ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ದೇಶೀಯ ಪರಮಾಣು ಇಂಧನ ಕಾರ್ಯಕ್ರಮವನ್ನು ತ್ವರಿತಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತದಲ್ಲಿ ದೇಶೀಯವಾಗಿ 10 ಒತ್ತಡದ ಭಾರಜಲ ರಿಯಾಕ್ಟರ್ ಘಟಕ (ಪಿ.ಎಚ್.ಡಬ್ಲ್ಯು.ಆರ್) ನಿರ್ಮಾಣಕ್ಕೆ ತನ್ನ ಅನುಮೋದನೆ ನೀಡಿದೆ. ಈ ಘಟಕಗಳ ಸ್ಥಾಪಿತ ಸಾಮರ್ಥ್ಯ 7 ಮೆ.ವ್ಯಾ. ಆಗಿದೆ. 10 ಪಿ.ಎಚ್.ಡಬ್ಲ್ಯು.ಆರ್. ಯೋಜನೆಯು ಪರಮಾಣು ಇಂಧನ ಉತ್ಪಾದನೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.
ಭಾರತದ ಪ್ರಸ್ತುತ ಸ್ಥಾಪಿತ ಪರಮಾಣು ಇಂಧನ ಸಾಮರ್ಥ್ಯ ಕಾರ್ಯಾಚರಣೆಯಲ್ಲಿರುವ 22 ಸ್ಥಾವರಗಳಿಂದ 6780 ಮೆ.ವ್ಯಾ. ಆಗಿದೆ. 2021-22ರ ಹೊತ್ತಿಗೆ ಹಾಲಿ ನಿರ್ಮಾಣ ಹಂತದಲ್ಲಿರುವ ಯೋಜನೆಗಳ ಮೂಲಕ ಮತ್ತೆ 6700 ಮೆ.ವ್ಯಾ. ಪರಮಾಣು ಇಂಧನ ಮುಖ್ಯವಾಹಿನಿಯನ್ನು ಸೇರುವ ನಿರೀಕ್ಷೆ ಇದೆ. ದೇಶ ಕೇಂದ್ರಿದ ಹಾಗೂ ಜನ ಪರವಾದ ತನ್ನ ಆಡಳಿತ ಮೂರು ವರ್ಷ ಪೂರೈಸುತ್ತಿರುವುದರ ಅಂಗವಾಗಿ ಭಾರತದ ಪರಮಾಣು ಇಂಧನ ವಲಯದಲ್ಲಿ ಪ್ರಪ್ರಥಮ ಬಾರಿಗೆ 10 ಹೊಸ ಘಟಕಗಳು ದೇಶೀಯ ಅಭಿವೃದ್ಧಿಯ ಉಪಕ್ರಮದೊಂದಿಗೆ ಸಮರೋಪಾದಿಯಲ್ಲಿ ತಲೆ ಎತ್ತಲಿವೆ. ಈ ವಲಯದಲ್ಲಿ ಇದು ಮೇಕ್ ಇನ್ ಇಂಡಿಯಾ ಮಹತ್ವಾಕಾಂಕ್ಷೆಯ ಕಾರ್ಯಕ್ರಮದಲ್ಲಿ ಒಂದಾಗಿದೆ.
ದೇಶೀಯ ಕೈಗಾರಿಕೆಗಳಿಗೆ ಹತ್ತಿರ ಹತ್ತಿರ 70,000 ಕೋಟಿ ಉತ್ಪಾದನಾ ಬೇಡಿಕೆಯ, ಯೋಜನೆಯು ಭಾರತದ ಪರಮಾಣು ಕೈಗಾರಿಕೆಯನ್ನು ನಮ್ಮ ದೇಶೀಯ ಕೈಗಾರಿಕೆಯಲ್ಲಿ ಅತ್ಯುನ್ನತ ತಂತ್ರಜ್ಞಾನದ ಸಾಮರ್ಥ್ಯದೊಂದಿಗೆ ಬಲವಾದ ಪರಮಾಣು ಶಕ್ತಿಯನ್ನು ಸಂಪರ್ಕಿಸುವ ಮೂಲಕ ಪರಿವರ್ತನೆಗೆ ಸಹಕಾರಿಯಾಗಲಿದೆ.
ಈ ಯೋಜನೆಯು ಗಣನೀಯ ಆರ್ಥಿಕತೆಯ ಮಾನದಂಡ ಮತ್ತು ಗರಿಷ್ಠ ವೆಚ್ಚ ಮತ್ತು ಸಮಯದ ದಕ್ಷತೆಯನ್ನು ಸಮರೋಪಾದಿಯಲ್ಲಿ ಅಳವಡಿಸಿಕೊಳ್ಳಲಿದೆ. ಇದು 33,400 ಉದ್ಯೋಗಗಳನ್ನು ನೋರವಾಗಿ ಮತ್ತು ಪರೋಕ್ಷವಾಗಿ ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ದೇಶೀಯ ಕೈಗಾರಿಕೆಗಳ ಉತ್ಪಾದನಾ ಬೇಡಿಕೆಯೊಂದಿಗೆ ಇದು ಭಾರತವನ್ನು ಪ್ರಮುಖ ಪರಮಾಣು ಉತ್ಪಾದನಾ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಹತ್ತು ರಿಯಾಕ್ಟರ್ ಗಳು ಭಾರತದ ಅತ್ಯಾಧುನಿಕ ವಿನ್ಯಾಸದ 700 ಮೆ.ವ್ಯಾ. ಪಿ.ಎಚ್.ಡಬ್ಲ್ಯು.ಆರ್. ಭಾಗವಾಗಿದ್ದು, ಉನ್ನತ ಸುರಕ್ಷತೆಯನ್ನು ಕಾಯ್ಡುಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಹೊಂದಿವೆ.
ಈ ಅನುಮೋದನೆಯು ಭಾರತದ ವೈಜ್ಞಾನಿಕ ಸಮುದಾಯಕ್ಕೆ ನಮ್ಮ ತಾಂತ್ರಿಕ ಸಾಮರ್ಥ್ಯ ನಿರ್ಮಾಣಕ್ಕೆ ಬಲವಾದ ವಿಶ್ವಾಸ ತುಂಬುತ್ತದೆ. ಈ ಯೋಜನೆಯ ವಿನ್ಯಾಸ ಮತ್ತು ಅಭಿವೃದ್ಧಿ ಭಾರತೀಯ ಪರಮಾಣು ವೈಜ್ಞಾನಿಕ ಸಮುದಾಯ ಮತ್ತು ಕೈಗಾರಿಕೆ ತ್ವರಿತವಾಗಿ ಸಾಧನೆ ಮಾಡಲು ಪುರಾವೆ ಒದಗಿಸುತ್ತದೆ. ಇದು ನಮ್ಮ ಪರಮಾಣು ವಿಜ್ಞಾನಿಗಳು ಪಿಎಚ್.ಡಬ್ಲ್ಯು.ಆರ್. ತಂತ್ರಜ್ಞಾನದಲ್ಲಿ ಪಡೆದಿರುವ ಪಾಂಡಿತ್ಯವನ್ನು ಒತ್ತಿ ಹೇಳುತ್ತದೆ. ಕಳೆದ 40 ವರ್ಷಗಳಿಂದ ಪಿಎಚ್.ಡಬ್ಲ್ಯು.ಆರ್ ರಿಯಾಕ್ಟರ್ ನಿರ್ಮಾಣ ಮಾಡುವ ಮತ್ತು ಕಾರ್ಯಾಚರಣೆ ಮಾಡುವ ಭಾರತೀಯ ದಾಖಲೆ ವಿಶ್ವದಾದ್ಯಂತ ಮನ್ನದೆ ಪಡೆದಿದೆ.
ಸಂಪುಟದ ಈ ತೀರ್ಮಾನವು ಕಡಿಮೆ ಇಂಗಾಲ ವೃದ್ಧಿ ಕಾರ್ಯತಂತ್ರ ಮತ್ತು ದೀರ್ಘಕಾಲೀನ ಆಧಾರದಲ್ಲಿ ದೇಶೀಯ ಕೈಗಾರಿಕೆಗಳಿಗೆ ಬೇಕಾದ ಇಂಧನಕ್ಕಾಗಿ ಭಾರತದ ಇಂಧನ ಮಿಶ್ರಣದಲ್ಲಿ ಶುದ್ಧ ಇಂಧನ ಬಳಕೆ ಮಾಡುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಸುಸ್ಥಿರ ಅಭಿವೃದ್ಧಿ, ಇಂಧನ ಸ್ವಾವಲಂಬನೆ ಮತ್ತು ಹವಾಮಾನ ಬದಲಾವಣೆ ತಡೆಯುವ ಜಾಗತಿಕ ಪ್ರಯತ್ನಕ್ಕೆ ಬೆಂಬಲ ನೀಡುವ ಭಾರತದ ಬದ್ಧತೆಯನ್ನೂ ತೋರುತ್ತದೆ.
***
AKT/VBA/SH
A vital decision of the Cabinet that pertains to transformation of the domestic nuclear industry. https://t.co/YupSIpL0Rv
— Narendra Modi (@narendramodi) May 17, 2017