Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಚೈನ ಮತ್ತು ದಕ್ಷಿಣ ಆಫ್ರಿಕಾ ನಡುವೆ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಎಂ.ಓ.ಸಿ.ಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ ಒಕ್ಕೂಟ, ಚೈನಾ ಮತ್ತು ದಕ್ಷಿಣ ಆಫ್ರಿಕಾದ ಕಂದಾಯ ಆಡಳಿತಗಳ ನಡುವೆ ತೆರಿಗೆ ವಿಚಾರಗಳಿಗೆ ಸಂಬಂಧಿಸಿದಂತೆ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.


ಉದ್ದೇಶ:

ಈ ಸಹಕಾರ ಒಪ್ಪಂದವು, ತೆರಿಗೆ ವಿಚಾರಗಳ ಸಮಾನ ಆಸಕ್ತಿಯ ಕ್ಷೇತ್ರಗಳಲ್ಲಿ ಮತ್ತು ಸಾಮರ್ಥ್ಯ ವರ್ಧನೆ ಹಾಗೂ ಜ್ಞಾನ ವಿನಿಮಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ಕಂದಾಯ ಆಡಳಿತಗಳ ನಡುವೆ ಸಹಕಾರವನ್ನು ಮತ್ತಷ್ಟು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಅಂತಾರಾಷ್ಟ್ರೀಯ ತೆರಿಗೆ ಕ್ಷೇತ್ರದಲ್ಲಿನ ಸಮಕಾಲೀನ ವಿಚಾರಗಳ ಬಗ್ಗೆ ಚರ್ಚಿಸಲು ಮತ್ತು ತೆರಿಗೆಯ ವಿಚಾರಗಳಲ್ಲಿ ಸಮಾನ ಆಸಕ್ತಿಯ ಕ್ಷೇತ್ರಗಳಲ್ಲಿ ಮಾತುಕತೆ ಮುಂದುವರಿಸಲು ಮತ್ತು ತಜ್ಞರ ಭೇಟಿ ಹಾಗೂ ಸಭೆಯಲ್ಲಿ ತಜ್ಞರ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ನಿಟ್ಟಿನಲ್ಲಿ ಶ್ರಮಿಸಲು ಬ್ರಿಕ್ಸ್ ಕಂದಾಯ ಆಡಳಿತದ ಮುಖ್ಯಸ್ಥರ ನಡುವೆ ನಿಯಮಿತ ಸಂವಾದಕ್ಕೆ ಅವಕಾಶ ಒದಗಿಸುತ್ತದೆ. ಇದರ ಜೊತೆಗೆ ಸಹಕಾರ ಒಪ್ಪಂದವು ಈ ಎಂ.ಓ.ಸಿ.ಅಡಿಯಲ್ಲಿ ವಿನಿಮಯ ಮಾಡಿಕೊಂಡ ಮಾಹಿತಿಯ ಗೌಪ್ಯತೆ ಮತ್ತು ರಕ್ಷಣೆ ಒದಗಿಸುತ್ತದೆ.

ಪರಿಣಾಮ:

ಈ ಸಹಕಾರ ಒಪ್ಪಂದವು ತೆರಿಗೆ ವಿಚಾರಗಳಲ್ಲಿ ಸಮರ್ಥ ಸಹಕಾರವನ್ನು ಉತ್ತೇಜಿಸುತ್ತದೆ. ಬ್ರಿಕ್ಸ್ ರಾಷ್ಟ್ರಗಳ ಸಂಘಟಿತ ನಿರ್ಧಾರವು ಈ ದೇಶಗಳಿಗೆ ಮಾತ್ರವೇ ಅಲ್ಲ, ಜೊತೆಗೆ ಜಿ 20 ಮುನ್ನಡೆಸುವ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ದೀರ್ಘಕಾಲದಲ್ಲಿ ತೆರಿಗೆ ವಿಚಾರದಲ್ಲಿ ಸಹಕಾರಿ ಎಂಬುದು ಸಾಬೀತಾಗಿದೆ.

ಹಿನ್ನೆಲೆ:

2016 ರ ಅಕ್ಟೋಬರ್ 16 ರ ಗೋವಾ ಘೋಷಣೆಯಲ್ಲಿ ಉಲ್ಲೇಖಿಸಿರುವಂತೆ ಮುಕ್ತವಾಗಿ, ಐಕಮತ್ಯದಿಂದ, ಸಮಾನತೆಯಿಂದ, ಪರಸ್ಪರ ಅರ್ಥಮಾಡಿಕೊಳ್ಳುವಿಕೆಗೆ,ಅಂತರ್ಗತತೆಗೆ ಮತ್ತು ಪರಸ್ಪರ ಪ್ರಯೋಜನಕಾರಿ ಸಹಕಾರಕ್ಕೆ ಅಸ್ತಿತ್ವದಲ್ಲಿರುವ ಬದ್ಧತೆಯ ಆಧಾರದ ಮೇಲೆ .ತೆರಿಗೆ ಸಂಬಂಧಿತ ವಿಚಾರಗಳ ಸಹಕಾರ ಕ್ಷೇತ್ರದಲ್ಲಿನ ಚರ್ಚೆಗಾಗಿ ಮತ್ತು ಅಭಿಪ್ರಾಯಗಳ ವಿನಿಮಯಕ್ಕಾಗಿ ಬ್ರಿಕ್ಸ್ ರಾಷ್ಟ್ರಗಳ ಕಂದಾಯ ಮುಖ್ಯಸ್ಥರು ನಿಯಮಿತವಾಗಿ ಸಭೆ ನಡೆಸುತ್ತಿವೆ. ಬ್ರಿಕ್ಸ್ ರಾಷ್ಟ್ರಗಳು ಸಮಾನ ಆಸಕ್ತಿಯ ನಾಲ್ಕು ಕ್ಷೇತ್ರಗಳನ್ನು ಗುರುತಿಸಿದ್ದು, ಅದರ ಮೇಲಿನ ಸಹಕಾರ ಮತ್ತು ತಿಳಿವಳಿಕೆಯನ್ನು ಮತ್ತಷ್ಟು ಬಲಪಡಿಸಬಹುದಾಗಿದೆ. 2016ರ ಮೇನಲ್ಲಿ ಚೈನಾದ ಬೀಜಿಂಗ್ ನಲ್ಲಿ ನಡೆದ ಎಫ್.ಟಿ.ಎ. ಸರ್ವ ಸದಸ್ಯರ ಸಭೆಯ ವೇಳೆ ಬ್ರಿಕ್ಸ್ ರಾಷ್ಟ್ರಗಳ ಕಂದಾಯ ಮುಖ್ಯಸ್ಥರು ಈ ಕ್ಷೇತ್ರಗಳ ಸಹಕಾರಕ್ಕೆ ಒತ್ತು ನೀಡಲು ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ನಿರ್ಧರಿಸಿದ್ದವು.

****

AKT/VBA/SH