Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನ ಸೆಂಟ್ರಲ್ಹಾ್ಲ್ನಿಂತದ ಭಾರತದಲ್ಲಿ ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ – ಜಿಎಸ್ಟಿ> ಜಾರಿ

s20170701110499


ಸರಕು ಮತ್ತು ಸೇವಾ ತೆರಿಗೆ – ಜಿಎಸ್ಟಿ್ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಸಂಸತ್ತಿನ ಐತಿಹಾಸಿಕ ಸೆಂಟ್ರಲ್ಹಾ ಲ್ನೆಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು. ಅದಕ್ಕೂ ಮುನ್ನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೈಟ್ಲಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಈ ದಿನ ದೇಶದ ಭವಿಷ್ಯದ ದಿಕ್ಕು ನಿರ್ಧರಿಸುವ ಬದಲಾಯಿಸುವ ನಿರ್ಣಾಯಕ ದಿನವಾಗಿದೆ ಎಂದು ಹೇಳಿದ್ದಾರೆ.

ಸೆಂಟ್ರಲ್ಹಾನಲ್ ಈ ಹಿಂದೆ ಮೊದಲ ಸಂಸದೀಯ ಸಭೆ, ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂವಿಧಾನದ ಅಳವಡಿಕೆಯಂತಹ ಹಲವು ಐತಿಹಾಸಿಕ ಸಂದರ್ಭಗಳಿಗೆÉ ಸಾಕ್ಷಿಯಾಗಿರುವುದನ್ನು ಅವರು ಸ್ಮರಿಸಿದರು. ಜಿಎಸ್ಟಿ್, ಒಕ್ಕೂಟ ಸಹಕಾರಕ್ಕೆ ಉದಾಹರಣೆ ಎಂದು ಪ್ರಧಾನಿ ಬಣ್ಣಿಸಿದರು.

ಚಾಣಕ್ಯನನ್ನು ಉಲ್ಲೇಖಿಸಿದ ಪ್ರಧಾನಿ, ಕಠಿಣ ಪರಿಶ್ರಮದಿಂದ ಎಲ್ಲ ಬಗೆಯ ಅಡೆತಡೆಗಳನ್ನು ಮೀರಲು ಸಾಧ್ಯ ಮತ್ತು ಅತ್ಯಂತ ಕಷ್ಟಕರ ಧ್ಯೇಯೋದ್ದೇಶಗಳ ಸಾಧನೆಗೆ ಅದು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. ಹಿಂದೆ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ದೇಶದ ಏಕೀಕರಣದ ಭರವಸೆ ನೀಡಿದ್ದಂತೆಯೇ, ಜಿಎಸ್ಟಿದ ಆರ್ಥಿಕ ಏಕೀಕರಣದ ಭರವಸೆಯನ್ನು ನೀಡುತ್ತದೆ ಎಂದರು. ಖ್ಯಾತ ವಿಜ್ಞಾನಿ ಆಲ್ಬರ್ಟ್ ಐಸ್ಟೈನ್ಅಎನ್ನು ಸ್ಮರಿಸಿದ ಅವರು ವಿಶ್ವದಲ್ಲಿ ಅರ್ಥಮಾಡಿಕೊಳ್ಳಲಾಗದ ಅತ್ಯಂತ ಕ್ಲಿಷ್ಟಕರ ಸಂಗತಿ ಎಂದರೆ ಆದಾಯ ತೆರಿಗೆ ಎಂದಿದ್ದರು. ಜಿಎಸ್ಟಿಮ ಒಂದು ರಾಷ್ಟ್ರ – ಒಂದು ತೆರಿಗೆ ಬಯಸುತ್ತದೆ. ಜಿಎಸ್ಟಿತಯಿಂದಾಗಿ ಸಾಕಷ್ಟು ಸಮಯ ಹಾಗೂ ವೆಚ್ಚ ಉಳಿತಾಯವಾಗಲಿದೆ ಎಂದವರು ಹೇಳಿದರು. ರಾಜ್ಯಗಳ ಗಡಿಯಲ್ಲಿ ಆಗುತ್ತಿದ್ದ ಅನಗತ್ಯ ವಿಳಂಬವನ್ನು ತಪ್ಪಿಸುತ್ತದೆ, ಇದರಿಂದ ಇಂಧನ ಉಳಿತಾಯವಾಗುವ ಜತೆಗೆ ಪರಿಸರ ರಕ್ಷಣೆÉಗೂ ಸಹಕಾರಿ ಎಂದರು. ಜಿಎಸ್ಟಿಎ ಆಧುನಿಕ ತೆರಿಗೆ ಆಡಳಿತವನ್ನು ಮತ್ತಷ್ಟು ಸರಳ ಮತ್ತು ಪಾರದರ್ಶಕಗೊಳಿಸುವುದರ ಜತೆಗೆ ಭ್ರಷ್ಟಾಚಾರವನ್ನು ನಿಗ್ರಹಿಸುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಜಿಎಸ್ಟಿಸ ಅಂದರೆ, ‘ಗುಡ್ ಸಿಂಪಲ್ ಟ್ಯಾಕ್ಸ್’ (ಒಳ್ಳೆಯ ಮತ್ತು ಸರಳ ತೆರಿಗೆ)ಎಂದು ಬಣ್ಣಿಸಿದ ಪ್ರಧಾನಿ, ಅದರಿಂದ ಅಂತಿಮವಾಗಿ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ ಎಂದರು. ಋಗ್ವೇದದ ಶ್ಲೋಕವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಸಾಮಾನ್ಯ ಗುರಿಯ ಸ್ಫೂರ್ತಿ ಮತ್ತು ಸಾಮಾನ್ಯ ಬದ್ಧತೆಯಿಂದಾಗಿ ಸಮಾಜಕ್ಕೆ ಪರಸ್ಪರ ಮತ್ತು ಹಂಚಿಕೆಯ ಪ್ರಯೋಜನ ಕಲ್ಪಿಸಲು ಸಾಧ್ಯ ಎಂದರು.