ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತೀಯ ನೌಕಾ ಸಾಮಗ್ರಿ ನಿರ್ವಹಣೆ ಸೇವೆ (ಐ.ಎನ್.ಎಂ.ಎಂ.ಎಸ್.) ಹೆಸರಿನಲ್ಲಿ ಸಂಘಟಿತ ‘ಎ’ ಗುಂಪಿನ ಎಂಜಿನಿಯರಿಂಗ್ ಸೇವೆಗಳ ನಿರ್ಮಾಣ ಮತ್ತು ಹಾಲಿ ಭಾರತೀಯ ನೌಕಾಪಡೆಯ ನೌಕಾ ಸಂಗ್ರಹಾಗಾರದ ಅಧಿಕಾರಿಗಳ ‘ಎ’ ಗುಂಪಿನ ಕೇಡರ್ ಸ್ವರೂಪ ಬದಲಾವಣೆಗೆ ತನ್ನ ಅನುಮೋದನೆ ನೀಡಿದೆ.
ಸಂಘಟಿತ ‘ಎ’ ಗುಂಪಿನ ಸೇವೆಗಳ ನಿರ್ಮಾಣವು ಲಭ್ಯವಿರುವ ಉತ್ತಮ ಪ್ರತಿಭೆಗಳನ್ನು ಮತ್ತು ತಾಂತ್ರಿಕವಾಗಿ ಅರ್ಹತೆ ಪಡೆದ ಮೆಟೀರಿಯಲ್ ಮ್ಯಾನೇಜರ್ ಗಳನ್ನು ಆಕರ್ಷಿಸುತ್ತದೆ.ಇದು ನೌಕಾ ಸಂಗ್ರಹಣಾಗಾರದ ಸಾಮಗ್ರಿ ನಿರ್ವಹಣಾ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ನೌಕಾಪಡೆ ಎಲ್ಲ ಕಾಲದಲ್ಲೂ ಕಾರ್ಯಾಚರಣೆಗೆ ಸದಾ ಸನ್ನದ್ಧವಾಗಿರುವ ಖಾತ್ರಿ ಒದಗಿಸುತ್ತದೆ.
ಉದ್ದೇಶಿತ ಐಎನ್ಎಂಎಂಎಸ್ ಭಾರತೀಯ ನೌಕಾಪಡೆಯಲ್ಲಿ ಮೆಟೀರಿಯಲ್ ಮ್ಯಾನೇಜ್ಮೆಂಟ್ ಕಾರ್ಯಾಚರಣೆಗಾಗಿ ಲಭ್ಯವಿರುವ ಉತ್ತಮ ಪ್ರತಿಭೆಗಳನ್ನು ಮತ್ತು ತಾಂತ್ರಿಕವಾಗಿ ಅರ್ಹರಾದ ಮೆಟೀರಿಯಲ್ ಮ್ಯಾನೇಜರ್ ಗಳನ್ನು ಆಕರ್ಷಿಸುತ್ತದೆ. ಇದು ನೌಕಾ ಸಂಗ್ರಹಣಾಗಾರದ ಸಾಮಗ್ರಿ ನಿರ್ವಹಣಾ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ನೌಕಾಪಡೆ ಎಲ್ಲ ಕಾಲದಲ್ಲೂ ಕಾರ್ಯಾಚರಣೆಗೆ ಸದಾ ಸನ್ನದ್ಧವಾಗಿರುವ ಖಾತ್ರಿ ಒದಗಿಸುತ್ತದೆ, ಜೊತೆಗೆ ಈ ಹುದ್ದೆಯಲ್ಲಿ ಉತ್ತಮ ವೃತ್ತಿ ಭವಿಷ್ಯವನ್ನು ಒದಗಿಸುತ್ತದೆ.
***
KSD/VBA/SH