Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಹ್ಮದಾಬಾದ್ ಸಬರಮತಿ ಆಶ್ರಮದ ಶತಮಾನೋತ್ಸವ ವರ್ಷದ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ

ಅಹ್ಮದಾಬಾದ್ ಸಬರಮತಿ ಆಶ್ರಮದ ಶತಮಾನೋತ್ಸವ ವರ್ಷದ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ

ಅಹ್ಮದಾಬಾದ್ ಸಬರಮತಿ ಆಶ್ರಮದ ಶತಮಾನೋತ್ಸವ ವರ್ಷದ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಗುಜರಾತ್ ಸಬರಮತಿ ಆಶ್ರಮದ ಶತಮಾನೋತ್ಸವ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾತ್ಮಾಗಾಂಧಿ ಅವರ ಚಿಂತನೆಗಳಲ್ಲಿ ಇಂದು ವಿಶ್ವ ಎದುರಿಸುತ್ತಿರುವ ಸವಾಲುಗಳೆಲ್ಲವನ್ನೂ ತಗ್ಗಿಸುವ ಶಕ್ತಿ ಇದೆ ಎಂದರು.

ಒಂದು ಸಮಾಜವಾಗಿ ನಮ್ಮ ಇತಿಹಾಸದೊಂದಿಗೆ ಸಂಪರ್ಕಿತವಾಗುವುದು ಅಗತ್ಯವಾಗಿದೆ ಎಂದರು. ಶ್ರೀಮದ್ ರಾಜ್ ಚಂದ್ರಜೀ ಅವರ 150ನೇ ಜಯಂತಿ ಸಂದರ್ಭದಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ, ಮೋದಿ, ಅವರ ಬದುಕು ಮತ್ತು ಚಿಂತನೆಗಳ ಮೇಲೆ ಹೆಚ್ಚಿನ ಶೈಕ್ಷಣಿಕ ಅಧ್ಯಯನಕ್ಕೆ ಕರೆ ನೀಡಿದರು.

ಸ್ವಚ್ಛತೆಯ ಬಗ್ಗೆ ಮಾತನಾಡಿದ ಶ್ರೀ. ಮೋದಿ ಇದು ಹವ್ಯಾಸವಾಗಬೇಕು ಎಂದರು. ಇದು 2019ರಲ್ಲಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನೋತ್ಸವಕ್ಕೆ ಸಲ್ಲಿಸುವ ಗೌರವಾರ್ಪಣೆಯಾಗುತ್ತದೆ ಎಂದರು.

ವಿಶ್ವದ ಎಲ್ಲರೂ ಸಬರಮತಿ ಆಶ್ರಮಕ್ಕೆ ಭೇಟಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ಗೋ ಸಂರಕ್ಷಣೆಯ ಬಗ್ಗೆ ಬಲವಾದ ಹೇಳಿಕೆ ನೀಡಿದ ಪ್ರಧಾನಮಂತ್ರಿಯವರು, ‘ನಮ್ಮದು ಅಹಿಂಸೆಯ ಭೂಮಿ. ನಮ್ಮದು ಮಹಾತ್ಮಾಗಾಂಧಿ ಅವರ ನೆಲೆ. ಮಹಾತ್ಮಾಗಾಂಧಿ ಮತ್ತು ಆಚಾರ್ಯ ವಿನೋಭಾ ಭಾವೆ ಅವರಿಗಿಂತ ಯಾರೊಬ್ಬರೂ ಗೋ ಸಂರಕ್ಷಣೆಯ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಹೌದು ಇದು ಆಗಲೇಬೇಕು ಎಂದರು.’

ಆದಾಗ್ಯೂ, ಗೋಭಕ್ತಿಯ ಹೆಸರಿನಲ್ಲಿ ಜನರ ವಧೆ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದೂ ಪ್ರತಿಪಾದಿಸಿದರು. ಮಹಾತ್ಮಾ ಗಾಂಧಿಯವರು ಕೂಡ ಇದನ್ನು ಅನುಮೋದಿಸುತ್ತಿರಲಿಲ್ಲ ಎಂದು ಹೇಳಿದರು. ಒಂದು ಸಮಾಜವಾಗಿ, ಇಲ್ಲಿ ಹಿಂಸೆಗೆ ಅವಕಾಶವಿಲ್ಲ; ಈ ದೇಶದಲ್ಲಿ ಯಾರೊಬ್ಬರಿಗೂ (ಆಕೆ ಅಥವಾ ಆತನಿಗೆ) ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರವಿಲ್ಲ ಎಂದೂ ಹೇಳಿದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೆಮ್ಮೆಪಡುವಂಥ ಮಹಾತ್ಮಾ ಗಾಂಧಿ ಅವರ ಕನಸಿನ ಭಾರತ ನಿರ್ಮಿಸಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ಪ್ರಧಾನಿ ಮನವಿ ಮಾಡಿದರು.

***

VBA/HS