Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜರ್ಮನಿಯ ಮಾಜಿ ಛಾನ್ಸಲರ್ ಶ್ರೀ. ಹೆಲ್ಮಟ್ ಕೋಲ್ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಜರ್ಮನಿಯ ಮಾಜಿ ಛಾನ್ಸಲರ್ ಶ್ರೀ. ಹೆಲ್ಮಟ್ ಕೋಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ಜರ್ಮನಿ ಏಕೀಕರಣದ ವಾಸ್ತುಶಿಲ್ಪಿ, ರಾಜನೀತಿಜ್ಞ ಮತ್ತು ಐರೋಪ್ಯ ಏಕೀಕರಣದಲ್ಲಿ ತೀವ್ರ ನಂಬಿಕೆಯಿಟ್ಟಿದ್ದಶ್ರೀ. ಹೆಲ್ಮಟ್ ಕೋಲ್ ಅವರ ನಿಧನಕ್ಕೆ ನಮ್ಮ ಸಂತಾಪಗಳು.

ಶ್ರೀ. ಹೆಲ್ಮಟ್ ಕೋಲ್ ಅವರು 1986 ಮತ್ತು 1993ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಭಾರತ ಮತ್ತು ಜರ್ಮನಿಯ ಬಾಂಧವ್ಯ ಬಲಗೊಳ್ಳಲು ಅವರು ನೀಡಿದ ಕೊಡುಗೆಯನ್ನು ನಾವು ಗೌರವಿಸುತ್ತೇವೆ”, ಎಂದು ಪ್ರಧಾನಿ ಹೇಳಿದ್ದಾರೆ..

***

AKT/AK