ಪ್ರಧಾನಮಂತ್ರಿಶ್ರೀ ನರೇಂದ್ರ ಮೋದಿ ಅವರಅಧ್ಯಕ್ಷತೆಯಲ್ಲಿನಡೆದಕೇಂದ್ರಸಚಿವಸಂಪುಟಸಭೆ, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಹೂಡಿಕೆಯ ಉತ್ತೇಜನ ಮತ್ತು ರಕ್ಷಣೆ ಕುರಿತ ಒಪ್ಪಂದದ ವಿವರಣಾತ್ಮಕ ಟಿಪ್ಪಣಿ (ಜೆಐಎನ್)ಗಳಿಗೆ ತನ್ನ ಅನುಮೋದನೆ ನೀಡಿದೆ.
ಈ ಜೆಐಎನ್ ಹಾಲಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಹೂಡಿಕೆಯ ಉತ್ತೇಜನ ಮತ್ತು ರಕ್ಷಣೆಗಾಗಿ ಇರುವ ಒಪ್ಪಂದ (ಬಿಐಪಿಎ)ದ ವಿವರಣೆಗೆ ಸ್ಪಷ್ಟತೆಯನ್ನು ಒದಗಿಸುತ್ತದೆ. ಜೆಐಎನ್ ತೆರಿಗೆ ಕ್ರಮಗಳನ್ನು ಹೊರಗಿಡುವುದು, ನ್ಯಾಯಸಮ್ಮತ ಮತ್ತು ಸಮಾನ ಉಪಚಾರ (ಎಫ್.ಇ.ಟಿ.), ರಾಷ್ಟ್ರೀಯ ಉಪಚಾರ (ಎನ್ಟಿ) ಮತ್ತು ಹೆಚ್ಚು ಅನುಕೂಲಕರ ರಾಷ್ಟ್ರ (ಎಂ.ಎಫ್.ಎನ್) ಉಪಚಾರ, ವೆಚ್ಚ, ಅಗತ್ಯ ಸುರಕ್ಷತಾ ಹಿತಾಸಕ್ತಿಗಳು ಮತ್ತು ಹೂಡಿಕೆದಾರರ ಮತ್ತು ಗುತ್ತಿಗೆ ಪಕ್ಷದ ನಡುವಿನ ವಿವಾದ ಬಗೆಹರಿಸುವುದು, ಹೂಡಿಕೆದಾರ, ಹೂಡಿಕೆ ಎಂಬ ಪದಗಳು ಸೇರಿದಂತೆ ಜಂಟಿಯಾಗಿ ಅಳವಡಿಸಿಕೊಂಡ ಹಲವು ನಿಬಂಧನೆಗಳ ವಿವರಣಾತ್ಮಕ ಟಿಪ್ಪಣಿಗಳನ್ನು ಒಳಗೊಂಡಿದೆ.
ಜಂಟಿ ವಿವರಣಾತ್ಮಕ ಹೇಳಿಕೆಗಳು ಸಾಮಾನ್ಯವಾಗಿ ಹೂಡಿಕೆಯ ಆಡಳಿತ ಒಪ್ಪಂದವನ್ನು ಬಲಪಡಿಸಲು ಮಹತ್ವದ ಪೂರಕ ಪಾತ್ರವನ್ನು ನಿರ್ವಹಿಸುತ್ತವೆ. ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ)ದ ವಿವಾದಗಳ ಹೆಚ್ಚಳದೊಂದಿಗೆ, ಅಂತಹ ಹೇಳಿಕೆಗಳ ವಿತರಣೆ ನ್ಯಾಯಮಂಡಳಿಗಳ ಮುಂದೆ ಬಲವಾದ ಪ್ರೇರಿತ ಮೌಲ್ಯವನ್ನು ಹೊಂದಿರುತ್ತವೆ. ದೇಶಗಳ ಅಂಥ ಸಕ್ರಿಯ ನಿಲುವು ಪಂಚಾಯ್ತಿ ನ್ಯಾಯಮಂಡಳಿಗಳ ಮೂಲಕ ಒಪ್ಪಂದದ ನಿಯಮಗಳನ್ನು ಹೆಚ್ಚು ಊಹಿಸಬಹುದಾದ ಮತ್ತು ಸುಸಂಬದ್ಧವಾಗಿ ಓದಿಕೊಳ್ಳುವುದನ್ನು ಪೋಷಿಸುತ್ತದೆ.
***
AKT/VBA