ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18ರಲ್ಲಿ ಒಳನಾಡಿನ ಜಲಮಾರ್ಗ ಪ್ರಾಧಿಕಾರ (ಐಡಬ್ಲ್ಯುಐಐ)ದಿಂದ ಭಾರತ ಸರ್ಕಾರದ ಬಾಂಡ್ ಮೂಲಕ 660 ಕೋಟಿ ರೂ. ಹೆಚ್ಚುವರಿ ಬಜೆಟ್ ಸಂಪನ್ಮೂಲ (ಇಬಿಆರ್) ಎತ್ತುವಳಿ ಅನುಮತಿಯ ಪುನರುಜ್ಜೀವನಕ್ಕೆ ತನ್ನ ಅನುಮೋದನೆ ನೀಡಿದೆ.
ಬಾಂಡ್ ಗಳಿಂದ ಬರುವ ಹಣವನ್ನು ರಾಷ್ಟ್ರೀಯ ಜಲ ಮಾರ್ಗ ಕಾಯಿದೆ 2016 (12.4.2106 ರಿಂದ ಜಾರಿಗೆ ಬಂದಿರುವಂತೆ) ರಾಷ್ಟ್ರೀಯ ಜಲ ಮಾರ್ಗ (ಎನ್.ಡಬ್ಲ್ಯು.ಗಳ) ಅಭಿವೃದ್ಧಿ ಮತ್ತು ನಿರ್ವಹಣೆಗೆ ಐಡಬ್ಲ್ಯುಎಐ ಬಳಕೆ ಮಾಡಿಕೊಳ್ಳಲಿದೆ. ಬಾಂಡ್ ಗಳ ಮೂಲಕ ಪಡೆಯಲಾದ ನಿಧಿಯನ್ನು ಮೂಲಭೂತ ಸೌಕರ್ಯದ ಹೂಡಿಕೆಯ ಸುಧಾರಣೆಗಾಗಿ ಬಂಡವಾಳ ವೆಚ್ಚಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ.
ವಿಧಾನಗಳು
2017-18ರಲ್ಲಿ ಗುರುತಿಸಲಾದ ಯೋಜನೆಗಳ ಮೇಲೆ ಎನ್.ಡಬ್ಲ್ಯುಗಳ ಅಭಿವೃದ್ಧಿ ಕೈಗೊಳ್ಳಲು ಅಂದಾಜು 2412.50 ಕೋಟಿ ರೂಪಾಯಿಗಳ ಹೂಡಿಕೆಯ ಅಗತ್ಯವಿದೆ. 12.04.2017ರಂದು ವಿಶ್ವಬ್ಯಾಂಕ್ 375 ದಶಲಕ್ಷ ಅಮೆರಿಕನ್ ಡಾಲರ್ ಗಳನ್ನು ಜಲ ಮಾರ್ಗ ವಿಕಾಸ ಯೋಜನೆ (ಜೆ.ಎಂ.ವಿ.ಪಿ.)ಗೆ ಸಾಲ ಮಂಜೂರು ಮಾಡಿದೆ. 2017-18ನೇ ಸಾಲಿನಲ್ಲಿ ಜೆಎಂವಿಪಿಯ 1715 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಪೈಕಿ, ವಿಶ್ವಬ್ಯಾಂಕ್ ಸಾಲದ ಮೊತ್ತದಲ್ಲಿ 857.50 ಕೋಟಿ ರೂಪಾಯಿಗಳನ್ನು ಜಮಾ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಆ ಪ್ರಕಾರವಾಗಿ 2017-18ನೇ ಸಾಲಿನಲ್ಲಿ ಒಟ್ಟು ಅಗತ್ಯವಿರುವ ನಿಧಿ 2412.50 ಕೋಟಿ ರೂಪಾಯಿಗಳಾಗಿವೆ. 2016-17ರಲ್ಲಿ ಐ.ಡಬ್ಲ್ಯು.ಎ.ಐ. ಬಂಡವಾಳ ಸ್ವತ್ತಿನ ಸೃಷ್ಟಿಗಾಗಿ ಸುಮಾರು 296.60 ಕೋಟಿ ರೂಪಾಯಿಗಳ ಮೊತ್ತವನ್ನು ಹಂಚಿಕೆ ಮಾಡಿತ್ತು, ಇದನ್ನು 2017-18ರ ಬಿ.ಇ.ಯಲ್ಲಿ 228 ಕೋಟಿ ರೂಪಾಯಿಗಳಿಗೆ ಇಳಿಸಲಾಯಿತು. ಈ ಕಂದಕವನ್ನು ತುಂಬುವುದು ಬಾಂಡ್ ಮೂಲಕ ಎತ್ತುವಳಿಯ ಉದ್ದೇಶವಾಗಿದೆ.
ಅಗತ್ಯ ಕಂಡು ಬಂದಾಗ ಮತ್ತು ಬಾಂಡ್ ಸೇವೆಯ ಅಗತ್ಯಗಳನ್ನು ಪೂರೈಸಲು ಶಿಪ್ಪಿಂಗ್ ಸಚಿವಾಲಯದ ಬೇಡಿಕೆಯಂತೆ 660 ಕೋಟಿ ರೂಪಾಯಿಗಳ ಇಬಿಆರ್ ಗೆ ಸಂಬಂಧಿಸಿದಂತೆ ಅಸಲು ಮತ್ತು ಬಡ್ಡಿಯನ್ನು ಭಾರತ ಸರ್ಕಾರ ಸೂಕ್ತ ಬಜೆಟ್ ಅವಕಾಶಗಳ ಮೂಲಕ ಒದಗಿಸಲಿದೆ, ಬಡ್ಡಿ ಪಾವತಿಯು ಅರೆ ವಾರ್ಷಿಕ ಮತ್ತು ಅಸಲು ಪಾವತಿ ಮೆಚ್ಯೂರಿಟಿಯ ಆಧಾರದಲ್ಲಿರುತ್ತದೆ.
ಇಡೀ ಪ್ರಕ್ರಿಯೆಯನ್ನು ಐ.ಡಬ್ಲ್ಯು.ಎ.ಐ. ಲೀಡ್ ಮ್ಯಾನೇಜರ್ ಗಳ ನೇಮಕ ಮತ್ತು ಸೆಬಿಯೊಂದಿಗಿನ ಸಹಯೋಗದೊಂದಿಗೆ ಕೈಗೊಳ್ಳುತ್ತದೆ. ನಿಧಿಯನ್ನು ಸಾಲಗಾರರಿಂದ ಬರುವ ಆರರ್ಷಕ ಹರಿವಿನ ಗಾತ್ರವನ್ನು ಗಮನದಲ್ಲಿಟ್ಟುಕೊಂಡು 2 ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. 2017-18ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಅದರಲ್ಲೂ 2017-18ನೇ ಸಾಲಿನ ಕೊನೆಯ ಎರಡು ತಿಂಗಳುಗಳಲ್ಲಿ ಸಾಲ ಪಡೆಯುವುದನ್ನು ತಡೆಯಲಾಗುತ್ತದೆ.
ಹಿನ್ನೆಲೆ:
ರಾಷ್ಟ್ರೀಯ ಜಲ ಮಾರ್ಗ ಕಾಯಿದೆ 2016ರ ಅಡಿಯಲ್ಲಿ 106 ಹೊಸ ರಾಷ್ಟ್ರೀಯ ಜಲ ಮಾರ್ಗಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಹಣಕಾಸಿನ ನೆರವು ಭಾರತ ಸರ್ಕಾರದ ಒಟ್ಟು ಬಜೆಟ್ ಬೆಂಬಲ ಮತ್ತು ಬಾಹ್ಯ ಹಣಕಾಸು ಬೆಂಬಲವು ಒಟ್ಟಾರೆ ಸಾಲದಾಗಿದೆ. ಹೀಗಾಗಿ ಉಳಿಕೆ 660 ಕೋಟಿ ರೂಪಾಯಿ (ರೂ.1000 ಕೋಟಿ – ರೂ. 340 ಕೋಟಿ ಎತ್ತುವಳಿ ಮತ್ತು 2016-17ರಲ್ಲಿ ಬಳಸಲಾಗಿರುವುದು) ಗಳಿಗಾಗಿ ಇಬಿಆರ್ ಗಳ ಮೂಲಕ ಹಣ ಎತ್ತುವಳಿಗೆ ಅನುಮತಿಯನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ.
2016-17ನೇ ಸಾಲಿನ ಬಜೆಟ್ ಭಾಷಣದಲ್ಲಿ ಮಾನ್ಯ ಹಣಕಾಸು ಸಚಿವರು ಈ ಕೆಳಕಂಡಂತೆ ಹೇಳಿದ್ದರು:
“ಮೂಲಸೌಕರ್ಯಗಳಿಗೆ ಹಣಕಾಸು ಹೆಚ್ಚಳಕ್ಕಾಗಿ, ಸರ್ಕಾರ 2016-17ನೇ ಸಾಲಿನಲ್ಲಿ ಬಾಂಡ್ ಮೂಲಕ ಹಣ ಎತ್ತುವಳಿಗೆ ಎನ್.ಎಚ್.ಎ.ಐ, ಆರ್.ಎಫ್.ಸಿ., ಆರ್.ಇ.ಜಿ., ಐಆರ್.ಇ.ಡಿ.ಎ, ನಬಾರ್ಡ್ ಮತ್ತು ಐಡಬ್ಲ್ಯುಎಐಗಳಿಗೆ ರೂ.31.300 ಕೋಟಿ ರೂಪಾಯಿಗಳ ಹೆಚ್ಚುವರಿ ಹಣ ಕ್ರೋಡೀಕರಣಕ್ಕೆ ಅನುಮೋದನೆ ನೀಡುತ್ತದೆ.”
ಈ ಪ್ರಕಟಣೆಯ ಅನ್ವಯ, 2016-17ರಲ್ಲಿ ಪ್ರಥಮ ಬಾರಿಗೆ ಐಡಬ್ಲ್ಯುಎಐಗೆ 1000 ಕೋಟಿ ರೂಪಾಯಿ ಮೌಲ್ಯದ ಮೂಲ ಸೌಕರ್ಯ ಬಾಂಡ್ ಬಿಡುಗಡೆಗೆ ಅವಕಾಶ ನೀಡಲಾಗಿತ್ತು. ಇದು ಅದರ ಪ್ರಥಮ ಪ್ರಯತ್ನವಾದ್ದರಿಂದ, ಅದು ಒಳನಾಡ ಜಲ ಮಾರ್ಗ ಮತ್ತು ಶಿಪ್ಪಿಂಗ್ ಮೂಲಸೌಕರ್ಯಕ್ಕಾಗಿ 2016-17ನೇ ಸಾಲಿನಲ್ಲಿ ಶೇ.7.9ರ ಕೂಪನ್ ದರದಲ್ಲಿ 01.03.2017ರಲ್ಲಿ 340 ಕೋಟಿ ರೂಪಾಯಿಗಳನ್ನು ಇ ಬಿಡ್ಡಿಂಗ್ ಮೂಲಕ ಎತ್ತುವಳಿ ಮಾಡುವಲ್ಲಿ ಯಶಸ್ವಿಯಾಗಿತ್ತು.
****
AKT/VBA/SH