Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ, ಎಂಪಿ ಶ್ರೀಮತಿ ಜ್ಯೂಲಿ ಬಿಷಪ್ ರಿಂದ ಪ್ರಧಾನಿ ಭೇಟಿ

ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ, ಎಂಪಿ ಶ್ರೀಮತಿ ಜ್ಯೂಲಿ ಬಿಷಪ್ ರಿಂದ ಪ್ರಧಾನಿ ಭೇಟಿ


ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ, ಎಂ.ಪಿ. ಶ್ರೀಮತಿ ಜ್ಯೂಲಿ ಬಿಷಪ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಿ ಮೋದಿ ಅವರು ಪ್ರಧಾನಮಂತ್ರಿ ಟರ್ನ್ ಬುಲ್ ಅವರು 2017ರ ಏಪ್ರಿಲ್ ನಲ್ಲಿ ಭಾರತಕ್ಕೆ ನೀಡಿದ್ದ ಯಶಸ್ವೀ ಭೇಟಿಯನ್ನು ಆತ್ಮೀಯವಾಗಿ ಸ್ಮರಿಸಿದರು ಮತ್ತು 2014ರಲ್ಲಿ ತಾವು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ ದ್ವಿಪಕ್ಷೀಯ ಬಾಂಧವ್ಯ ಆಳವಾಗಿದೆ ಎಂದು ಹೇಳಿದರು.

ಶ್ರೀಮತಿ ಬಿಷಪ್ ಅವರು ಪ್ರಧಾನಮಂತ್ರಿಯವರಿಗೆ 2017ರ ಏಪ್ರಿಲ್ ನಲ್ಲಿ ಪ್ರಧಾನಮಂತ್ರಿ ಮಾಲ್ಕಂ ಟರ್ನ್ ಬುಲ್ ಅವರು ಭಾರತ ಭೇಟಿ ನೀಡಿದ ನಂತರ ದ್ವಿಪಕ್ಷೀಯ ಬಾಂಧವ್ಯದಲ್ಲಿ ಆಗಿರುವ ಪ್ರಗತಿಯ ಬಗ್ಗೆ ವಿವರಿಸಿದರು.

ಪ್ರಧಾನ ಮಂತ್ರಿಯವರು ಮತ್ತು ಶ್ರೀಮತಿ ಬಿಷಪ್ ಅವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಬಗ್ಗೆ ಚರ್ಚಿಸಿದರು.
ಪ್ರಧಾನಮಂತ್ರಿ ಮೋದಿ ಅವರು, ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಸೌರ ಸಹಯೋಗದಲ್ಲಿ ಸೇರ್ಪಡೆಯಾಗಿರುವುದನ್ನು ಸ್ವಾಗತಿಸಿದರು, ಮತ್ತು ಆಸ್ಟ್ರೇಲಿಯಾದ ಸದಸ್ಯತ್ವವು ಸಹಯೋಗಕ್ಕೆ ದೊಡ್ಡ ಚೈತನ್ಯ ನೀಡಲಿದೆ ಎಂದು ತಿಳಿಸಿದರು.

***

AKT/AK