ ಇಂದು ಶೇಕಡ 70 ರಷ್ಟು ಸರಕು ಸಾಗಣೆ ರೈಲ್ವೆ ಮುಖಾಂತರ ಮತ್ತು ಶೇಕಡ 30 ರಷ್ಟು ಸರಕು ಸಾಗಣೆ ರಸ್ತೆ ಮಾರ್ಗದ ಮುಖಾಂತರ ನಡೆಯುತ್ತಿದೆ. ನಮ್ಮ ದೇಶ ಈ ದಿಕ್ಕಿನಲ್ಲಿ ಹಿಂದುಳಿದಿದೆ. ಇಲ್ಲಿ ಶೇಕಡ 15 – 20 ರಷ್ಟು ರೈಲ್ವೇ ಬೋಗಿಗಳ ಮುಖಾಂತರ ಹಾಗೂ ಉಳಿದ ಸರಿ ಸುಮಾರು  80 ರಷ್ಟು ಸರಕು ಸಾಗಣೆ ರಸ್ತೆ ಮುಖಾಂತರ ನಡೆಯುತ್ತಿದೆ. ರಸ್ತೆ ಮಾರ್ಗವಾಗಿ ಸಾಗುವ ಸಾಗಾಣಿಕ ವೆಚ್ಚ ಅಧಿಕವಾದ್ದದ್ದು. ಜನರಿಗೆ ಹೊರೆಯಾಗುವಂತಾದ್ದು. ಉದಾಹರಣೆಗೆ  ಗುಜರಾತಿನಲ್ಲಿ ತಯಾರಾಗುವ ಉಪ್ಪು ರಸ್ತೆ ಮುಖಾಂತರ ಕಾಶ್ಮೀರ ತಲಪುವಷ್ಟರಲ್ಲಿಅದರ ವೆಚ್ಚ ಎಷ್ಟು ದುಬಾರಿಯಾಗುತ್ತದೆಯೆಂದರೆ ಸಾಮಾನ್ಯನಾದವ ಕೊಂಡುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ರೈಲ್ವೇ ಮುಖಾಂತರ ನಡೆಯ ಬಹುದಾದ ಕಾರ್ಗೋ ಸಾರಿಗೆ ಕಡು ಬಡವರಿಗೂ ಸುಲಭವಾಗಿ ದೊರೆಯುವಂತಾಗುತ್ತದೆ. ಈ ದಿಕ್ಕಿನಲ್ಲಿ ಕಾರ್ಗೋ ವ್ಯವಸ್ಥೆಯನ್ನು ಬಲ ಪಡಿಸಲು ಎಲ್ಲ ಕ್ರಮಗಳನ್ನು ಕೈಗೊತ್ತಿಕೊಳ್ಳಲಾಗಿದೆ.

ನಾನು ಬರುತ್ತಿದ್ದಂತೆ ರೈಲ್ವೆ ಇಲಾಖೆಗೆ ಒಂದು ಹೊಣೆಗಾರಿಕೆಯನ್ನು ವಹಿಸಿದ್ದೆ. ಉಪ್ಪು ಸಾಗಾಣಿಕೆಯೇನಿದೆ ಅದು ಕಂಟೇನರ್ ಗಳ ಮೂಲಕ ಆಗಬೇಕಿದೆ. ಆದರೆ ಕಂಟೇನರ್ 16 ಟನ್ ತೂಕವಿದ್ದು ಕೇವಲ 2 – 3 ಟನ್ನುಗಳಷ್ಟು ಮಾತ್ರವೇ ಸಾಗಿಸಬಹುದಾಗಿರುತ್ತದೆ. ಒಂದು ವೇಳೆ ಕಂಟೇನರ್ ತೂಕವನ್ನು 6 ಟನ್ನುಗಳಷ್ಟು ಕಡಿಮೆ ಮಾಡಿದಲ್ಲಿ 12 ಟನ್ನು ಗಳಷ್ಟು ಉಪ್ಪನ್ನು ರವಾನಿಸಬಹುದಾಗಿರುತ್ತದೆ. ಬಹುಶ: ಉಪ್ಪನ್ನು ಉಚಿತವಾಗಿ ಹಂಚಬಹುದೇನೋ.ಇದರಿಂದಾಗಿ ಉಪ್ಪು ಉತ್ಪಾದಕರಿಗೆ ತಮ್ಮ ಮಾಲನ್ನು ಶೀಘ್ರವಾಗಿ ತಲುಪಿಸುವ ವ್ಯವಸ್ಧೆ ದೊರೆತಂತೆ ಆಗುತ್ತದೆ. ಹಾಗಾಗಲು ರೈಲ್ವೇ ಇಲಾಖೆ ಇದ್ದಕ್ಕೆಂದೇ ವಿಶೇಷವಾಗಿ ವಿನ್ಯಾಸ ಗೊಳಿಸಿದ ಸರಕು ಬೋಗಿಗಳನ್ನು ತಯಾರು ಮಾಡಬೇಕಾದ ಅವಶ್ಯಕತೆಯಿದೆ. ಈ ದಿಸೆಯಲ್ಲಿ ಇಲಾಖೆ ಕಾರ್ಯೋನ್ಮುಕ ವಾಗಿದೆ. ಹೀಗೆ ಪ್ರತಿಯೊಂದು ವಸ್ತುವಿಗೂ ತನ್ನದೆ ಆದ ಬೋಗಿಗಳನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿ ಸರಕು ಬೋಗಿಗಳನ್ನು ಸಿದ್ದ ಪಡಿಸುವ ಕಾರ್ಯ ಕೈಗೆತ್ತಿ ಕೊಂಡಿದೆ.

ರೈಲ್ವೇ ಇಲಾಖೆ ಶೀಘ್ರದಲ್ಲಿ ಸಂಪೂರ್ಣವಾಗಿ ಬದಲಾಗಲಿದೆಯೆಂಬ ನಂಬಿಕೆ ನನಗಿದೆ. ಜನ ಸಾಮಾನ್ಯರಿಗೆ ಸೌಲಭ್ಯಗಳು ದೊರೆಕುವುದರೊಂದಿಗೆ ದುರ್ಗಮ ಪ್ರದೇಶಗಳಿಗೂ ರೈಲುಗಳು ತಲುಪುವಂತಾಗುತ್ತದೆ. ದೇಶದ ಸಮುದ್ರ ಸಾಗಾಣಿಕೆಯ ಬಂದರುಗಳಿಗೆ, ಆಹಾರ ಪದಾರ್ಥಗಳ ಗೋದಾಮುಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಿದಲ್ಲಿ ಅದು ಅರ್ಧಿಕ ದೃಷ್ಟಿಯಿಂದಲೂ ಲಾಭದಾಯಕವಾಗಲಿದೆ. ಈಗೀರುವ ಬಹುತೇಕ ರೈಲು ನಿಲ್ದಾಣಗಳು ನಗರ ಮಧ್ಯಭಾಗದಲಿದ್ದು ಅಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಹೀಗಾಗಿ ಅಂತಹ ಕಡೆಯೆಲ್ಲ ಲಬ್ಯವಿರುವ ಭೂ ಪ್ರದೇಶವನ್ನು ರೈಲುಗಳ ಸೌಕರ್ಯಕ್ಕೆ ಬಳಸಿಕೊಂಡು ಅದರ ಮೇಲ್ಬಾಗವನ್ನು ಮಾಲುಗಳ ಉಪಯೋಗಕ್ಕೊ ಥೀಯೆಟರ್ ಗಳ ನಿರ್ಮಾಣಕ್ಕೊ 10 ರಿಂದ 25 ಅಂತಸ್ತುಗಳ ಕಟ್ಟಡಕ್ಕೆ ಬಳಸ ಬಹುದಾಗಿರುತ್ತದೆ. ಇದರಿಂದ ಇಲಾಖೆಗೆ ಅದಾಯ ಹೆಚ್ಚಾಗಲಿದೆ. ಬಂಡವಾಳ ಹೂಡುವವರು ಸಹ ತಮ್ಮ ಬಂಡವಾಳವನ್ನು ಹೂಡಲು ಮುಂದೆ ಬರುತ್ತಾರೆ. ಗುಜರಾತಿನಲ್ಲಿ ಇಂತದೊಂದು ಯಶಸ್ವಿ ಪ್ರಯೋಗ ನಡೆಸಿರುತ್ತೇವೆ. ಅಲ್ಲಿ ಬಸ್ಸು ನಿಲ್ದಾಣವೊಂದನ್ನು ಪಿ.ಪಿ..ಪಿ. ಮಾಡೇಲ್  ಮುಖಾಂತರ ಇಂಥದೊಂದು ಸೌಲಭ್ಯವನ್ನು ಅಭಿವೃದ್ಧಿಪಡಿಸಿರುತ್ತೇವೆ. ಇದರಿಂದ ಸಿರಿವಂತರಿಗೆ ಏರ್ ಪೊರ್ಟನಲ್ಲಿ ದೊರೆಯಬಹುದಾದ ಸೌಲಭ್ಯ ಬಡವ ಬಲ್ಲಿದರಿಗೂ ದೊರೆಯುವಂತಾಗುತ್ತದೆ.

ಮುಂಬರುವ ದಿನಗಳಲ್ಲಿ ಇಂಥ ಸಾವಿರಾರು ರೈಲು ನಿಲ್ದಾಣಗಳ ಅಭಿವೃದ್ಧಿ ಸಾಧ್ಯವಿದೆ. ನಿಮಗೆ ನೆನಪಿರ ಬಹುದು 2010 ರಲ್ಲಿ ಮಹಾತ್ಮ ಮಂದಿರ ಸ್ಥಾಪನೆ ಮಾಡಿದಾಗ ಅದು ಗುಜರಾತಿನ ರಜತ ಜಯಂತಿಯ ವರ್ಷವಾಗಿತ್ತು. ಮೇ ಒಂದರಂದು ನಾನು ಮಾತಾನಾಡಿದ ಸಂದರ್ಭದಲ್ಲಿ  ಮಹಾತ್ಮ ಮಂದಿರ್ ಏನೀದೆಯೋ ಅದು ವಿಶ್ವ ಶಾಂತಿಗಾಗಿ ವಿಶ್ವನಾಯಕರೆಲ್ಲರು ಒಂದೆಡೆ ಸೇರುವ, ವಿಚಾರ ವಿನಿಮಯ ಮಾಡುವ ವೇದಿಕೆಯಾಗ ಬೇಕೆಂದು ಆಶಿಸಿದ್ದೆ.

ಮಹಾತ್ಮ ಗಾಂಧಿಯವರ ಹೆಸರನ್ನು ಹೊಂದಿರುವ ಮಹಾತ್ಮ ಮಂದಿರವು ಸದ್ದುದೇಶ ಬಳಕೆಯಾಗ ಬೇಕಾದರೆ ಇಲ್ಲಿಗೆ ಬರುವ ಅತಿಥಿಗಳಿಗೆ ರೈಲು ನಿಲ್ದಾಣದ ಮೇಲೆ ನಿರ್ಮಾಣವಾಗುವ ಕಟ್ಟಡದಲ್ಲಿ ತಂಗುವ ವ್ಯವಸ್ಥೆಯಾಗ ಬೇಕು, ಮಹಾತ್ಮ ಗಾಂಧಿ ಕನ್ವೇಷನ್ ಸೆಂಟರ್ ಅನ್ನು ಬಳಸುವಂತಾಗಬೇಕು, ಸಭೆ ಸಮಾರಂಭಗಳನ್ನು ನಡೆಸುವಂತಾಗಬೇಕು ಹಾಗೇಯೆ ಹೆಲಿಪ್ಯಾಡ್ ನಿಲ್ದಣದಲ್ಲಿ ಪ್ರದರ್ಶನ ಮೇಳದ ವ್ಯವಸ್ಥೆಯಾಗಬೇಕು. ಒಟ್ಟಾರೆ ಇದೊಂದು  ರೀತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳು ರೈಲ್ವೇ ಕಾರಿಡಾರ್ ಆಗಿ ವ್ಯಾಪಾರ ವಹಿವಾಟಿನ ಕೇಂದ್ರವಾಗಬೇಕು ಮತ್ತು ಮಹಾತ್ಮ ಮಂದಿರವು ವರ್ಷದ 365 ದಿನಗಳಲ್ಲಿ 300 ದಿನಗಳು ಸದಾ ಚಟುವಟಿಕೆಯಿಂದ ಕೂಡಿರಬೇಕು. ಇದು ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಪ್ರಾಜೆಕ್ಟ್. ಮುಂಬರುವ ದಿನಗಳಲ್ಲಿ ಭಾರತದೆಲ್ಲಡೆ ಇಂಥ ಕೇಂದ್ರಗಳು ನಿರ್ಮಾಣವಾಗಲಿವೆ. ನಮ್ಮ ಸುರೇಶ್ ಪ್ರಭು ಸದ್ಯದಲ್ಲಿಯೆ ಎಲ್ಲ ನಿಲ್ದಾಣಗಳಿಗೂ ವೈ-ಫೈ ಸೌಲಭ್ಯ ವಿಸ್ತರಿಸುವುದರಲ್ಲಿದ್ದಾರೆ. ಡಿಜಿಟಲ್ ಇಂಡಿಯಾ ದ ಕನಸೇನಿದೆ ಅದನ್ನು ನನಸಾಗಿಸುವ ಕಾರ್ಯ ಭರದಿಂದ ಸಾಗಿದೆ. ಭಾರತ ಬಡ ರಾಷ್ಟ್ರ, ಇವರಿಗೆಲ್ಲ ಇದು ತಿಳಿಯದು ಎನ್ನುವ ಕೆಲವೇ ಮಂದಿಯ ಮಾತನ್ನು ಹುಸಿಯಾಗಿಸುವ ದಿನಗಳು ಶೀಘ್ರದಲ್ಲಿ ಬರಲಿದೆ. ನಿಮಗಿದನ್ನು ಕೇಳಿ ಅಶ್ಚರ್ಯವಾಗಬಹುದು. ಭಾರತದಲ್ಲಿ ಶೇಕಡ 60 ರಿಂದ 70 ರಷ್ಟು ಮಂದಿ ಆನ್-ಲೈನ್ ನಲ್ಲಿಯೆ ಟಿಕೇಟ್ ಖರೀದಿಸುತ್ತಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಇದೇ ನಮ್ಮ ತಾಕತ್ತು.

ರೈಲಿನಲ್ಲಿ ಪ್ರಯಾಣ ಮಾಡುವ ಸಾಧಾರಣ ವ್ಯಕ್ತಿಯೂ ಸಹ ಇಂದು ಆನ್-ಲೈನ್ ರೈಲಿನಲ್ಲಿ ಟಿಕೇಟ್ ಕಾದಿರಿಸುತ್ತಾನೆ ಮತ್ತು ಟಕೇಟ್ ಪಡೆಯುತ್ತಾನೆ. ವೈ-ಫೈ ಬಳಕೆಯಿಂದಾಗಿ ಭಾರತ ಹಾಗೂ ವಿಶ್ವದ ಇತರೆಲ್ಲ ಕಡೆಗಳಲ್ಲಿಯೂ ವಿಶ್ವೇಷಣೆ ನಡೆದಿದೆ. ಗೂಗಲ್ ನ ಜನ  “ ಭಾರತದ ರೈಲು ನಿಲ್ದಾಣಗಳಲ್ಲಿ ವೈ-ಫೈ ನ ಬಳಕೆ ವಿಶ್ವದೆಲ್ಲಡೆಗಿಂತ ಜಾಸ್ತಿ  “ ಎಂದಿದ್ದಾರೆ, ಕಾರಣ ನಿಲ್ದಾಣಗಳ ಪರಿಸರಗಳಲ್ಲಿ ವಿದ್ಯಾರ್ಥಿಗಳು ಬಂದು ಕೂತು ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳ ಮುಖಾಂತರ ವಿಶ್ವದ ಮೂಲೆ ಮೂಲೆಗಳಿಂದ ತಮಗೆ ಬೇಕಾದ ಶೈಕ್ಷಣಿಕ ಮಾಹಿತಿಯನ್ನು ಡೌನ್-ಲೋಡ್ ಮಾಡಿಕೊಳ್ಳುತ್ತಾರೆ. ಇದು ಒಂದು ರೀತಿ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದೆ. ವ್ಯವಸ್ಥೆಯಲ್ಲಿ ಬದಲಾವಣೆ ಹೇಗೆ ಸಾಧ್ಯ ಎನ್ನಲಿಕ್ಕೆ ಕಳೆದ ಎರಡುವರೆ ವರುಷಗಳಲ್ಲಿ ರೈಲ್ವೇ ವಿಭಾಗ ಮಾಡಿ ತೋರಿಸಿದೆ.

ಈ ಮುಖಾಂತರ ಇಂದು ಗುಜರಾತಿನಲ್ಲಿ ರಾಷ್ಟ್ರಕ್ಕಾಗಿ ಒಂದು ಹೊಸ ಯೋಜನೆಯೊಂದನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ ಮುಂಬರುವ ದಿನಗಳಲ್ಲಿ ಭಾರತದಲ್ಲೆಡೆ ಮತ್ತು ಪ್ರಮುಖ ನಗರಗಳಲ್ಲಿ ಇದು ಸಾಕಾರಗೊಳ್ಳಲಿದೆ. ಸಾಧಾರಣ ವ್ಯಕ್ತಿಗೆ ಸೌಲಭ್ಯ ಒದಗಿಸುವಲ್ಲಿ ರೈಲ್ವೇ ಮಹತ್ತರ ಹೆಜ್ಜೆಯಿಟ್ಟಿದೆ. ಇದರಿಂದ ಪ್ರಗತಿಪಥದತ್ತ ದಾಪುಗಾಲು ಹಾಕಲಿಕ್ಕೆ ಇನಷ್ಟು ಬಲ ಸಿಗಲಿದೆ. ಗುಜರಾತಿನ ಜನತೆಗೆ, ಅದರಲ್ಲೂ ಗಾಂಧಿನಗರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ.   ದಿನವಾದ ಇಂದು ನನಗೆ ಹೆಮ್ಮೆ ಹಾಗೂ ಸಂತೋಷ ಪಡುವ ದಿನವಾಗಿದೆ.

ಎಲ್ಲರಿಗೂ ಅನಂತ ಅನಂತ ವಂದನೆಗಳು.