Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೊಲಂಬೊದಲ್ಲಿ (ಮೇ 12, 2017) ನಡೆದ ಅಂತಾರಾಷ್ಟ್ರೀಯ ವೇಸಾಕ್ ದಿನ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ಪೂರ್ಣ ಪಾಠ.

ಕೊಲಂಬೊದಲ್ಲಿ (ಮೇ 12, 2017) ನಡೆದ ಅಂತಾರಾಷ್ಟ್ರೀಯ ವೇಸಾಕ್ ದಿನ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ಪೂರ್ಣ ಪಾಠ.

ಕೊಲಂಬೊದಲ್ಲಿ (ಮೇ 12, 2017) ನಡೆದ ಅಂತಾರಾಷ್ಟ್ರೀಯ ವೇಸಾಕ್ ದಿನ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ಪೂರ್ಣ ಪಾಠ.

ಕೊಲಂಬೊದಲ್ಲಿ (ಮೇ 12, 2017) ನಡೆದ ಅಂತಾರಾಷ್ಟ್ರೀಯ ವೇಸಾಕ್ ದಿನ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ಪೂರ್ಣ ಪಾಠ.


ಅತ್ಯಂತ ಗೌರವಾನ್ವಿತ ಶ್ರೀಲಂಕಾದ ಮಹಾ ನಾಯಕೊಂತೆರೊ ಅತ್ಯಂತ ಗೌರವಾನ್ವಿತ ಶ್ರೀಲಂಕಾದ ಸಂಗರಾಜತಾಯ್ರೋಸ್ ಗೌರವಾನ್ವಿತ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರೇ, ಶ್ರೀಲಂಕಾದ ಗೌರವಾನ್ವಿತ ಅಧ್ಯಕ್ಷರಾದ ಘನತೆವೆತ್ತ ಮೈತ್ರಿಪಾಲ ಸಿರಿಸೇನಾ, ಶ್ರೀಲಂಕಾದ ಗೌರವಾನ್ವಿತ ಪ್ರಧಾನಮಂತ್ರಿ ಘನತೆವೆತ್ತ ರಾನಿಲ್ ವಿಕ್ರಮೆಸಿಂಗ್ಹೆ, ಸಂಸತ್ತಿನ ಗೌರವಾನ್ವಿತ ಸ್ಪೀಕರ್ ಘನತೆವೆತ್ತ ಕಾರೊ ಜಯಸೂರ್ಯ
ಅತ್ಯಂತ ಗೌರವಾನ್ವಿತ ಡಾ. ಬ್ರಾಹ್ಮಿನ್ ಪಂಡಿತ್ ವೇಸಕ್ ದಿನದ ಅಂತಾರಾಷ್ಟ್ರೀಯ ಮಂಡಳಿಯ ಅಧ್ಯಕ್ಷರೇ,
ಗೌರವಾನ್ವಿತ ನಿಯೋಗಿಗಳೇ
ಮಾಧ್ಯಮದ ಸ್ನೇಹಿತರೇ
ಘನತೆವೆತ್ತವರೇ, ಮಹಿಳೆಯರೆ ಮತ್ತು ಮಹನೀಯರೇ, ನಮಸ್ಕಾರ, ಆಯುಬುವನ್
 
 
ವೇಸಕ್ ಅತ್ಯಂತ ಪವಿತ್ರ ದಿನವಾಗಿದೆ.
ಮಾನವತೆಯು ಗೌರವಿಸಬೇಕಾದ ಬುದ್ಧನ ಜ್ಞಾನೋದಯ ಮತ್ತು ಜನ್ಮದ ದಿನ ಮತ್ತು ಬುದ್ಧನ ಪರಿನಿಬ್ಬಾನ-ತಥಾಗಥಾ, ಬುದ್ಧನಿಗಾಗಿ ಆನಂದದಿಂದ ಆಚರಿಸುವ ದಿನ, ಧಮ್ಮದ ಸಮಯಾತೀತ ಪ್ರಸ್ತುತತೆ ಮತ್ತು ಸರ್ವೋಚ್ಛ ಸತ್ಯ ಹಾಗೂ ನಾಲ್ಕು ಉದಾತ್ತ ಸತ್ಯಗಳನ್ನು ಪ್ರತಿಬಿಂಬಿಸುವ ದಿನ.
10 ಶ್ರೇಷ್ಟತೆಗಳ ಬಗ್ಗೆ ಆಲೋಚಿಸುವ ದಿನ.
ದಾನ (ಔದಾರ್ಯ), ಸೂಕ್ತ ನಡವಳಿಕೆ, ಸನ್ಯಾಸ (ತ್ಯಾಗ), ಜ್ಞಾನ, ಶಕ್ತಿ, ಸಹಿಷ್ಣುತೆ, ಸತ್ಯತೆ, ದೃಢ ನಿರ್ಧಾರ, ಪ್ರೀತಿಯ ದಯೆ ಮತ್ತು ಸಮಚಿತ್ತತೆ.
 
ಶ್ರೀಲಂಕಾದಲ್ಲಿನ ನಿಮಗೂ, ಭಾರತದಲ್ಲಿನ ನಮಗೂ ಮತ್ತು ವಿಶ್ವದಾದ್ಯಂತ ಬೌದ್ಧರೆಲ್ಲರಿಗೂ ಈ ದಿನ ಅಗಾಧವಾದ ಮಹತ್ವದ ದಿನವಾಗಿದೆ. ಕೊಲಂಬೊದಲ್ಲಿ ಈ ಅಂತಾರಾಷ್ಟ್ರೀಯ ವೇಸಕ್ ದಿನದ ಉತ್ಸವಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಗೌರವವನ್ನು ನನಗೆ ನೀಡಿದ್ದಕ್ಕಾಗಿ, ಘನತೆವೆತ್ತ ಅಧ್ಯಕ್ಷರಾದ ಮೈತ್ರಿಪಾಲ ಸಿರಿಸೇನಾ, ಘನತೆವೆತ್ತ ಪ್ರಧಾನಮಂತ್ರಿ ರಾನಿಲ್   ವಿಕ್ರಮಸಿಂಗ್ಹೆ ಮತ್ತು ಶ್ರೀಲಂಕಾದ ಜನರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಈ ಪವಿತ್ರ ಸಂದರ್ಭದಲ್ಲಿ ನಾನು ಶ್ರೇಷ್ಠ ಆತ್ಮ ಜ್ಞಾನೋದಯಪೂರ್ಣ ವ್ಯಕ್ತಿಯಾದ ಸಂಬುದ್ಧ ಅವರ ನೆಲದ 1.25 ಶತಕೋಟಿ ಜನರ ಶುಭಾಶಯಗಳನ್ನೂ ಕೂಡ ನಾನು ನಿಮಗಾಗಿ ತಂದಿದ್ದೇನೆ.
 
ಘನತೆವೆತ್ತವರೇ ಮತ್ತು ಸ್ನೇಹಿತರೇ,
ನಮ್ಮ ಪ್ರದೇಶ ಜಗತ್ತಿಗೆ ಬುದ್ಧ ಮತ್ತು ಆತನ ಬೋಧನೆಯ   ಅಮೂಲ್ಯ ಕೊಡುಗೆಯನ್ನು ನೀಡುವಲ್ಲಿ ಧನ್ಯತೆ ಪಡೆದಿದೆ.ರಾಜಕುಮಾರ ಸಿದ್ಧಾರ್ಥ ಬುದ್ಧನಾದ ಬೋಧ್ ಗಯಾ ಇಂದು ಬೌದ್ಧ ಜಗತ್ತಿನ ಪವಿತ್ರ ಕೇಂದ್ರವಾಗಿದೆ. 
ನಮ್ಮ ಸಂಸತ್ನಲ್ಲಿ ನಾನು ಪ್ರತಿನಿಧಿಸುವ ಗೌರವ ಲಭಿಸಿರುವ ವಾರಣಾಸಿಯಲ್ಲಿ ದೇವ ಬುದ್ಧ ಮೊದಲ ಬೋಧನೆಯನ್ನು ನೀಡಿದ್ದು, ಇದು ಧಮ್ಮ ಚಕ್ರದ ಚಾಲನೆಯನ್ನು ಆರಂಭಿಸಿತ್ತು. ನಮ್ಮ ಪ್ರಮುಖ ರಾಷ್ಟ್ರೀಯ ಚಿಹ್ನೆಗಳು ಬೌದ್ಧಮತದಿಂದ ಸ್ಫೂರ್ತಿ ಪಡೆದಿವೆ. 
ಬೌದ್ಧಮತ ಮತ್ತು ಅದರ ಹಲವಾರು ಎಳೆಗಳು ನಮ್ಮ ಆಡಳಿತ, ಸಂಸ್ಕೃತಿ, ತತ್ವಶಾಸ್ತ್ರದಲ್ಲಿ ಆಳವಾಗಿ ಇಳಿದಿವೆ. ಬೌದ್ಧಮತದ ದೈವೀಕ ಸುಗಂಧ ಭಾರತದಿಂದ ಭೂಗೋಳದ ಎಲ್ಲ ಮೂಲೆಗಳಿಗೆ ಹರಡಿದೆ. ರಾಜ ಅಶೋಕನ ಸಮರ್ಥ  ಮಕ್ಕಳಾದ ಮಹೀಂದ್ರ ಮತ್ತು ಸಂಘಮಿತ್ರ ಅವರು ಧಮ್ಮದ ಅತ್ಯಂತ ದೊಡ್ಡ ಕೊಡುಗೆಯನ್ನು ಹರಡಲು ಭಾರತದಿಂದ ಶ್ರೀಲಂಕಾಗೆ ಧರ್ಮದೂತರಾಗಿ ಪ್ರಯಾಣ ಬೆಳೆಸಿದ್ದರು. 
 
ಮತ್ತು ಬುದ್ಧ ಸ್ವತಃ ಹೇಳಿದಂತೆ : 
ಧಮ್ಮದ ಕೊಡುಗೆ ಎಲ್ಲದಕ್ಕಿಂತಲೂ ದೊಡ್ಡ ಕೊಡುಗೆ. 
ಇಂದು ಬೌದ್ಧ ಬೋಧನೆಗಳು ಮತ್ತು ಕಲಿಕೆಯ ಅತ್ಯಂತ ಪ್ರಮುಖ ಕೇಂದ್ರಗಳಲ್ಲಿ ಒಂದೆಂಬ ಹೆಮ್ಮೆಯನ್ನು ಶ್ರೀಲಂಕಾ ಹೊಂದಿದೆ. ಶತಮಾನಗಳ ನಂತರ ಅನಗರಿಕ ಧರ್ಮಪಾಲ ಇದೇ ರೀತಿಯ ಪ್ರಯಾಣ ಕೈಗೊಂಡಿದ್ದರು; ಆದರೆ ಈ ಬಾರಿ ಶ್ರೀಲಂಕಾದಿಂದ ಭಾರತಕ್ಕೆ ಬುದ್ಧತತ್ವದ ಮೂಲ ಭೂಮಿಯಲ್ಲೇ ಅದರ ಪುನರುಜ್ಜೀವನಕ್ಕಾಗಿ ಈ ಪ್ರಯಾಣ ಬೆಳೆಸಿದ್ದರು. ಇದೇ ರೀತಿಯಲ್ಲಿ ನೀವು ನಮ್ಮನ್ನು ನಮ್ಮ ಬೇರುಗಳಿಗೆ ಮತ್ತೆ ಒಯ್ದಿದ್ದಿರಿ. ಬೌದ್ಧ ಪರಂಪರೆಯ ಅತ್ಯಂತ ಪ್ರಮುಖ ಅಂಶಗಳನ್ನು ಸಂರಕ್ಷಿಸಿದ್ದಕ್ಕೆ ಶ್ರೀಲಂಕಾಗೆ ಜಗತ್ತು ಕೃತಜ್ಞತೆಯೊಂದಿಗೆ ಋಣಿಯಾಗಿದೆ. ನಾವು ಹಂಚಿಕೊಂಡಿರುವ ಬೌದ್ಧ   ಧರ್ಮದ ಮುರಿಯದ ಪರಂಪರೆಯನ್ನು ಆಚರಿಸಲು ವೇಸಕ್ ಒಂದು ಸಂದರ್ಭವಾಗಿದೆ. ಶತಮಾನಗಳಿಂದ ಈ ಪರಂಪರೆ ಪೀಳಿಗೆಗಳ ಉದ್ದಕ್ಕೂ ಸಂಪರ್ಕದ ಕೊಂಡಿಯಾಗಿದೆ. 
ಸ್ನೇಹಿತರೇ 
ಭಾರತ ಮತ್ತು ಶ್ರೀಲಂಕಾ ನಡುವಿನ ಸ್ನೇಹವನ್ನು ಈ ಅದ್ಭುತ ಗುರು ಕಾಲದಲ್ಲಿ ಕೆತ್ತಿಟ್ಟಿದ್ದಾನೆ. ನಮ್ಮ ಸಂಬಂಧಕ್ಕೆ ಬುದ್ಧ ಧರ್ಮ ಸದಾ ಇರುವಂತಹ ಹೊಳಪನ್ನು ನೀಡುತ್ತಿದೆ. ಹತ್ತಿರದ ನೆರೆಹೊರೆಯವರಾಗಿ ನಮ್ಮ ಸಂಬಂಧ ಹಲವು ಪದರಗಳ ಆಚೆಗೆ ಹರಡಿದೆ. ನಮ್ಮ ಪರಸ್ಪರ ಸಂಪರ್ಕಿತ ಬೌದ್ಧ ಧರ್ಮದ ಮೌಲ್ಯಗಳಿಂದ ಇದು ಶಕ್ತಿ ಪಡೆಯುತ್ತದೆ. ಅಲ್ಲದೆ, ನಾವು ಹಂಚಿಕೊಳ್ಳಬಹುದಾದ ಭವಿಷ್ಯದಿಂದ ಮಿತಿಯಿಲ್ಲದ ಸಾಧ್ಯತೆಗಳಿಂದಲೂ ಅದು ಶಕ್ತಿ ಪಡೆಯಲಿದೆ. ನಮ್ಮ ಸಮಾಜಗಳ ಚೌಕಟ್ಟು ಮತ್ತು ನಮ್ಮ ಜನರ ಹೃದಯದಲ್ಲಿ ವಾಸಿಸುವ ಸ್ನೇಹ ನಮ್ಮದಾಗಿದೆ. ನಮ್ಮ ಬೌದ್ಧ ಮತದ ಪರಂಪರೆಯ ಸಂಪರ್ಕಗಳನ್ನು ಮತ್ತಷ್ಟು ಆಳವಾಗಿಸಲು ಹಾಗೂ ಗೌರವಿಸಲು ಏರ್ ಇಂಡಿಯಾ ಪ್ರಸಕ್ತ ವರ್ಷದ ಆಗಸ್ಟ್  ನಿಂದ  ಕೊಲಂಬೊ ಮತ್ತು ವಾರಣಾಸಿಗಳ ನಡುವೆ  ನೇರ ವಿಮಾನ ಹಾರಾಟವನ್ನು ಆರಂಭಿಸಲಿದೆ ಎಂಬುದನ್ನು ಪ್ರಕಟಿಸುವಲ್ಲಿ ನನಗೆ ಅದ್ಭುತ ಸಂತಸವಾಗುತ್ತಿದೆ. ಇದರಿಂದ ಶ್ರೀಲಂಕಾದ ನನ್ನ ಸೋದರ-ಸೋದರಿಯರಿಗೆ ಬುದ್ಧನ ಸ್ಥಳಕ್ಕೆ ಪ್ರವಾಸ ಮಾಡಲು ಸುಲಭವಾಗಲಿದೆ. ಮತ್ತು ನಿಮಗೆ ನೇರವಾಗಿ ಶ್ರವಸ್ತಿ, ಕುಶಿನಗರ್, ಸಂಕಸ, ಕುಶಾಂಬಿ ಮತ್ತು ಸಾರಾನಾಥ  ಗಳನ್ನು ನೇರವಾಗಿ ಸಂದರ್ಶಿಸಲು ಸಹಾಯ ಮಾಡಲಿದೆ. ನನ್ನ ತಮಿಳು ಸೋದರರು ಮತ್ತು ಸೋದರಿಯರು ಕಾಶಿ ವಿಶ್ವನಾಥನ ಸ್ಥಳವಾದ ವಾರಣಾಸಿಯನ್ನು ಸಂದರ್ಶಿಸಲು ಸಾಧ್ಯವಾಗಲಿದೆ. 
 
ಗೌರವಾನ್ವಿತ ಸಂನ್ಯಾಸಿಗಳೇ, ಘನತೆವೆತ್ತವರೆ ಮತ್ತು ಸ್ನೇಹಿತರೆ, ಶ್ರೀಲಂಕಾದೊಂದಿಗೆ ನಮ್ಮ ಸಂಬಂಧಗಳಲ್ಲಿ ಅದ್ಭುತ ಅವಕಾಶಗಳ ಕ್ಷಣದಲ್ಲಿ ನಾವಿದ್ದೇವೆ ಎಂದು ನಾನು ನಂಬಿದ್ದೇನೆ. ಹಲವಾರು ಕ್ಷೇತ್ರಗಳಲ್ಲಿ ನಮ್ಮ ಪಾಲುದಾರಿಕೆಯಲ್ಲಿ ಅದ್ಭುತ ಸುಧಾರಣೆಯನ್ನು ಸಾಧಿಸುವ ಅವಕಾಶ ಇಲ್ಲಿದೆ ಮತ್ತು ನಮಗೆ, ನಿಮ್ಮ ಪ್ರಗತಿ ಮತ್ತು ಯಶಸ್ಸು ನಮ್ಮ ಸ್ನೇಹದ ಯಶಸ್ಸಿನ ಅತ್ಯಂತ ಪ್ರಸ್ತುತ ಮಾನದಂಡವಾಗಲಿದೆ. ನಮ್ಮ ಶ್ರೀಲಂಕಾದ ಸಹೋದರ-ಸಹೋದರಿಯರ ಆರ್ಥಿಕ ಸಮೃದ್ಧಿಗೆ ನಾವು ಬದ್ಧತೆ ಹೊಂದಿದ್ದೇವೆ. ನಮ್ಮ ಅಭಿವೃದ್ಧಿ ಪೂರ್ಣ ಸಹಕಾರವನ್ನು ಮತ್ತಷ್ಟು ಆಳವಾಗಿಸಲು ಸಕಾರಾತ್ಮಕ ಬದಲಾವಣೆ ಮತ್ತು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವಲ್ಲಿ ಹೂಡಿಕೆ ನಡೆಸುವುದನ್ನು ನಾವು ಮುಂದುವರಿಸಲಿದ್ದೇವೆ. ಮಾರಾಟ ಮತ್ತು ಹೂಡಿಕೆಯಲ್ಲಿ ಈಗಾಗಲೇ ನಾವು ಪಾಲುದಾರರಾಗಿದ್ದೇವೆ. ನಮ್ಮ ಗಡಿಗಳ ನಡುವೆ ಮಾರಾಟ, ಹೂಡಿಕೆಗಳು, ತಂತ್ರಜ್ಞಾನ ಮತ್ತು ಚಿಂತನೆಗಳು ಮುಕ್ತವಾಗಿ ಹರಿದಾಡುವುದು ಪರಸ್ಪರ ಲಾಭದಾಯಕ ಎಂದು ನಾವು ನಂಬಿದ್ದೇವೆ.  ಭಾರತದ ಕ್ಷಿಪ್ರಗತಿಯ ಬೆಳವಣಿಗೆ ಇಡೀ ಪ್ರದೇಶಕ್ಕೆ, ಮುಖ್ಯವಾಗಿ ಶ್ರೀಲಂಕಾಗೆ ಲಾಭಾಂಶಗಳನ್ನು ನೀಡಲಿದೆ. ಮೂಲಸೌಕರ್ಯ ಮತ್ತು ಸಂಪರ್ಕ, ಸಾರಿಗೆ ಮತ್ತು ಶಕ್ತಿ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಮೇಲಕ್ಕೇರಿಸುವ ಹಂತದಲ್ಲಿ ನಾವಿದ್ದೇವೆ. ನಮ್ಮ ಅಭಿವೃದ್ಧಿ ಪಾಲುದಾರಿಕೆ ಮಾನವ ಚಟುವಟಿಕೆಯ ಪ್ರತಿ ಕ್ಷೇತ್ರದಲ್ಲಿ ಹರಡಿದ್ದು ಇವುಗಳಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಪುನರ್ವಸತಿ, ಸಾರಿಗೆ, ವಿದ್ಯುತ್, ಸಂಸ್ಕೃತಿ, ನೀರು, ವಸತಿ, ಕ್ರೀಡೆ ಮತ್ತು ಮಾನವ ಸಂಪನ್ಮೂಲಗಳು ಸೇರಿವೆ.
 
ಇಂದು ಭಾರತ ಶ್ರೀಲಂಕಾದೊಂದಿಗೆ ಹೊಂದಿರುವ ಅಭಿವೃದ್ಧಿ ಸಹಕಾರದ ಮೌಲ್ಯ 2.6 ಶತಕೋಟಿ ಅಮೆರಿಕನ್ ಡಾಲರ್  ಗಳಷ್ಟಿದೆ . ಶ್ರೀಲಂಕಾ ತನ್ನ ಜನರ ಶಾಂತಿಪೂರ್ಣ, ಸಮೃದ್ಧಿಯ ಮತ್ತು ಸುಭದ್ರ ಭವಿಷ್ಯವನ್ನು ನಿಜವಾಗಿಸಿಕೊಳ್ಳಲು ಈ ದೇಶಕ್ಕೆ ಬೆಂಬಲ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಏಕೆಂದರೆ ಶ್ರೀಲಂಕಾದ ಜನರ ಆರ್ಥಿಕ ಮತ್ತು ಸಾಮಾಜಿಕ ಯೋಗಕ್ಷೇಮವು 1.25 ಶತಕೋಟಿ ಭಾರತೀಯರ ಯೋಗಕ್ಷೇಮದೊಂದಿಗೆ ಸಂಪರ್ಕ ಹೊಂದಿದೆ. ಏಕೆಂದರೆ, ಭೂಮಿಯ ಮೇಲಾಗಲಿ ಅಥವ ಹಿಂದೂ ಮಹಾಸಾಗರದ ಜಲದಲ್ಲಾಗಲಿ ನಮ್ಮ ಸಮಾಜಗಳ ಭದ್ರತೆ ಅವಿಭಾಜ್ಯವಾಗಿದೆ. ಅಧ್ಯಕ್ಷರಾದ ಸಿರಿಸೇನಾ ಮತ್ತು ಪ್ರಧಾನ ಮಂತ್ರಿಗಳಾದ ವಿಕ್ರಂ  ಸಿಂಘೆ ಅವರೊಂದಿಗೆ ನಮ್ಮ ಮಾತುಕತೆಗಳು ನಮ್ಮ ಸಾಮಾನ್ಯ ಗುರಿಗಳನ್ನು ಸಾಧಿಸುವಲ್ಲಿ ಕೈಜೋಡಿಸುವ ನಮ್ಮ ಉದ್ದೇಶವನ್ನು ಮತ್ತಷ್ಟು ದೃಢೀಕರಿಸಿವೆ. ನಿಮ್ಮ ಸಮಾಜದ ಪ್ರಗತಿ ಮತ್ತು ಸೌಹಾರ್ದಕ್ಕಾಗಿ ನೀವು ಪ್ರಮುಖ ಆಯ್ಕೆಗಳನ್ನು ಮಾಡುವಲ್ಲಿ ಭಾರತ ನಿಮಗೆ ಸ್ನೇಹಿತ ಮತ್ತು ಪಾಲುದಾರನಾಗಿರುವುದನ್ನು ನೀವು ಕಂಡುಕೊಳ್ಳಲಿದ್ದೀರಲ್ಲದೆ, ನಮ್ಮ ದೇಶ ನಿಮ್ಮ ರಾಷ್ಟ್ರನಿರ್ಮಾಣ ಪರಿಶ್ರಮದಲ್ಲಿ ಬೆಂಬಲ ನೀಡಲಿದೆ. 
 
ಗೌರವಾನ್ವಿತ ಸಂನ್ಯಾಸಿಗಳೇ, ಘನತೆವೆತ್ತವರೆ ಮತ್ತು ಸ್ನೇಹಿತರೇ,
ಭಗವಾನ್ ಬುದ್ಧನ ಸಂದೇಶ ಎರಡೂವರೆ ಶತಮಾನಗಳ ಹಿಂದೆ ಇದ್ದಂತೆ 21ನೇ ಶತಮಾನದಲ್ಲೂ ಪ್ರಸ್ತುತವಾಗಿದೆ.
ಬುದ್ಧ ತೋರಿಸಿದ ಮಧ್ಯಮಾರ್ಗ  ನಮ್ಮೆಲ್ಲರೊಂದಿಗೆ ಸಂಭಾಷಿಸುತ್ತದೆ. ಅದರ ಸಾರ್ವತ್ರಿಕತೆ ಮತ್ತು ಸದಾ ಹರಿದ್ವರ್ಣತೆ ಗಮನ ಸೆಳೆಯುತ್ತದೆ. ಅದು ದೇಶಗಳ ನಡುವೆ ಒಂದುಗೂಡಿಸುವ ಶಕ್ತಿಯಾಗಿದೆ. ದಕ್ಷಿಣ, ಕೇಂದ್ರ, ಆಗ್ನೇಯ ಮತ್ತು ಪೂರ್ವ ಏಷ್ಯಾದ ದೇಶಗಳು ಬುದ್ಧನ ಭೂಮಿಯೊಂದಿಗೆ ಬೌದ್ಧಧರ್ಮದ ಸಂಪರ್ಕದ ಬಗ್ಗೆ ಹೆಮ್ಮೆ ಹೊಂದಿವೆ. 
 
ವೇಸಕ್ ದಿನಕ್ಕಾಗಿ ಆರಿಸಲಾದ ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ವಿಶ್ವ ಶಾಂತಿ ತಿರುಳುಗಳು ಬುದ್ಧನ ಬೋಧನೆಯಲ್ಲಿ ಆಳವಾಗಿ ಅನುರಣಿಸುತ್ತವೆ. ಈ ತಿರುಳುಗಳು ಸ್ವತಂತ್ರವಾಗಿರುವಂತೆ ಕಾಣಬಹುದು. ಆದರೆ, ಇವು ಪರಸ್ಪರ ಸಂಪರ್ಕಿತವಲ್ಲದೆ ಪರಸ್ಪರ ಒಂದನ್ನೊಂದು ಆಧರಿಸಿವೆ. ಸಾಮಾಜಿಕ ನ್ಯಾಯದ ಸಮಸ್ಯೆ ಸಮುದಾಯಗಳ ನಡುವಿನ ಸಂಘರ್ಷದೊಂದಿಗೆ ಥಳುಕು ಹಾಕಿಕೊಂಡಿದೆ. ದುರಾಸೆಯಿಂದ ಹುಟ್ಟುವ ತೃಷೆ (ಸಂಸ್ಕೃತದಲ್ಲಿ ತೃಷ್ಣಾ) ಯಿಂದ ಅದು ಮೇಲೇಳುತ್ತದೆ. ಪ್ರಾಬಲ್ಯ ಸ್ಥಾಪಿಸಲು ಮಾನವರಿಗೆ ದುರಾಸೆಯೇ ಕಾರಣವಾಗಿದ್ದು ಇದು ನಮ್ಮ ನೈಸರ್ಗಿಕ ಆವಾಸ ಸ್ಥಾನಗಳು ಕುಸಿಯಲು ಕೂಡ ಇದೇ ಕಾರಣವಾಗಿದೆ. ನಮ್ಮ ಎಲ್ಲ  ಇಚ್ಛೆಗಳನ್ನು ಸಾಧಿಸುವ ಆಸೆ ಸಮುದಾಯಗಳಲ್ಲಿ ಆದಾಯದ ಅಸಮಾನತೆಯನ್ನು ಸೃಷ್ಟಿಸಿದ್ದು ಇದು ಸಾಮಾಜಿಕ ಸೌಹಾರ್ದವನ್ನು ಕೆಡಿಸಿದೆ. 
ಇದೇ ರೀತಿ, ಸುಸ್ಥಿರ ವಿಶ್ವಶಾಂತಿಗೆ ಇಂದು ಅತ್ಯಂತ ದೊಡ್ಡ ಸವಾಲೆಂದರೆ ಅದು ದೇಶಗಳ ನಡುವಿನ ಸಂಘರ್ಷವಲ್ಲ. ಬದಲಿಗೆ, ದ್ವೇಷ ಮತ್ತು ಹಿಂಸೆಯ ಚಿಂತನೆಯಲ್ಲಿ ಆಳವಾಗಿ ಬೇರೂರಿರುವ  ಮನಸುಗಳು, ಚಿಂತನೆಯ ಅರಿವುಗಳು, ಸಂಘಟನೆಗಳು ಮತ್ತು ವ್ಯಕ್ತಿಗಳಾಗಿವೆ.
 
ಈ ವಿನಾಶಕಾರಿ ಭಾವನೆಯ ದೃಢವಾದ ಪ್ರತಿರೂಪ ಎಂದರೆ ನಮ್ಮ ಪ್ರದೇಶದಲ್ಲಿನ ಭಯೋತ್ಪಾದನೆ ಹಾವಳಿಯಾಗಿದೆ. ಬೇಸರವೆಂದರೆ, ಈ ದ್ವೇಷ ಚಿಂತನೆಗಳ ಪ್ರತಿಪಾದಕರು ಚರ್ಚೆಗೆ ಮುಕ್ತರಾಗಿರುವುದಿಲ್ಲ ಮತ್ತು ಸಾವು ಹಾಗೂ ವಿನಾಶ ಉಂಟು ಮಾಡುವುದರಲ್ಲಿಯೇ ತೊಡಗಿದ್ದಾರೆ. ಬೌದ್ಧಧರ್ಮ ಶಾಂತಿಯ ಸಂದೇಶವಾಗಿದ್ದು ಜಗತ್ತಿನ ಎಲ್ಲೆಡೆ ಬೆಳೆಯುತ್ತಿರುವ ಹಿಂಸೆಗೆ ಉತ್ತರವಾಗಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ. 
ಮತ್ತು, ಇದು ಸಂಘರ್ಷದ ಗೈರುಹಾಜರಿಯಲ್ಲಿರುವ ಶಾಂತಿಯ ನಕಾರಾತ್ಮಕ ಕಲ್ಪನೆಯಲ್ಲ. ಬದಲಿಗೆ ಸಹಾನುಭೂತಿ ಮತ್ತು ಜ್ಞಾನವನ್ನು ಆಧರಿಸಿದ ಸಂಭಾಷಣೆ, ಸೌಹಾರ್ದತೆ, ನ್ಯಾಯವನ್ನು ಪ್ರೋತ್ಸಾಹಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುವ ಸಕಾರಾತ್ಮಕ ಶಾಂತಿಯಾಗಿದೆ. 
 
ಬುದ್ಧ ಹೇಳಿದ್ದರು ………ಶಾಂತಿಗಿಂತಲೂ ದೊಡ್ಡ ಆನಂದವಿಲ್ಲ. ನಮ್ಮ ಸರ್ಕಾರಗಳು ನೀತಿ ಮತ್ತು ನಡವಳಿಕೆಯಲ್ಲಿ ಶಾಂತಿ, ಸಹಬಾಳ್ವೆ, ಎಲ್ಲರನ್ನು ಒಳಗೊಳ್ಳುವುದು ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಪ್ರೋತ್ಸಾಹಿಸುವುದಲ್ಲದೆ, ಬುದ್ಧನ ಚಿಂತನೆಯನ್ನು ಎತ್ತಿಹಿಡಿಯಲು ಭಾರತ ಮತ್ತು ಶ್ರೀ ಲಂಕಾ  ಒಂದಾಗಿ ಶ್ರಮಿಸುತ್ತವೆ ಎಂಬ ಭರವಸೆ ಈ ವೇಸಕ್ ದಿನದಲ್ಲಿ ನನ್ನದಾಗಿದೆ. ಮೂರು ವಿಷಯಗಳಾದ ದುರಾಸೆ, ದ್ವೇಷ ಮತ್ತು ಅಜ್ಞಾನಗಳಿಂದ ವ್ಯಕ್ತಿಗಳು, ಕುಟುಂಬಗಳು, ಸಮಾಜಗಳು, ದೇಶಗಳು ಮತ್ತು ಒಟ್ಟಾರೆಯಾಗಿ ಜಗತ್ತನ್ನು ಮುಕ್ತಗೊಳಿಸಲು ಇದು ನೈಜವಾದ ಮಾರ್ಗ.
 
ಗೌರವಾನ್ವಿತ ಸಂನ್ಯಾಸಿಗಳೇ, ಘನತೆವೆತ್ತವರೇ ಮತ್ತು ಸ್ನೇಹಿತರೇ,
ಈ ಪೂಜ್ಯ ವೇಸಕ್ ದಿನದಂದು ಅಂಧಕಾರದಿಂದ ಹೊರಹೋಗಲು ಜ್ಞಾನದ ದೀಪಗಳನ್ನು ಹಚ್ಚೋಣ. ನಮ್ಮೊಳಗೆ ನಾವು ಹೆಚ್ಚಾಗಿ ನೋಡಿಕೊಳ್ಳೋಣ. ಬೇರೆನನ್ನೂ ಅಲ್ಲದೆ ಸತ್ಯವನ್ನು ಮಾತ್ರ ಎತ್ತಿ ಹಿಡಿಯೋಣ. ಜೊತೆಗೆ ಜಗತ್ತಿನ ಎಲ್ಲೆಡೆ ಬೆಳಕು ಹರಡಿರುವ ಬುದ್ಧನ ಮಾರ್ಗವನ್ನು ಅನುಸರಿಸುವತ್ತ ನಮ್ಮ ಪ್ರಯತ್ನಗಳನ್ನು ಸಮರ್ಪಿಸೋಣ.
ಧಮ್ಮಪದದ 387ನೇ  ಶ್ಲೋಕ ಹೇಳುತ್ತದೆ 
ಅರ್ಥ:
ದಿನದಲ್ಲಿ ಸೂರ್ಯ ಹೊಳೆಯುತ್ತಾನೆ.
ಚಂದ್ರ ರಾತ್ರಿಯನ್ನು ಬೆಳಗುತ್ತಾನೆ.
ಕ್ಷತ್ರಿಯನು ತನ್ನ ರಕ್ಷಾ ಕವಚದಲ್ಲಿ ಹೊಳೆಯುತ್ತಾನೆ
ಬ್ರಾಹ್ಮಣನು ತನ್ನ ಧ್ಯಾನದಲ್ಲಿ ಹೊಳೆಯುತ್ತಾನೆ,
ಆದರೆ, ಜ್ಞಾನೋದಯ ಹೊಂದಿರುವವನು ದಿನ ಮತ್ತು ರಾತ್ರಿಗಳಲ್ಲಿ ತನ್ನ ಪ್ರಭಾವಳಿಯಿಂದ ಹೊಳೆಯುತ್ತಾನೆ.
ನಿಮ್ಮೊಂದಿಗೆ ಇರುವ ಗೌರವ ನೀಡಿದ್ದಕ್ಕಾಗಿ ಮತ್ತೊಮ್ಮೆ ವಂದನೆಗಳು. ಇಂದು ಮಧ್ಯಾಹ್ನ ಕ್ಯಾಂಡಿಯಲ್ಲಿರುವ ಬುದ್ಧನ ಪವಿತ್ರ ಹಲ್ಲು ಹೊಂದಿರುವ ದೇವಾಲಯ ಶ್ರೀ ದಲದ ಮಾಲಿಗಾವದಲ್ಲಿ ಗೌರವ ಸಮರ್ಪಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ಬುದ್ಧ, ಧಮ್ಮ ಮತ್ತು ಸಂಘಗಳ ಮೂರು ಅಮೂಲ್ಯ ರತ್ನಗಳು ನಮ್ಮನ್ನು ಆಶೀರ್ವದಿಸಲಿ. 
ವಂದನೆಗಳು, ತುಂಬಾ ಧನ್ಯವಾದಗಳು.
 
***