Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭೂಕುಸಿತ ಮತ್ತು ಪ್ರವಾಹದಿಂದ ಶ್ರೀಲಂಕಾದಲ್ಲಿ ಸಂಭವಿಸಿರುವ ಆಸ್ತಿ ಹಾಗೂ ಪ್ರಾಣ ಹಾನಿಗೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಶ್ರೀಲಂಕಾದಲ್ಲಿ ಭೂಕುಸಿತ ಮತ್ತು ಪ್ರವಾಹದಿಂದ ಉಂಟಾಗಿರುವ ಆಸ್ತಿ ಮತ್ತು ಪ್ರಾಣ ಹಾನಿಗೆ ಸಂತಾಪ ಸೂಚಿಸಿದ್ದಾರೆ.

“ಶ್ರೀಲಂಕಾದಲ್ಲಿನ ಭೂಕುಸಿತ ಮತ್ತು ಪ್ರವಾಹದಿಂದ ಆದ ಆಸ್ತಿ ಮತ್ತು ಜೀವ ಹಾನಿಗೆ ಭಾರತ ಸಂತಾಪ ಸೂಚಿಸುತ್ತದೆ.

ಈ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಶ್ರೀಲಂಕಾದ ಸಹೋದರ ಮತ್ತು ಸಹೋದರಿಯರೊಂದಿಗೆ ನಾವು ನಿಲ್ಲುತ್ತೇವೆ.

ಪರಿಹಾರದ ಸಾಮಗ್ರಿಗಳೊಂದಿಗೆ ನಮ್ಮ ಹಡಗುಗಳು ತೆರಳಿವೆ. ಮೊದಲ ಹಡಗು ನಾಳೆ ಕೊಲಂಬೋ ತಲುಪಲಿದೆ.

ಎರಡನೇ ಹಡಗು ಭಾನುವಾರ ತಲುಪಲಿದೆ. ಹೆಚ್ಚಿನ ನೆರವೂ ಮಾರ್ಗದಲ್ಲಿದೆ.” ಎಂದು ಪ್ರಧಾನಿ ತಿಳಿಸಿದ್ದಾರೆ.

*****

AKT/NT