Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಕ್ಷಿಣ ಏಷ್ಯಾ ಉಪಗ್ರಹದ ಉಡಾವಣೆ ವೇಳೆ ದಕ್ಷಿಣ ಏಷ್ಯಾದ ರಾಷ್ಟ್ರಗಳ ಮುಖ್ಯಸ್ಥರ ಜತೆ ಪ್ರಧಾನಿ ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್

ದಕ್ಷಿಣ ಏಷ್ಯಾ ಉಪಗ್ರಹದ ಉಡಾವಣೆ ವೇಳೆ ದಕ್ಷಿಣ ಏಷ್ಯಾದ ರಾಷ್ಟ್ರಗಳ ಮುಖ್ಯಸ್ಥರ ಜತೆ ಪ್ರಧಾನಿ ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್


ಆಫ್ಘಾನಿಸ್ಥಾನದ ಅಧ್ಯಕ್ಷ ಘನತೆವೆತ್ತ ಅಶ್ರಫ್ ಘನಿ ಅವರೇ,

ಭೂತಾನ್ ನ ಪ್ರಧಾನಿ ಘನತೆವೆತ್ತ ಟ್ಸೆರಿಂಗ್ ಟೋಗ್ಬೇ ಅವರೇ,

ಮಾಲ್ಡೀವ್ಸ್ನ ಅಧ್ಯಕ್ಷ ಘನತೆವೆತ್ತ ಅಬ್ದುಲ್ಲಾ ಯಮೀನ್ ಅವರೇ,

ನೇಪಾಳದ ಪ್ರಧಾನಿ ಘನತೆವೆತ್ತ ಪುಷ್ಪ ಕಮಲ್ ದಹಾಲ್ ಅವರೇ,

ಶ್ರೀಲಂಕಾ ಅಧ್ಯಕ್ಷ ಘನತೆವೆತ್ತ ಮೈತ್ರಿಪಾಲ ಸಿರಿಸೇನಾ ಅವರೇ,

ಮಹನೀಯರೇ ಮತ್ತು ಮಹಿಳೆಯರೇ,

ನಮಸ್ಕಾರ!

ಗೌರವಾನ್ವಿತರೇ,

ಇದು ದಕ್ಷಿಣ ಏಷ್ಯಾಕ್ಕೆ ಚಾರಿತ್ರಿಕ ದಿನ. ಪೂರ್ವನಿದರ್ಶನವಿಲ್ಲದ ದಿನ. 2 ವರ್ಷಗಳ ಹಿಂದೆ, ಭಾರತ ವಾಗ್ದಾನವೊಂದನ್ನು ನೀಡಿತ್ತು. ದಕ್ಷಿಣ ಏಷ್ಯಾದ ಸೋದರರು ಮತ್ತು ಸೋದರಿಯರ ಪ್ರಗತಿ ಮತ್ತು ಐಶ್ವರ್ಯಕ್ಕಾಗಿ ಉನ್ನತ ಆಕಾಶ ತಂತ್ರಜ್ಞಾನವನ್ನು ವಿಸ್ತರಿಸುವುದಾಗಿ ವಾಗ್ದಾನ ನೀಡಿದ್ದೆವು. ದಕ್ಷಿಣ ಏಷ್ಯಾ ಉಪಗ್ರಹದ ಉಡಾವಣೆ ಮೂಲಕ ನಾವು ನಮ್ಮ ಮಾತು ಉಳಿಸಿಕೊಂಡಿದ್ದೇವೆ. ಈ ಉಡಾವಣೆಯ ಮೂಲಕ ನಾವು ಸಹಕಾರದ ಅತಿ ಮುಂದುವರಿದ ಗಡಿಯನ್ನು ನಿರ್ಮಿಸುವ ಪ್ರಯಾಣವನ್ನು ಆರಂಭಿಸಿದ್ದೇವೆ.

ಆಕಾಶದೆತ್ತರದಲ್ಲಿ ಸ್ಥಾನ ಗಳಿಸಿರುವ ದಕ್ಷಿಣ ಏಷ್ಯಾದ ರಾಷ್ಟ್ರಗಳ ಸಹಕಾರದ ಸೂಚಕವಾಗಿರುವ ಈ ಉಪಗ್ರಹವು ಈ ಪ್ರಾ oತ್ಯದಲ್ಲಿರುವ ಒಂದೂವರೆ ಶತ ಕೋಟಿಗೂ ಹೆಚ್ಚು ಜನರ ಆರ್ಥಿಕ ಪ್ರಗತಿಯ ಆಕಾಂಕ್ಷೆಯನ್ನು ಪೂರೈಸಲು ನೆರವಾಗಲಿದೆ. ಮತ್ತು, ನಮ್ಮ ಸ್ನೇಹದ ಕೊಂಡಿಯನ್ನು ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ.

ಗೌರವಾನ್ವಿತರೇ,

ಈ ಉಡಾವಣೆಯ ಸಂಭ್ರಮದಲ್ಲಿ ಪಾಲ್ಗೊಂಡ ಅಫ್ಘಾನಿಸ್ಥಾನ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾದ ಮುಖ್ಯಸ್ಥರಿಗೆ ನಾನು ಋಣಿಯಾಗಿದ್ದೇನೆ.

ನಿಮ್ಮ ಸರ್ಕಾರಗಳು ನೀಡಿದ ದೃಢ ಮತ್ತು ಮೌಲ್ಯಯುತ ಬೆಂಬಲವನ್ನು ನಾನು ಶ್ಲಾಘಿಸುತ್ತೇನೆ, ಇಂಥ ಬೆಂಬಲವಿಲ್ಲದೆ ಈ ಯೋಜನೆ ಸಾಕಾರಗೊಳ್ಳುತ್ತಿರಲಿಲ್ಲ. ನಾವೆಲ್ಲ ಒಂದೆಡೆ ಸೇರಿರುವುದು ನಮ್ಮ ಜನರ ಅಗತ್ಯಗಳನ್ನು ಪೂರೈಸಬೇಕೆಂಬ ಕದಲಿಸಲಾಗದ ದೃಢ ಸಂಕಲ್ಪದ ಸೂಚನೆಯಾಗಿದೆ. ನಮ್ಮ ಜನರಿಗಾಗಿ ನಾವು ಆಯ್ದುಕೊಂಡ ಸಾಮೂಹಿಕ ಆಯ್ಕೆಗಳ ಕುರಿತು ತೋರಿಸುತ್ತದೆ . ಸಹಕಾರ, ಸಂಘರ್ಷವಲ್ಲ: ಅಭಿವೃದ್ಧಿ, ವಿನಾಶವಲ್ಲ ಮತ್ತು ಐಶ್ವರ್ಯ ಸೃಷ್ಟಿ, ಬಡತನವಲ್ಲ.

ಗೌರವಾನ್ವಿತರೇ,

ಇದು ದಕ್ಷಿಣ ಏಷ್ಯಾದ ಇಂಥ ಮೊದಲ ಯೋಜನೆಯಾಗಿದ್ದು, ಅಫ್ಘಾನಿಸ್ಥಾನ, ಭೂತಾನ್, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ ಮತ್ತು ಭಾರತ ಒಟ್ಟಾಗಿ ಸಾಧಿಸಲು ಮುಂದಾಗಿರುವುದೇನೆಂದರೆ,

* ಸಮರ್ಥ ಸಂವಹನ

* ಉತ್ತಮ ಆಡಳಿತ

* ಉತ್ತಮ ಬ್ಯಾಂಕಿಂಗ್ ಸೇವೆ ಮತ್ತು

* ದೂರ ಪ್ರದೇಶದಲ್ಲಿ ಉತ್ತಮ ಶಿಕ್ಷಣ

* ಹವಾಮಾನ ಮುನ್ಸೂಚನೆಯಲ್ಲಿ ನಿಖರತೆ ಮತ್ತು ಸಂಪನ್ಮೂಲಗಳ ನಿಖರ ಗುರುತಿಸುವಿಕೆ

* ಟೆಲಿ ಮೆಡಿಸಿನ್ ಮೂಲಕ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಕಲ್ಪಿಸುವುದು

* ಸ್ವಾಭಾವಿಕ ಅವಘಡ ಸಂಭವಿಸಿದಲ್ಲಿ ತತ್ಕ್ಷಣ ಪ್ರತಿಕ್ರಿಯೆ

ಅಂತರಿಕ್ಷ ತಂತ್ರಜ್ಞಾನವು ಈ ಪ್ರಾಂತ್ಯದಲ್ಲಿನ ಜನರ ಜೀವನವನ್ನು ಸ್ಪರ್ಶಿಸಲಿದೆ. ಉಪಗ್ರಹವು ಆಯಾ ದೇಶದ ನಿರ್ದಿಷ್ಟ ಅಗತ್ಯ ಮತ್ತು ಆದ್ಯತೆಯನ್ನಲ್ಲದೆ, ಸಾಮಾನ್ಯ ಸೇವೆಗಳನ್ನೂ ನೀಡಲಿದೆ. ಈ ಗುರಿಯನ್ನು ಮುಟ್ಟಲು ನೆರವಾದ ಭಾರತದ ವಿಜ್ಞಾನಿಗಳನ್ನು ಅದರಲ್ಲೂ ಇಸ್ರೋವನ್ನು ನಾನು ಅಭಿನಂದಿಸುತ್ತೇನೆ. ಇಸ್ರೋ ತಂಡವು ದಕ್ಷಿಣ ಏಷ್ಯಾ ಉಪಗ್ರಹದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿ, ಈ ಪ್ರಾಂತ್ಯಕ್ಕೆ ಸೂಕ್ತವಾದ ಉಪಗ್ರಹವನ್ನು ನಿರ್ಮಿಸಿತು. ಜತೆಗೆ, ಯಾವುದೇ ತೊಂದರೆ ಇಲ್ಲದಂತೆ ಅದರ ಉಡಾವಣೆಯನ್ನೂ ಮಾಡಿದೆ.

ಗೌರವಾನ್ವಿತರೇ,

ಜನರು ಮತ್ತು ಸಮುದಾಯದ ಪ್ರಗತಿ, ಅಭಿವೃದ್ಧಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವುದು ಸರ್ಕಾರಗಳ ಪ್ರಮುಖ ಕೆಲಸ. ಮತ್ತು ನಾವೆಲ್ಲ ಕೈ ಜೋಡಿಸಿದರೆ ಮತ್ತು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯನ್ನು ಹಂಚಿಕೊಂಡರೆ, ನಮ್ಮಗಳ ಅಭಿವೃದ್ಧಿ ಹಾಗೂ ಐಶ್ವರ್ಯ ಶೀಘ್ರವಾಗಿ ವೃದ್ಧಿಸಲಿದೆ ಎಂದು ನಾನು ನಂಬಿದ್ದೇನೆ.

ನಿಮ್ಮಗಳ ಉಪಸ್ಥಿತಿಗಾಗಿ ಧನ್ಯವಾದ ಅರ್ಪಿಸುತ್ತೇನೆ. ಮತ್ತು ನಮ್ಮ ಹಂಚಿಕೊಂಡ ಯಶಸ್ಸಿಗೆ ಶುಭ ಕೋರುತ್ತೇನೆ.

ಧನ್ಯವಾದಗಳು: ಎಲ್ಲರಿಗೂ ತುಂಬು ಮನಸ್ಸಿನ ಧನ್ಯವಾದಗಳು.

*******